ನಟ ಜಗ್ಗೇಶ್‌ ಅವರು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದರು. ಈ ನಡುವೆ ಪ್ರಯಾಗ್‌ರಾಜ್‌ಗೆ ಹೋಗಲು ಎದುರಿಸಿದ ಸಮಸ್ಯೆಗಳ ಬಗ್ಗೆ ಅವರು ಮಾತನಾಡಿದ್ದಾರೆ.  

ಕುಂಭಮೇಳಕ್ಕೆ ಭಾಗಿಯಾದ ಬಗ್ಗೆ ನಟ ಜಗ್ಗೇಶ್‌ ಪೋಸ್ಟ್‌ ಹೀಗಿದೆ..! 

ದಯವಿಟ್ಟು ಓದಿ, ಒಂದು ದಿನ ಇದ್ದದ್ದು ಮತ್ತೊಂದುದಿನ ಇಲ್ಲವಾಗುವುದು, ನಶ್ವರ ಜಗತ್ತು. ಅರ್ಥಾತ್ ಇಂದು ಇದ್ದವ ನಾಳೆ ಇರನು! ಇರುವ ಇರನು ಅಂತರದಲ್ಲಿ ದೇವರ ಅಸ್ತಿತ್ವ ಪ್ರಧಾನ. 
ಇದ್ದಾಗ ಶಿವ ಹೋದಾಗ ಶವ! ಇಷ್ಟು ಮನುಷ್ಯನಿಗೆ ಆಳದಲ್ಲಿ ಅರಿವಾದರೆ ಅವನು ʼನಾನುʼ ಅರ್ಥ ಕಳೆದುಕೊಂಡು ʼನೀನುʼ ಉಳಿದು ಬಿಡುತ್ತದೆ ಆ ʼನೀನುʼ. ಪರಬ್ರಹ್ಮಸ್ವರೂಪ ಅಂದರೆ ದೇವರು.

ನನ್ನ ಇತ್ತೀಚಿನ ಕುಂಭಮೇಳಕ್ಕೆ ಹೋದ ಉದಾಹರಣೆ. ಕೆಲವರು ನೀವು ಸಂಸದ ನಿಮಗೇನು ದುಡ್ಡಿದೆ ಹೋದಿರಿ ಎಂದರು. ನಾನು ಹೋದ ಸತ್ಯ ತಿಳಿಸುವೆ. ದೆಹಲಿಯ ಎಲ್ಲಾ ವರಿಷ್ಟರು, ನಮ್ಮ ರಾಜ್ಯದ ಉಸ್ತುವಾರಿ ನಮ್ಮ ರಾಜ್ಯದ ಕೇಂದ್ರ ಮಂತ್ರಿಗಳು ಹಾಗು ಅವರ ಆಪ್ತಸಹಾಯಕರ ಕೇಳಿದೆ ಯಾರು ತುಟಿಬಿಚ್ಚಲಿಲ್ಲಾ ಸಹಾಯ ಮಾಡಲಿಲ್ಲ!

ಮಹಾಕುಂಭ ಮಹಾಕ್ಲೀನ್‌ ಆಗಿರಲು ಕಾರಣ..3.5 ಲಕ್ಷ ಕೆಜಿ ಬ್ಲೀಚಿಂಗ್‌ ಪೌಡರ್‌, 1 ಕೋಟಿ ಲೀಟರ್‌ ಕ್ಲೀನಿಂಗ್‌ ದ್ರಾವಣ!

144ವರ್ಷಕ್ಕೆ ಒಮ್ಮೆ ಬರುವ ಮಹಾಕುಂಭಕ್ಕೆ ನನಗೆ ಯೋಗವಿಲ್ಲವೆ ಎಂದು ದುಃಖಿಸಿದೆ. ಮನೆಯಲ್ಲಿ ಯಜ್ಞ ಮಾಡಿಸಿ ʼರಾಯರಲ್ಲಿʼ ಬೇಡಿಕೆ ಇಟ್ಟು ನನ್ನ ಜೊತೆ ನೀವಿದ್ದೀರಿ ಚಿಂತೆ ಏಕೆ ಎಂದು ವಿಮಾನ ಟಿಕಿಟ್ ಯತ್ನಿಸಿದೆ. ಎಲ್ಲ ಖಾಲಿ ಆಗಿತ್ತು. ಮತ್ತೆ ವಿಘ್ನವೇ ಎಂದು ಕೊರಗಿದೆ..ಸ್ವಲ್ಪ ಸಮಯದ ನಂತರ ಕರೆಬಂತು, ಸಾರ್ ಒಂದೇ ಒಂದು ಟಿಕೆಟ್ ಇದೆ‌, ಪರಿಮಳ ಅವರಿಗೆ ಆಗದು ಏನುಮಾಡಲಿ ಎಂದು? ಬರುವಾಗ ಒಬ್ಬನೆ ಹೋಗುವಾಗ ಒಬ್ಬನೆ, ಬುಕ್ ಮಾಡು ಎಂದು ಹೋದೆ!

