ಬಾಯ್ಸ್ ವರ್ಸಸ್ ಗರ್ಲ್ಸ್ ಮತ್ತು ಮಜಾ ಟಾಕೀಸ್‌ ಮಹಾ ಮಿಲನ ಕ್ರಮದಲ್ಲಿ ಮಂಜು ಪಾವಗಡ ಅವರ ಪತ್ನಿ ನಂದಿನಿ ಭಾಗವಹಿಸಿದ್ದರು. ಹುಡುಗಿಯರು ಮಂಜು ಬಗ್ಗೆ ಆರೋಪಿಸಿದರೂ, ನಂದಿನಿ ತಮ್ಮ ಪತಿಯನ್ನು ಸಮರ್ಥಿಸಿಕೊಂಡರು. ಮಂಜು, ನಂದಿನಿಗೆ ಪ್ರೀತಿಯಿಂದ ಐ ಲವ್ ಯು ಎಂದರು, ಆದರೆ ಸ್ಪರ್ಧಿಗಳು ಇದನ್ನು ನಂಬಲಿಲ್ಲ.  

ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಮಂಜು ಪಾವಗಡ (Bigg Boss Kannada season 8 winner Manju Pavagada) ಅವರನ್ನು ಹುಡುಗಿಯರು ಬೆಂಡೆತ್ತಿದ್ದಾರೆ. ಅದೂ ಮಂಜು ಪಾವಗಡ ಪತ್ನಿ ನಂದಿನಿ (Manju Pavagada wife Nandini) ಮುಂದೆಯೇ ಮಂಜು ಪುರಾಣವನ್ನು ಒಂದೊಂದಾಗಿ ಬಿಚ್ಚಿಟ್ಟಿದ್ದಾರೆ. ಎಲ್ಲರ ಮಾತು ಕೇಳಿ ಮಂಜು ಗಲಿಬಿಲಿಗೊಂಡ್ರೆ, ಪಕ್ಕದಲ್ಲಿದ್ದ ಅವರ ಧರ್ಮ ಪತ್ನಿ ನಂದಿನಿ ಮಾತ್ರ ಕೂಲಾಗಿ ಎಲ್ಲವನ್ನೂ ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲ, ವೇದಿಕೆ ಮೇಲೆ ಪತಿಯನ್ನು ಹೊಗಳಿದ್ದಾರೆ. ಈ ಮಾತು ಕೇಳಿ ಹುಡುಗಿಯರು ಶಾಕ್ ಆದ್ರೆ, ಖುಷಿಯಾದ ಮಂಜು ಪತ್ನಿಗೆ ಐ ಲವ್ ಯೂ ಹೇಳಿದ್ದಾರೆ. ಆದ್ರೆ ಮಂಜು ಈ ಮಾತನ್ನೂ ಜನರು ನಂಬ್ತಿಲ್ಲ. ಮಂಜು, ಪತ್ನಿಗೆ ಐ ಲವ್ ಯೂ ಹೇಳಿದ್ದೂ ಯಾವ್ದೋ ಸ್ಕಿಟ್ ತರ ಇದೆ ಎಂದಿದ್ದಾರೆ.

ಕಲರ್ಸ್ ಕನ್ನಡ (Colors Kannada) ವೀಕೆಂಡ್ ನಲ್ಲಿ ವೀಕ್ಷಕರಿಗೆ ಎರಡು ಶೋ ಮೂಲಕ ಮನರಂಜನೆ ನೀಡ್ತಿದೆ. ಒಂದು ಬಾಯ್ಸ್ ವರ್ಸಸ್ ಗರ್ಲ್ಸ್ (Boys vs Girls). ಇನ್ನೊಂದು ಮಜಾ ಟಾಕೀಸ್ (Maja Talkies). ಈ ಬಾರಿ ಬಾಯ್ಸ್ ವರ್ಸಸ್ ಗರ್ಲ್ಸ್ ಹಾಗೂ ಮಹಾ ಟಾಕೀಸ್ ಮಹಾ ಮಿಲನವಾಗಿದೆ. ಎರಡೂ ಟೀಂ ಸದಸ್ಯರು ವೇದಿಕೆ ಮೇಲೆ ಭರ್ಜರಿ ಮನರಂಜನೆ ನೀಡ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ ಮಂಜು ಪಾವಗಡ ಪತ್ನಿ ನಂದಿನಿ ವೇದಿಕೆ ಮೇಲೆ ಕಾಣಿಸಿಕೊಳ್ತಾರೆ. ಮಂಜು ಬಗ್ಗೆ ಹುಡುಗಿಯರು ಒಂದಾದ್ಮೇಲೆ ಒಂದು ಆರೋಪ ಮಾಡಿದ್ದಾರೆ. ಪತಿ ಬಗ್ಗೆ ಎಲ್ಲ ಮಾತು ಕೇಳಿಯೂ ನಾನು ಮಂಜು ಅವ್ರನ್ನು ನಂಬ್ತೇನೆ ಅಂತ ಮಂಜು ಪಾವಗಡ ಪತ್ನಿ ನಂದಿನಿ ಹೇಳಿದ್ದಾರೆ. 

