ಪ್ರೋಮೊ ಮೂಲಕ ಸದ್ದು ಮಾಡ್ತಾ ಇರೋ ಅಂತರಪಟ ಸೀರಿಯಲ್ ನಾಯಕಿ ಇವರೇ....
ಕಲರ್ಸ್ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದರೆ ತಪ್ಪಾಗಲಾರದು. ಹೊಸ ಹೊಸ ಧಾರವಾಹಿಗಳ ಮೂಲಕ ಹೊಸ ಕಲಾವಿದರನ್ನು ಸಹ ಪರಿಚಯಿಸುತ್ತಿದ್ದಾರೆ. ಇದೀಗ ಅಂತರಪಟ ಎನ್ನುವ ಸೀರಿಯಲ್ ಪ್ರೊಮೋ ಬಿಟ್ಟಿದ್ದು, ಅದರಲ್ಲೂ ಹೊಸ ನಾಯಕಿ ಕಾಣಿಸಿಕೊಂಡಿದ್ದಾಳೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗಾಗಲೇ ಜನಪ್ರಿಯ ಸೀರಿಯಲ್‌ಗಳಾದ ಒಲವಿನ ನಿಲ್ದಾಣ, ಕೆಂಡಸಂಪಿಗೆ, ಭಾಗ್ಯಲಕ್ಷ್ಮಿ, ಲಕ್ಷ್ಮಿ ಬಾರಮ್ಮ, ಗೀತಾ, ಲಕ್ಷಣ, ರಾಮಾಚಾರಿ, ತ್ರಿಪುರ ಸುಂದರಿ, ಪುಣ್ಯವತಿ ಪ್ರಸಾರವಾಗುತ್ತಿದ್ದು, ಜನರಿಗೆ ಮನೋರಂಜನೆ ನೀಡುವಲ್ಲಿ ಮುಂಚೂಣಿಯಲ್ಲಿದೆ.
ಸದ್ಯ ಯಾವುದೇ ಧಾರವಾಹಿ ಮುಗಿಯುವ ಹಾಗೆ ಕಾಣಿಸುತ್ತಿಲ್ಲ, ಆದರೂ ಇವೆಲ್ಲದರ ನಡುವೆ ಕಲರ್ಸ್ ಕನ್ನಡ ಜನರಿಗೆ ಮತ್ತಷ್ಟು ಮನೋರಂಜನೆ ನೀಡಲು ಅಂತರಪಟ (Antarapata) ಎನ್ನುವ ಹೊಸ ಧಾರಾವಾಹಿ ಪ್ರೊಮೋವೊಂದನ್ನು ರಿಲೀಸ್ ಮಾಡಿದೆ.
'ಅಂತರಪಟ' ಸೀರಿಯಲ್ ನಲ್ಲಿ ನಟಿ ಜ್ಯೋತಿ ಕಿರಣ್, ನಟ ಮಂಜು ಪಾವಗಡ ಪೋಷಕಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲ್ಯದಲ್ಲಿಯೇ ಅಪ್ಪನನ್ನು ಕಳೆದುಕೊಂಡು ಮಲ ತಂದೆಯ ನೆರಳಲ್ಲಿ ಬೆಳೆಯುವ ನಾಯಕಿ, ತನ್ನದೇ ಸ್ವಂತ ಉದ್ಯಮ ಆರಂಭಿಸಿ, ನೂರಾರು ಜನರಿಗೆ ಬೆಳಕು ನೀಡುತ್ತಾಳೆ ಅನ್ನೋದನ್ನು ಪ್ರೋಮೋ (serial promo) ತಿಳಿಸಿದೆ.
