ನಟಿ ಶರ್ಮಿಳಾ ಚಂದ್ರಶೇಖರ್‌ಗೆ ವೇವ್‌ಕ್ಯಾಶ್‌ ಲೋನ್‌ ಆ್ಯಪ್‌ನಿಂದ ಬೆದರಿಕೆ ಕರೆ ಬಂದಿದೆ. ಸಾಲ ತೀರಿಸದಿದ್ದರೆ ಅವರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಹರಿಬಿಡುವುದಾಗಿ ಬೆದರಿಸಿದ್ದಾರೆ. ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಶರ್ಮಿಳಾ, ಅಂತಹ ಯಾವುದೇ ಫೋಟೋಗಳು ನಿಜವಲ್ಲ ಎಂದಿದ್ದಾರೆ. ಈ ರೀತಿಯ ಮೋಸದ ಕರೆಗಳ ಬಗ್ಗೆ ದೂರು ನೀಡುವಂತೆ ಮನವಿ ಮಾಡಿದ್ದಾರೆ. ಒಳ್ಳೆಯ ಪಾತ್ರಗಳಿಗಾಗಿ ಕಾಯುತ್ತಿರುವ ಶರ್ಮಿಳಾ, "ಸೀತೆ" ಧಾರಾವಾಹಿಯಲ್ಲಿ ನಟಿಸಿದ್ದಕ್ಕೆ ಹೆಸರುವಾಸಿ

ʼಸೀತೆʼ, ʼಪತ್ತೇದಾರಿ ಪ್ರತಿಭಾʼ, ʼಅಂತರಪಟʼ ಧಾರಾವಾಹಿ ಖ್ಯಾತಿಯ ನಟಿ ಶರ್ಮಿಳಾ ಚಂದ್ರಶೇಖರ್‌ ಅವರು ಏಕಾಏಕಿ ಶಾಕಿಂಗ್‌ ವಿಡಿಯೋ ಮಾಡಿ, ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದಾರೆ. ಈಗ ಯಾವುದ್ಯಾವುದೋ ಆಪ್‌ಗಳಿಂದ ಸಾಲ ಪಡೆಯಬಹುದು. ಈ ಆಪ್‌ಗಳು ಸಾಲಕ್ಕೆ ಬಡ್ಡಿ ಪಡೆಯುವುದರ ಜೊತೆಗೆ ಇನ್ನೊಂದಿಷ್ಟು ಹಣವನ್ನು ವಸೂಲಿ ಮಾಡುತ್ತವೆ. ಈಗ ಒಂದು ಆಪ್‌ನವರು ನಟಿ ಶರ್ಮಿಳಾ ಚಂದ್ರಶೇಖರ್‌ಗೆ ಫೋನ್‌ ಮಾಡಿ, ಹಣ ವಾಪಾಸ್‌ ಕೊಡಿ ಎಂದು ಬೆದರಿಕೆ ಹಾಕಿದ್ದಾರೆ.

