Asianet Suvarna News Asianet Suvarna News

Nitish Bharadwaj Divorced: 12 ವರ್ಷದ ದಾಂಪತ್ಯದ ನಂತರ ವಿಚ್ಚೇದನೆ ಪಡೆದ ಮಹಾಭಾರತದ ಕೃಷ್ಣ ಖ್ಯಾತಿಯ ನಟ

  • ಮಹಾಭಾರತದಲ್ಲಿ ಕೃಷ್ಣ ಪಾತ್ರ ಮಾಡುತ್ತಿದ್ದ ನಟನ ವಿಚ್ಚೇದನೆ
  • ಐಎಎಸ್ ಪತ್ನಿಗೆ ವಿಚ್ಚೇದನೆ ಕೊಟ್ಟ ಕಿರುತೆರೆ ನಟ
  • 12 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ
Mahabharats Krishna aka Nitish Bharadwaj and IAS officer wife separate after 12 years dpl
Author
Bangalore, First Published Jan 18, 2022, 7:32 PM IST

ಇತ್ತೀಚೆಗೆ ಹಿರಿತೆರೆ, ಕಿರುತೆರೆ ಅನ್ನದೆ ಸೆಲೆಬ್ರಿಟಿ ಜೋಡಿಗಳೆಲ್ಲ ವಿಚ್ಚೇದನೆ ಪಡೆಯುತ್ತಿದ್ದಾರೆ. ಸಾಲು ಸಾಲು ವಿಚ್ಚೇದನೆ ನಡೆಯುತ್ತಲೇ ಇದೆ. ಸ್ಟಾರ್ ಜೋಡಿಯ ಮದುವೆಗಳು ಮಾತ್ರವಲ್ಲ, ವಿಚ್ಚೇದನೆಗಳ ಸಂಖ್ಯೆಯೂ ಏರಿಕೆಯಾಗುತ್ತಲೇ ಇದೆ. ಕೊರೋನಾ ನಂತರದಲ್ಲಂತೂ ವಿಚ್ಚೇದನೆಗಳು ಭಾರೀ ಹೆಚ್ಚಾಗಿವೆ. ಧನುಷ್ ಹಾಗೂ ಐಶ್ವರ್ಯಾ ವಿಚ್ಚೇದನೆ ಪಡೆದ ಬೆನ್ನಲ್ಲೇ ಕಿರುತೆರೆ ನಟನೂ 12 ವರ್ಷದ ದಂಪತ್ಯ ಜೀವನ ಕೊನೆಗೊಳಿಸಿದ್ದಾರೆ. ಬಿಆರ್ ಚೋಪ್ರಾ ಅವರ ಮಹಾಭಾರತ ಸರಣಿಯಲ್ಲಿ ಶ್ರೀ ಕೃಷ್ಣನ ಪಾತ್ರದ ನಂತರ ಮನೆಮಾತಾಗಿರುವ ಪ್ರಸಿದ್ಧ ನಟ ನಿತೀಶ್ ಭಾರದ್ವಾಜ್ ಅವರು ತಮ್ಮ ಪತ್ನಿ ಸ್ಮಿತಾ ಗೇಟ್‌ ಅವರಿಂದ ಬೇರ್ಪಟ್ಟಿರುವುದಾಗಿ ಹೇಳೀದ್ದಾರೆ. 12 ವರ್ಷಗಳ ಕಾಲ ಜೊತೆಯಾಗಿ ಸಂಸಾರ ಮಾಡಿದ ಜೋಡಿ ಈಗ ಬೇರ್ಪಟ್ಟಿದ್ದಾರೆ.

