Asianet Suvarna News Asianet Suvarna News

BBK9; ಬಿಗ್ ಮನೆಗೆ ಎಂಟ್ರಿ ಕೊಟ್ಟ ಮಂಜುಗೆ 'ಲವ್ ಯೂ' ಎಂದ ಅಮೂಲ್ಯ, ರಾಕೇಶ್‌ಗೆ ಹೆಚ್ಚಿದ ಟೆನ್ಷನ್

ಬಿಗ್ ಬಾಸ್ ಮನೆಗೆ ಮಾಜಿ ಸ್ಪರ್ಧಿ ಮಂಜು ಪಾವಗಡ ಎಂಟ್ರಿ ಕೊಟ್ಟಿದ್ದಾರೆ. ಮಂಜು ಎಂಟ್ರಿ ರಾಕೇಶ್‌ಗೆ ತಲೆನೋವಾಗಿದೆ. 

manju pavagada re enter to bigg boss kannada season 9 sgk
Author
First Published Dec 21, 2022, 12:55 PM IST

‘ಬಿಗ್ ಬಾಸ್​ ಕನ್ನಡ ಸೀಸನ್ 9’ಗೆ ಇನ್ನೇನು ಕೆಲವೇ ದಿನಗಳಲ್ಲಿ ಅದ್ದೂರಿ ತೆರೆಬೀಳಿದೆ.  ಈಗಾಗಲೇ ಅಂತಿಮ ಹಂತಕ್ಕೆ ಬಂದಿರುವ ಬಿಗ್ ಬಾಸ್ ಈ ವರ್ಷದ ಕೊನೆಯಲ್ಲಿ ಅಥವಾ ಹೊಸ ವರ್ಷದ ಆರಂಭದಲ್ಲಿ ಪೂರ್ಣಗೊಳ್ಳಲಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ಬಹಿಂಗ ಪಡಿಸಿದರು. ಈ ನಡುವೆ ಬಿಗ್ ಮನೆಗೆ ವಿಶೇಷ ವ್ಯಕ್ತಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಅದು ಮತ್ಯಾರು ಅಲ್ಲ ಬಿಗ್ ಬಾಸ್ ಮಾಜಿ ಆಟಗಾರ ಮಂಜು ಪಾವಗಡ. ‘ಬಿಗ್ ಬಾಸ್​’ ಫಿನಾಲೆಗೂ ಮುನ್ನ ಮಂಜು ಪಾವಗಡ  ಬಿಗ್ ಬಾಸ್ ಮನೆ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ಮಂಜು ಹೋಗಿದ್ದು ವೈಲ್ಡ್ ಕಾರ್ಡ್ ಎಂಟ್ರಿ ಅಲ್ಲ. ಟಾಸ್ಕ್​ ಒಂದಕ್ಕಾಗಿ ಮಂಜು ಅವರನ್ನು ಬಿಗ್ ಮನೆಗೆ ಕಳುಹಿಸಲಾಗಿದೆ. 

ಅಂದಹಾಗೆ ಮಂಜು ಪಾವಗಡ ಬಿಗ್ ಬಾಸ್ ಸೀಸನ್ 8ರಲ್ಲಿ ಇದ್ದರು. ಬಿಗ್ ಮನೆಯಲ್ಲಿ ಮಂಜು ಉತ್ತಮ ಆಟ ಆಡುವ ಮೂಲಕ ಸಾಕಷ್ಟು ಮಂದಿಯ ಗಮನ ಸೆಳೆದಿದ್ದರು. ಅವರ ಕಾಮಿಡಿ ಪಂಚ್‌ಗಳು ಅಭಿಮಾನಿಗಳ ಹೃದಯ ಗೆದ್ದಿತ್ತು. ಈ ಸೀಸನ್​ನ​ಲ್ಲಿ ಹಳೆಯ ಸ್ಪರ್ಧಿಗಳಿಗೆ ಅವಕಾಶ ಇದೆ ಎಂದಾಗ ಮಂಜು ಅವರನ್ನು ಮತ್ತೆ ಕರೆಸಿ ಎನ್ನುವ ಬೇಡಿಕೆ ಅನೇಕರಿಂದ ಬಂದಿತ್ತು. ಆದರೆ ಮಂಜು ಬದಲಿಗೆ ಬೇರೆ ಬೇರೆ ವ್ಯಕ್ತಿಗಳು ಎಂಟ್ರಿ ಕೊಟ್ಟಿದ್ದರು. ಇದೀಗ ಮಂಜು ಮತ್ತೆ ಬಿಗ್ ಬಾಸ್‌ಗೆ ಬಂದಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಅಂದಹಾಗೆ ಮಂಜು ಟಾಸ್ಕ್​ಗೋಸ್ಕರ ಮತ್ತೆ ದೊಡ್ಮನೆ ಪ್ರವೇಶ ಮಾಡಿದ್ದಾರೆ.

