Asianet Suvarna News Asianet Suvarna News

ಅಭಿಮಾನಿಗಳಿಗೆ ಗುಡ್ ನ್ಯೂಸ್‌ ಕೊಟ್ಟ Meghana Raj; ಪ್ರತೀ ವಾರ ನಿಮ್ಮ ಮುಂದೆ!

ಅಭಿಮಾನಿಗಳ ಬೇಡಿಕೆಗೆ ಸೈ ಎಂದ ಮೇಘನಾ ರಾಜ್. ತೀರ್ಪುಗಾರರ ಸ್ಥಾನಕ್ಕೆ ನೀವೇ ಬೆಸ್ಟ್‌ ಎಂದು ಕಾಮೆಂಟ್. 

Meghana Raj to be a permanent judge in Colors Kannada dancing championship vcs
Author
Bangalore, First Published Jan 22, 2022, 11:08 AM IST

ಮೂರ್ನಾಲ್ಕು ವರ್ಷಗಳ ಹಿಂದೆ ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್‌ (Dancing Championship) ಡ್ಯಾನ್ಸ್‌ ರಿಯಾಲಿಟಿ ಶೋ ಆರಂಭವಾಗಿತ್ತು. ಸೆಲೆಬ್ರಿಟಿಗಳು ಮತ್ತು ಸಾಮಾನ್ಯರು ಜೋಡಿಯಾಗಿ ಸ್ಪರ್ಧಿಸುವ ಈ ಕಾರ್ಯಕ್ರಮಕ್ಕೆ ಮೇಘನಾ ರಾಜ್‌ (Meghana Raj) ಒಂದು ದಿನದ ಮಟ್ಟಿಗೆ ಸೆಲೆಬ್ರಿಟಿ ಜಡ್ಜ್‌ ಆಗಿ ಆಗಮಿಸಿದ್ದರು. ನಟ ವಿಜಯ್ ರಾಘವೇಂದ್ರ ಮತ್ತು ಮಯೂರಿ ಉಪಧ್ಯಾಯ ತೀರ್ಪುಗಾರರು.

ಇದೇ ಮೊದಲ ಬಾರಿ ಮೇಘನಾ ರಾಜ್‌ ಸೆಲೆಬ್ರಿಟಿಯಾಗಿ ರಿಯಾಲಿಟಿ ಶೋಗೆ ಆಗಮಿಸಿರುವುದು. ಅವರು ಕಾಮೆಂಟ್ ಮತ್ತು ಸಲಹೆಗಳು ಸ್ಪರ್ಧಿಗಳು ಮತ್ತು ವೀಕ್ಷಕರ ಮನಸ್ಸು ಮುಟ್ಟಿದೆ. ಯಾರಿಗೂ ನೋವು ಮಾಡದೆ ವಿಚಾರವನ್ನು ಸ್ಪಷ್ಟವಾಗಿ ಹೇಳುವ ಕಾರಣ ಮೇಘನಾ ಅವರೇ ಬೇಕು ಎಂದು ಸೋಷಿಯಲ್ ಮೀಡಿಯಾ (Social Media) ಮೂಲಕ ಅಭಿಮಾನಿಗಳು ವಾಹಿನಿಯ ಮುಖ್ಯಸ್ಥರಿಗೆ ಡಿಮ್ಯಾಂಡ್‌ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಅವರ ಬೇಡಿಕೆಯಂತೆ ಎರಡನೇ ವಾರವೂ ಮೇಘನಾ ಆಗಮಿಸಿದ್ದರು. 

ಎರಡನೇ ವಾರ ಹಿರಿಯ ನಟ ಶಶಿಕುಮಾರ್‌ (Shashi Kumar) ಕೂಡ ಆಗಮಿಸಿದ್ದರು. ಒಂದೇ ವೇದಿಕೆ ಮೇಲೆ ಮೇಘನಾ, ಶಶಿಕುಮಾರ್ ಮತ್ತು ಅಕುಲ್ ಬಾಲಾಜಿ ಡ್ಯಾನ್ಸ್ ಮಾಡಿದ್ದರು. ಸ್ಟೇಜ್‌ ಮೇಲಿದ್ದ ಪವರ್ ನೋಡಿ ಮೇಘನಾ ಈ ಸೀಸನ್‌ನ ಪರ್ಮನೆಂಟ್‌ ತೀರ್ಪುಗಾರರಾಗಿದ್ದರೆ ಸೂಪರ್ ಎನ್ನುವ ಮಾತು ಶುರುವಾಗಿತ್ತು. ಹೀಗಾಗಿ ಅಭಿಮಾನಿಗಳ ಆಸೆಯಂತೆ ಮೇಘನಾ ಈ ಕಾರ್ಯಕ್ರಮವನ್ನು ಒಪ್ಪಿಕೊಂಡು ತೀರ್ಪುಗಾರರಾಗಿ ಪ್ರತಿ ವೀಕೆಂಡ್‌ ನಿಮ್ಮ ಮುಂದೆ ಇರಲಿದ್ದಾರೆ. 

