ರಕ್ಷಕ್​ಗೆ ಅದಿಲ್ಲ, ಅದಕ್ಕೇ ಹಗ್​ ಮಾಡಲ್ಲ ಎಂದು ವೇದಿಕೆಯ ಮೇಲೆ ಹೇಳಿದ ನಟಿ ರಮೋಲಾ. ಇದರ ಪ್ರೊಮೋ ನೋಡಿ ನೆಟ್ಟಿಗರು ಹೇಳ್ತಿರೋದೇನು ನೋಡಿ! 

ಇದೀಗ ರಿಯಾಲಿಟಿ ಷೋಗಳಲ್ಲಿ ಕಾಮಿಡಿ ಎಂದರೆ ಡಬಲ್​ ಮೀನಿಂಗ್​ ಎನ್ನುವ ಸ್ಥಿತಿ ಇದೆ. ಕೆಲವು ಆ್ಯಂಕರ್​ಗಳು ಡಬಲ್​ ಮೀನಿಂಗ್​ಗಳನ್ನೇ ಹಾಸ್ಯ ಎಂದುಕೊಂಡಂತಿರುತ್ತದೆ. ಅದಕ್ಕೆ ತೀರ್ಪುಗಾರರಾಗಿ ಬರುವವರೂ ಸಾಥ್​ ನೀಡುತ್ತಲೇ ಆ ಡಬಲ್​ ಮೀನಿಂಗ್​ ಅನ್ನು ಮತ್ತಷ್ಟು ಅಶ್ಲೀಲ ಎಂಬಂತೆ ಬಿಂಬಿಸುತ್ತಿದ್ದಾರೆ. ಅದೂ ಸಾಲದು ಎನ್ನುವುದಕ್ಕೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಕೂಡ ಹಾಸ್ಯದ ಹೆಸರಿನಲ್ಲಿ ರಿಯಾಲಿಟಿ ಷೋಗಳಲ್ಲಿ ಅಶ್ಲೀಲತೆಯೇ ತುಂಬಿ ಹೋಗಿದೆ. ಇಂದಿನ ಹಲವು ರಿಯಾಲಿಟಿ ಷೋಗಳಲ್ಲಿ ಅದರ ಮೂಲ ಉದ್ದೇಶ ಬಿಟ್ಟು ಅಸಭ್ಯ ಮಾತುಗಳು, ಜೋಕ್​ಗಳು, ಅಬ್ಬರದ ಕೂಗಾಟ, ಕಿರುಚಾಟಗಳೇ ಹೆಚ್ಚಾಗಿವೆ ಎಂದು ಬೈದುಕೊಳ್ಳುತ್ತಲೇ ಅದನ್ನು ಆಸ್ವಾದಿಸುವ ದೊಡ್ಡ ವರ್ಗವೇ ಇದೆ. ಮಕ್ಕಳ ಕಾರ್ಯಕ್ರಮಗಳಲ್ಲಿಯೂ ಮಕ್ಕಳ ಬಾಯಲ್ಲಿಯೇ ಡಬಲ್​ ಮೀನಿಂಗ್​ ಹೇಳಿಸಿ ಅದನ್ನು ಹಾಸ್ಯ ಎಂದುಕೊಳ್ಳುವ ಕಾರ್ಯಕ್ರಮಗಳು ಎಷ್ಟಿಲ್ಲ ಹೇಳಿ? ತಾವೇನು ಹೇಳುತ್ತಿದ್ದೇವೆ ಎನ್ನುವುದು ತಿಳಿಯದ ಮಕ್ಕಳು, ತಾವು ಹೇಳಿದ್ದನ್ನು ಕೇಳಿ ಜನರು ನಗುವಾಗ ಖುಷಿ ಪಡುವ ಅಸಭ್ಯ ಸಂಸ್ಕೃತಿಯನ್ನೂ ಇಂದಿನ ರಿಯಾಲಿಟಿ ಷೋಗಳು ಹುಟ್ಟುಹಾಕುತ್ತಿವೆ!