ವಿಡಿಯೋದಲ್ಲಿ ಶರ್ಮಿಳಾ ಏನು ಹೇಳಿದ್ರು? 
ನಟಿ ಶರ್ಮಿಳಾ ಚಂದ್ರಶೇಖರ್‌ ಅವರು ಈ ಬಗ್ಗೆ ವಿಡಿಯೋ ಮಾಡಿ ಮಾಹಿತಿ ನೀಡಿದ್ದಾರೆ. ವಿಡಿಯೋದಲ್ಲಿ ಅವರು, “ಇತ್ತೀಚೆಗೆ ಆನ್‌ಲೈನ್‌ ಮೋಸ ಜಾಸ್ತಿ ಆಗಿದೆ. ವೇವ್‌ಕ್ಯಾಶ್‌ ಲೋನ್‌ ಆಪ್‌ನಿಂದ ನಿಮಗೆ ಸಾಲ ಮಂಜೂರು ಆಗಿದೆ, ನೀವು ಸಾಲ ತೀರಿಸಿಲ್ಲ ಅಂದ್ರೆ ನನ್ನ ಫೋಟೋವನ್ನು ಬಳಸಿಕೊಂಡು, ಅಶ್ಲೀಲವಾಗಿ ಎಡಿಟ್‌ ಮಾಡಿ, ಎಲ್ಲ ವಾಟ್ಸಪ್‌ ಬಳಕೆದಾರರಿಗೂ ಕಳಿಸ್ತೀವಿ ಅಂತ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಸೋಶಿಯಲ್‌ ಮೀಡಿಯಾದಲ್ಲಿ ಎಡಿಟ್‌ ಆಗಿರುವ ಅಶ್ಲೀಲ ನನ್ನ ಫೋಟೋಗಳು ಕಂಡರೆ ಅದು ನನ್ನ ನಿಜವಾದ ಫೋಟೋ ಆಗಿರೋದಿಲ್ಲ. ದಯವಿಟ್ಟು ನಿಮಗೂ ಕೂಡ ಈ ರೀತಿ ಮೆಸೇಜ್‌, ಕಾಲ್‌ ಬಂದರೆ ರಿಪೋರ್ಟ್‌ ಮಾಡಿ, ಮೋಸ ಹೋಗಬೇಡಿ” ಎಂದು ಹೇಳಿದ್ದಾರೆ. 

ಮಗಳು ʼಸೀತೆʼ ಪಾತ್ರ ಮಾಡ್ತಿದ್ದಾಳೆ ಅಂತ 4 ವರ್ಷಗಳ ಕಾಲ ತ್ಯಾಗ ಮಾಡಿದ್ದ ಶರ್ಮಿಳಾ ಚಂದ್ರಶೇಖರ್‌ ಕುಟುಂಬ! ಏನದು?

ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿ ಶರ್ಮಿಳಾ! 
ನಟಿ ಶರ್ಮಿಳಾ ಚಂದ್ರಶೇಖರ್‌ ಅವರು ಇತ್ತೀಚೆಗೆ ʼಅಂತರಪಟʼ ಧಾರಾವಾಹಿಯಲ್ಲಿ ನಟಿಸಿದ್ದರು. ಅಮಲಾ ಎನ್ನುವ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದ ಜೊತೆಗೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿಯೂ ಕೂಡ ಅವರು ನಟಿಸಿದ್ದರು. ಈಗ ಅವರು ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಸಾಕಷ್ಟು ಪ್ರಾಜೆಕ್ಟ್‌ಗಳು ಬರುತ್ತಿದ್ದರೂ ಕೂಡ, ಅವರು ಒಳ್ಳೆಯ, ಗಟ್ಟಿ ಪಾತ್ರಕ್ಕೋಸ್ಕರ ಕಾಯುತ್ತಿದ್ದಾರಂತೆ. 

ಸೀತೆಯಾಗಿ ಮಿಂಚಿದ್ದ ನಟಿ
ದಶಕದ ಹಿಂದೆ ಉದಯ ವಾಹಿನಿಯಲ್ಲಿ ʼಸೀತೆʼ ಧಾರಾವಾಹಿ ಪ್ರಸಾರ ಆಗುತ್ತಿತ್ತು. ಈ ಧಾರಾವಾಹಿಯಲ್ಲಿ ಸೀತೆ ಪಾತ್ರದಲ್ಲಿ ಊರ್ಮಿಳಾ ನಟಿಸಿದ್ದರು. ಶರ್ಮಿಳಾ ಅವರು ಊರ್ಮಿಳಾ ಪಾತ್ರದಲ್ಲಿ ನಟಿಸಬೇಕಿತ್ತು, ಆದರೆ ಅವರಿಗೆ ಸೀತೆ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆಗ ಅವರಿಗೆ ಹದಿನೆಂಟು ವರ್ಷ ವಯಸ್ಸು. ಸೀತೆ ಧಾರಾವಾಹಿ ನಿರ್ದೇಶಕರು, ಪ್ರೊಡಕ್ಷನ್‌ ಟೀಂ ಎಲ್ಲವೂ ಹಿಂದಿಯವರದ್ದೇ ಆಗಿತ್ತು. 

