Bigg Boss Ott Nandini: ‘ಎಂಟಿವಿ ರೋಡೀಸ್‌ ಶೋ’ ಗೆದ್ದಿದ್ದ ಅಂದಿನ ಪ್ರೇಮಿಗಳಾದ ನಂದಿನಿ, ಜಶ್ವಂತ್‌ ಇಂದು ದೂರ ದೂರ ಆಗಿದ್ದಾರೆ. ಆದರೆ ಹೊಸ ಹುಡುಗನ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದೇನೆ ಎಂದು ಹೇಳಿದ್ದಾರೆ. 

‘ಬಿಗ್‌ ಬಾಸ್‌ ಕನ್ನಡ ಒಟಿಟಿ’ ವೇದಿಕೆಯಲ್ಲಿ ಪ್ರೇಮಿಗಳಾಗಿ ಎಂಟ್ರಿ ಕೊಟ್ಟಿದ್ದ ನಂದಿನಿ, ಜಶ್ವಂತ್‌ ಈಗ ದೂರ ದೂರ ಆಗಿದ್ದಾರೆ. ‘ಬಿಗ್‌ ಬಾಸ್’ ಶೋ ಮುಗಿಯುತ್ತಿದ್ದಂತೆ ಇವರಿಬ್ಬರು ಮನಸ್ತಾಪದಿಂದ ಸಂಬಂಧ ಕಡಿದುಕೊಂಡರು. ಈಗ ನಂದು ಹೊಸ ಬಾಯ್‌ಫ್ರೆಂಡ್‌ ಪರಿಚಯ ಮಾಡಿಕೊಟ್ಟಿದ್ದಾರೆ.

ಜಶ್ವಂತ್‌ ಈಗ ಸಿಂಗಲ್?

ಜಶ್ವಂತ್‌ ಅವರು ಹಿಂದಿಯ splitsvilla season 15 ರಿಯಾಲಿಟಿ ಶೋನಲ್ಲಿ ಭಾಗವಹಿಸುವುದೊಂದೇ ಅಲ್ಲದೆ, ಆಕೃತಿ ನೇಗಿ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಇವರಿಬ್ಬರು ಸಿಕ್ಕಾಪಟ್ಟೆ ರೀಲ್ಸ್‌ ಮಾಡುತ್ತಿದ್ದರು. ಆ ಬಳಿಕ ಇವರಿಬ್ಬರು ದೂರ ಆಗಿದ್ದಾರೆ. ಜಶ್ವಂತ್‌ ವಿರುದ್ಧ ಆಕೃತಿ ಒಂದಷ್ಟು ಆರೋಪ ಮಾಡಿದ್ದರು. ಅಂದಹಾಗೆ ಈಗ ಜಶ್ವಂತ್‌ ರಿಲೇಶನ್‌ಶಿಪ್‌ ಸ್ಟೇಟಸ್‌ ಏನು ಎನ್ನೋದು ರಿವೀಲ್‌ ಆಗಿಲ್ಲ.

ಪ್ರೀತಿಯಲ್ಲಿ ಬಿದ್ದಿರುವ ನಂದು!

ಅತ್ತ ಜಶ್ವಂತ್‌ ಅವರು ಲವ್‌ನಲ್ಲಿ ಬಿದ್ದರೂ ಕೂಡ, ನಂದು ಮಾತ್ರ ಸಿಂಗಲ್‌ ಆಗಿದ್ದರು. ಬೇರೆ ಹುಡುಗಿಯಿಂದ ನಮ್ಮಿಬ್ಬರ ಮಧ್ಯೆ ಮನಸ್ತಾಪ ಬಂದಿದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಈಗ ನಂದು ಕೂಡ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.

ಬಾಯ್‌ಫ್ರೆಂಡ್‌ ಪರಿಚಯಿಸಿದ ನಂದು!

