ʼಗೋಲ್ಡನ್‌ ಸ್ಟಾರ್ʼ‌ ಗಣೇಶ್‌ ನಟನೆಯ ʼಗಾಳಿಪಟ 2ʼ, ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’‌ ಸಿನಿಮಾದಲ್ಲಿ ನಟಿ ವೈಭವಿ ಶಾಂಡಿಲ್ಯ ಅವರು ನಟಿಸಿದ್ದಾರೆ. ಈ ನಟಿ ಈಗ ಮದುವೆ ಫೋಟೋ ಹಂಚಿಕೊಂಡು, ಎಲ್ಲರಿಗೂ ಶಾಕ್‌ ಆಗುವಂತೆ ಮಾಡಿದ್ದಾರೆ. 

ʼಗಾಳಿಪಟ 2ʼ, ‘ಮಾರ್ಟಿನ್’‌ ಸಿನಿಮಾಗಳಲ್ಲಿ ನಟಿಸಿದ್ದ ವೈಭವಿ ಶಾಂಡಿಲ್ಯ ಅವರು ಏಕಾಏಕಿ ಮದುವೆ ಫೋಟೋ ಶೇರ್‌ ಮಾಡಿಕೊಂಡು, ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದ್ದಾರೆ.

ಹರ್ಷವರ್ಧನ್‌ ಜೊತೆ ಮದುವೆ!
ವೈಭವಿ ಶಾಂಡಿಲ್ಯ ಅವರು ಹರ್ಷವರ್ಧನ್‌ ಜೆ ಪಾಟೀಲ್‌ ಎನ್ನುವವರ ಜೊತೆ ಮದುವೆ ಆಗಿದ್ದಾರೆ. ಹರ್ಷವರ್ಧನ್‌ ಮೂಲತಃ ಮುಂಬೈ ಮೂಲದ ಸಿನಿಮಾಟೋಗ್ರಾಫರ್‌, ನಿರ್ದೇಶಕ ಕೂಡ ಹೌದು.

ನನ್ನ ವಿರೋಧಿಗಳಿಗೂ ನಾನು ಅಂದರೆ ಇಷ್ಟ: ಮಾರ್ಟಿನ್ ಸಕ್ಸಸ್ ಮೀಟ್‌ನಲ್ಲಿ ಧ್ರುವ ಸರ್ಜಾ ಹೇಳಿದ್ದಿಷ್ಟು..

ʼಮಾರ್ಟಿನ್ʼ‌ ನಟಿ ಇವರು! 
ವೈಭವಿ ಅವರು ʼರಾಜ್‌ ವಿಷ್ಣುʼ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆ ನಂತರದಲ್ಲಿ ʼಗೋಲ್ಡನ್‌ ಸ್ಟಾರ್ʼ‌ ಗಣೇಶ್‌ ನಟನೆಯ ʼಗಾಳಿಪಟ 2ʼ ಸಿನಿಮಾದಲ್ಲಿ ಕೂಡ ಹೀರೋಯಿನ್‌ ಆಗಿದ್ದರು. ಅದಾದ ಬಳಿಕ ಧ್ರುವ ಸರ್ಜಾ ನಟನೆಯ ʼಮಾರ್ಟಿನ್ʼ‌ ಸಿನಿಮಾದಲ್ಲಿಯೂ ಅಭಿನಯಿಸಿದ್ದರು. 

Martin Film Review: ಮಾವನ ದೇಶ ಭಕ್ತಿ, ಅಳಿಯನ ಘರ್ಜನೆ: ಮೆಡಿಸನ್ ಮಾಫಿಯಾ, ಅಂತಾರಾಷ್ಟ್ರೀಯ ಕ್ರೈಮ್!

ಮದುವೆ ಬಗ್ಗೆ ವೈಭವಿ ಹೇಳಿದ್ದೇನು? 
ಮದುವೆ ಫೋಟೋ ಹಂಚಿಕೊಂಡ ವೈಭವಿ, “ನನ್ನ ಸ್ನೇಹಿತರು, ಕುಟುಂಬಸ್ಥರ ಸಾಕ್ಷಿಯಾಗಿ ನಾನು ಹಾಗೂ ಹರ್ಷವರ್ಧನ್‌ ಒಟ್ಟಿಗೆ ಹೊಸ ಜೀವನಕ್ಕೆ ಕಾಲಿಟ್ಟಿದ್ದೇವೆ. ಫೆಬ್ರವರಿ 21ರಂದು ಕೊಲ್ಲಾಪುರದಲ್ಲಿ ಈ ಜೋಡಿ ಮದುವೆಯಾಗಿದೆ. ಬಹಳ ಖಾಸಗಿಯಾಗಿ ಈ ಮದುವೆ ನಡೆದಿದೆ. 

ತೆರೆಯಲ್ಲಿ ಅಬ್ಬರಿಸಿದ ಮಾರ್ಟಿನ್: ಬಹುನಿರೀಕ್ಷೆಯ ಧ್ರುವ ಸರ್ಜಾ ಸಿನಿಮಾ ಹೇಗೆ ಮೂಡಿಬಂದಿದೆ?

ಕೆಲ ಭಾಷೆಗಳಲ್ಲಿ ನಟನೆ! 
2015ರಲ್ಲಿ ಮರಾಠಿ ಸಿನಿಮಾ ʼಜನಿವಾʼದಲ್ಲಿ ಅವರು ನಟಿಸಿದ್ದರು. ಇದಾದ ಬಳಿಕ ಅವರು ತಮಿಳು ಸಿನಿಮಾ ʼಸಕ್ಕ ಪೊಡು ಪೊಡು ರಾಜʼ ಚಿತ್ರದಲ್ಲಿ ನಟಿಸಿದ್ದಾರೆ. ʼನೆಕ್ಸ್ಟ್‌ ನುವ್ವೆʼ ಸಿನಿಮಾದಲ್ಲಿಯೂ ವೈಭವಿ ನಟಿಸಿದ್ದರು. ಈಜಿಪ್ಟಿಯನ್‌ ಅರೆಬಿಕ್‌ ಸಿನಿಮಾ ʼGahem Fe Elʼದಲ್ಲಿಯೂ ಅವರು ನಟಿಸಿದ್ದರು. ಅಷ್ಟೇ ಅಲ್ಲದೆ ʼಏಕ್‌ ಅಲ್ಬೆಲಾʼ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ವಿದ್ಯಾ ಬಾಲನ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ʼನಿಶಾʼ, ʼಛತ್ರಸಾಲ್ʼ‌ ವೆಬ್‌ ಸಿರೀಸ್‌ಗಳಲ್ಲಿಯೂ ನಟಿಸಿದ್ದಾರೆ. ಕಳೆ ಹತ್ತು ವರ್ಷಗಳಲ್ಲಿ ಅವರು ಎಂಟು ಸಿನಿಮಾಗಳು, ಎರಡು ವೆಬ್‌ ಸಿರೀಸ್‌ಗಳಲ್ಲಿ ನಟಿಸಿದ್ದಾರೆ. ಇಷ್ಟು ಭಾಷೆಗಳಲ್ಲಿ ನಟಿಸಿದರೂ ಕೂಡ ವೈಭವಿ ಶಾಂಡಿಲ್ಯ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಇನ್ನೂ ಸಿಕ್ಕಿಲ್ಲ.