Asianet Suvarna News Asianet Suvarna News

BBK9 ತಪ್ಪು ಒಪ್ಪಿಕೊಳ್ಳಲು ಕಷ್ಟವಾಗುತ್ತೆ; ರೂಪೇಶ್ ರಾಜಣ್ಣಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್

ನಾನು ತಪ್ಪು ಮಾಡಲ್ಲ ಎಂದು ಪದೇ ಪದೇ ಹೇಳುವ ರೂಪೇಶ್ ರಾಜಣ್ಣ ಎಲ್ಲಿ ತಪ್ಪು ಮಾಡುತ್ತಾರೆ, ಮನೆ ಮಂದಿ ಏನು ಹೇಳುತ್ತಾರೆಂದು ವೀಕೆಂಡ್ ಮಾತುಕತೆಯಲ್ಲಿ ಚರ್ಚೆ ಮಾಡಿದ ಕಿಚ್ಚ...
 

Kiccha Sudeep discuss about Roopesh Rajanna acceptance behaviour bigg boss 9 vcs
Author
First Published Dec 18, 2022, 1:10 PM IST

ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಸುತ್ತಿದ್ದಾರೆ. ವಾರಕ್ಕೊಂದು ಜಗಳ ಮಾಡುತ್ತಾ, ಒಂದು ವಾರ ಕ್ಯಾಪ್ಟನ್ ಆಗಿರುವ ರಾಜಣ್ಣ 84 ದಿನಗಳು ಕಳೆದ್ದರೂ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲ ಎಂದು ವೀಕೆಂಡ್ ಮಾತುಕತೆಯಲ್ಲಿ ಚರ್ಚೆ ಮಾಡುತ್ತಾರೆ.

ಸುದೀಪ್: ರಾಜಣ್ಣ ಅವರೇ ನಿನ್ನೆದು ಮೊನ್ನೆದು ಹಿಂದಿನ ವಾರದ್ದು ಮುಂದಿನ ವಾರದ್ದು ಎಲ್ಲಾ ಮಾತನಾಡುತ್ತೀರಾ ನಿಮಗೆ ಯಾರಾದರೂ ಏನಾದರು ಹೇಳಿದ್ದರೆ  ಅದನ್ನು ಒಪ್ಪಿಕೊಳ್ಳುವುದು ಕಷ್ಟ ಆಗುತ್ತೆ ಅಂತ ನಿಮ್ಮ ಗಮನಕ್ಕೆ ಬಂದಿದ್ಯಾ?  ಪ್ರತಿಯೊಬ್ಬರ ತಪ್ಪು ಅಥವಾ ನಿಮಗೆ ತಪ್ಪು ಅನಿಸಿರಬಹುದು ಅದರ ಬಗ್ಗೆ ಮಾತನಾಡುತ್ತೀರಿ ನೆನಪಿಟ್ಟುಕೊಳ್ಳುತ್ತೀರಿ ಚರ್ಚೆ ಮಾಡುತ್ತೀರಿ, ಅವರು ಒಪ್ಪುವ ತನಕ ನೀವು ಮಾತನಾಡುತ್ತೀರಿ..ಇದೆಲ್ಲಾ ಒಂದು ಕಡೆ ಆದ್ರೆ ಯಾರಾದ್ರೂ ನಿಮ್ಮಲ್ಲಿ ತಪ್ಪು ಕಂಡಲ್ಲಿ ನಿಮಗೆ ಹೇಳಿದ್ದರೆ ಅದನ್ನು ಒಪ್ಪಿಕೊಳ್ಳುವುದು ಸ್ವಲ್ಪ ಸಮಸ್ಯೆ ಆಗುತ್ತೆ ಅನ್ನೋದು ಗೊತ್ತಿದ್ಯಾ? acceptance ಕಡಿಮೆ ಇದೆ ಅನ್ನೋದು ನಿಮಗೆ ಗೊತ್ತಿದ್ಯಾ ಅನ್ನೋದು ನಿಮಗೆ ಕೇಳುತ್ತಿರುವೆ ನಾನು.

