Asianet Suvarna News Asianet Suvarna News

ಸುಮಾರಾಗಿ ಡ್ರೆಸ್ ಮಾಡ್ಕೊಂಡಿದ್ರೂ ಸಖತ್ತಾಗಿ ಕಾಣಿಸ್ತೀಯಾ ಅನ್ಬೇಕು; ರಾಜೇಶ್ ಮನೆತನ

ನಟ ರಾಜೇಶ್ ದಂಪತಿ ಜೀ ಕನ್ನಡದ 'ಕಪಲ್ಸ್ ಕಿಚನ್' ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂಚಿಕೆಯ ಪ್ರೊಮೋ ಈಗ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ನಟ ರಾಜೇಶ್ ದಶಕಗಳ ಹಿಂದೆ ಕಿರುತೆರೆಯಲ್ಲಿ ಪ್ರಸಾರವಾಗಿದ್ದ 'ಮನೆತನ' ಸೀರಿಯಲ್ ಮೂಲಕ ಬಹಳಷ್ಟು ಪ್ರಸಿದ್ಧಿ ಪಡೆದವರು.

Manethana fame actor Rajesh and wife participates in zee kannada couples kitchen srb
Author
First Published Dec 1, 2023, 7:37 PM IST

ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು ಅಂತಾರೆ. ನಮ್ ಮದ್ವೆ ಆಗಿ 15 ವರ್ಷ ಆಯ್ತು, ಈಗ ನಿಮ್ ಪ್ರಕಾರ ಮೂರು ಸೂತ್ರಗಳನ್ನು ಹೇಳಿ ಅಂತ ರಾಜೇಶ್ ಮನೆತನ ಅವರನ್ನು ಅವರ ಹೆಂಡತಿ ಕೇಳುತ್ತಾರೆ. ಅದಕ್ಕೆ ಮನೆತನ ಖ್ಯಾತಿಯ ನಟ ರಾಜೇಶ್ ಅವರು 'ಕೇಳಿದ್ದಕ್ಕೆಲ್ಲಾ ಹೌದು ಅಂತ ಹೇಳ್ಬೇಕು, ಹೇಳಿದ್ದ ಟೈಮ್‌ಗೆ ಮನೆಗೆ ಹೋಗ್ಬಿಡ್ಬೇಕು, ಸುಮಾರಾಗಿ ಡ್ರೆಸ್ ಮಾಡ್ಕೊಂಡಿದ್ರೂ ಸಖತ್ತಾಗಿ ಕಾಣಿಸ್ತೀಯಾ ಅನ್ಬೇಕು, ಆಕ್ಚ್ಯುಲಿ ಈ ಮೂರೇ ಇರೋದು, ಹೌದು, ಹೌದು, ಹೌದು ಅನ್ನೋದು, ಏನಂತೀಯಾ, ಅವ್ರು ಹೇಳಿದ್ದಕ್ಕೆಲ್ಲಾ ಹೌದು ಅನ್ನಿ, ಅದಕ್ಕಿಂತ ಒಳ್ಳೇ ಸೂತ್ರ ಯಾವ್ದೂ ಇಲ್ಲ' ಎನ್ನುತ್ತಾರೆ. 

ಅದಕ್ಕೆ ಉತ್ತರ ಕೊಡುತ್ತ ರಾಜೇಶ್ ಹೆಂಡತಿ ಚೆನ್ನಾಗಿ ಮಾತನಾಡಿದ್ದಾರೆ. 'ಯಾವುದಕ್ಕೂ ಆರ್ಗ್ಯೂ ಮಾಡ್ಲೇಬೇಡಿ, ಎಲ್ಲದಕ್ಕೂ ಸುಮ್ನೆ ಇದ್ಬಿಡಿ ಅಲ್ವಾ?' ಎಂದು ಗಂಡನನ್ನು ಕೇಳುತ್ತಾರೆ. ಅದಕ್ಕೆ ರಾಜೇಶ್ ತಾವು ಈ ಮೊದಲು ಹೇಳಿದ್ದ ಮಾತಿಗೆ ತಾವೇ ಕೌಂಟರ್ ಕೊಡುವಂತೆ 'ಹೌದು' ಎನ್ನಲು ಗಂಡ-ಹೆಂಡತಿ ಇಬ್ಬರೂ ನಗುತ್ತಾರೆ. ಈ ದೃಶ್ಯ ಯಾವುದೋ ಸಿನಿಮಾ ಅಥವಾ ಸೀರಿಯಲ್‌ದು ಅಲ್ಲ. ಇದು ಜೀ ಕನ್ನಡದ 'ಕಪಲ್ಸ್ ಕಿಚನ್' ರಿಯಾಲಿಟಿ ಶೋ ದಲ್ಲಿ ಬಂದ ಮಾತುಕತೆ. 

