ಸ್ಮೃತಿ ಇರಾನಿಯನ್ನು ಬರ್ಬಾದ್​ ಮಾಡಿದ್ದೇ ಕಂಗನಾ ರಣಾವತ್​ ಎಂದು ಟೀಕಿಸಿದ ಈ ವಿಮರ್ಶಕ!

ಭರ್ಜರಿ ಗೆಲುವು ಸಾಧಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್​ ಅವರು ಈ ಬಾರಿ ಸೋಲುಂಡ ಸ್ಮೃತಿ ಇರಾನಿಯವರ ಕರಿಯರ್​ ಹಾಳುಮಾಡಿದ್ರಂತೆ. ಹೀಗೆ ಹೇಳಿದವರು ಯಾರು? 
 

Lok Sabha Election 2024 Kangana Ranaut ruin Smriti Iranis career says bollywood critic KRK suc

ಈ ಬಾರಿ ಲೋಕಸಭೆ 2024 ಅಚ್ಚರಿಯ ಫಲಿತಾಂಶವನ್ನು ನೀಡಿವೆ.  ಇದರಲ್ಲಿ ಎನ್‌ಡಿಎ ಮತ್ತು ಭಾರತ ಮೈತ್ರಿಕೂಟದ ನಡುವೆ ಭಾರಿ ಪೈಪೋಟಿ ಕಂಡು ಬರುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಇದರಲ್ಲಿ ಕಂಗನಾ ರಣಾವತ್, ಹೇಮಾ ಮಾಲಿನಿ, ಪವನ್​ ಕಲ್ಯಾಣ್​, ಅರುಣ್​ ಗೋವಿಲ್​ ಮುಂತಾದವರಿದ್ದಾರೆ. ಈ ಪೈಕಿ ಸದ್ಯ ಇವರೆಲ್ಲರೂ ಗೆಲುವು ಸಾಧಿಸಿದ್ದಾರೆ. ಅದರಲ್ಲಿಯೂ ಎಲ್ಲರ ಕಣ್ಣು ನೆಟ್ಟಿದ್ದು,ಮೊದಲ ಬಾರಿಗೆ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಕಂಗನಾ ರಣಾವತ್​ ಮೇಲೆ. ಹಿಮಾಚಲ ಪ್ರದೇಶದ ಮಂಡಿಯಿಂದ ಸ್ಪರ್ಧಿಸಿದ್ದ ಕಂಗನಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ  ಸಚಿವೆ ಸ್ಮೃತಿ ಇರಾನಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಪರಾಭವಗೊಂಡಿದ್ದಾರೆ. ಹಿಂದೆ ಇದೇ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದರು ಇವರು.
 
ಇದೀಗ ಈ ಇಬ್ಬರ ಪೈಕಿ ಒಬ್ಬರ ಜಯ ಮತ್ತು ಇನ್ನೊಬ್ಬರ ಪರಾಭವವನ್ನು ಅವಹೇಳನವೆಂಬಂತೆ ಪೋಸ್ಟ್​ ಮಾಡಿದ್ದಾರೆ ಕೆಆರ್​ಕೆ.   ಬಾಲಿವುಡ್‌ನ ವಿವಾದಾತ್ಮಕ ವಿಮರ್ಶಕ ಕಮಲ್‌ ಆರ್‌.ಖಾನ್‌ (KRK) ಅವರು ಸದಾ ವಿವಾದಾತ್ಮಕ ಟ್ವೀಟ್​ ಮಾಡುವಲ್ಲಿ ಫೇಮಸ್​. ಉಳಿದ ಸಮಯದಲ್ಲಿ ಸುಮ್ಮನೇ ಇರುವ ಇವರು, ಚುನಾವಣೆ ಅಥವಾ ತಮಗೆ ಆಗದವರ ಗೆಲುವು ಇತ್ಯಾದಿಗಳನ್ನು ಕಂಡಾಗ ಟ್ವಿಟರ್​ನಲ್ಲಿ ದಿಢೀರ್​ ಪ್ರತ್ಯಕ್ಷರಾಗುತ್ತಾರೆ. ಅವರ ವಿರುದ್ಧ ಕುಹಕವಾಡುವಲ್ಲಿ ಇವರದ್ದು ಎತ್ತಿದ ಕೈ. ಈ ಹಿಂದೆ ಕಂಗನಾ ಅವರ  ತೇಜಸ್​ ಚಿತ್ರದ ಕುರಿತು ಅಪಹಾಸ್ಯ ಮಾಡಿದ್ದರು. ಇದು ನಿರೀಕ್ಷಿತ ಪ್ರಮಾಣದಲ್ಲಿ ಗೆಲುವು ಸಾಧಿಸದ ಹಿನ್ನೆಲೆಯಲ್ಲಿ, ಟೀಕಿಸಿದ್ದ ಅವರು, ದೇಶ ಭಕ್ತೆ ಕಂಗನಾ ಅವರ ತೇಜಸ್‌ ಸಿನಿಮಾ ಬಿಡುಗಡೆಯಾಗಿದ್ದು, ದೇಶಾದ್ಯಂತ ಹಂಗಾಮಾ ಶುರುವಾಗಿದೆ. ತೇಜಸ್‌ ಸಿನಿಮಾ ಯಾವ ಚಿತ್ರಮಂದಿರಲ್ಲಿ ಪ್ರದರ್ಶನ ಕಾಣುತ್ತಿದೆಯೋ ಆ ಥಿಯೇಟರ್‌ ಮುಂಭಾಗದಲ್ಲಿ ಏನಿಲ್ಲ ಅಂದರೂ ಟಿಕೆಟ್‌ ಸಲುವಾಗಿ 2 ಕಿಲೋ ಮೀಟರ್‌ ಸರತಿ ಸಾಲಿದೆ. ಈ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ದೇಶದಲ್ಲಿ ದಂಗೆ ಏಳುವ ಸಾಧ್ಯತೆ ಇದೆ ಎಂದು ಕುಹಕವಾಡಿದ್ದರು. 