“ಮೂರು ವರ್ಷಗಳ ಹಿಂದೆ ಜುಲೈ 10ರಂದು ನಾನು ಎಂಟಿವಿ ರೋಡೀಸ್‌ ಶೋ ಗೆದ್ದ ದಿನ. ಈ ಶೋ ಗೆದ್ದ ಕನ್ನಡಿಗ ನಾನೇ. ಇಂದು ಈ ದಿನ ಸೊಲಿಡ್‌ ಆಗಿರೋ, ಕ್ಯೂಟ್‌ ಆಗಿರೋ ಬಾಯ್‌ಫ್ರೆಂಡ್‌ ಜೊತೆಗಿದ್ದಾನೆ” ಎಂದು ನಂದಿನಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅವರ ಬಾಯ್‌ಫ್ರೆಂಡ್‌ ಕೂಡ ಇದ್ದಾರೆ. ಕಟ್ಟಿಗೆ ಒಡೆಯುತ್ತಿರುವ ಬಾಯ್‌ಫ್ರೆಂಡ್‌ ಜೊತೆ ನಂದಿನಿ ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ ಲಿಪ್‌ ಕಿಸ್‌ ಮಾಡಿ, ಹಳೇ ಬಾಯ್‌ಫ್ರೆಂಡ್‌ಗೆ ತಿರುಗೇಟು ಕೊಟ್ಟಿದ್ದಾರೆ.

ಹುಡುಗ ಯಾರು?

ಸಿದ್ದಾರ್ಥ್‌ ಸನಾತನಂ ಎಂಬುವವರ ಜೊತೆ ಜಶ್ವಂತ್‌ ಅವರು ರಿಲೇಶನ್‌ಶಿಪ್‌ನಲ್ಲಿದ್ದಾರೆ. ಕಳೆದ ಒಂದು ವರ್ಷದ ಹಿಂದಿನಿಂದಲೂ ಇವರಿಬ್ಬರಿಗೂ ಪರಿಚಯ ಇರೋದು ಸೋಶಿಯಲ್‌ ಮೀಡಿಯಾದಲ್ಲಿ ಗೊತ್ತಾಗಿದೆ.

ಬಿಗ್‌ ಬಾಸ್‌ ಕನ್ನಡ ಒಟಿಟಿ ಸೀಸನ್‌ 1

ಎಂಟಿವಿ ರೋಡೀಸ್‌ ಶೋವನ್ನು ಒಟ್ಟಿಗೆ ಗೆದ್ದಿದ್ದ ಜಶ್ವಂತ್‌, ನಂದಿನಿ ಅವರು ‘ಬಿಗ್‌ ಬಾಸ್‌ ಕನ್ನಡ ಒಟಿಟಿ ಸೀಸನ್‌ 1’ ಶೋನಲ್ಲಿ ಭಾಗವಹಿಸಿದ್ದರು. ಆ ವೇಳೆ ಅವರಿಬ್ಬರು ಸಿಕ್ಕಾಪಟ್ಟೆ ಕಿತ್ತಾಡಿದ್ದರು. ಇನ್ನೋರ್ವ ಮಹಿಳಾ ಸ್ಪರ್ಧಿ ಜೊತೆ ಜಶ್ವಂತ್ ಅವರು ಆತ್ಮೀಯತೆಯಿಂದಿದ್ದರು. ಇದು ನಂದಿನಿಗೆ ಸಿಟ್ಟು ತರಿಸಿತ್ತು. ದೊಡ್ಮನೆಯಲ್ಲಿದ್ದಾಗಲೂ ಜಶ್ವಂತ್‌ ಅವರು, “ನಂದಿನಿ ಜೊತೆ ಮದುವೆ ಆಗೋ ಪ್ಲ್ಯಾನ್‌ ಇಲ್ಲ” ಎಂದು ಹೇಳಿದ್ದರು. ಕೊನೆಗೂ ಇವರಿಬ್ಬರು ಬೇರೆ ಬೇರೆಯಾಗಿದ್ದಾರೆ.

View post on Instagram

View post on Instagram