ಸುದೀಪ್ ಕೇಳಿದ ವಿಚಾರ ರೂಪೇಶ್ ರಾಜಣ್ಣ ಅವರಿಗೆ ಅರ್ಥ ಅಗುವುದಿಲ್ಲ ಆಗ ಪಕ್ಕದಲ್ಲಿದ್ದ ರೂಪೇಶ್ ಶೆಟ್ಟಿ 'ನೀವು ಏನೋ ತಪ್ಪು ಮಾಡಿರುತ್ತೀರಿ ಅದರಲ್ಲಿ ಏನೋ ತಪ್ಪಿದೆ ಎಂದು ನಾನು ಹೇಳಿದ್ದಾಗ ನೀವು ಅದನ್ನು ಒಪ್ಪಿಕೊಳ್ಳುವುದಿಲ್ಲ ನಾನೇ ಸರಿ ಎಂದು ಹೇಳುವುದು ಜಾಸ್ತಿ ಅಂತ' ಎಂದು ವಿವರಿಸುತ್ತಾರೆ. ಇದನ್ನು ಅರ್ಥ ಮಾಡಿಕೊಂಡ ರಾಜಣ್ಣ 'ಹೌದು ಅರ್ಥ ಮಾಡಿಕೊಳ್ಳುವುದಕ್ಕೆ ನನಗೆ ಸಮಸ್ಯೆ ಇದೆ. ನನ್ನಿಂದ ತಪ್ಪು ಆಗಿದೆ ಅಂದ್ರೆ ಖಂಡಿತ ಒಪ್ಪಿಕೊಳ್ಳುತ್ತೀನಿ ಸರ್ ನನ್ನ ತಪ್ಪು ಇಲ್ಲ ಅಂದ್ರೆ ನಾನು ಒಪ್ಪಿಕೊಳ್ಳುವುದಿಲ್ಲ' ಎಂದಿದ್ದಾರೆ. 

Kiccha Sudeep discuss about Roopesh Rajanna acceptance behaviour bigg boss 9 vcs

ಸುದೀಪ್: ಇದೇ ನಾನು ಹೇಳುತ್ತಿರುವುದು ನಿಮಗೆ ಅನಿಸಿದ್ದರೆ ಮಾತ್ರ ನೀವು ಒಪ್ಪಿಕೊಳ್ಳುವುದು ನಿಮ್ಮ ತಪ್ಪನ್ನು ಬೇರೆ ಅವರು ಹೇಳಲು ಬಂದ್ರೆ ನೀವು ಒಪ್ಪಿಕೊಳ್ಳುವುದಿಲ್ಲ ಅದು ಬೇರೆ ರೀತಿ ವಿವಾದ ಸೃಷ್ಟಿಯಾಗುತ್ತದೆ. ಎಷ್ಟು ಜನಕ್ಕೆ ನಮ್ಮ ತಪ್ಪು ಇದೆ ಅಂತ ನಮಗೆ ಅರ್ಥ ಆಗುತ್ತೆ.  ಒಂದು ಎರಡು ಮೂರು ಅಲ್ಲ 5 ಬೆರಳುಗಳು ಬಂದು ತಪ್ಪಿದೆ ಅಂದ್ರೆ ಖಂಡಿತಾ ತಪ್ಪು ಇರುತ್ತದೆ. ಇದನ್ನು ನಾನು ಹೇಳುತ್ತಿರುವುದು ಅಲ್ಲ... ಇದು ಸ್ಟೇಟ್ಮೆಂಟ್. ನಿಮಗೆ ಒಪ್ಪಿಕೊಳ್ಳುವುದಕ್ಕೆ ಕಷ್ಟ ಇದೆ ಅನ್ನೋದು ನಿಮಗೆ ಗೊತ್ತಾ ಎಂದು ಕೇಳುತ್ತಿರುವೆ. ದಿವ್ಯಾ ಅವರಿಗೆ ಈ ವಿಚಾರ ಬಗ್ಗೆ ಹೇಳಿ...