ದುಡ್ಡಿದೆ, ಕುಂಭಮೇಳಕ್ಕೆ ಹೋಗ್ತೀರಿ ಅಂದ್ರು, ನನಗೆ ದೆಹಲಿ ವರಿಷ್ಠರೂ ಸಹಾಯ ಮಾಡ್ಲಿಲ್ಲ: Actor Jaggesh

ಮಜಾ ಭಾರತದ ನಟಿ ಪಿಕೆ ಅಲಿಯಾಸ್ ಪ್ರಿಯಾಂಕ, ಮಂಜುಗೆ ಮಂಗಳಾರತಿ ಮಾಡ್ತಾರೆ. ದೊಡ್ಡ ಮಳ್ಳ, ಕಳ್ಳ, ಸುಳ್ಳ ಅಂತ ಪ್ರಿಯಾಂಕ, ಮಂಜು ಅವರನ್ನು ಹೊಗಳ್ತಾರೆ. ನನ್ನ ಜೊತೆ ಮಂಜ 13 ಫಸ್ಟ್ ನೈಟ್ ಸ್ಕಿಟ್ ಮಾಡಿದ್ದಾರೆ ಎನ್ನುತ್ತಾರೆ. ಇನ್ನು ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ವಿಲನ್ ಚಂದ್ರಿಕಾ ಪಾತ್ರ ಮಾಡಿ ಮಿಂಚಿರುವ, ಈಗ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಳ್ತಿರುವ ಪ್ರಿಯಾಂಕ ಕೂಡ ಮಂಜು ಕಾಲೆಳೆದಿದ್ದಾರೆ. ಮಂಜಣ್ಣ ಒಳ್ಳೆಯವರು ಅಂತ ಪ್ರಿಯಾಂಕ ಹೇಳ್ತಿದ್ದಂತೆ ಖುಷಿಯಾಗೋ ಮಂಜು, ಇನ್ನೊಮ್ಮೆ ಹೇಳು ಅಂತಾರೆ. ರೀಲ್ಸ್ ಮಾಡೋಕೆ ಮಾತ್ರ ಮಂಜು ನನ್ನ ಹತ್ರ ಬರ್ತಾರೆ ಎಂದು ಪ್ರಿಯಾಂಕ ಮಂಜು ಅವರನ್ನು ದೂರ್ತಾರೆ. 

ಹುಡುಗಿಯರ ಎಲ್ಲ ಆರೋಪ ಕೇಳಿದ ನಂದಿನಿ, ಇವ್ರು ಹೇಳಿದ್ದೆಲ್ಲ ಸುಳ್ಳು, ನನ್ನ ಗಂಡ ಒಳ್ಳೆಯವರು ಎನ್ನುತ್ತಾರೆ. ಅಷ್ಟೇ, ಪತ್ನಿ ಮಾತು ಕೇಳಿ ಖುಷಿಯಾಗೋ ಮಂಜು, ಐ ಲವ್ ಯು ನಂದಿನಿ ಅಂತ ಹಗ್ ಮಾಡ್ತಾರೆ. ಆದ್ರೆ ಮಂಜು ಈ ಮಾತನ್ನೂ ಸ್ಪರ್ಧಿಗಳು ಸತ್ಯ ಅಂತ ನಂಬ್ತಿಲ್ಲ. ಮಂಜು ಪತ್ನಿಗೆ ಐ ಲವ್ ಯೂ ಹೇಳಿದ್ದೂ ಸ್ಕಿಟ್ ಅಂತಿದ್ದಾರೆ.

ಏಕಾಏಕಿ ಮದುವೆಯಾಗಿ ಶಾಕ್‌ ಕೊಟ್ಟ ʼಮಾರ್ಟಿನ್ʼ‌ ಸಿನಿಮಾ ಹೀರೋಯಿನ್‌ Vaibhavi Shandilya

ಮಜಾ ಭಾರತದ ಮೂಲಕ ಲಕ್ಷಾಂತರ ಫ್ಯಾನ್ಸ್ ಗಳಿಸಿದ ಮಂಜು ಪಾವಗಡ, ಬಿಗ್ ಬಾಸ್ ಸೀಸನ್ 8ರಲ್ಲಿ ಕಪ್ ಎತ್ತಿದ್ರು. ಬಿಗ್ ಬಾಸ್ ನಂತ್ರ ಅಂತರಪಟ, ಭಾಗ್ಯ ಲಕ್ಷ್ಮಿ ಸೇರಿದಂತೆ ಕೆಲ ಸೀರಿಯಲ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಕಲರ್ಸ್ ಕನ್ನಡದ ಕೆಲ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗ್ತಿರುವ ಮಂಜು, ಈಗ ಗರ್ಲ್ ವರ್ಸಸ್ ಬಾಯ್ಸ್ ಶೋ ನಲ್ಲಿ ಮಿಂಚುತ್ತಿದ್ದಾರೆ. ಹಿಂದಿನ ವರ್ಷ ಮಂಜು ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಪಾವಗಡದಲ್ಲಿ ಮದುವೆ ನಡೆದಿತ್ತು. ನಂದಿನಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದು, ಆಗಾಗ ಮಂಜು ಜೊತೆ ಕ್ಯಾಮರಾ ಕಣ್ಣಿಗೆ ಸೆರೆಯಾಗ್ತಿರುತ್ತಾರೆ.