ನಟ ನಿನಾದ್ ಹರಿತ್ಸ, "ಆಸೆ" ಧಾರಾವಾಹಿಯಲ್ಲಿ ಕ್ಯಾಬ್ ಚಾಲಕ ಸೂರ್ಯನಾಗಿ ಕಂಬ್ಯಾಕ್ ಮಾಡಿದ್ದಾರೆ. ವಿವಾಹದ ನಂತರ ನಟನೆಯಿಂದ ವಿರಾಮ ತೆಗೆದುಕೊಂಡಿದ್ದ ನಿನಾದ್, ಪ್ರಮುಖ ಪಾತ್ರಕ್ಕಾಗಿ ಕಾಯುತ್ತಿದ್ದರು. "ನಾಗಿಣಿ 2" ಖ್ಯಾತಿಯ ನಟನಿಗೆ ಈ ಪಾತ್ರ ಪ್ರೇಕ್ಷಕರ ಮನ ಗೆದ್ದಿದೆ.

ಅರಮನೆ, ಬಿಳಿ ಹೆಂಡ್ತಿ, ನಾಗಿಣಿ 2 ಧಾರಾವಾಹಿಯಲ್ಲಿ ನಟಿಸಿರುವ ನಿನಾದ್ ಹರಿತ್ಸ ಇದೀಗ ಕ್ಯಾಬ್ ಡ್ರೈವರ್ ಆಗಿ ಕೆಲಸ ಶುರು ಮಾಡಿಕೊಂಡಿದ್ದಾರೆ. ಪ್ರೀತಿಸಿದ ಹುಡುಗಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ನಿನಾದ್ ಬಣ್ಣದ ಪ್ರಪಂಚದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಮತ್ತೆ ಕೆಲಸ ಶುರು ಮಾಡಿದರೆ ಅದು ಸಿನಿಮಾ ಅಥವಾ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರಧಾರಿ ಆಗಿಯೇ ಎಂದು ನಿರ್ಧರಿಸಿದ್ದರು. ಹೀಗಾಗಿ ಒಂದೂವರೆ ವರ್ಷದ ನಂತರ ನಿನಾದ್ ಹರಿತ್ಸರನ್ನು ಹುಡುಕಿಕೊಂಡು ಬಂದಿರುವುದು 'ಆಸೆ' ಎಂಬ ಬಂಪರ್ ಆಫರ್. 

ಹೌದು! ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಆಸೆ' ಆರಂಭವಾಗಿದೆ. ಸೋಮವಾರದಿಂದ ಶನಿವಾರ ಸಂಜೆ 7.30pm ಗಂಟೆಗೆ ಪ್ರಸಾರವಾಗಲಿರುವ ಈ ಧಾರಾವಾಹಿಯಲ್ಲಿ ನಿನಾದ್ ಹರಿತ್ಸ ಕ್ಯಾಬ್ ಡ್ರೈವ್ ಆಗಿ ಕಾಣಿಸಿಕೊಳ್ಳಲಿದ್ದಾರೆ. 'ಕ್ಯಾಬ್ ಡ್ರೈವರ್ ಸೂರ್ಯನ ಪಾತ್ರ ಸಾಮಾನ್ಯ ಪ್ರೇಕ್ಷಕರ ಮನೆ ಮನ ತಲುಪಿದೆ. ಎಷ್ಟೋ ಜನರ ಜೀವನಕ್ಕೆ ಈ ಧಾರಾವಾಹಿಯ ಕಥೆ ಮತ್ತು ಮುಖ್ಯ ಪಾತ್ರಗಳು ಹತ್ತಿರವಾಗಿದೆ. ಹಾರ್ಡ್‌ಕೋರ್‌ ಅಭಿಮಾನಿ ಬಳಗವನ್ನು ಪಡೆದಿದೆ. ಜನರು ನನ್ನ ಪಾತ್ರವನ್ನು ಅಭಿಮಾನದಿಂದ ಮಾತನಾಡಿಸಿ ಮೆಚ್ಚಿಕೊಂಡಿದ್ದಾರೆ' ಎಂದು ನಿನಾದ್ ಖಾಸಗಿ ವೆಬ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಸುದೀಪ್‌ ಗಿಫ್ಟ್‌ ಕೊಟ್ಟ ಜಾಕೆಟ್‌ ಬೆಲೆ ಕೇಳಿ ಶಾಕ್ ಆದ ಬಿಗ್ ಬಾಸ್ ರಜತ್ ಕಿಶನ್!

'ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಗುರುತಿಸಿಕೊಳ್ಳಬೇಕು ಎಂದು ಯೋಚನೆ ಮಾಡಿದಾಗ ಸಿಕ್ಕ ಅವಕಾಶವೇ ನಾಗಿಣಿ 2. ಸಾಕಷ್ಟು ಜನಪ್ರಿಯತೆ ತಂದುಕೊಟ್ಟ ಧಾರಾವಾಹಿ. ಈ ಸೀರಿಯಲ್ ಮುಗಿದ ಮೇಲೆ ನಟನಯಿಂದ ಬ್ರೇಕ್ ತೆಗೆದುಕೊಂಡಿದ್ದೆ. ಮುಂದೆ ನಟಿಸುವುದಾದರೆ ಒಳ್ಳೆಯ ಸಿನಿಮಾ ಅಥವಾ ಧಾರಾವಾಹಿಯಲ್ಲಿ ಉತ್ತಮ ಪಾತ್ರಲ್ಲಿ ಕಾಣಿಸಿಕೊಳ್ಳಬೇಕು ಅಂತ ಆಸೆ ಇತ್ತು. ಒಂದೂವರೆ ವರ್ಷದ ನಂತರ ನನಗೆ ಸಿಕ್ಕಿರುವ ಭಾಗ್ಯವೇ ಆಸೆ ಧಾರಾವಾಹಿಯ ಸೂರ್ಯನ ಪಾತ್ರ. ಈ ಪಾತ್ರ ಮನಸ್ಸಿಗೆ ತುಂಬಾ ಹತ್ತಿರವಾಗುತ್ತದೆ' ಎಂದು ನಿನಾದ್ ಹೇಳಿದ್ದಾರೆ. 

50 ಸಾವಿರ ಕೋಟಿ ಒಡತಿಗೆ ಹುಡುಗ್ರು ಅಂದ್ರೆ ಆಗಲ್ಲ; ಯಾರು ಈ ಮಧುಶ್ರೀ ಭೈರಪ್ಪ?