ಈ ವಾರ ಸ್ಪರ್ಧಿಗಳಿಗೆ ಹಾವು ಏಣಿ ಆಟ ನೀಡಲಾಗಿದೆ. ಈ ಆಟಕ್ಕೆ ದಾಳ ಹಾಕಲು ಬಂದಿದ್ದಾರೆ ಮಂಜು ಪಾವಗಡ. ಮಂಜು ಎಂಟ್ರಿ ಕೊಡುತ್ತಿದ್ದಂತೆ  ಬಿಗ್ ಬಾಸ್ ಸ್ಪರ್ಧಿಗಳು ಅಚ್ಚರಿ ಪಟ್ಟಿದ್ದಾರೆ. ಸಖತ್ ಜೋಶ್‌ನಲ್ಲೇ ಬಂದ ಮಂಜು ಕಾಮಿಡಿ ಮಾಡಿ ನಗಿಸಿದ್ದಾರೆ. ವಿಶೇಷ ಎಂದರೆ ಮಂಜುಗೆ ಅಮೂಲ್ಯ ಗೌಡ ‘ಐ ಲವ್​ ಯೂ’ ಎಂದು ಹೇಳಿದರು.  ರಾಕೇಶ್ ಅಡಿಗಗೆ ಟೆನ್ಷನ್ ಶುರುವಾಗಿದ್ದು ನಮಗೆ ಹಾವು ಕಚ್ಚಿದ ಹಾಗೆ ಆಗ್ತಿದೆ ಎಂದು ಹೇಳಿದರು. ರಾಕೇಶ್ ಅಡಿಗ ಹಾಗೂ ಅಮೂಲ್ಯ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಮಂಜುಗೆ ಅಮೂಲ್ಯ ಐ ಲವ್​ ಯೂ ಎಂದಿದ್ದು ಸಹಜವಾಗಿಯೇ ರಾಕೇಶ್ ಅವರ ಟೆನ್ಷನ್ ಹೆಚ್ಚಿಸಿದೆ. ಸದ್ಯ ಪ್ರೋಮೋ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರಿಂದ ತರಹೇವಾರಿ ಕಾಮೆಂಟ್  ಹರಿದು ಬರುತ್ತಿದೆ. ಮಂಜು ಅವರನ್ನು ಮತ್ತೆ ಬಿಗ್ ಮನೆಯಲ್ಲಿ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. 

ಮಗಳಿಗೆ ಆಪರೇಷನ್; ಬಿಗ್‌ ಬಾಸ್‌ ಮನೆಯಿಂದ ದಿಢೀರ್ ಹೊರ ಹೋದ ಅರುಣ್ ಸಾಗರ್

ಬಿಗ್ ಬಾಸ್ ಮನೆಯಲ್ಲಿ ಸದ್ಯ ಎಂಟು ಆಟಗಾರರು ಇದ್ದಾರೆ. ಅರುಣ್ ಸಾಗರ್, ಅಮೂಲ್ಯ ಗೌಡ, ಆರ್ಯವರ್ಧನ್​ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಆಟ ಮುಂದುವರಿಸಿದ್ದಾರೆ. ಈ ವಾರ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಇನ್ನೇನು ಕೊನೆಯ ಹಂತಕ್ಕೆ ಬಂದಿರುವುದರಿಂದ ಪೈಪೋಟಿ ಕೂಡ ಜೋರಾಗಿದೆ. ಎಲ್ಲರೂ  ಉತ್ತಮ ಪ್ರದರ್ಶನ ನೀಡಲೇಬೇಕಾಗಿದೆ. ಕಳೆದ ವಾರ ಅನುಪಮಾ ಗೌಡ ಬಿಗ್ ಬಾಸ್ ನಿಂದ ಹೊರಹೋಗಿದ್ದರು. ಈ ವಾರ ಯಾರು ಮನೆಯಿಂದ ಹೊರ ಹೋಗ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.


BBK9 ತಪ್ಪು ಒಪ್ಪಿಕೊಳ್ಳಲು ಕಷ್ಟವಾಗುತ್ತೆ; ರೂಪೇಶ್ ರಾಜಣ್ಣಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು 

ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನಿ ನಕ್ಷತ್ರ ಧರಾವಾಹಿ ಖ್ಯಾತಿಯ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು. 

Follow Us:
Download App:
  • android
  • ios