Rayaan First Words: ರಾಯನ್ ರಾಜ್ ಸರ್ಜಾ ಸಿಂಹದ ರೀತಿ ಹೇಗೆ ಘರ್ಜಿಸುತ್ತಾನೆ ನೋಡಿ!

'ನಿಮಗೆ ನಾನು ವಾಪಸ್‌ ಬರಬೇಕಿತ್ತು ಹೀಗಾಗಿ ನಾನು ಇಲ್ಲಿರುವೆ. ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್‌ನ ಪರ್ಮನೆಂಟ್ ಜಡ್ಜ್‌ ಆಗಿ. ಖಂಡಿತ ಇದು ಅನಿರೀಕ್ಷಿತ. ಹೊಸ ಅನುಭವಗಳಿಗೆ ಕಾಯುತ್ತಿರುವೆ' ಎಂದು ಮೇಘನಾ ರಾಜ್ ಮೂರನೇ ವಾರದ ಪ್ರೋಮೋ ಹಂಚಿಕೊಂಡು ಹೀಗೆ ಬರೆದುಕೊಂಡಿದ್ದಾರೆ. ಈ ವಾರ ಸ್ಪೆಷಲ್ ಸೆಲೆಬ್ರಿಟಿ ಜಡ್ಜ್‌ ಆಗಿ ನಟ ಶರಣ್ (Sharan) ಆಗಮಿಸಲಿದ್ದಾರೆ.

Meghana Raj to be a permanent judge in Colors Kannada dancing championship vcs

'ನಾನು ತಮಿಳು ಹುಡುಗ ಆದರೆ ನಿಮಗಾಗಿ ನಾನು ಡ್ಯಾನ್ಸಿಂಗ್ ಚ್ಯಾಂಪಿಯನ್ ಕಾರ್ಯಕ್ರಮವನ್ನು ನೋಡುತ್ತಿರುವೆ', 'ಅತ್ತಿಗೆ ನೀವು ಮತ್ತೆ ಸ್ಟ್ರಾಂಗ್ ಆಗಿ ಬರಬೇಕು ಎನ್ನುವುದು ನನ್ನ ಆಸೆ ನೀವು ಡ್ಯಾನ್ಸ್‌ ಮಾಡುವುದನ್ನು ನೋಡಲು ಕಾಯುತ್ತಿರುವೆವು'ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

ಕೆಲವು ದಿನಗಳಿಂದ ಮಯೂರಿ ಉಪಾಧ್ಯಾಯ ಕಾಣಿಸುತ್ತಿಲ್ಲ, ಸದ್ಯಕ್ಕೆ ಕಾರಣ ತಿಳಿದು ಬಂದಿಲ್ಲ ಆದರೆ ನಿರೂಪಕ ಅಕುಲ್ ಬಾಲಾಜಿ ಸ್ಟೇಜ್‌ ಮೇಲೆ ಫೈಯರ್‌ ರೀತಿ ಇದ್ದು ಎಲ್ಲರಿಗೂ ಎನರ್ಜಿ ನೀಡುತ್ತಿದ್ದಾರೆ. ಸೆಲೆಬ್ರಿಟಿ ಸ್ಪರ್ಧಿಗಳಾಗಿ ಅರ್ಜುನ್ ಯೋಗಿ, ಅನ್ವಿತಾ ಸಾಗರ್, ಸಾನ್ಯಾ ಐಯ್ಯರ್, ಚಂದನಾ ಅನಂತಕೃಷ್ಣ, ವಸಂತ್‌ ಕುಮಾರ್ ವೆಂಕಟರಮಣ, ಇಶಿತಾ ವರ್ಷ ಮತ್ತು ಚಂದನ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ. 

Meghana Raj Gets Emotional: ಚಿರು ತೋಳು ಬಳಸಿ ನನ್ನ ಮದ್ವೆ ಆಗ್ಲೇ ಬೇಕು ಎಂದಿದ್ದ ಮೇಘನಾ..!

