ಮೂಲತಃ ಬೆಂಗಳೂರಿನವರಾದ ಇವರು, ಬಣ್ಣದ ಲೋಕಕ್ಕೆ ಕಾಲಿಡಲು ಮೂಲ ಕಾರಣ ಇವರ ಅಮ್ಮ. ಹೌದು, ಅಮ್ಮನ ಮುದ್ದಿನ ಮಗಳಾದ ವೈಷ್ಣವಿಗೆ ನಟನೆ ಅಂದರೆ ಮೊದಲಿನಿಂದಲು ಆಸಕ್ತಿ ಇತಂತೆ. ಅದಕ್ಕೆ ಸರಿಯಾಗಿ ಅಮ್ಮನ ಪ್ರೋತ್ಸಾಹ ಕೂಡ ಇದ್ದರಿಂದ ಅಮ್ಮನೇ ಒಮ್ಮೆ ಅಡಿಷನ್ ಕೊಟ್ಟು ನೋಡೆಂದು ತಿಳಿಸಿದ್ದರು.

'Bro-in-Law' ಅಂತ ಹೇಳ್ತಾ 'ಜೊತೆ ಜೊತೆಯಲಿ' ಮಿಂಚುತ್ತಿರುವ ಮಾನ್ಸಿ ಯಾರು ?

ಟೀನೇಜ್ ಹುಡುಗಿ:

ವೈಷ್ಣವಿ ಇನ್ನೂ ಟೀನೇಜ್ ಹುಡ್ಗಿ ಅಂದ್ರೆ ನೀವು ನಂಬಲೇಬೇಕು. ಪುಟ್ಟ ಮಕ್ಕಳಂತೆ ಇರುವ ಇವರದ್ದು ವಯಸ್ಸಿಗೆ ಮೀರಿದ ಅಭಿನಯ. ಸದ್ಯ ಓದುವಿನ ಜೊತೆಗೆ ನಟನೆಯಲ್ಲೂ ಹೆಸರು ಮಾಡುತ್ತಿರುವ ಇವರಿಗೆ ರಾಶಿ ಪಾತ್ರವೆಂಬುದು ಒಲಿದು ಬಂದ ಭಾಗ್ಯವಂತೆ.

ಆಟೋ ಓಡ್ಸೋ ಚಾಲಾಕಿ:

ಇವರಿಗೆ ಮೊದಲು ಅವಕಾಶ ದೊರಕಿದ್ದು ಶಾಂತಂ ಪಾಪಂ ಸೀರಿಯಲ್‌ನಲ್ಲಿ. ನಂತರ ಆಟೋ ಓಡ್ಸೋ ರಾಶಿ ಆಗಿ ಅವಕಾಶ ದೊರಕಿತು. ವೈಷ್ಣವಿಗೆ ಓದು ಅಂದ್ರೆ ಅಚ್ಚುಮೆಚ್ಚು. ಆದ್ರೆ ರಾಶಿ ಇದಕ್ಕೆ ಫುಲ್ ಉಲ್ಟಾ. ಜೀವನಪೂರ್ತಿ ಬೇಕಾದ್ರು ಓದಿಕೊಂಡೆ ಇರ್ತಿನಿ ಅನ್ನೋ ಇವರು ಮೊದಲು ಗಾಡಿ ಅಂತ ಕಲ್ತದ್ದೆ ಆಟೋ ಓಡ್ಸೋದನ್ನಾ ಅಂತೆ. ಹೀಗೆ ಹೆಣ್ಣು ಮಗಳಾಗಿ ಇವರು  ಆಟೋ ಓಡ್ಸೋದನ್ನಾ ನೋಡಿ ಎಷ್ಟೋ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗೂದರ ಜೊತೆಗೆ ಅದೆಷ್ಟೋ ಜನರು ಇವರನ್ನು ಕಂಡು ಶಹಭಾಸ್ ಎಂದು ಹೇಳಿದ್ದಾರಂತೆ.

'ಅಣ್ಣಯ್ಯ'ನ ಮುದ್ದು 'ಕಿನ್ನರಿ' ಈಗ 'ಕಮಲಿ'ಯ ವಿಲನ್; ಭವ್ಯಾ ರಿಯಲ್ ಲೈಫ್‌ ಕಥೆಯಿದು!

ನಟಿಯಾಗುವಾಸೆ:

ವೈಷ್ಣವಿ ಭರತನಾಟ್ಯಂ ಡ್ಯಾನ್ಸರ್ ಕೂಡಾ ಹೌದು. ಕ್ರಾಫ್ಟ್ ಮಾಡೋದಂದ್ರೆ ಕೂಡಾ ಇವರಿಗೆ ತುಂಬಾ ಇಷ್ಟ ಅಂತೆ. ಹರಳು ಹುರಿದಂತೆ ಪಟಪಟನೆ ಮಾತಾಡೋ ಇವರಿಗೆ ಜೀವನದಲ್ಲಿ ನಟಿಯಾಗುವ ಆಸೆಯಂತೆ. ಹಾರರ್ ಪಾತ್ರ ಮಾಡುವುದರ ಜೊತೆಗೆ ಬೋಲ್ಡ್ ಗರ್ಲ್ ಎನಿಸುವ ತ್ರಿಲರ್ ಮೂವಿಸ್ ಮತ್ತು ಪೌರಾಣಿಕ ಪಾತ್ರದಲ್ಲಿ  ಕಾಣಿಸಿಕೊಳ್ಳುವ ಕನಸು. ಆದರೆ ಸದ್ಯಕ್ಕೆ ವಿದ್ಯಾರ್ಥಿಯಾಗಿರುವುದರಿಂದ ವಿದ್ಯಾಭ್ಯಾಸ ಮುಗಿಸಿ ನಂತರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದಿದ್ದಾರೆ.