ದಿವ್ಯಾ ಉರುಡುಗ: ಈ ವಿಚಾರದಲ್ಲಿ ರಾಜಣ್ಣ ಹೇಗೆ ಅನ್ನೋದು ಅರ್ಥ ಆಗಿದೆ ಸರ್. ಯಾವ ವಿಚಾರ ಇದ್ದರೂ ರೂಪೇಶ್‌ ಒಪ್ಪಿಕೊಳ್ಳುವುದಿಲ್ಲ. ಹುಡುಗಿಯರ ಜೊತೆ ಜೋರಾಗಿ ಮಾತನಾಡುತ್ತಾರೆ ಹಾಗೆ ಮಾತನಾಡಬೇಡಿ ಎಂದು ಹೇಳಿದ್ದರೆ ಹೊರಗಡೆ ಹೋಗಿ ನೋಡಿ ನಾನು ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡುತ್ತೀನಿ ಎನ್ನುತ್ತಾರೆ. ಇಲ್ಲಿ ಏನೋ ಹೀಗೆ ನಡೆದಿದೆ ಅಂತ ಹೇಳಿದರೆ ಅವರು ಒಪ್ಪಿಕೊಳ್ಳುವುದಿಲ್ಲ ಅವರು ಮಾಡಿರುವುದೇ ಸರಿ ಎನ್ನುತ್ತಾರೆ. ಅವರ aggresive ಆಗಿದ್ದಾರೆ ಅನ್ನೋ ಕಾರಣ ನಾನು ಕಳಪೆ ಕೊಟ್ಟೆ ಅದಕ್ಕೆ ಅವರು ನೆಕ್ಸಟ್‌ ಆಟ ತಾಳ್ಮೆಯಿಂದ ಆಟವಾಡಿದೆ ಅದಿಕ್ಕೆ ಅತ್ಯುತ್ತಮ ಕೊಡಬೇಕು ಎನ್ನುತ್ತಾರೆ. 

BBK9 ಹೆಂಡ್ತಿ ಕಾಲಿಗೆ ಬಿದ್ದಿದ್ದೆ ತಪ್ಪಾಯ್ತಾ? ರೂಪೇಶ್ ರಾಜಣ್ಣ ಹಿಗ್ಗಾಮುಗ್ಗಾ ಟ್ರೋಲ್

ದೀಪಿಕಾ ದಾಸ್:  ರಾಜಣ್ಣ ಅವರಿಗೆ acceptance ಚೂರು ಇಲ್ಲ ಆದರೆ presentaion ಚೆನ್ನಾಗಿದೆ. ಒಂದು ಎರಡು ಅಲ್ಲ ತುಂಬಾ ವಿಚಾರ ಚೆನ್ನಾಗಿ ಅನುಭವ ಆಗಿದೆ. ಅವರ ಬುಡಕ್ಕೆ ಬಂದರೆ ಚೆನ್ನಾಗಿ ತೋರಿಸುತ್ತಾರೆ. ಜನರಿಗೆ ಹೇಗೆ ಬಿಂಬಿಸಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತು. ಅರ್ಥ ಮಾಡಿಸಲು ಹೋಗಿ ಕಷ್ಟ ಆಗಿದೆ ಏನೇ ಹೇಳಿದ್ದರು ಒಪ್ಪಿಕೊಳ್ಳ. ಕ್ಷಮೆ ಕೇಳಿದ್ದರೂ ಸುಮ್ಮನಿರಲ್ಲ...

ಸುದೀಪ್: ರಾಜಣ್ಣ ನಿಮ್ಮಲ್ಲಿ ಈ ಗುಣ ಇದ್ಯಾ ನಿಮಗೆ ಗೊತ್ತಾ ಅಂತ ಅರ್ಥ ಮಾಡಿಸಿಲು ಈ ಪ್ರಶ್ನೆ ಕೇಳಿದೆ ನಾನು. ನೀವು ಉತ್ತರ ಕೊಡಲಿಲ್ಲ ಎನ್ನುವ ಕಾರಣಕ್ಕೆ ಇನ್ನಿತ್ತರ ಬಳಿ ಉತ್ತರ ಕೇಳಿದ್ದು. ಮನೆಯಲ್ಲಿ ಎಷ್ಟೇ ಕನ್ನಡಿಗಳು ಇದ್ರೂ ರಾಜಣ್ಣ ನಾನು ಒಂದು ಒಂದು ಕನ್ನಡಿ ತೋರಿಸಬೇಕಾಗುತ್ತದೆ. ನಿಮ್ಮ ಜಾಗದಲ್ಲಿ ಯಾರೇ ಇರಲಿ ಅದನ್ನು ನಾನು

Follow Us:
Download App:
  • android
  • ios