ಇಂಟರ್ನೆಟ್ಗೆ ಬೆಂಕಿ ಹಚ್ಚಿದ ದಿಶಾ ಪಟಾನಿಯ ಬೀಚ್ ಪೋಟೋಸ್
ದಿಶಾ ಪಟಾನಿಯನ್ನು(Disha Patani) ಬಾಲಿವುಡ್ನ ಬೋಲ್ಡ್, ಹಾಟ್ ಮತ್ತು ಮಾದಕ ನಟಿ ಎಂದು ಪರಿಗಣಿಸಲಾಗಿದೆ. ಅಂದಹಾಗೆ, ದಿಶಾ ಸಮುದ್ರ ತೀರವನ್ನು ತುಂಬಾ ಇಷ್ಟಪಡುತ್ತಾರೆ ಎಂದು ನಟಿಯ Instagram ಪ್ರತಿ ಬಾರಿ ಸಾಬೀತುಪಡಿಸುತ್ತದೆ. ನಟಿ ಆಗಾಗ್ಗೆ ಸಮುದ್ರ ತೀರದ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಈಗ, ದಿಶಾ ತನ್ನ ಮಾಲ್ಡೀವ್ಸ್ (Maldives) ಪ್ರವಾಸದ ಹಳೆಯ ಫೋಟೋವನ್ನು (ಥ್ರೋಬ್ಯಾಕ್ ಚಿತ್ರಗಳು) ಹಂಚಿಕೊಂಡಿದ್ದಾರೆ. ಇದು ದಿಶಾ ಪಟಾನಿ ಮಾಲ್ಡೀವ್ಸ್ ಬೀಚ್ನಲ್ಲಿ ಬಿಕಿನಿಯಲ್ಲಿ ಫೋಟೋಶೂಟ್ನ ಫೋಟೋವಾಗಿದೆ.
ಟೈಗರ್ ಶ್ರಾಪ್ ಜೊತೆ ಇದ್ದ ಅಫೇರ್ ಬ್ರೇಕ್ ಆದ ನಂತರ ಸ್ವಲ್ಪವೂ ವಿಚಲಿತರಾಗದಂತೆ ಕಾಣಿಸುತ್ತಿರುವ ಬಾಲಿವುಡ್ ಬೆಡಗಿ ದಿಶಾ ಪಟಾಣಿ ಇದೀಗ ತಮ್ಮ ಸಮಯವನ್ನು ಮಾಲ್ಡೀವ್ಸ್ನಲ್ಲಿ ಕಳೆಯುತ್ತಿದ್ದಾರೆ.
ಬಾಲಿವುಡ್ನಲ್ಲಿ ಆಗಾಗ್ಗೆ ತನ್ನ ಹಾಲಿಡೇಗಳನ್ನು ಮಿಸ್ ಮಾಡಿಕೊಳ್ಳುವ ನಟಿಯರಲ್ಲಿ ದಿಶಾ ಪಟಾನಿ ಒಬ್ಬರು. ದಿಶಾ ತನ್ನ ವೇಕೆಷನ್ನ ಥ್ರೋಬ್ಯಾಕ್ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ನಟಿ ಆಗಾಗ್ಗೆ ಮಾಲ್ಡೀವ್ಸ್ಗೆ ಹೋಗುತ್ತಾರೆ ಎಂದು ತಿಳಿದುಬಂದಿದೆ. ದಿಶಾ ಪಟಾನಿ ಅವರ ನೆಚ್ಚಿನ ತಾಣ ಮಾಲ್ಡೀವ್ಸ್ ಎಂಬುದರಲ್ಲಿ ಸಂದೇಹವಿಲ್ಲ. ಈಗ ದಿಶಾ ಅವರು ಮಾಲ್ಡೀವ್ಸ್ನ ಬೀಚ್ಗಳನ್ನು ಮತ್ತೆ ಮಿಸ್ ಮಾಡಿಕೊಂಡಿರುವಂತೆ ತೋರುತ್ತಿದೆ.
ದಿಶಾ ಪಟಾನಿ ಅವರು ಗುರುವಾರ ಮಾಲ್ಡೀವ್ಸ್ಗೆ ತನ್ನ ಪ್ರವಾಸದ ಒಂದು ಅದ್ಭುತ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಸ್ಟ್ರಾಪ್ಲೆಸ್ ಬಿಳಿ ಬ್ರಾಲೆಟ್ನಲ್ಲಿ ಮಾದಕ ಶೈಲಿಯಲ್ಲಿ ಪೋಸ್ ನೀಡಿದ್ದಾರೆ.
ಬಿಳಿ ಬಿಕಿನಿಯಲ್ಲಿ (White Bikini) ಅವರು ತನ್ನ ಸೊಂಟದ ಮೇಲೆ ಕೈಗಳನ್ನು ಇಟ್ಟುಕೊಂಡು ನೀಡಿರುವ ಸೆಕ್ಸಿ ಲುಕ್ಗೆ ಫ್ಯಾನ್ಸ್ ಫಿದಾ ಅಗಿದ್ದಾರೆ. ದಿಶಾ ಪಟಾನಿ ಅವರ ಫೋಟೋಗಳನ್ನು ನೋಡಿ, ನೆಟಿಜನ್ಗಳು ತೀವ್ರವಾಗಿ ಕಾಮೆಂಟ್ಗಳನ್ನು ಮಾಡಿದ್ದಾರೆ.
ಕೆಲಸಕ್ಕೆ ಸಂಬಂಧಿಸಿಂದತೆ ದಿಶಾ ಪಟಾನಿ ಮೋಹಿತ್ ಸೂರಿ ಅವರ ಬಹು ತಾರಾಗಣದ ಏಕ್ ವಿಲನ್ ರಿಟರ್ನ್ಸ್ನಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಇದರಲ್ಲಿ ಅವರು ನಟರಾದ ಜಾನ್ ಅಬ್ರಹಾಂ, ಅರ್ಜುನ್ ಕಪೂರ್ ಮತ್ತು ತಾರಾ ಸುತಾರಿಯಾ ಅವರೊಂದಿಗೆ ಕೆಲಸ ಮಾಡಿದ್ದಾರೆ. ಅವರು ಮುಂದಿನ ಚಿತ್ರ 'ಯೋದ್ಧಾ'ದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.