ತುಕಾಲಿ ಸಂತೋಷ್-ಸಂಗೀತಾ ಮಧ್ಯೆ ಮಾತಿನ ಚಕಮಕಿ; ತನಿ‍ಷಾ ಸಲಹೆಗೂ ಕ್ಯಾರೇ ಎನ್ನುತ್ತಿಲ್ಲವಲ್ಲ!

ಹೌದು, ನಟ ರಾಜೇಶ್ ದಂಪತಿ ಜೀ ಕನ್ನಡದ 'ಕಪಲ್ಸ್ ಕಿಚನ್' ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂಚಿಕೆಯ ಪ್ರೊಮೋ ಈಗ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ನಟ ರಾಜೇಶ್ ದಶಕಗಳ ಹಿಂದೆ ಕಿರುತೆರೆಯಲ್ಲಿ ಪ್ರಸಾರವಾಗಿದ್ದ 'ಮನೆತನ' ಸೀರಿಯಲ್ ಮೂಲಕ ಬಹಳಷ್ಟು ಪ್ರಸಿದ್ಧಿ ಪಡೆದವರು. ಆ ಬಳಿಕ ಅವರನ್ನು ಅದೇ ಸೀರಿಯಲ್ ಹೆಸರಿನಿಂದಲೇ ಕರೆಯುತ್ತಾರೆ. ಜೀ ಕನ್ನಡದ ಕಪಲ್ಸ್ ಕಿಚನ್ ರಿಯಾಲಿಟಿ ಶೋದಲ್ಲಿ ಬಹಳಷ್ಟು ತಾರಾಜೋಡಿಗಳು ಬಂದು ಅವರ ಜೀವನ, ಹವ್ಯಾಸಗಳು ಹಾಗೂ ಇನ್ನೂ ಹತ್ತು-ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. 

ಡ್ರೋನ್ ಪ್ರತಾಪ್‌ಗೆ ಕಳಪೆ ಪಟ್ಟ, ಕಾರ್ತಿಕ್ ಹೊರಗಿಟ್ಟು ತಪ್ಪು ಮಾಡಿದ್ವಿ ಎಂದ್ರು ವಿನಯ್ ಗೌಡ!

ಒಟ್ಟಿನಲ್ಲಿ, ಸಿನಿಮಾ ಹಾಗೂ ಸೀರಿಯಲ್ ಅಂದರೆ ಸ್ಯಾಂಡಲ್‌ವುಡ್ ಹಾಗೂ ಕಿರುತೆರೆ ಸೆಲೆಬ್ರಿಟಿಗಳನ್ನು ಜೀ ಕನ್ನಡದ ಕಪಲ್ಸ್ ಕಿಚನ್ ಶೋಗೆ ಕರೆದು ಮಾತನಾಡಿಸಲಾಗುತ್ತಿದೆ. ಮುಂದಿನ ಸಂಚಿಕೆ ಪ್ರಸಾರದಲ್ಲಿ ಕಿರುತೆರೆ ವೀಕ್ಷಕರು, ಕಪಲ್ಸ್ ಕಿಚನ್ ರಿಯಾಲಿಟಿ ಶೋ ಪ್ರಿಯರು ರಾಜೇಶ್ ಮನೆತನ ದಂಪತಿಯ ಮಾತುಕತೆ ನೋಡಬಹುದು. ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ನಟ ರಾಜೇಶ್, ಈ ಕಾರ್ಯಕ್ರಮದ ಮೂಲಕ ತಮ್ಮ ಹಲವಾರು ವೈಯಕ್ತಿಕ  ವಿಷಯಗಳನ್ನು ವೀಕ್ಷಕರ ಜತೆ ಹಂಚಿಕೊಳ್ಳಲಿದ್ದಾರೆ. ಅಭಿಮಾನಿಗಳು ಸಂತೋಷ ಪಡೆಯಬಹುದು. 

Follow Us:
Download App:
  • android
  • ios