ಸೆಕ್ಸ್‌ನಲ್ಲಿ ಹುಡುಗರು ಮ್ಯಾಗಿ ಥರ ಅಂದ ರೆಜಿನಾ! ಉರಿದುಬಿದ್ದ ಪುರುಷ ನೆಟಿಜನ್ಸ್
ರೆಜಿನಾ ಕ್ಯಾಸಂಡ್ರಾ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಈಗ ಅವರದೊಂದು ಸ್ಟೇಟ್‌ಮೆಂಟ್ ಎಲ್ಲೆಲ್ಲೂ ವೈರಲ್ ಆಗ್ತಿದೆ. ಅಷ್ಟಕ್ಕೂ ರೆಜಿನಾ ಹೇಳಿದ್ದು, 'ಹುಡುಗರು ಸೆಕ್ಸ್ ನಲ್ಲಿ ಮ್ಯಾಗಿ ಥರ' ಅಂತ. ಅವರ ಮಾತಿನ ಮರ್ಮ ಏನು? ಅವರ ಮಾತಿಗೆ ನೆಟಿಜನ್ಸ್ ಉರಿದು ಬೀಳ್ತಿರೋದ್ಯಾಕೆ?
ರೆಜಿನಾ ಕ್ಯಾಸಂಡ್ರಾ ಅನ್ನೋ ಹೆಸರು ಎಲ್ಲೋ ಕೇಳಿದ್ದು ನೆನಪಿರಬಹುದು. ಕಾರಣ ಈಕೆ ಕನ್ನಡ ಚಿತ್ರದಲ್ಲೂ ನಟಿಸಿದ್ದಾರೆ. ಆದರೆ ಹನ್ನೆರಡು ವರ್ಷಗಳ ಹಿಂದೆ. ಆಮೇಲೆ ಇವರು ತಮಿಳು, ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆಗಿ ಬಿಟ್ಟರು. ಆಮೇಲೆ ಕನ್ನಡದ ಕಡೆ ತಲೆ ಹಾಕಲಿಲ್ಲ. ಇವರು ನಟಿಸಿರೋ ಕನ್ನಡ ಸಿನಿಮಾದ ಹೆಸರು 'ಸೂರ್ಯಕಾಂತಿ'. ಚೇತನ್ ಕುಮಾರ್ ಈ ಸಿನಿಮಾದ ಹೀರೋ. ಇದೀಗ ರೆಜಿನಾ ಕ್ಯಾಸಂಡ್ರ ಅವರ ಹೊಸ ಸಿನಿಮಾವೊಂದು ತೆರೆಗೆ ಬರಲು ಸಜ್ಜಾಗಿದೆ. 'ಸಾಕಿನಿ ಧಾಕಿನಿ' ಅನ್ನೋ ಹೆಸರಿನ ಥ್ರಿಲ್ಲರ್ ಚಿತ್ರವಿದು. ಈ ತೆಲುಗು ಸಿನಿಮಾದಲ್ಲಿ ನಿವೇತಾ ಥಾಮಸ್ ಹಾಗೂ ರೆಜಿನಾ ಕ್ಯಾಸಂಡ್ರ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ವಾರ ಅಂದರೆ ಸೆಪ್ಟೆಂಬರ್ 16ಕ್ಕೆ ಸಿನಿಮಾ ರಿಲೀಸ್. ಈ ಚಿತ್ರದ ರಿಲೀಸ್ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರದ ಕೆಲಸದಲ್ಲಿ ಬ್ಯುಸಿ ಆಗಿದೆ. ಹೀಗೆ ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ರೆಜಿನಾ ಹುಡುಗರು ಉರಿದುಬೀಳುವಂಥಾ ಸ್ಟೇಟ್‌ಮೆಂಟ್ ಕೊಟ್ಟು ಶಾನೆ ಪಾಪ್ಯುಲರ್ ಆಗ್ತಿದ್ದಾರೆ. 'ಹುಡುಗರು ಸೆಕ್ಸ್‌ನಲ್ಲಿ ಮ್ಯಾಗಿ ಥರ' ಅನ್ನೋ ಅವರ ಸ್ಟೇಟ್ ಮೆಂಟ್ ಈಗ ವೈರಲ್ ಆಗಿದೆ.
