‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಪೂರ್ಣಿ ಪಾತ್ರದ ಮೂಲಕ ಜನಪ್ರಿಯತೆ ಪಡೆದ ಲಾವಣ್ಯ ಭಾರಧ್ವಜ್ ಹಾಗೂ ‘ಅಮೃತಧಾರೆ’ಯಲ್ಲಿ ಜೀವನ್ ಪಾತ್ರದಲ್ಲಿ ನಟಿಸಿದ್ದ ನಟ ಶಶಿ ಹೆಗ್ಡೆ ಇದೀಗ ಪೋಷಕರಾಗಿ ಭಡ್ತಿ ಪಡೆಯುವ ಸಂಭ್ರಮದಲ್ಲಿದ್ದು, ಆ ವಿಷಯವನ್ನು ಮುದ್ದಾದ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಪೋಷಕರಾಗಿ ಭಡ್ತಿ ಪಡೆಯುವ ಸಂಭ್ರಮದಲ್ಲಿ ಕನ್ನಡ ಕಿರುತೆರೆ ಜೋಡಿ

ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಲ್ಲಿ ಒಬ್ಬರದಾ ಹಾಗೂ ಜೋಡಿ ನಂ 1 ವಿನ್ನರ್ ಕೂಡ ಆಗಿದ್ದ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಪೂರ್ಣಿ ಪಾತ್ರದ ಮೂಲಕ ಜನಪ್ರಿಯತೆ ಪಡೆದ ಲಾವಣ್ಯ ಭಾರಧ್ವಜ್ ಹಾಗೂ ‘ಅಮೃತಧಾರೆ’ಯಲ್ಲಿ ಜೀವನ್ ಪಾತ್ರದಲ್ಲಿ ನಟಿಸಿದ್ದ ನಟ ಶಶಿ ಹೆಗ್ಡೆ ದಂಪತಿಗಳು ಇದೀಗ ಮದುವೆಯಾಗಿ ಹಲವು ವರ್ಷಗಳ ಬಳಿಕ ತಂದೆ-ತಾಯಿಯಾಗಿ ಭಡ್ತಿ ಪಡೆಯುವ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ವಿಡೀಯೋ ಹಂಚಿಕೊಳ್ಳುವ ಮೂಲಕ, ತಮ್ಮ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಡಿಯೋ ಮೂಲಕ ಸಂಭ್ರಮ ಹಂಚಿಕೊಂಡ ಜೋಡಿ

ಲಾವಣ್ಯ ಭಾರಧ್ವಜ್ ಮುದ್ದಾದ ವಿಡಿಯೋ ಹಂಚಿಕೊಂಡು, ನಮ್ಮ ಪ್ರೀತಿಯ ಕಥೆಯಲ್ಲಿ ಒಂದು ಹೊಸ ಅಧ್ಯಾಯ ಶುರುವಾಗ್ತಿದೆ. We are adding a little more LOVE to our FAMILY, ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಬರೆದುಕೊಂಡಿದ್ದಾರೆ. ವಿಡೀಯೋದಕ್ಕಿ ಹಸಿರು ಬಣ್ಣದ ಸೀರೆಯುಟ್ಟು, ಹಣ್ಣುಕಾಯಿ ಬಟ್ಟಲು ಹಿಡಿದು ದೇಗುಲಕ್ಕೆ ಬರುವ ಲಾವಣ್ಯಗೆ, ತಲೆ ತಿರುಗಿದಂತಾದಾಗ, ಕೈಹಿಡಿದು ದೇವರು ಮುಂದೆ ಕರೆದುಕೊಂಡು ಬಂದು, ಪುರೋಹಿತರ ಬಳಿ ಹಣ್ಣು-ಕಾಯಿ ಕೊಟ್ಟು ಪೂಜೆ ಮಾಡಿಸುವ ದೃಶ್ಯ ಇದೆ. ಪುರೋಹಿತರು ಕಾಯಿಯನ್ನು ಒಡೆದು ವಾಪಾಸ್ ಕೊಡುವಾಗ ಹಣ್ಣು ಕಾಯಿ ಬುಟ್ಟಿಯಲ್ಲಿ ತೊಟ್ಟಿಲು ಕಾಯಿ ಎನ್ನುವಂತೆ ತುಂಬಾನೆ ಮುದ್ದಾಗಿ ತೋರಿಸಿದ್ದಾರೆ. ಕೊನೆಗೆ ಜೋಡಿ ನಡೆದುಕೊಂಡು ಮುಂದೆ ಹೋದಂತೆ, ಪುಟ್ಟ ಪಾದವೊಂದು ಅವರನ್ನು ಹಿಂಬಾಲಿಸುವ ಈ ವಿಡಿಯೋವು ಮುದ್ದಿನ ಮಗುವಿನ ಆಗಮನದ ಸಂಭ್ರಮವನ್ನು ಸೂಚಿಸಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

View post on Instagram

ಶುಭಾಶಯ ತಿಳಿಸಿದ ನಟ-ನಟಿಯರು

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದೀಪಿಕಾ ಪಾತ್ರದಲ್ಲಿ ನಟಿಸಿದ ದರ್ಶಿನಿ ಡೆಲ್ಟ ಕಾಮೆಂಟ್ ಮಾಡಿ ಪೂರ್ಣಿ ಕೊನೆಗೂ ತಾಯಿಯಾದೆ, ಇನ್ನೂ ನನ್ನನ್ನು ಯಾರೂ ದೂರೋದಿಲ್ಲ. ಇಬ್ಬರಿಗೂ ಶುಭಾಶಯಗಳು ಎಂದು ಮುದ್ದಾಗಿ ಶುಭ ಕೋರಿದ್ದಾರೆ. ಇನ್ನು ನಟಿಯರಾದ ರುಹಾನಿ ಶೆಟ್ಟಿ, ಚಂದನ ಅನಂತಕೃಷ್ಣ, ಯಶಸ್ವಿನಿ, ಸೇರಿ ಕನ್ನಡ ತೆಲುಗು ಕಿರುತೆರೆಯ ಅಭಿಮಾನಿಗಳು ಸಹ ಶುಭಾಶಯ ಕೋರಿದ್ದಾರೆ.