ಸೈಕೋ ಜಯಂತ್‌ನ ನಿಜ ಬಣ್ಣ ಚಿನ್ನುಮರಿಗೆ ತಿಳಿದಿದೆ. ಮಗುವನ್ನು ಕಳೆದುಕೊಂಡ ದುಃಖದಲ್ಲಿರುವ ಚಿನ್ನುಮರಿ ರೌದ್ರಾವತಾರ ತಾಳಿದ್ದಾಳೆ. ಜಯಂತ್‌ನ ಸೈಕೋ ಕ್ಯಾರೆಕ್ಟರ್ ಡಮ್ಮಿ ಮಾಡಬೇಡಿ ಎಂದು ವೀಕ್ಷಕರು ಕೇಳಿಕೊಂಡಿದ್ದಾರೆ.
ಬೆಂಗಳೂರು: ಕಾಲಕ್ಕೆ ತಕ್ಕಂತೆ ಸುಳ್ಳು ಹೇಳಿಕೊಂಡು, ಬೇಕಾದಗ ವೇಷ ಬದಲಿಸಿಕೊಂಡಿದ್ದ ಜಯಂತ್‌ನ ಸೈಕೋ ಅವತಾರ ಚಿನ್ನುಮರಿ ಮುಂದೆ ಬಯಲಾಗಿದೆ. ಇತ್ತ ಮಗುವನ್ನು ಕಳೆದುಕೊಂಡ ದುಖಃದಲ್ಲಿರುವ ಚಿನ್ನುಮರಿ ರೌದ್ರಾವತಾರ ತಾಳಿ ಕಾಳಿಯಾಗಿದ್ದಾಳೆ. ಜಯಂತ್ ಜಗತ್ತಿನಲ್ಲಿ ಅತಿ ಹೆಚ್ಚು ಪ್ರೀತಿಸುವ ಜೀವ ಅಂದ್ರೆ ಮಡದಿ ಜಾಹ್ನವಿ. ಆಕೆಯ ಪ್ರೀತಿಗಾಗಿ ಕೊಲೆ ಮಾಡಲು ಹಿಂದೇಟು ಹಾಕದ ವ್ಯಕ್ತಿತ್ವ ಜಯಂತ್‌ನದ್ದು. ತನ್ನ ಮೇಲಿನ ಪ್ರೀತಿ ಸ್ವಲ್ಪವೂ ಕಡಿಮೆಯಾಗಬಾರದು ಅನ್ನೋದು ಜಯಂತ್‌ನ ಮಹದಾಸೆ. ಅದಕ್ಕಾಗಿ ಜಾಹ್ನವಿಯ ಪ್ರತಿಯೊಂದು ಚಲನವಲನದ ಮೇಲೆ ನಿಗಾ ಇರಿಸಲು ಮನೆತುಂಬಾ ಕ್ಯಾಮೆರಾ ಇರಿಸಿದ್ದನು. ತಮ್ಮಿಬ್ಬರ ಮಧ್ಯೆ ಬಂದಿದ್ದ ಅಜ್ಜಿಯ ಜೀವ ತೆಗೆಯಲು ಹೋಗಿ ವಿಫಲವಾಗಿದ್ದನು. ಉಪಾಯವಾಗಿ ಜಯಂತ್‌ನ ಮೊಬೈಲ್ ನೋಡಿದ ಜಾಹ್ನವಿಗೆ ಗಂಡನ ಕರಾಳ ಮುಖ ಗೊತ್ತಾಗಿದೆ. ಈ ಶಾಕ್‌ನಿಂದಲೇ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವನ್ನು ಚಿನ್ನುಮರಿ ಕಳೆದುಕೊಂಡಿದ್ದಾಳೆ.
ಮಗು ಕಳೆದಕೊಂಡಿರುವ ವಿಷಯವನ್ನು ಯಾರಿಗೂ ಹೇಳದಂತೆ ಜಯಂತ್ ಬೇಡಿಕೊಂಡಿದ್ದಾನೆ. ಹಾಗಾಗಿ ಪೋಷಕರ ಮುಂದೆಯೂ ಜಾನು ಯಾವ ವಿಷಯವನ್ನು ಹೇಳಿಲ್ಲ. ಇದರಿಂದ ಸೈಕೋ ಗಂಡನ ಮುಂದೆ ರೌದ್ರಾವತಾರ ತಾಳಿರುವ ಜಾನು, ತನ್ನ ಸಿಟ್ಟನ್ನು ಹೊರ ಹಾಕಿದ್ದಾಳೆ. ಇವತ್ತಿನ ನನ್ನ ಸ್ಥಿತಿಗೆ ನೀವೇ ಕಾರಣ. ದಯವಿಟ್ಟು ನನ್ನನ್ನು ಚಿನ್ನುಮರಿ ಎಂದು ಕರೆಯಬೇಡಿ ಎಂದು ಜಾನು ವಾರ್ನ್ ಮಾಡಿದ್ದಾಳೆ.