'ಟಿವಿಯಲ್ಲಿ ನಾನು ಜಡ್ಜ್‌ (Judge) ಆಗಿ ಕಾಣಿಸಿಕೊಂಡ ನಂತರ ನನಗೆ ಸಿನಿಮಾ ಮತ್ತು ಇನ್ನಿತರ ವಾಹಿನಿಗಳಿಂದ ಆಫರ್‌ಗಳು ಬಂದಿತ್ತು. ಆದರೆ ನಾನೇ ತುಂಬಾ choosy ಆಗಿದ್ದೆ. ಏಕೆಂದರೆ ನಾನು ಕೆಲಸ ಮಾಡುವ ಸ್ಥಳದ ವಾತಾವರಣ (Work Environment) ತುಂಬಾನೇ ಮುಖ್ಯ. ಈ ಹಿಂದೆ ಕೆಲಸ ಮಾಡಿರುವ ವಾಹಿನಿಗಳು ನನ್ನ ಕುಟುಂಬವಿದ್ದಂತೆ, ಹೀಗಾಗಿ ಹೊಸ ಪ್ರಾಜೆಕ್ಟ್‌ನ ಒಪ್ಪಿಕೊಳ್ಳುವಂತೆ ಮಾಡಿದೆ. ಮತ್ತೊಂದು ಹೊಸ ಅನುಭವ ಎಂಜಾಯ್ ಮಾಡಲು ಕಾಯುತ್ತಿರುವೆ,' ಎಂದು ಟೈಮ್ಸ್‌ ಆಫ್‌ ಇಂಡಿಯಾ ಜೊತೆ ಮಯೂರಿ ಮಾತನಾಡಿದ್ದರು.

'ನಾನು ತುಂಬಾನೇ ಫನ್‌ expect ಮಾಡ್ತಿದ್ದೀನಿ. ಅಕುಲ್ ಇದ್ದ ಕಡೆ ತುಂಬಾ ಸ್ಟ್ರಿಕ್ಟ್ ಆಗಿರುತ್ತಾರೆ ಅನ್ನೋದೆಲ್ಲಾ ನಾನು ನಂಬುವುದಿಲ್ಲ. ಟೈಟಲ್‌ನಲ್ಲಿ ಇರುವ ಹಾಗೆ ಒಬ್ಬ ಚಾಂಪಿಯನ್ ಆಗಬೇಕು ಅಂದ್ರೆ ಮೊದಲು Discipline ಇರಬೇಕು. ನನ್ನ ಎಲ್ಲಾ ಸ್ಪರ್ಧಿಗಳಿಗೂ ಡೆಡಿಕೇಷನ್‌ (Dedication) ಇದೆ. ಟೀಂ ಜೊತೆ ಮಾತನಾಡುವಾಗ ನಾನು ಅವರಿಗೆ ನನ್ನ ಪರ್ಫಾರ್ಮೆನ್ಸ್‌ (Performance) ನನ್ನ ಡ್ಯಾನ್ಸ್‌ ಅನ್ನೋದಕ್ಕಿಂತ ನಮ್ಮ ಶೋ ಅಂತ ಮುಂದೆ ಬಂದ್ರೆ ತುಂಬಾ ದೊಡ್ಡ ಸ್ಕೋಪ್‌ ಸಿಗುತ್ತದೆ. ಡ್ಯಾನ್ಸ್ ಮಾಡುವಾಗ ನಗ್ತೀವಿ ನೋಡ್ತಾ ನೋಡ್ತಾ ಅಳ್ತೀವಿ ಒಂದೊಂದು ಸಲ ಎಕ್ಸೈಟ್ (excit) ಆಗ್ತೀವಿ. ಈ ಎಲ್ಲಾ ಎಮೋಷನ್‌ ನಮ್ಗೆ ಎಷ್ಟು ಸಿಗುತ್ತೋ ಟಿವಿನಲ್ಲಿ ನೋಡುವವರಿಗೂ ಅಷ್ಟೇ ಎಕ್ಸೈಟ್‌ಮೆಂಟ್‌ ಸಿಗಲಿ ಎನ್ನುವುದು ನನ್ನ ಹಾರೈಕೆ' ಎಂದು ವಿಜಯ್ ರಾಘವೇಂದ್ರ ಮಾತನಾಡಿದ್ದರು.

 

 
 
 
 
 
 
 
 
 
 
 
 
 
 
 

A post shared by Meghana Raj Sarja (@megsraj)

Follow Us:
Download App:
  • android
  • ios