ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಭಾಗಿಯಾಗಿದ್ದರು. ಈ ವೇಳೆ ನಿರೂಪಕ ಅಕುಲ್ ಬಾಲಾಜಿ ಕೇಳಿದ ಈ ಒಂದು ಪ್ರಶ್ನೆಗೆ ಉತ್ತರಿಸಿದ್ದಾರೆ.

ಕಲರ್ಸ್‌ ಕನ್ನಡದ ಅನುಬಂಧ ಅವಾರ್ಡ್‌;ಮಿಸ್ ಮಾಡದೆ ನೋಡಿ! 

ಅವಾರ್ಡ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತೇಜಸ್ವಿ ಸೂರ್ಯ ಜನ ಮೆಚ್ಚಿದ ಯೂತ್‌ ಐಕಾನ್ ಪ್ರಶಸ್ತಿಯನ್ನು ನನ್ನರಸಿ ರಾಧೆ ಅಗಸ್ತ್ಯನಿಗೆ ನೀಡಿದ ನಂತರ ಅಕುಲ್ ಬಾಲಾಜಿ 'ನಿಮ್ಮ ಹುಡುಗಿ ಹೇಗಿರಬೇಕು' ಅಂತ ಹೇಳಿದ್ದಾರೆ ಅದಿಕ್ಕೆ ತೇಜಸ್ವಿ ಕೊಟ್ಟ ಉತ್ತರ ಗೊತ್ತಾ?

ನಗು ನಗುತ್ತಲೇ ತಮ್ಮ ಹುಡುಗಿ ಹೇಗಿರಬೇಕೆಂದು ಹೇಳಿದ ತೇಜಸ್ವಿ ಬಂಗಾಳ ಎಲೆಕ್ಷನ್‌ನಲ್ಲಿ ಗೆಲ್ಲೋವರೆಗೂ  ತನ್ನ ಹೃದಯದಲ್ಲಿ ಮಮತಾ ಬ್ಯಾನರ್ಜಿಗೆ ಮಾತ್ರ ಜಾಗವಿರೋದು ಎಂದಿದ್ದಾರೆ. ಆ ನಂತರ ನಾನು ಇವತ್ತು ಹೀಗಿದ್ದೀನಿ ಅಂದ್ರೆ ನನ್ನ ತಾಯಿ ಕಾರಣ ಪ್ರತಿ ಹುಡುಗರಿಗೂ ಅವರ ಹುಡುಗಿ ಅಮ್ಮನ ಹಾಗಿರಬೇಕು ಅಂತ ಆಸೆ ಇರುತ್ತೆ ಎಂದು ಉತ್ತರಿಸಿದ್ದಾರೆ. ನಿರೂಪಕ ಅಕುಲ್ ಕಾಲು ಎಳೆಯುವ ಸಲುವಾಗಿ ಸೀರಿಯಲ್ ನಟಿಯರನ್ನು ತೋರಿಸಿ ಇಷ್ಟು ಜನ ಹುಡುಗೀರು ಇದ್ದಾರೆ ನಿಮಗೆ ಯಾರು ಓಕೆ ಎಂದು ಕೇಳಿದ್ದಾರೆ. ಆದರೆ ತೇಜಸ್ವಿ ಇದೆಂಥಾ ಪ್ರಶ್ನೆ ಅಂತ ಹೇಳುತ್ತಾ ಸುಮ್ಮನಾಗುತ್ತಾರೆ.

'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ವಿಜಯ್ ಕಾಶಿ ಪತ್ನಿ ವೈಜಯಂತಿ; ಸಾಧನೆ ಪಟ್ಟಿ ತುಂಬಾ ದೊಡ್ಡದು!