ಚಿನ್ನುಮರಿ ಎಂದು ಕರೆಯುವ ಅರ್ಹತೆಯನ್ನು ಕಳೆದುಕೊಂಡಿದ್ದೀರಿ. ನನ್ನ ಮಗುವನ್ನು ಕಳೆದುಕೊಂಡು ಹೇಗೆ ನಗುತ್ತಾ ನಾರ್ಮಲ್ ಆಗಿರಲು ಸಾಧ್ಯ. ನೀವು ಸರಿಯಾಗಿ ಇದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ. ನನಗೆ ಮಗು ಆಗುತ್ತೆ ಎಂದು ನಮ್ಮ ಮನೆಯವರೆಲ್ಲರೂ ಎಷ್ಟು ಆಸೆ ಕನಸು ಕಟ್ಟಿಕೊಂಡಿದ್ದಾರೆ. ಅವರಿಗೆಲ್ಲಾ ನಾನು ಉತ್ತರ ಕೊಡಲಿ ಎಂದು ಗಂಡನಿಗೆ ಜಾನು ಪ್ರಶ್ನೆ ಮಾಡಿದ್ದಾಳೆ.
ಇದನ್ನೂ ಓದಿ: ಚಿನ್ನುಮರಿ ಬಾಳಿಗೆ ಬೆಳಕಾಗ್ತಾನಾ ಗೆಳೆಯ ವಿಶ್ವ? ಸೈಕೋ ಜಯಂತ್‌ಗೆ ಕಾದಿದೆ ಮಾರಿಹಬ್ಬ!
ನನ್ನ ಹೊಟ್ಟೆಯಲ್ಲಿರೋ ಮಗುವನ್ನು ನನ್ನ ಗಂಡನೇ ಕಿತ್ಕೊಂಡು ಬಿಟ್ಟ ಎಂದು ಹೇಳಲಾ? ಈ ರೀತಿ ಹೇಳಿದ್ರೆ ನಮ್ಮ ಮನೆಯವರ ಮುಂದೆ ನಿಮ್ಮ ಮರ್ಯಾದೆ ಏನು ಆಗುತ್ತದೆ? ನನ್ನ ಹತ್ತಿರವೇ ಬರಬೇಡಿ. ನಿಮ್ಮ ನೆರಳು ಸೋಕಿ ನನಗೆ ಏನಾದ್ರು ಆಗುತ್ತೆ ಅಂತ ಭಯ ಶುರುವಾಗಿದೆ. ಎಲ್ಲವೂ ನನ್ನ ಹಣೆಬರಹ. ಯಾರಿಗೆ ಏನು ದ್ರೋಹ ಮಾಡಿದ್ದೆನೋ, ಇವಾಗ ಎಲ್ಲವನ್ನು ಅನುಭವಿಸುತ್ತಿದ್ದೇನೆ. ನನ್ನ ಹೊಟ್ಟೆಯಲ್ಲಿ ಮಗು ಇಲ್ಲಾಂದ್ರು ಯಾಕೆ ಈ ರೀತಿ ಸುಳ್ಳು ಹೇಳಿಸುತ್ತಿದ್ದೀರಿ. ಎಲ್ಲಾ ವಿಷಯ ಗೊತ್ತಿದ್ರೂ ನಮ್ಮ ಮನೆಯವರಿಗೆ ಮೋಸ ಮಾಡಿಸುತ್ತಿದ್ದೀರಿ. ಇನ್ಮುಂದೆ ನಮ್ಮಿಬ್ಬರ ಮಧ್ಯೆ ಏನು ಇಲ್ಲ. ನಮ್ಮಿಬ್ಬರ ಮಧ್ಯೆ ಈಗ ಕೇವಲ ಮೌನ ಎಂದು ಹೇಳಿ ಜಾನು ಅಲ್ಲಿಂದ ಹೊರಟು ಹೋಗಿದ್ದಾಳೆ.
ಜಾನು ಇಷ್ಟು ಕಿರುಚಾಡಿದ್ರೂ ಜಯಂತ್ ಏನು ಮಾಡಲಾಗದೇ ಅಸಹಾಯಕನಾಗಿದ್ದಾನೆ. ಕಾರಣ ಪತ್ನಿ ಜಾಹ್ನವಿಯನ್ನು ಆಗಾಧವಾಗಿ ಹುಚ್ಚನಂತೆ ಪ್ರೀತಿಸುತ್ತಾನೆ. ಜೋರಾಗಿ ಕಿರುಚಲು ಸಹ ಜಯಂತ್‌ನಿಂದ ಆಗದೇ ಹಲ್ಲು ಕಚ್ಚಿಕೊಂಡು ಕುಳಿತಿದ್ದಾನೆ. ಈ ದೃಶ್ಯ ನೋಡಿದ ವೀಕ್ಷಕರು, ಜಯಂತ್‌ನ ಜುಟ್ಟು ಜಾನು ಕೈಗೆ ಸಿಕ್ಕಿದೆ. ಆಕೆಯ ಪ್ರೀತಿಯ ಮುಂದೆ ಸೋತಿರುವ ಜಯಂತ್, ಇನ್ಮುಂದೆ ಡಮ್ಮಿ ಆಗ್ತಾನಾ ಅನ್ನೋ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ದಯವಿಟ್ಟು ಜಯಂತ್‌ನ ಸೈಕೋ ಕ್ಯಾರೆಕ್ಟರ್ ಡಮ್ಮಿ ಮಾಡಬೇಡಿ ಅಂತಾನೂ ಜನರು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬರಿದ ಒಡಲಿನಲ್ಲಿ ಬಂದ ಚಿನ್ನುಮರಿ; ಚೆಲುವಿ ಪ್ರಶ್ನೆಗೆ ದಂಗಾದ ಸೈಕೋ ಜಯಂತ್‌ನ ಹೃದಯ ಪುಕ ಪುಕ