Add Asianetnews Kannada as a Preferred SourcegooglePreferred

ಕೆಲ ದಿನಗಳ ಹಿಂದೆ ರಿಯಾಲಿಟಿ ಷೋಗಳಲ್ಲಿನ ಇದೇ ಡಬಲ್​ ಮೀನಿಂಗ್​ಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದರು ನಟ ರವಿಚಂದ್ರನ್​. ಈಗಲೂ ತೀರ್ಪುಗಾರರಾಗಿರುವ ರವಿಚಂದ್ರನ್​ ಅವರು ಇದೀಗ ಇಂಥ ಷೋಗಳಲ್ಲಿನ ಅಸಭ್ಯ, ಅಶ್ಲೀಲ ಮಾತುಗಳ ಬಗ್ಗೆ ಖೇದ ವ್ಯಕ್ತಪಡಿಸಿದ್ದರು. ಆದರೆ ಅವರ ಸಮ್ಮುಖದಲ್ಲಿಯೇ ನಟಿ ರಮೋಲಾ ಡಬಲ್​ ಮೀನಿಂಗ್​ ಮಾತನಾಡಿದ್ದು, ಅದಕ್ಕೆ ಆ್ಯಂಕರ್​ ಉಪ್ಪು-ಖಾರ ಹಾಕಿದ್ದು, ಅದನ್ನು ನೋಡಿ ಖುದ್ದು ರವಿಚಂದ್ರನ್​ ಅವರು ನಕ್ಕಿದ್ದು ವಿಡಿಯೋ ವೈರಲ್​ ಆಗಿದೆ. ಇದಕ್ಕೆ ಬಗ್ಗೆ ಟೀಕೆಗಳ ಮಹಾಪೂರವೇ ಹರಿದುಬರುತ್ತಿದೆ. ಇದೇನು ರಿಯಾಲಿಟಿ ಷೋನಾ ಅಥ್ವಾ... ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಇದಕ್ಕೆ ರಮೋಲಾ, ಬುಲೆಟ್​ ರಕ್ಷಕ್​ ಕುರಿತು ಈ ಡಾನ್ಸ್​ ಹೇಳಿಕೊಡುವುದು ನನಗೆ ತುಂಬಾ ಕಷ್ಟವಾಯಿತು. ಏಕೆಂದರೆ ಬುಲೆಟ್​ಗೆ ಇದಿಲ್ಲ ಎಂದರು. ಆಗ ಅಲ್ಲಿದ್ದವರು ಎಲ್ಲಾ ಗೊಳ್ಳೆಂದು ನಕ್ಕರೆ, ರಕ್ಷಕ್​ ಮುಖ ಮಾತ್ರ ಸಪ್ಪಗಾಗಿತ್ತು. ನಂತರ ಆ್ಯಂಕರ್​ ನಿರಂಜನ್​ ಏನದು ಎಂದು ಕೇಳಿದಾಗ, ನಿಮಗೆ ಇದೆಯಲ್ಲ, ಇದು ರಕ್ಷಕ್​ಗೆ ಇಲ್ಲ ಎನ್ನುತ್ತಲೇ ನೀವು ಸಮಯ ಸಿಕ್ಕಾಗ ಹಗ್​ ಮಾಡಿಕೊಳ್ಳುತ್ತೀರಲ್ಲ, ರಕ್ಷಕ್​ ಹಾಗೆ ಮಾಡಿಕೊಳ್ಳುವುದಿಲ್ಲ. ನಾನೇ ಅವರ ಕೈಹಿಡಿಯಬೇಕು ಎಂದೆಲ್ಲಾ ಆ್ಯಕ್ಷನ್​ ಮಾಡಿ ತೋರಿಸಿದಾಗ, ನಿರಂಜನ್​ ಅವರು ಇವರ್ಯಾಕೋ ಏನೇನೋ ಹೇಳ್ತಿದ್ದಾರೆ ಎಂದರು. ಅಲ್ಲಿದ್ದ ಇತರ ಸ್ಪರ್ಧಿಗಳು ಇದು ಸಭ್ಯ ಜೋಕ್​ ಎನ್ನುವಂತೆ ಜೋರಾಗಿ ನಕ್ಕರು. ಇದರ ಪ್ರೊಮೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಭಾರಿ ಟೀಕೆ ವ್ಯಕ್ತವಾಗಿದೆ. ಈ ವಿಡಿಯೋ ಅನ್ನು ಕ್ವೀನ್​ಡೇಂಜರ್ ಎನ್ನುವ ಇನ್​ಸ್ಟಾದಲ್ಲಿ ಶೇರ್​ ಮಾಡಲಾಗಿದೆ. 

ಅಂದಹಾಗೆ ಇದು ಭರ್ಜರಿ ಬ್ಯಾಚುಲರ್ಸ್​ ಷೋದಲ್ಲಿ ನಡೆದಿರುವ ಘಟನೆ. ಇದರಲ್ಲಿ ಇರುವ ಜೋಡಿಗಳೆಲ್ಲಾ ತುಂಬಾ ಚೆನ್ನಾಗಿ ಪರ್ಫಾಮೆನ್ಸ್​ ಮಾಡುತ್ತಿದ್ದು, ಅವರ ಪೈಕಿ ಒಂದು ಜೋಡಿ ರಮೋಲಾ ಮತ್ತು ಬುಲೆಟ್​ ರಕ್ಷಕ್​ ಅವರದ್ದು. ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಬಿಗ್​ಬಾಸ್​ ಬಳಿಕ ಸಕತ್ ಫೇಮಸ್​ ಆದವರು. ಬಿಗ್​ಬಾಸ್​ ಬಗ್ಗೆ ಹೇಳಿಕೆ ನೀಡಿ ಕಾಂಟ್ರವರ್ಸಿಗೆ ಒಳಗಾಗಿದ್ದರೂ ಇದೀಗ ಅವರಿಗೆ ಸಕತ್​ ಡಿಮಾಂಡ್​ ಕೂಡ ಇದೆ. ಇದೀಗ ಅವರು, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭರ್ಜರಿ ಬ್ಯಾಚುಲರ್ಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಅವರಿಗೆ, ಸೀತಾರಾಮ ವಿಲನ್​ ಚಾಂದನಿ ಅರ್ಥಾತ್​ ನಟಿ ರಮೋಲಾ ಜೋಡಿಯಾಗಿದ್ದಾರೆ. ಇದಾಗಲೇ ಇವರಿಬ್ಬರೂ ಸಾಕಷ್ಟು ಲವ್​ಸಾಂಗ್​ಗಳನ್ನೂ ಮಾಡಿದ್ದಾರೆ.