ಹಾಗೆ ನೋಡಿದರೆ ರೆಜಿನಾ ಈ ಮಾತನ್ನು ಹೇಳಿದ್ದು ಜೋಕ್ ಆಗಿ. ಆದರೆ ಸೆಲೆಬ್ರಿಟಿಗಳು ಜೋಕ್‌ಗೆ ಆಗಲಿ, ಸೀರಿಯಸ್ ಆಗಿಯೇ ಆಗಲಿ ಪಬ್ಲಿಕ್ ನಲ್ಲಿ ಹೀಗೆಲ್ಲ ಮಾತಾಡಿದರೆ ವಿವಾದಗಳು ಆಗಿಯೇ ಆಗುತ್ತವೆ. ಕೆಲವು ಸೆನ್ಸಿಟಿವ್ ನಟ ನಟಿಯರಿಗೆ ಇದರಿಂದ ಬೇಜಾರಾಗುತ್ತದೆ. ಅವರು ನೋವಿನಲ್ಲಿ, ಸಿಟ್ಟಿನಲ್ಲಿ ರಿಯಾಕ್ಟ್ ಮಾಡ್ತಾರೆ. ಕೆಲವರು ತಲೆ ಕೆಡಿಸಿಕೊಳ್ಳೋದಿಲ್ಲ. ರೆಜಿನಾ ಹೇಳಿದ್ದು ಒಂದು ಪಬ್ಲಿಕಲ್ಲಿ ಹೇಳಬಾರದ ಜೋಕನ್ನು. ಆ ಜೋಕು ಪುರುಷರ ಸೆಕ್ಸ್‌ಗೆ ಸಂಬಂಧಿಸಿದ ಕಾರಣ ಸಖತ್ ವೈರಲ್ ಆಗ್ತಿದೆ. ಸಾಕಷ್ಟು ಮಂದಿ ಇದರಿಂದ ಉರಿದುಬಿದ್ದು ಬಗೆ ಬಗೆಯಾಗಿ ಕಮೆಂಟ್ ಮಾಡಿ ತಮ್ಮ ಆಕ್ರೋಶ ಹೊರ ಹಾಕ್ತಿದ್ದಾರೆ. ಇನ್ನೂ ಕೆಲವರು ಈ ಜೋಕಿಗೆ ನಕ್ಕಿದ್ದಾರೆ. ಜೋಕನ್ನು ಜೋಕಾಗಿ ತಗೊಳ್ಳಿ. ಕುಂಬಳಕಾಯಿ ಕಳ್ಳ ಅಂದರೆ ನೀವು ಯಾಕೆ ಹೆಗಲು ಮುಟ್ಕೊಳ್ತೀರಾ ಅನ್ನೋ ರೀತಿ ಕಮೆಂಟ್ ಮಾಡಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಮಾತಂತೂ ಸುದ್ದಿಯಲ್ಲಿದೆ.
