ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ರಮೋಲಾ ಮತ್ತು ಅಮೃತಾ ತಮ್ಮ ತಿಂಗಳ ಖರ್ಚುವೆಷ್ಟು ಎಂದು ಬಹಿರಂಗಪಡಿಸಿದ್ದಾರೆ. ರಮೋಲಾ ತಿಂಗಳಿಗೆ 55 ಸಾವಿರ ರೂ. ಖರ್ಚು ಮಾಡಿದರೆ, ಅಮೃತಾ 1 ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡುತ್ತಾರೆ.

ಬೆಂಗಳೂರು: ಖಾಸಗಿ ವಾಹಿನಿಯ ಭರ್ಜರಿ ಬ್ಯಾಚ್ಯುಲರ್ಸ್ (Bharjari Bachelors Reality Show) ಫಿನಾಲೆ ಹಂತದಲ್ಲಿದೆ. ಈ ರಿಯಾಲಿಟಿ ಶೋನಲ್ಲಿ ಭಾಗಿಯಾಗಿರುವ ಸ್ಪರ್ಧಿಗಳಾದ ರಮೋಲಾ (Actress Ramola) ಮತ್ತು ಅಮೃತಾ (Actress Amritha) ತಮ್ಮ ತಿಂಗಳ ಖರ್ಚು ಎಷ್ಟು ಎಂದು ಬಹಿರಂಗಪಡಿಸಿದ್ದಾರೆ. ಇದನ್ನೆಲ್ಲಾ ನೋಡಿದ ನಿರೂಪಕ ನಿರಂಜನ್ ದೇಶಪಾಂಡೆ, ರಮೋಲಾ ಅವ್ವ. ಅಮೃತಾ ಅವರ ಅವ್ವ ಎಂದು ಕಮೆಂಟ್ ಮಾಡಿದ್ದಾರೆ. ರಿಯಾಲಿಟಿ ಶೋನಲ್ಲಿ ರಮೋಲಾ ಪಾರ್ಟನರ್ ಆಗಿರುವ ಬುಲೆಟ್ ರಕ್ಷಕ್, ಪ್ರೀತಿ ಮುಂದೆ ಹಣದ ಲೆಕ್ಕಕ್ಕೆ ಬರಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ. ಆದ್ರೆ ಅಮೃತ ಪಾರ್ಟನರ್ ಗಾಯಕ ಸುನೀಲ್, ತಿಂಗಳ ಖರ್ಚು ನೋಡಿ ಕಣ್ಣರಳಿಸಿ ಶಾಕ್ ಆಗಿದ್ದಾರೆ.

ರಮೋಲಾ ಮತ್ತು ಅಮೃತ ತಿಂಗಳ ಖರ್ಚು ಎಷ್ಟು?

ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಎರಡು ಬೋರ್ಡ್ ಇರಿಸಲಾಗಿರುತ್ತದೆ. ರಮೋಲಾ ಮತ್ತು ಅಮೃತಾ ಇಬ್ಬರು ತಮ್ಮ ತಿಂಗಳ ಖರ್ಚು ಎಷ್ಟು ಮತ್ತು ಯಾವುದಕ್ಕೆ ಎಷ್ಟು ಹಣ ಬೇಕಾಗುತ್ತದೆ ಎಂದು ಬರೆದಿದ್ದಾರೆ. ರಮೋಲಾ ತಮಗೆ ತಿಂಗಳಿಗೆ 53 ಸಾವಿರ ರೂಪಾಯಿ ಹಣ ಬೇಕಾಗುತ್ತೆ ಎಂದು ಬರೆದ್ರೆ, ಅಮೃತ ಲೆಕ್ಕ ಮಾತ್ರ 1 ಲಕ್ಷ ರೂ.ಗೂ ಅಧಿಕವಾಗಿದೆ. ಈ ಲೆಕ್ಕ ನೋಡಿದ ನೆಟ್ಟಿಗರು, ಗುರು ಇದೆಲ್ಲಾ ಅವರ ಅಪ್ಪ ಅಮ್ಮ ಜೊತೆಗೆ ಇದ್ದಾಗ ಅಲ್ಲ ಗಂಡನ ಮನೆಗೆ ಹೋದಾಗ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.

ಇವರನ್ನ ಮದುವೆ ಆದ್ರೆ ಗತಿ ಅಧೋಗತಿ

ನಿಮ್ಮಂಥ ಹುಡುಗಿರನ್ನು ಮದುವೆ ಆದ್ರೆ ಗತಿ ಅಧೋಗತಿ ಆಗುತ್ತದೆ. ಒಪ್ಪತ್ತಿನ ಊಟ ಇಲ್ಲದೆ ಎಷ್ಟೋ ಜನ ಇದ್ದಾರೆ, ಅಂತವರಿಗೆ ಸಹಾಯ ಮಾಡಿ. ಈ ಭೂಮಿ ಮೇಲೆ ಯಾರಿಗೂ ಶಾಶ್ವತ ಅಲ್ಲ ಅವರು ಸಾಯ್ತಾರೆ ನೀವು ಸಾಯ್ತಿರ, ಸತ್ತ ಮೇಲೆ ಮಾಡಿದ ದಾನ ಧರ್ಮ ಅಷ್ಟೇ ಲೆಕ್ಕಕ್ಕೆ ಬರೋದು ನೆನಪಿರಲಿ. ರಮೋಲಾ 1 ತಿಂಗಳಿಗೆ 53,000 ಸಾವಿರ ಖರ್ಚು ಮಾಡ್ತಿದಾಳೆ ಅಂದ್ರೆ ತಿಂಗಳಿಗೆ ಎಷ್ಟ ದುಡಿತಾಳೆ ಅನ್ನೋದೇ ನಮ್ಮ ಪ್ರಶ್ನೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ತಮ್ಮ ಖರ್ಚುಗಳ ಬಗ್ಗೆ ರಮೋಲಾ ಹೇಳಿದ್ದೇನು?

