ಮಜಾ ಟಾಕೀಸ್‌ ಸುಂದರಿ ಶ್ವೇತಾ ಚಂಗಪ್ಪ ಗಣರಾಜ್ಯೋತ್ಸವದಂದು ಪುತ್ರನ ಪೋಟೋ ಹಾಗೂ ಹೆಸರು ರಿವೀಲ್‌ ಮಾಡಿದ್ದಾರೆ. ಗಣರಾಜ್ಯೋತ್ಸವದಂದೇ ಕೊಡಗಿನ ಯೋಧನೆಂದು ಫೋಟೋ ರಿವೀಲ್ ಮಾಡಿದ ಹಿಂದೂ ಒಂದು ಕಾರಣವಿದೆ. ಏನದು? 

ಬಿಗ್ ಬಾಸ್‌ ಸೀಸನ್‌-2ರ ಸ್ಟ್ರಾಂಗ್‌ ಸ್ಪರ್ಧಿ ಶ್ವೇತಾ ಚಂಗಪ್ಪ ಅಭಿಮಾನಿಗಳಿಗೆ ತಮ್ಮ ಕುಟುಂಬದ ಕುಡಿಯನ್ನು ಪರಿಚಯಿಸಿದ್ದಾರೆ. ಕೊಡವ ಜನಾಂಗಕ್ಕೆ ಸೇರುವ ಶ್ವೇತಾ ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲೇ ಮಗನ ಫೋಟೋ ರಿವೀಲ್‌ ಮಾಡಿರುವುದು ವಿಶೇಷ.

'Dear all, ಇದೇ ದಿನ ಜನವರಿ 26ರಂದು 15 ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದು ಹಾಗೂ ನಿಮ್ಮೆಲ್ಲರಿಗೂ ಪರಿಚಯವಾಗಿದ್ದು. ಈ ವಿಶೇಷ ದಿನವೇ ನಾನು ನನ್ನ ಮಗನನ್ನು ಪರಿಚಯಿಸುತ್ತಿರುವೆ. ನಮ್ಮ ಜೀವನದಲ್ಲಿ ಕಲ್ಪನೆಗೂ ಮೀರಿದ ಸಂತೋಷ ತಂದು ಕೊಟ್ಟ ಪುಟ್ಟ ಕಂದಮ್ಮ kodava warrior 'ಜಿಯಾನ್‌ ಅಯ್ಯಪ್ಪ' ನಿಮ್ಮೆಲ್ಲರಿಗೂ ಹಾಯ್‌ ಹೇಳುತ್ತಿದ್ದಾನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಇವನ ಮೇಲೂ ಇರಲಿ...' ಎಂದು ಬರೆದುಕೊಂಡಿದ್ದಾರೆ. 

View post on Instagram

ಜಿಯಾನ್‌ ಸೋಷಿಯಲ್‌ ಮೀಡಿಯಾ ಸ್ಟಾರ್ ಕಿಡ್‌ ಆಗುವುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಮಗನ ಹೆಸರಲ್ಲಿ ಶ್ವೇತಾ ಇನ್‌ಸ್ಟಾಗ್ರಾಂ ಖಾತೆಯನ್ನೂ ತೆರೆದಿದ್ದಾರೆ. ಖಾತೆ ತೆರೆದ ಕೆಲವೇ ಕ್ಷಣಗಳಲ್ಲಿ ಜಿಯಾನ್‌ಗೆ 1500ಕ್ಕೂ ಹೆಚ್ಚು ಫಾಲೋವರ್ಸ್‌ ಆದರು.

ಶ್ವೇತಾ ಕಮ್‌ ಬ್ಯಾಕ್‌; ಟ್ರಾನ್ಸಫಾರ್ಮೇಶನ್‌ ಹೇಗಿದೆ ನೋಡಿ!

ಈ ಹಿಂದೆ ಪುತ್ತರಿ ಹಬ್ಬದಂದು ಶ್ವೇತಾ ಮಗನೊಟ್ಟಿಗೆ ಕೊಡವ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್‌ ಆಗಿತ್ತು. ಮಗುವಿಗೆ ಜನ್ಮ ನೀಡಿದ ನಂತರ ತಮ್ಮ ಟ್ರ್ಯಾನ್ಸಫಾರ್ಮೇಷನ್‌ ಲುಕ್‌ ಬಗ್ಗೆ ಬರೆದುಕೊಂಡು, ಮಗುವಾದ ಮೇಲೆ ಎಲ್ಲವೂ ಮುಗಿಯಿತು ಎಂದು ಕೊಳ್ಳುವ ಅಮ್ಮಂದಿರಗೆ ಸ್ಪೂರ್ತಿ ನೀಡಿದ್ದಾರೆ.

View post on Instagram