ಕಮಲ್ ಹಾಸನ್ ಸಿನಿಮಾದಲ್ಲಿ ಬ್ರಿಟನ್ ರಾಣಿ ಎಲಿಜಬೆತ್ II; 1.5 ಕೋಟಿ ಖರ್ಚು ಮಾಡಿದ್ದ ನಟ
ಅಷ್ಟಕ್ಕೂ ರೆಜಿನಾ ಹುಡುಗರು ಸೆಕ್ಸ್‌ನಲ್ಲಿ ಮ್ಯಾಗಿಯಂತೆ ಅನ್ನೋ ಜೋಕ್‌ಅನ್ನು ಹೇಳಿದ ರೀತಿಯಂತೂ ನಗು ತರಿಸೋ ಹಾಗಿದೆ. 'ಹುಡುಗರ ಬಗ್ಗೆ ನನಗೆ ಒಂದು ಜೋಕ್ ಗೊತ್ತಿದೆ. ಅದನ್ನು ಇಲ್ಲಿ ಹೇಳುವುದೋ ಬೇಡವೋ ಅಂತ ಗೊತ್ತಾಗ್ತಿಲ್ಲ' ಅಂತ ಹೇಳಿ ಸ್ವಲ್ಪ ಹೊತ್ತು ಯೋಚನೆ ಮಾಡಿದರು, ಆಮೇಲೆ ಧೈರ್ಯ ಮಾಡಿ ಹೇಳಿಯೇ ಬಿಟ್ಟರು. 'ಹುಡುಗರ ಸೆಕ್ಸ್ (Sex) ಸಾಮರ್ಥ್ಯ ಮಾಗಿ ಥರ. ಎರಡೇ ನಿಮಿಷದಲ್ಲಿ ಆಗಿ ಬಿಡುತ್ತೆ' ಅಂದು ಬಿಟ್ಟರು! ಆಮೇಲೆ ತಮ್ಮ ಜೋಕಿಗೆ ತಾವೇ ನಕ್ಕರು. ಅಲ್ಲಿದ್ದರೂ ಮುಸಿ ಮುಸಿ ನಕ್ಕರು. ಅಷ್ಟಕ್ಕೇ ಮುಗಿದಿದ್ದರೆ ಪರ್ವಾಗಿರ್ತಿರಲಿಲ್ಲ. ಆದರೆ ಅವರು ಮಾತಾಡಿದ್ದು ಮಾಧ್ಯಮದಲ್ಲಿ. ಅದು ಕೆಲವೇ ಕ್ಷಣದಲ್ಲಿ ಎಲ್ಲ ಕಡೆ ವೈರಲ್(Viral ಆಯ್ತು. ಸೋಷಿಯಲ್ ಮೀಡಿಯಾದಲ್ಲಂತೂ ಈಕೆಯ ಮಾತು ಸಖತ್ ಜೋರಾಗಿಯೇ ಚರ್ಚೆಗೆ ಕಾರಣವಾಯ್ತು. ಇದರ ಬಗ್ಗೆ ನಟಿಯಂತೂ ತಲೆ ಕೆಡಿಸಿಕೊಂಡ ಹಾಗಿಲ್ಲ. ಅವರು ತಾನೊಂದು ಜೋಕ್ ಹೇಳಿದ್ದಷ್ಟೇ ಅಂದುಕೊಂಡು ಸುಮ್ಮನಾಗಿದ್ದಾರೆ. ಆದರೆ ನೆಟಿಜನ್ಸ್ ಮಾತ್ರ, 'ನಿಮಗಿನ್ನೂ ಮದ್ವೆ ಆಗಿಲ್ಲ ಅಲ್ವಾ, ನಿಮಗಿದು ಹೇಗೆ ಗೊತ್ತು?' ಅಂತೆಲ್ಲ ತಮ್ಮ ಅತಿ ಜಾಣತನ ಪ್ರದರ್ಶನ ಮಾಡುವ ಪ್ರಶ್ನೆ ಕೇಳಿದ್ದಾರೆ.
ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ದಿಶಾ ಪಟಾನಿಯ ಬೀಚ್ ಪೋಟೋಸ್
ಅಂದ ಹಾಗೆ ರೆಜಿನಾ ನಟಿಸುತ್ತಿರುವ ಹೊಸ ಚಿತ್ರ 'ಸಾಕಿನಿ ಧಾಕಿನಿ' ಕೊರಿಯನ್ ಚಿತ್ರ 'ಮಿಡ್‌ನೈಟ್ ರನ್ನರ್ಸ್' ನ ಕಥಾ ಹಂದರವನ್ನು ಒಳಗೊಂಡಿದೆ. ಪೊಲೀಸ್ ಅಕಾಡೆಮಿಯ ಇಬ್ಬರು ವಿದ್ಯಾರ್ಥಿಗಳು ಮಾನವ ಕಳ್ಳ ಸಾಗಾಣಿಕೆ(Human Trafficking) ಯನ್ನು ಪತ್ತೆ ಹಚ್ಚುವ ಕಥೆ ಈ ಚಿತ್ರದ್ದು. ಸುಧೀರ್ ಈ ಚಿತ್ರ ನಿರ್ದೇಶಿಸಿದ್ದಾರೆ.