ಶಾಪಿಂಗ್‌ ಮತ್ತು ಸ್ಕಿನ್‌ ಕೇರ್‌ಗೆ ತಲಾ 10 ಸಾವಿರ ರೂಪಾಯಿ ಹಾಕಿದ್ದೀನಿ. ಶಾಪಿಂಗ್ ಅಂದ್ರೆ ಸ್ಕಿನ್ ಕೇರ್ ಪ್ರೊಡಕ್ಟ್ ಖರೀದಿಸೋದು ಆಗಿರುತ್ತದೆ. ನಾನು ಹೆಚ್ಚು ಟ್ರಾವೆಲ್ ಮಾಡದ ಕಾರಣ ಹಾಗಾಗಿ ಕೇವಲ 8 ಸಾವಿರ ಹಾಕಿದ್ದೀನಿ. ಫುಡ್ ಅಂದ್ರೆ ಹೆಚ್ಚು ಡ್ರೈ ಫ್ರೂಟ್ಸ್ ತಿನ್ನೋದು. ಅದಕ್ಕಾಗಿ ತಿಂಗಳಿಗೆ 10 ಸಾವಿರ ರೂ. ಬೇಕಾಗುತ್ತದೆ. ಇನ್ನುಳಿದಂತೆ ಮನೆಗೆ ಬೇಕಾಗುವ ಕೆಲ ಸಾಮಾಗ್ರಿಗಳನ್ನು ತರ್ತಿನಿ, ಅದಕ್ಕೆ ನನಗೆ 15 ಸಾವಿರ ರೂಪಾಯಿ ಬೇಕೆಂದು ರಮೋಲಾ ಹೇಳಿದ್ದಾರೆ. ರಮೋಲಾ ಪ್ರಕಾರ ಅವರ ತಿಂಗಳ ಖರ್ಚು 53 ಸಾವಿರ ರೂಪಾಯಿ ಆಗುತ್ತದೆ.

ಯಾವುದಕ್ಕೆ?ಎಷ್ಟು ಹಣ?
ಶಾಪಿಂಗ್ 10,000 ರೂಪಾಯಿ
ಸ್ಕಿನ್ ಕೇರ್10,000 ರೂಪಾಯಿ
ಟ್ರಾವೆಲ್8,000 ರೂಪಾಯಿ
ಫುಡ್ 10,000 ರೂಪಾಯಿ
ಇತರೆ ಖರ್ಚು15,000 ರೂಪಾಯಿ

ರಮೋಲಾಗಿಂತ ದುಬಾರಿ ಅಮೃತಾ

ಕಾರ್ ಸ್ವಲ್ಪ ಗಲೀಜು ಆದರೂ ನಾನು ವಾಶ್ ಮಾಡಿಸುತ್ತೇನೆ. ಒಮ್ಮೆ 800 ರೂ. ಅಂದ್ರೆ ತಿಂಗಳಿಗೆ 15 ಸಲ ಕಾರ್ ವಾಶ್ ಮಾಡಿಸುತ್ತೇನೆ. ಕಾರ್‌ ಡೀಸೆಲ್‌ಗೆ 7 ಸಾವಿರ ರೂ.ಬೇಕು. ತಿಂಗಳಿಗೆ ಎರಡು ಬಾರಿ ಟ್ಯಾಂಕ್ ಫುಲ್ ಮಾಡಿಸುತ್ತೇನೆ. ಫುಡ್‌ಗೆ ಅಂತ 30 ಸಾವಿರ ರೂಪಾಯಿ ಬೇಕು. ಸಲೂನ್ ಖರ್ಚು ತಿಂಗಳಿಗೆ 25 ಸಾವಿರ ರೂಪಾಯಿ ಬೇಕಾಗುತ್ತದೆ. ಶಾಪಿಂಗ್ ಅಂದ್ರೆ ತುಂಬಾ ಇಷ್ಟ ಅದಕ್ಕಾಗಿ ಒಂದು ತಿಂಗಳಿಗೆ 40 ಸಾವಿರ ಹಣ ಬೇಕು. ಇತರೆ ಖರ್ಚಿಗೆ 25 ಸಾವಿರ ರೂ. ಸಾಕು ಎಂದು ಅಮೃತ ಹೇಳಿದ್ದಾರೆ.

ಯಾವುದಕ್ಕೆ?ಎಷ್ಟು ಹಣ?
ಕಾರ್ ವಾಶ್12,000 ರೂಪಾಯಿ
ಡೀಸೆಲ್ 7,000 ರೂಪಾಯಿ
ಫುಡ್30,000 ರೂಪಾಯಿ
ಸಲೂನ್25,000 ರೂಪಾಯಿ
ಶಾಪಿಂಗ್40,000 ರೂಪಾಯಿ
ಇತರೆ ಖರ್ಚು25,000 ರೂಪಾಯಿ