ಹೊಂಗನಸು ಸೀರಿಯಲ್ ನೋಡೋರಿಗೆ ಆಂಗ್ರಿ ಯಂಗ್ ಮ್ಯಾನ್ ರಿಷಿ ಸರ್ ಗೊತ್ತು. ಕಿರುತೆರೆಯಲ್ಲಿ ರಿಷಿ ಸರ್ ಅಂತಲೇ ಫೇಮಸ್ ಆಗಿರೋ ನಟ ಮುಕೇಶ್ ಬ್ಯಾಂಕಾಕ್‌ನಲ್ಲಿ ಬಿಳಿ ಹುಲಿ ಜೊತೆ ಫೋಸ್ ಕೊಡ್ತಿರೋ ವೀಡಿಯೋ ಈಗ ವೈರಲ್ ಆಗಿದೆ.
ತೆಲುಗಿನಲ್ಲಿ 'ಗುಪ್ಪೆಡಂಥ ಮನಸು' ಸೀರಿಯಲ್ ಸಖತ್ ಫೇಮಸ್. ಇದರ ಹೀರೋ ರಿಷಿ ಸರ್. ಹೀರೋಯಿನ್ ವಸುಧಾರ. ಈ ರಿಷಿ ಸರ್ ಪಾತ್ರದಲ್ಲಿ ಮಿಂಚ್ತಾ ಇರೋದು ಕನ್ನಡದ ನಟ, ಮೈಸೂರಿನ ಹುಡುಗ ಮುಕೇಶ್ ಗೌಡ. ನಾಯಕಿ ಪಾತ್ರದಲ್ಲಿ ನಟಿಸಿರೋ ರಕ್ಷಾ ಗೌಡ ಸಹ ಕನ್ನಡತಿ. ಮುಖ್ಯಪಾತ್ರ ಜಗತಿಯಾಗಿ ಫೇಮಸ್ ಆಗಿರೋ ಜ್ಯೋತಿ ರೈ ಸಹ ಮಂಗಳೂರು ಮೂಲದ ಸುಂದರಿ. ಈ ಸೀರಿಯಲ್‌ಗೆ ತೆಲುಗಿನಲ್ಲಿ ಅಪಾರ ಅಭಿಮಾನಿ ಬಳಗವಿದೆ. ಅನೇಕ ಕನ್ನಡಿಗರೂ ಈ ಸೀರಿಯಲ್ ನೋಡ್ತಾರೆ. ಹೊಂಗನಸು ಈ ಸೀರಿಯಲ್ ನ ಕನ್ನಡ ವರ್ಶನ್. ಇದು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತೆ. ಹಾಗೆ ನೋಡಿದರೆ ಕನ್ನಡಿಗರು ಮಾತ್ರ ಅಲ್ಲ, ಬೇರೆ ಬೇರೆ ಭಾಷೆಯ ಮಂದಿ ಈ ಸೀರಿಯಲ್ ಗೆ ಅಡಿಕ್ಟ್ ಆಗಿದ್ದಾರೆ. ಇದಕ್ಕೆ ಅನೇಕ ಕಾರಣ ಇದೆ. ಈ ಸೀರಿಯಲ್‌ನ ಮೇನ್ ಅಟ್ರಾಕ್ಷನ್ ರಿಷಿ ಸರ್. ಸಖತ್ ಹ್ಯಾಂಡ್‌ಸಮ್ ಆದರೆ ಆಂಗ್ರಿಮ್ಯಾನ್, ನಾಯಕಿ ಬಾಯಲ್ಲಿ ಮಾತ್ರ ಜಂಟಲ್‌ಮ್ಯಾನ್.
ಈ ಸೀರಿಯಲ್‌ನ ಪ್ರಧಾನ ಆಕರ್ಷಣೆಯೇ ರಿಷಿ ಸರ್ ಅಂದರೆ ತಪ್ಪಲ್ಲ. ಜೊತೆಗೆ ವಸುಧಾರ ಹೆಸರನ್ನೂ ಬಿಡಂಗಿಲ್ಲ. ಮುಕೇಶ್ ಗೌಡ ಹಾಗೂ ರಕ್ಷಾ ಗೌಡ ಈ ಸೀರಿಯಲ್ ಮೂಲಕ ತೆಲುಗು ಕಿರುತೆರೆಯ ಸ್ಟಾರ್ ನಟ ನಟಿಯರಾಗಿದ್ದಾರೆ. ಇವರಿಗೆ ಸೋಷಿಯಲ್ ಮೀಡಿಯಾದಲ್ಲಿ ನೂರಾರು ಫ್ಯಾನ್ ಪೇಜ್ ಗಳಿವೆ. ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ಸೀರಿಯಲ್‌ನ ಕೆಲವು ಪ್ರೋಮೋಗಳಿಗೆ ಮಿಲಿಯನ್‌ಗೂ ಅಧಿಕ ವ್ಯೂ ಇದೆ. ಅದಕ್ಕಿಂತ ಮಜಾ ಅಂದರೆ ಇದಕ್ಕಿಂತಲೂ ಹೆಚ್ಚಿನ ವೀಕ್ಷಣೆ ಈ ನಟ, ನಟಿಯರ ಖಾಸಗಿ ಫೋಟೋ, ವೀಡಿಯೋಗಳಿಗಿವೆ. ಸೆಟ್‌ನಲ್ಲಿ ಈ ಹೀರೋ, ಹೀರೋಯಿನ್ ಕ್ಯೂಟ್ ಆಗಿ ಜಗಳ ಆಡೋ ವೀಡಿಯೋಗಳಿಗೆ ಕೋಟ್ಯಂತರ ವ್ಯೂ ಸಿಕ್ಕಿದೆ. ಜೊತೆಗೆ ಇವರು ಯಾವುದಾದರೂ ಶಾಪ್ ಉದ್ಘಾಟನೆಗೋ, ಖಾಸಗಿ ಕಾರ್ಯಕ್ರಮಕ್ಕೋ ಹೋದರೆ ಜನ ಕ್ಯೂ ನಿಂತು ಇವರ ಜೊತೆ ಸೆಲ್ಫಿ ತೆಗೆಸಿಕೊಳ್ತಾರೆ. ಸೆಟ್‌ನಲ್ಲಿ ಯಾರೋ ಕದ್ದು ಮುಚ್ಚಿ ತೆಗೆದ ಈ ನಟ, ನಟಿಯ ಫೋಟೋಗಳನ್ನೂ ಸಾವಿರಾರು ಜನ ನೋಡ್ತಾರೆ.
