ಕಿರುತೆರೆ ಧಾರಾವಾಹಿಗಳಲ್ಲಿ ಹೆಚ್ಚಾಗಿ ವೀಕ್ಷಕರ ಗಮನ ಸೆಳೆಯುವುದು ನಟ-ನಟಿಯರ ರೊಮ್ಯಾನ್ಸ್‌, ವಸ್ತ್ರ ವಿನ್ಯಾಸ ಹಾಗೂ ವಿಭಿನ್ನ ಕಥೆಗಳು. ಆದರೆ ಇನ್ನೂ ಕೆಲವೊಂದು ಧಾರಾವಾಹಿಗಳಲ್ಲಿ ಅಳುಮುಂಜಿ ಪಾತ್ರಗಳು ಬಿಗ್ ಹಿಟ್ ಆಗುತ್ತದೆ. ಟ್ರೋಲ್‌ ಪೇಜ್‌ವೊಂದರಲ್ಲಿ ಧಾರಾವಾಹಿ ಹಿಸ್ಟರಿಯಲ್ಲಿ ಅತಿ ಹೆಚ್ಚು ಅಳುಮುಂಜಿ ನಟಿ ಯಾರೆಂದು ಗೆಸ್‌ ಮಾಡಿದ್ದಾರೆ...

'ಅಮೃತವರ್ಷಿಣಿ' ನಂತ್ರ ಮಾಯವಾಗಿದ್ದ ರಜನಿ ಈಗ ಫುಲ್ ಮಾಡ್ ಆಗಿ ಬಂದಿದ್ದಾರೆ ನೋಡಿ!

ಟ್ರೋಲ್ ಪೋಸ್ಟ್‌:
ಹಲವು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ 'ಅಮೃತ ವರ್ಷಿಣಿ' ಧಾರಾವಾಹಿಯ ಅಮೃತಾ ತುಂಬು ಕುಟುಂಬಕ್ಕೆ ಸೊಸೆಯಾಗಿ ಹೋಗುತ್ತಾಳೆ. ಅಕ್ಕ-ತಂಗಿ ಒಂದೇ ಮನೆಗೆ ಹಿರಿ ಹಾಗೂ ಕಿರಿ ಸೊಸೆಯಾಗಿ ಎಂಟ್ರಿ ಕೊಟ್ಟರೆ, ಆಸ್ತಿ ಅಥವಾ ಆಭರಣ ವಿಚಾರಕ್ಕೆ ಜಗಳ ಶುರುವಾಗುವುದು ತುಂಬಾ ಕಾಮನ್. ರಿಯಲ್‌ ಲೈಫ್‌ನಲ್ಲಿಯೇ ಇಬ್ಬರೂ ಜಗಳು ಅಡುತ್ತಾರೆ. ಆದರೆ ಈ ರೀಲ್‌ ಲೈಫ್‌ನಲ್ಲಿ ಅಕ್ಕ ಎಲ್ಲಾ ನೋವುಗಳನ್ನೂ ಹೊಟ್ಟೆಗೆ ಹಾಕಿಕೊಳ್ಳುತ್ತಾಳೆ. ಸಂತೋಷಕ್ಕಿಂತ ದುಖಃವನ್ನೇ ಹೆಚ್ಚಾಗಿ ಅನುಭವಿಸುತ್ತಾಳೆ. ಸಿಕ್ಕಾಪಟ್ಟೆ ಅಳುತ್ತಾಳೆ. ಈ ಪಾತ್ರದಲ್ಲಿ ಕಾಣಿಸಿಕೊಂಡ ಅಮೃತಾ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದರು.

ಇನ್ನು ಅಳುಮುಂಜಿ ಅಮೃತಾಗೆ ಬಿಗ್‌ ಕಾಂಪಿಟೇಷನ್‌ ಕೊಡೋಕೆ ನಮ್ಮ ಮಂಗಳ ಗೌರಿ ಬರ್ತಿದ್ದಾಳೆ ಅಂತ ಟ್ರೋಲ್ ಮಾಡಲಾಗುತ್ತಿದೆ. ಮದುವೆಯಾದರೂ ಗಂಡ ಮನೆಯಲ್ಲಿ ಇರಲಾಗುತ್ತಿಲ್ಲ, ಕುಟುಂಬಸ್ಥರಿಂದ ಕಿರುಕುಳ, ವಿಲನ್‌ಗಳ ರಂಪಾಟ ಎಲ್ಲವನ್ನೂ ಸಹಿಸಿಕೊಂಡ ಮಂಗಳ ಗೌರಿ ಅಳುವುದರಲ್ಲಿ ಅಮೃತಾಳನ್ನು ಮೀರಿಸುತ್ತಿದ್ದಾಳೆ.

ಮಂಗಳಗೌರಿಯ ಮಾಡರ್ನ್ ಲುಕ್ ಹೇಗಿದೆ..? ಇಲ್ನೋಡಿ ಫೋಟೋಸ್ 

ನೆಟ್ಟಿಗರ ಕಾಮೆಂಟ್ಸ್:
'ಈ ಮಂಗಳ ಗೌರಿ ಮದುವೆ ಮುಗಿಯುತ್ತಿಲ್ಲ, ಅಕಸ್ಮಾತ್‌ ಮುಗಿದರೂ ಶುಕ್ರ ಗೌರಿ ಮದುವೆ ಶುರು ಆಗುತ್ತೆ. ಹೀಗೆ ಇರೋ ಬರೋ ಗೌರಿಗಳ ಮದುವೆ ಮಾಡ್ತಾರೆ ಇವರು,' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಧಾರಾವಾಹಿ ಹೇಗಿದೆ, ಕತೆಯಲ್ಲಿ ಬರುತ್ತಿರುವ ಟ್ವಿಸ್ಟ್‌ ಬಗ್ಗೆ ಅಭಿಪ್ರಾಯ ಹೇಳಿಕೊಂಡಿದ್ದಾರೆ.

ಈ ಹಿಂದೆ ಪ್ರಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆ ಬಗ್ಗೆಯೂ ಸಾಕಷ್ಟು ಟ್ರೋಲ್ ಆಗುತ್ತಿದ್ದವು. ಕಾಡಿಗೆ ಹೋಗಿ ಹುಲಿಯಿಂದ ತಪ್ಪಿಸಿಕೊಂಡು ಬಂದರೂ ಪುಟ್ಟು ಗೌರಿಗೆ ಏನೂ ಆಗಲ್ಲ. ಹೋಗಲಿ ಆ ಹಿಮಾಳ ಅತ್ತೆ ಈ ಪುಟ್ಟ ಗೌರಿಯನ್ನು ನೆಲದಲ್ಲಿ ಹೂತರೂ ಏನೋ ಆಗದೇ ಇದ್ದಿದ್ದಕ್ಕೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದರು. ಆದರೂ, ಆ ಸೀರಿಯಲ್ ಒಳ್ಳೆಯ ಟಿಆರ್‌ಪಿ ಪಡೆಯುವಲ್ಲಿ ಯಶಸ್ವಿಯಾಗಿತ್ತು.