ಅಲ್ಲಿ ನೋಡಿದರೆ ಸಹಾಯ ಮಾಡಲು ಯಾರು ಇಲ್ಲ. ಇಸ್ಕಾನ್ ಆಲಯದ ಕಾರು ಮಾತ್ರ ಇತ್ತು!‌ ಕೋಟಿ ಜನಸಂಖ್ಯೆಯ ನಡುವೆ ನಾನು ಯಾರು ಇಲ್ಲದ ಅನಾಥನಾದೆ! ರಾಯರೆ ನೀವಿದ್ದೀರಿ ಎಂದೆ ಮನದಲ್ಲಿ ನೋಡಿ ಬಂದ ಒಬ್ಬ ಪರಿಚಯವಿಲ್ಲದ ಮಾಜಿ ಕ್ರಿಕೆಟಿಗ ಪುಂಜ ಆತನಿಗೆ ಸಿಕ್ಕ ಪ್ರೋಟೋಕಾಲ್ ಬಳಸಿ ಕೋಟಿ ಜನಜಂಗುಳಿ ನಡುವೆ ಪೋಲೀಸರ ಹಾರನ್ ಹಾಕಿ, ಪಕ್ಕ ತ್ರಿವೇಣಿ ಸಂಗಮಕ್ಕೆ ಹೋಗಿ ಸ್ನಾನ ಮಾಡಿಸಿಬಿಟ್ಟ ಅವರ ಮತ್ತೊಬ್ಬ ಸಂಗಡಿಗರು ನಮ್ಮ ಮಲ್ಲೇಶ್ವರ ಹೆಮ್ಮೆಯ ಶಾಸಕರು ಅಶ್ವಥ್ ಅವರು..ವಾಪಸ್ ಬರುವಾಗ ನಮ್ಮ ವಿಮಾನ 5ಘಂಟೆ ವಿಳಂಬ ಎಂದರು ಏನು ಮಾಡೋದು? ದಾರಿಯಲ್ಲೇ ಕಾಫಿ ಕುಡಿಯುತ್ತ ಕುಳಿತೆ.. ನಂತರ ಮತ್ತೊಂದು ಪವಾಡ. ವಿಮಾನದ ಉಸ್ತುವಾರಿ ಬಂದು ಸಾರ್ ನಿಮ್ಮ ವಿಮಾನ ತಡವಾಗುತ್ತೆ, ಈಗ ಹಾರಲು ತಯಾರಿರುವ ವಿಮಾನ ಇದೆ ಹೋಗಿ ಎಂದು ಟಿಕೆಟ್ ಬದಲಿಸಿ ಬೆಂಗಳೂರಿಗೆ ಕಳಿಸಿಬಿಟ್ಟ!ಈಗ ಹೇಳಿ ನಮ್ಮ ಬದುಕಿಗೆ ಯಾರು ಬೇಕು?

Mahakumbh 2025: ನಾವು ದುಡಿದಿದ್ದು ಮುಂದಿನವ್ರು ಉಳಿಸಿಕೊಂಡಿದ್ರೆ, ಹರಟೆಯಲ್ಲಿ ನಮ್‌ ಹೆಸರು ಬರತ್ತೆ: ಜಗ್ಗೇಶ್‌

ಕೆಲಸಕ್ಕೆ ಬರದ ಸಮಯೋಚಿತ ಸಹಾಯಕ್ಕೆ ಮನುಷ್ಯರೋ ಅಥವಾ ನಮ್ಮೊಳಗೆ ಇರುವ ದೇವರಾ? ಶುದ್ಧವಾಗಿ ಬದುಕಿ ಆಧ್ಯಾತ್ಮಿಕ ದಾರಿಯಲ್ಲಿ ನಡೆಯುವವರ ಬೆನ್ನ ಹಿಂದೆ ಕಾಯಲು ಒಬ್ಬರು ಇದ್ದೆ ಇರುತ್ತಾರೆ ಅವರೇ ನಮ್ಮ ರಾಯರು. ಯಾರ ಬಗ್ಗೆ ಅರಿವಿರದೆ ಹಂಗಿಸಬೇಡಿ. ಭಗವತ್ ಭಕ್ತರು ನೊಂದರೆ ಮರೆಯಲಾಗದ ದುಃಖ ಕಾಡಿಬಿಡುತ್ತದೆ ಅಣಕ ಹಂಗಿಸಿದವರಿಗೆ! ನಿಮ್ಮ ಪಾಡಿಗೆ ಯಾರಿಗೂ ತೊಂದರೆ ಕೊಡದೆ ಸುಂದರವಾಗಿ ಬದುಕಿ ದೇವರು ನಿಮ್ಮ ಜೊತೆ ಇರುತ್ತಾರೆ. ನನ್ನ ಬದುಕಂತು ಎಲ್ಲೆಲ್ಲೂ ರಾಯರೆ ಕಾಣುತ್ತಾರೆ, ನಂಬಿದ ಭಕ್ತರಿಗೆ ರಾಯರು ಕೈಬಿಡರು "ಗುರುವೆ ಶರಣಂ. ಮಾರ್ಚ್ 6 ರಾಯರ ಹುಟ್ಟುಹಬ್ಬ, ಹೋಗುತ್ತಿರುವೆ ಸಾಧ್ಯವಾದರೆ ನೀವು ಬನ್ನಿ.