ಕಿರುತೆರೆ ನಟಿ ಶ್ವೇತಾ ಚಂಗಪ್ಪ ಪುತ್ರನ ನಾಮಕರಣ ಸಂಭ್ರಮವನ್ನು ಫ್ಯಾಮಿಲಿ ಫೋಟೋಗಳ ಮೂಲಕ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪುತ್ರನಿಗೆ ಜಿಯಾನ್ ಎಂಬ ಹೆಸರಿಟ್ಟಿದ್ದು, ಹೆಸರಿಗೆ ಅದ್ಭುತವಾದ ಅರ್ಥವಿದೆ ಎಂಬುದನ್ನೂ ತಿಳಿಸಿದ್ದಾರೆ.. 

'ಮಜಾ ಟಾಕೀಸ್‌' ಸುಂದರ ಚೆಲುವೆ ರಾಣಿ ಅಲಿಯಾಸ್‌ ಶ್ವೇತಾ ಚಂಗಪ್ಪ ಸೆಪ್ಟೆಂಬರ್‌ 9, 2019ರಂದು ಮುದ್ದು ಕೃಷ್ಣನಿಗೆ ಜನ್ಮ ನೀಡಿದ್ದಾರೆ. ತಮ್ಮೆಲ್ಲಾ ಅಭಿಮಾನಿಗಳಿಗೆ ವಿಶೇಷ ದಿನದಂದು ಪುತ್ರನ ಮೊದಲ ಫೋಟೋ ಹಾಗೂ ಹೆಸರನ್ನು ರಿವೀಲ್‌ ಮಾಡಿದ್ದರು. 

Add Asianetnews Kannada as a Preferred SourcegooglePreferred

ಕೊಡವ ಯೋಧನೆಂದು ಪುತ್ರನ ಫೋಟೋ, ಹೆಸರು ರಿವೀಲ್ ಮಾಡಿದ ಶ್ವೇತಾ ಚಂಗಪ್ಪ!

ಕೊಡವ ಸ್ಟೈಲಿನಲ್ಲಿ ಪುತ್ರನಿಗೆ ಫೋಟೊ ಶೂಟ್‌ ಮಾಡಿಸಿ ಗಣರಾಜ್ಯೋತ್ಸವದ ದಿನವೇ 15 ವರ್ಷಗಳ ಹಿಂದೆ, ನಾನು ಮೊದಲು ಕ್ಯಾಮೆರಾ ಎದುರಿಸಿದ್ದೆ. ಅದೇ ದಿನ ಮಗನ ಫೋಟೋವನ್ನೂ ಶೇರ್ ಮಾಡುತ್ತಿದ್ದೇನೆಂದು ಕೊಡಗಿನ ಯೋಧನ ಫೋಟೋ ಶೇರ್ ಮಾಡಿಕೊಂಡಿದ್ದರು. ಮಗನಿಗೆ ಏನಪ್ಪಾ ಹೆಸರಿಟ್ಟರು ನಮ್ಮ ಮಜಾ ಟಾಕೀಸ್ ರಾಣಿ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಜಿಯಾನ್ ಅಯ್ಯಪ್ಪ ಎಂಬ ಹೆಸರಿಟ್ಟಿದ್ದಾಗಿಯೂ ಹೇಳಿದ್ದರು. ಅಂದೇ ಮಗನ ಹೆಸರಲ್ಲಿ ಇನ್‌ಸ್ಟಾಗ್ರಾಂ ಖಾತೆಯನ್ನೂ ತೆರೆದಿದ್ದರು. ಈಗಾಗಲೇ ಕಿರಣ್-ಶ್ವೇತಾ ದಂಪತಿ ಪುತ್ರ ಜಿಯಾನ್‌ಗೆ 6000ಕ್ಕೂ ಹೆಚ್ಚು ಫಾಲೋಯರ್ಸ್‌ ಇದ್ದಾರೆ.

ಶ್ವೇತಾ ಕಮ್‌ ಬ್ಯಾಕ್‌; ಟ್ರಾನ್ಸಫಾರ್ಮೇಶನ್‌ ಹೇಗಿದೆ ನೋಡಿ!

ಕೊಡಿಗಿನ ಇಗ್ಗುಟೊಪ್ಪ ಮಂದಿರದಲ್ಲಿ, ಕುಟುಂಬದ ಉಪಸ್ಥಿತಿಯಲ್ಲಿ ತಮ್ಮ ಮಗನಿಗೆ ಸಾಂಪ್ರಾದಾಯಿಕವಾಗಿ ಜಿಯಾನ್ ಅಯ್ಯಪ್ಪ ಎಂದು ನಾಮಕರಣ ಮಾಡಿದ್ದಾರೆ. ಅಯ್ಯಪ್ಪ ಕೊಡಗಿನ ಪ್ರಸಿದ್ಧ ಸರ್ ನೇಮ್ ಎಂಬುವವುದು ಎಲ್ಲರಿಗೂ ಗೊತ್ತು. ಈ ಮುದ್ದಾದ ಹೆಸರನ್ನು ನನ್ನ ಪತಿ ಹಾಗೂ ನಾನು ಸೇರಿ ಆಯ್ಕೆ ಮಾಡಿದ್ದಾಗಿಯೂ ತಮ್ಮ ಪೋಸ್ಟಿನಲ್ಲಿ ತಿಳಿಸಿದ್ದಾರೆ. 

View post on Instagram

#SonShine ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಮಗನ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಶ್ವೇತಾ 'ಜಿಯಾನ್‌ ಎಂದರೆ ಸದಾ ಖುಷಿಯಾಗಿದ್ದು, ಸಂತೋಷ ಪಸರಿಸುವ ವ್ಯಕ್ತಿ' ಎಂಬ ಅದ್ಭುತವಾದ ಅರ್ಥವಿದೆ ಎಂದು ಹೇಳಿದ್ದಾರೆ.