ಬಿಗ್‌ಬಾಸ್ ಮನೆಯಲ್ಲಿ ಭಾವುಕರಾದ ಮಿಸ್ ಸೌತ್ ಬೆಂಗಳೂರು 2017 | ಚೂಡಿದಾರ್ ಹಾಕ್ತಾಳೆ ಎಂದು ನಕ್ಕವರ ಮುಂದೆ ಸೌಂದರ್ಯದಿಂದಲೇ ಗುರುತಿಸಲ್ಪಟ್ಟ ದಿವ್ಯಾ

ಬಿಗ್‌ಬಾಸ್ ಸೀಸನ್ 8ರ ಮನೆಯಲ್ಲಿ ಸೌಂದರ್ಯದಿಂದಲೇ ಗುರುತಿಸಲ್ಪಟ್ಟ ದಿವ್ಯಾ ಸುರೇಶ್ ಇದ್ದಾರೆ. ಈಕೆ ಮಿಸ್ ಸೌತ್ ಬೆಂಗಳೂರು 2017 ಪಟ್ಟ ಮುಡಿಗೇರಿಸಿಕೊಂಡಾಕೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಗ್‌ಬಾಸ್ ಮನೆಯಲ್ಲಿ ಮೆಡಲ್ ಟ್ರೋಫಿ ಪತ್ತೆ ಹಚ್ಚೋ ಟಾಸ್ಕ್ ಸಂದರ್ಭ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಈಕೆ. ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ.

ನಿಧಿ ಸುಬ್ಬಯ ಮನೆಗೆ ಮಾಲೆ ಪಟಾಕಿ ಎಸೆದಿದ್ದ ರಾಕಿ ಭಾಯ್

ಪಿಯುಸಿ ತನಕ ತಲೆಗೆ ಎಣ್ಣೆ ಹಚ್ಕೊಂಡು, ಚೂಡಿದಾರ್ ಹಾಕಿ ಹೋಗುತ್ತಿದ್ದ ಈಕೆಯನ್ನು ನೋಡಿ ಏಯ್ ನೋಡು ತಲೆಗೆ ಎಣ್ಣೆ ಹಚ್ಕೊಂಡು ಬರ್ತಾರೆ, ಚೂಡಿದಾರ್ ಹಾಕ್ತಾಳೆ ಎಂದು ಅಣಕಿಸುತ್ತಿದ್ದರಂತೆ.

View post on Instagram

ನಂತರ ಅದೇ ಜನ ಓಹ್ ದಿವ್ಯಾ ಎಂದು ಗುರುತಿಸಿದರು ಎಂದು ನೆನಪಿಸಿಕೊಂಡಿದ್ದಾರೆ ಈಕೆ. ತನ್ನ ದಿನಗಳನ್ನು ನೆನಪಿಸುವಾಗ ಮಾತೂ ಆಡಲಾಗದಂತೆ ಗದ್ಗದಿತರಾಗಿದ್ದರು ದಿವ್ಯಾ..