ಬಾಂಬೆ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ನಿತೀಶ್ ಭಾರದ್ವಾಜ್, 'ಹೌದು, ನಾನು ಸೆಪ್ಟೆಂಬರ್ 2019 ರಲ್ಲಿ ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ನಾವು ಏಕೆ ಬೇರ್ಪಟ್ಟಿದ್ದೇವೆ ಎಂಬುದರ ಕುರಿತು ನಾನು ತಿಳಿದುಕೊಳ್ಳಲು ಬಯಸುವುದಿಲ್ಲ. ಈ ವಿಷಯವು ಇದೀಗ ನ್ಯಾಯಾಲಯದಲ್ಲಿದೆ. ನೀವು ಅಂಗಚ್ಛೇದಿತ ಕೋರ್ನೊಂದಿಗೆ ಜೀವಿಸುವುದಕ್ಕಿಂತಲೂ ಕೆಲವೊಮ್ಮೆ ವಿಚ್ಛೇದನವು ಮರಣಕ್ಕಿಂತ ಹೆಚ್ಚು ನೋವಿನಿಂದ ಕೂಡಿದೆ ಎಂದು ನಾನು ಹೇಳಬಲ್ಲೆ ಎಂದಿದ್ದಾರೆ.

ರಜನಿ ಮಗಳ ಜತೆಗಿನ ಬಾಂಧವ್ಯ ಅಂತ್ಯಗೊಳಿಸಿದ ಧನುಷ್

ಸಾಮಾನ್ಯವಾಗಿ ಮದುವೆಯ ಬಗ್ಗೆ ಮಾತನಾಡುತ್ತಾ, ನಾನು ಮದುವೆಯಲ್ಲಿ ಅಚಲ ನಂಬಿಕೆಯುಳ್ಳವನಾಗಿದ್ದೇನೆ, ಆದರೆ ನಾನು ಅದೃಷ್ಟಹೀನನಾಗಿದ್ದೇನೆ. ಸಾಮಾನ್ಯವಾಗಿ, ದಾಂಪತ್ಯದ ವಿಘಟನೆಗೆ ಕಾರಣಗಳು ಅನಂತವಾಗಿರಬಹುದು, ಕೆಲವೊಮ್ಮೆ ರಾಜಿಯಾಗದ ಮನೋಭಾವ ಅಥವಾ ಸಹಾನುಭೂತಿಯ ಕೊರತೆಯಿಂದಾಗಿ. ಅಥವಾ ಇದು ಅಹಂಕಾರ ಮತ್ತು ಸ್ವ-ಕೇಂದ್ರಿತ ಚಿಂತನೆಯ ಪರಿಣಾಮವಾಗಿರಬಹುದು.ಆದರೆ ಕುಟುಂಬವು ಒಡೆದುಹೋದಾಗ ಹೆಚ್ಚು ಬಳಲುತ್ತಿರುವವರು ಮಕ್ಕಳು. ಆದ್ದರಿಂದ, ತಮ್ಮ ಮಕ್ಕಳಿಗೆ ಕನಿಷ್ಠ ಪರಿಣಾಮ ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರ ಮೇಲಿದೆ ಎಂದಿದ್ದಾರೆ.

ನಿತೀಶ್ ಅವರ ಪತ್ನಿ ಐಎಎಸ್ ಅಧಿಕಾರಿಯಾಗಿದ್ದು, ದಂಪತಿಗೆ ಅವಳಿ ಹೆಣ್ಣು ಮಕ್ಕಳಿದ್ದಾರೆ, ಅವರು ಪ್ರಸ್ತುತ ತಮ್ಮ ತಾಯಿಯೊಂದಿಗೆ ಇಂದೋರ್‌ನಲ್ಲಿ ವಾಸಿಸುತ್ತಿದ್ದಾರೆ. ನಿತೀಶ್ ಅವರು ಮೊನಿಶಾ ಪಾಟೀಲ್ ಅವರನ್ನು 1991 ರಿಂದ 2005 ರವರೆಗೆ ಮದುವೆಯಾಗಿದ್ದರು.  ಅವರಿಗೆ ಮಗಳು ಮತ್ತು ಮಗನಿದ್ದಾರೆ. ಅವರು 2009 ರಲ್ಲಿ ಸ್ಮಿತಾ ಅವರನ್ನು ವಿವಾಹವಾದರು. ಕೆಲಸದ ಮುಂಭಾಗದಲ್ಲಿ, ನಿತೀಶ್ ಕೊನೆಯದಾಗಿ ಅಭಿಷೇಕ್ ಕಪೂರ್ ಅವರ 'ಕೇದಾರನಾಥ್' ನಲ್ಲಿ ಕಾಣಿಸಿಕೊಂಡರು.