ಹೀರೋಯಿನ್​ ಆದ್ಮೇಲೆ ಎಷ್ಟೊಂದು ಬದಲಾದ ಹಿಟ್ಲರ್​ ಕಲ್ಯಾಣದ ಪೆದ್ದು ಲೀಲಾ! ಸೋ ಕ್ಯೂಟ್​ ಎಂದ ಫ್ಯಾನ್ಸ್​

ಇದೀಗ ಮತ್ತೊಮ್ಮೆ ತಮ್ಮ ಕುಹಕ ಬುದ್ಧಿಯನ್ನು ಈ ಚುನಾವಣೆ ಫಲಿತಾಂಶದಲ್ಲಿ ತೋರಿದ್ದಾರೆ. ಇದೀಗ ಅವರು,    ಸ್ಮೃತಿ ಇರಾನಿ ಅವರ ವಿರುದ್ಧ ಅವಹೇಳನ ಮಾಡಿದ್ದಾರೆ. ಕಂಗನಾ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಕೆ ಆರ್​ಕೆ, ಕಡಿಮೆ ಮತಗಳನ್ನು ಪಡೆದಿದ್ದಕ್ಕಾಗಿ ನಟ ಸ್ಮೃತಿ ಇರಾನಿಯನ್ನು ಟಾರ್ಗೆಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ಸ್ಮೃತಿ ಇರಾನಿ ಜೀ... ನೀವು ಸಾಮಾನ್ಯ  ಕಾಂಗ್ರೆಸ್ ಕಾರ್ಯಕರ್ತನ ಎದುರು ಸೋತಿದ್ದೀರಿ. ಕಂಗನಾ ರಣಾವತ್ ಗೆದ್ದಿದ್ದಾರೆ. ಅಂದರೆ ಕಂಗನಾ ನಿಮ್ಮ ಕೆರಿಯರ್ ಅನ್ನು ಕಂಗನಾ ಹಾಳು ಮಾಡಿದ್ದಾರೆ ಎಂದರ್ಥ. ಟಾಟಾ, ಬೈ ಬೈ ಎಂದಿದ್ದಾರೆ.  

ಕೆಆರ್‌ಕೆ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದರ ಬಗ್ಗೆ ಜನರು ತಮ್ಮ ಪ್ರತಿಕ್ರಿಯೆಗಳನ್ನು ಸಹ ನೀಡುತ್ತಿದ್ದಾರೆ. ಅಷ್ಟಕ್ಕೂ ಚುನಾವಣಾ ಫಲಿತಾಂಶ ಹೊರಬೀಳುವ ಮುನ್ನವೇ  ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದ ಕೆಆರ್​ಕೆ,  ಫಲಿತಾಂಶ ಬಂದ ಮೇಲೆ ರಾಹುಲ್ ಗಾಂಧಿಯವರಿಗೆ ಅಭಿನಂದನೆ ಸಲ್ಲಿಸಿದ್ದರು. ಈ ಸಮಯದಲ್ಲಿ ಕಂಗನಾ ಅವರನ್ನು ಮುಂದಿಟ್ಟುಕೊಂಡು ಸ್ಮೃತಿ ಇರಾನಿಯವರನ್ನು ಟೀಕಿಸಿದ್ದಾರೆ.  ಕಂಗನಾ, ಸ್ಮೃತಿ ಇರಾನಿ ಅವರ ಕೆರಿಯರ್​ ಹಾಳುಮಾಡಿದ್ದಾರೆ ಎಂದು ಬರೆದಿದ್ದಾರೆ.  

ಮೈ ಕಪ್​ ಕೇಕ್​, ಬೇಬಿ ಡಾಲ್​ ನೀನು ಬೇಕು ಎಂಬ ಬಾಯ್​ಫ್ರೆಂಡ್​! ರಾ...ರಾ.. ರಕ್ಕಮ್ಮ ಬೆಡಗಿಗೆ ಬೇಕಿತ್ತಾ ಇವೆಲ್ಲಾ?

Latest Videos
Follow Us:
Download App:
  • android
  • ios