ಟ್ರೆಂಡ್‌ ಸೈಡ್‌ಗಿಟ್ಟು ಮಗಳಿಗೆ ಅರ್ಥಗರ್ಭಿತವಾದ ಹೆಸರಿಟ್ಟ ʼಲಕ್ಷ್ಮೀ ಬಾರಮ್ಮʼ ನಟಿ ನೇಹಾ ಗೌಡ- ಚಂದನ್‌ ಗೌಡ!

ನಾಲ್ಕು ವರ್ಷ ಜೀನ್ಸ್‌ ಪ್ಯಾಂಟ್‌ ಹಾಕಲಿಲ್ಲ!
ಅಂದು ಈ ಧಾರಾವಾಹಿಯಲ್ಲಿ ನಟಿಸುವಾಗ ಶರ್ಮಿಳಾ ಅವರು ಶೂಟಿಂಗ್‌ ಹೊರತಾಗಿ ಕೂಡ ಜೀನ್ಸ್‌ ಪ್ಯಾಂಟ್‌, ಟೀ ಶರ್ಟ್‌ ಹಾಕಿರಲಿಲ್ಲ. ಟೇಲರಿಂಗ್‌ ಶಾಪ್‌ಗೆ ಹೋದಾಗ ಅಲ್ಲಿ ಶರ್ಮಿಳಾ ಚಂದ್ರಶೇಖರ್‌ ಅವರು ಜೀನ್ಸ್‌ ಪ್ಯಾಂಟ್‌ ಹಾಕಿದ್ದರು. ಆಗ ಒಬ್ಬರು ಶರ್ಮಿಳಾರನ್ನು ನೋಡಿ, ಸೀತೆ ಧಾರಾವಾಹಿಯಲ್ಲಿ ಆ ರೀತಿ ಇದ್ದೀರಾ, ಇಲ್ಲಿ ಹೀಗೆ ಅಂತ ಹೇಳಿದ್ದರು. ಇದು ಶರ್ಮಿಳಾ ಮನಸ್ಸಿಗೆ ನೋವು ತಂದಿತ್ತು. ಆದ್ದರಿಂದ ಸೀತೆ ಸೀರಿಯಲ್‌ ಅಂತ್ಯ ಆಗುವವರೆಗೂ ಅವರು ಜೀನ್ಸ್‌ ಪ್ಯಾಂಟ್‌, ಟೀ ಶರ್ಟ್‌ ಹಾಕಲಿಲ್ಲ. ಅಷ್ಟೇ ಅಲ್ಲದೆ ಕಾಡಿನಲ್ಲಿ ಶೂಟಿಂಗ್‌ ನಡೆಯುವಾಗ ಮಾತ್ರ ಚಪ್ಪಲಿ ಹಾಕಿ ಹೋಗುತ್ತಿದ್ದರು. ಉಳಿದಂತೆ ಅವರು ಕಾಸ್ಟ್ಯೂಮ್‌ ಹಾಕಿದಾಗ ಚಪ್ಪಲಿ ಧರಿಸುತ್ತಿರಲಿಲ್ಲ. ಧಾರಾವಾಹಿ ಪ್ರಸಾರ ಆಗುತ್ತಿದ್ದ ನಾಲ್ಕು ವರ್ಷಗಳ ಅವರು ಮಾಂಸಾಹಾರ ತಿನ್ನಲಿಲ್ಲ. ಅವರ ಮನೆಯಲ್ಲಿಯೂ ಕೂಡ ಮಾಂಸಾಹಾರ ತಿನ್ನಲಿಲ್ಲವಂತೆ. ಅಷ್ಟೇ ಅಲ್ಲದೆ ಹಳ್ಳಿಯಲ್ಲಿ ಶೂಟಿಂಗ್‌ ನಡೆಯುವಾಗ ಅಜ್ಜಿಯೋರ್ವರು ಶರ್ಮಿಳಾ ಕಾಲಿಗೆ ಬಿದ್ದಿದ್ದರಂತೆ. ಅದನ್ನಂತೂ ಮರೆಯೋಕೆ ಆಗದು ಎನ್ನುತ್ತಾರೆ ಶರ್ಮಿಳಾ. 

View post on Instagram