ಬರೀ 21 ವರ್ಷಕ್ಕೆ ಧನುಷ್ ತನಗಿಂತ ಹಿರಿಯವಳನ್ನು ಮದ್ವೆಯಾಗಿದ್ದೇಕೆ?

ಧನುಷ್ (Dhanush)  ಮತ್ತು ಐಶ್ವರ್ಯಾ (Aishwarya ) ಅಧಿಕೃತವಾಗಿ (Divorce) ದೂರದೂರವಾಗಿದ್ದಾರೆ. ರಜನೀಕಾಂತ್ (Rajinikanth)  ಪುತ್ರಿಯನ್ನು ಮದುವೆ ಮಾಡಿಕೊಂಡಿದ್ದ ಧನುಷ್  ದೂರವಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ (Social Media)  ಮೂಲಕ ತಿಳಿಸಿದ್ದಾರೆ.

ದಂಪತಿಗೆ ಇಬ್ಬರಿಗೂ ಎರಡು ಗಂಡು ಮಕ್ಕಳಿದ್ದಾರೆ. ಪ್ರೀತಿಸಿ ಮದುವೆ ಆಗಿದ್ದ ನಟ ಧನುಷ್ ಹಾಗು ಐಶ್ವರ್ಯ 18 ವರ್ಷ ದ ದಾಂಪತ್ಯ ಪೂರೈಸಿದ್ದರು. 18 ವರ್ಷದಿಂದ ಇಬ್ಬರು ಅನ್ಯೂನ್ಯವಾಗಿದ್ದೇವು. . ಒಬ್ಬರಿಗೊಬ್ಬ ಅರ್ಥ ಮಾಡಿಕೊಂಡು ಕಷ್ಟ ಸುಖದಲ್ಲಿ ಭಾಗಿ ಆಗಿದ್ವಿ. ಸ್ನೇಹಿತರಾಗಿ, ದಂಪತಿಗಳಾಗಿ ಪೋಷಕರಾಗಿ ಜೀವನ ನಡೆಸಿದ್ವಿ. ಈಗ ನಾವು ದೂರಾಗಲು ನಿರ್ಧರಿಸಿದ್ದೇವೆ ಎಂದು ಧನುಷ್ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

ದಕ್ಷಿಣ ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರನ್ನು 2004 ರಲ್ಲಿ ಧನುಷ್ ವಿವಾಹವಾದರು. ಅವರ ಮದುವೆಯ ಸಮಯದಲ್ಲಿ ಧನುಷ್ 21 ಮತ್ತು ಐಶ್ವರ್ಯ 23 ವರ್ಷ ವಯಸ್ಸಿನವರಾಗಿದ್ದರು. ಮಾಧ್ಯಮಗಳಲ್ಲಿ ಹರಡಿದ ವದಂತಿಗಳಿಂದಾಗಿ ಇಬ್ಬರೂ ತರಾತುರಿಯಲ್ಲಿ ಮದುವೆಯಾಗಬೇಕಾಯಿತು ಎಂದು ಬಹುಶಃ ಕೆಲವೇ ಜನರಿಗೆ ತಿಳಿದಿದೆ. ಕಾದಲ್ ಕೊಂಡೆ ಚಿತ್ರದ ಸಮಯದಲ್ಲಿ ಧನುಷ್ ಮತ್ತು ಐಶ್ವರ್ಯಾ ಮೊದಲು ಭೇಟಿಯಾದರು. ಸಿನಿಮಾದ ಬಿಡುಗಡೆಯಾದ ಮೊದಲ ದಿನವೇ ಧನುಷ್ ಕುಟುಂಬ ಸಮೇತ ಥಿಯೇಟರ್‌ಗೆ ಆಗಮಿಸಿದ್ದು, ಆಗ ರಜನಿಕಾಂತ್ ಅವರ ಇಬ್ಬರು ಪುತ್ರಿಯರಾದ ಐಶ್ವರ್ಯ ಮತ್ತು ಸೌಂದರ್ಯ ಅವರಿದ್ದರು.

Follow Us:
Download App:
  • android
  • ios