ಸಿಡ್ನಿ ಹುಡುಗನ ಜೊತೆ ಲಕ್ಷಣದ ಶ್ವೇತಾ ಮದ್ವೆಯಂತೆ?!
ಇಷ್ಟೆಲ್ಲ ಫೇಮಸ್ ಆಗ್ತಿರೋ ನಟ, ರಿಷಿ ಪಾತ್ರಧಾರಿ ಮುಕೇಶ್ ಗೌಡ ಇದೀಗ ಬ್ಯಾಂಕಾಕ್ (Bangkok)ಗೆ ಹಾರಿದ್ದಾರೆ. ಆ ಫೋಟೋವನ್ನು ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ರಿಷಿ ಸರ್ ಬಿಳಿ ಹುಲಿ ಜೊತೆ ಇರೋ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರ ನೂರಾರು ಫ್ಯಾನ್ ಪೇಜ್‌ಗಳಲ್ಲಿ ಈ ಫೋಟೋ ಶೇರ್ ಆಗಿದೆ. ರಿಷಿ ಸರ್‌ನ ಆಗಾಗ ವಸುಧರ ಸೀರಿಯಸ್ ಸಿಂಹ(Lion) ಅಂತ ಕರಿಯೋದಿದೆ. ಇದೀಗ ಸೀರಿಯಸ್ ಸಿಂಹ ಬಿಳಿ ಜೊತೇಲಿದೆ ಅಂತ ಈ ಫೋಟೋ ನೋಡಿರೋ ಜನ ಕಮೆಂಟ್ ಮಾಡ್ತಿದ್ದಾರೆ. ಈ ವೀಡಿಯೋದಲ್ಲಿ ಮುಕೇಶ್ ಗೌಡ ಬಿಳಿ ಹುಲಿಯ ಮೈದಡುವುತ್ತಿದ್ದಾರೆ. ಅದಕ್ಕೆ ಮಾಂಸ ನೀಡುತ್ತಿದ್ದಾರೆ. ಅಷ್ಟು ಹತ್ತಿರದಿಂದ ಹುಲಿಯನ್ನು ನೋಡೋದಕ್ಕೇ ಭಯ ಆಗುತ್ತೆ, ಇನ್ನು ಮೈದಡವೋದು ದೂರದ ಮಾತು. ಸೋ ರಿಷಿ ಸರ್ ಧೈರ್ಯಕ್ಕೂ ಫ್ಯಾನ್ಸ್ ಫಿದಾ ಆಗಿದ್ದಾರೆ.
ಪ್ರೋಮೊ ಮೂಲಕ ಸದ್ದು ಮಾಡ್ತಾ ಇರೋ ಅಂತರಪಟ ಸೀರಿಯಲ್ ನಾಯಕಿ ಇವರೇ....
ಕಿರುತೆರೆಯ ಅನೇಕ ನಟ ನಟಿಯರು ಇದೀಗ ವಿದೇಶ ಸುತ್ತುತ್ತಿದ್ದಾರೆ. ಈ ಸೀರಿಯಲ್(Serial) ಹೀರೋಯಿನ್ ರಕ್ಷಾ ಈ ಹಿಂದೆ ದುಬೈ ಪ್ರವಾಸ ಮಾಡಿ ಆ ಫೋಟೋವನ್ನು ಶೇರ್ ಮಾಡಿದ್ದರು. ಇದೀಗ ಮುಕೇಶ್ ಸರದಿ.
ಒಟ್ಟಿನಲ್ಲಿ ಸೀರಿಯಲ್ ಸಿಂಹ ರಿಷಿ ಸರ್ ಬಿಳಿ ಹುಲಿ ಜೊತೆಗೆ ಪೋಸ್ ನೀಡಿರೋದಕ್ಕೆ ಅಭಿಮಾನಿಗಳಂತೂ(Fans) ಫಿದಾ ಆಗಿದ್ದಾರೆ.