ಅಂತರಪಟ ಸೀರಿಯಲ್ ಅಪ್ಪನ ಕನಸನ್ನು ಕಾಣುತ್ತಿರುವ ಹುಡುಗಿಯೊಬ್ಬಳ ಕತೆ. ಇದನ್ನು ಪ್ರೋಮೊದಲ್ಲಿ ತಿಳಿಸಿದ್ದು, ಇದರಲ್ಲಿ ನಾಯಕಿ ಆರಾಧನಾಳಾಗಿ ಹೊಸ ಮುಖವೊಂದನ್ನು ಕಲರ್ಸ್ ಕನ್ನಡ ಪರಿಚಯಿಸುತ್ತಿದೆ. ಈ ಹೊಸ ನಟಿಯ ಹೆಸರು ತನ್ವಿಯಾ ಬಾಲರಾಜ್ (Tanviya Bhalraj).
ತನ್ವಿಯಾ ಮೂಲತಃ ಮಂಡ್ಯದ ಹುಡುಗಿ. ಈಕೆಗೆ ಬಾಲ್ಯದಿಂದಲೂ ನಟಿಯಾಗಬೇಕೆಂಬ ಆಸೆಯಂತೆ, ಆ ಆಸೆ ಇದೀಗ ಅಂತರಪಟ ಮೂಲಕ ನೆರವೇರಿದೆ. ಡ್ಯಾನ್ಸರ್ ಆಗಿರುವ ತನ್ವಿಯಾ ಇನ್‌ಸ್ಟಾಗ್ರಾಂನಲ್ಲಿ (Instagram reels) ಸಾಕಷ್ಟು ರೀಲ್ಸ್ ಮಾಡುವ ಮೂಲಕ ಈಗಾಗಲೇ ಅಭಿಮಾನಿಗಳನ್ನು ಪಡೆದಿದ್ದಾರೆ.
ಕಲರ್ಸ್ ಕನ್ನಡದಲ್ಲಿನ (Colors Kannada) ಹೊಸ ಸೀರಿಯಲ್‌ಗಳಲ್ಲಿ ಈಗಾಗಲೇ ಹೊಸ ಪ್ರತಿಭೆಗಳನ್ನೆ ಆಯ್ಕೆ ಮಾಡಿಕೊಂಡು ಜನಮೆಚ್ಚುಗೆ ಪಡೆದಿದ್ದಾರೆ. ರಾಮಾಚಾರಿ, ಒಲವಿನ ನಿಲ್ಡಾಣ, ಲಕ್ಷ್ಮೀ ಬಾರಮ್ಮ ಎಲ್ಲಾ ಸೀರಿಯಲ್‌ಗಳ ನಾಯಕಿಯರು ಹೊಸಬರೇ ಎಲ್ಲರೂ ಕನ್ನಡ ಕಿರುತೆರೆಯಲ್ಲಿ ಭರವಸೆ ಹುಟ್ಟಿಸಿ, ಅಭಿಮಾನಿಗಳನ್ನು ಪಡೆದಿದ್ದಾರೆ. ಇದೀಗ ತನ್ವಿಯಾ ನಟನೆ ಮೂಲಕ ಜನಮನ ಗೆಲ್ಲುತ್ತಾರ ನೋಡಬೇಕು.
'ಅಂತರಪಟ' ಧಾರಾವಾಹಿ ಪ್ರೋಮೋ ಈಗಾಗಲೇ ಸದ್ದು ಮಾಡುತ್ತಿದೆ, ಜನರು ಸೀರಿಯಲ್ ಯಾವಾಗಿನಿಂದ ಆರಂಭ ಅನ್ನೋದನ್ನು ಕೇಳುತ್ತಿದ್ದಾರೆ. ಆದರೆ, ಯಾವಾಗ ಪ್ರಸಾರವಾಗುತ್ತೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಕಲರ್ಸ್ ಕನ್ನಡ ವಾಹಿನಿ ನೀಡಿಲ್ಲ. ಯಾವ ಸೀರಿಯಲ್ ಮುಗಿಯುತ್ತೆ ಅನ್ನೋದು ಸಹ ಗೊತ್ತಿಲ್ಲ.