Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾನು ಕ್ಯಾಮೆರಾಗಳನ್ನು ಪತ್ತೆ ಹಚ್ಚಿದ್ದಾಳೆ. ಜಯಂತ್‌ನಿಂದ ಅಜ್ಜಿ ಕೋಮಾಗೆ ಹೋಗಿದ್ದು, ಜಾನು ತವರಿಗೆ ಬಂದಿದ್ದಾಳೆ. ಜಯಂತ್ ಒಬ್ಬಂಟಿಯಾಗಿ ದುಃಖದಲ್ಲಿ ಊಟ ಮಾಡುತ್ತಿದ್ದಾನೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಮತ್ತು ಜಾಹ್ನವಿ ಕಥೆ ನೋಡುಗರಿಗೆ ತುಂಬಾನೇ ಇಷ್ಟವಾಗುತ್ತಿದೆ. ಮನೆಯಲ್ಲಿದ್ದ ಎಲ್ಲಾ ಕ್ಯಾಮೆರಾಗಳನ್ನು ಪತ್ತೆ ಮಾಡಿರುವ ಜಾನು, ಗಂಡನ ವಿರುದ್ಧ ಗರಂ ಆಗಿದ್ದಾಳೆ. ಗಂಡ ಜಯಂತ್ ಏನೇ ಹೇಳಲು ಬಂದರೂ, ಬೆಂಕಿಯುಂಡೆ ಆಗುತ್ತಿದ್ದಾಳೆ ಜಾಹ್ನವಿ. ಆರಂಭದಲ್ಲಿ ಜಯಂತ್ ಏನೇ ಹೇಳಿದರೂ ಜಾಹ್ನವಿ ನಂಬುತ್ತಿದ್ದಳು. ಬಹುತೇಕ ಸಂಚಿಕೆಗಳಲ್ಲಿ ಜಾಹ್ನವಿಯನ್ನು ಮುಗ್ಧ ಹುಡುಗಿಯಾಗಿಯೇ ತೋರಿಸಲಾಗಿತ್ತು. ಆದರೆ ವೀಕ್ಷಕರು ಜಾನು ಪೆದ್ದಿ ಎಂದು ಕಮೆಂಟ್ ಮಾಡುತ್ತಿದ್ದರು. ಇಂದಿನ ಪ್ರೋಮೋ ನೋಡಿದ ನೆಟ್ಟಿಗರು, ಕೊನೆಗೂ ಜಾನು ಬುದ್ದಿವಂತೆ ಆದಳು ಎಂದು ಸಂತೋಷದಿಂದ ಕಮೆಂಟ್ ಮಾಡಿದ್ದಾರೆ.
ಜಯಂತ್‌ನಿಂದಾಗಿ ಕೋಮಾಗೆ ಹೋಗಿರುವ ಅಜ್ಜಿ, ಮಗ ಶ್ರೀನಿವಾಸನ ಮನೆ ಸೇರಿದ್ದಾಳೆ. ಅಜ್ಜಿಗೆ ಪ್ರಜ್ಞೆ ಬಂದ್ರೆ ತನ್ನ ವಿಷಯ ಎಲ್ಲಿ ಬಯಲಾಗುತ್ತೆ ಅನ್ನೋ ಅತಂಕದಲ್ಲಿರುವ ಜಾನು ತವರಿಗೆ ಬಂದು ಉಪಾಯವಾಗಿ ಕ್ಯಾಮೆರಾ ಇರಿಸಿ ಎಸ್ಕೇಪ್ ಆಗಿದ್ದಾನೆ. ಅಜ್ಜಿ ಮಲಗಿರುವ ಕೋಣೆಯಲ್ಲಿ ಕ್ಯಾಮೆರಾ ಇರಿಸಿರೋದು ಶ್ರೀನಿವಾಸ್-ಲಕ್ಷ್ಮೀ ಕುಟುಂಬಕ್ಕೆ ಗೊತ್ತಾಗಿಲ್ಲ. ಇತ್ತ ಜಯಂತ್ ಬಂದು ಹೋದ ಬೆನ್ನಲ್ಲೇ ಜಾನು ಸಹ ತವರಿಗೆ ಬಂದಿದ್ದಾಳೆ. ತನಗಿಂತ ಮುಂಚೆ ಗಂಡ ಜಯಂತ್ ಬಂದು ಹೋಗಿರುವ ವಿಷಯ ಮನೆಯವರಿಂದ ಜಾನುಗೆ ಗೊತ್ತಾಗಿದೆ. ಇತ್ತ ಮೊದಲ ಬಾರಿಗೆ ಜಯಂತ್ ಮತ್ತು ಜಾನು ಬೇರೆ ಬೇರೆಯಾಗಿ ಬಂದಿರೋದು ಮನೆಯವರಲ್ಲಿ ಸಣ್ಣ ಅನುಮಾನ ತರಿಸಿದೆ.
ಜಯಂತ್ ಬಂದು ಅಜ್ಜಿಯ ಆರೋಗ್ಯ ವಿಚಾರಿಸಿಕೊಂಡ ಹೋದ ವಿಷಯ ತಿಳಿಯುತ್ತಲೇ ಜಾಹ್ನವಿ ಅಲರ್ಟ್ ಆಗಿದ್ದಾಳೆ. ಕೂಡಲೇ ಅಜ್ಜಿ ಕೋಣೆಯೊಳಗೆ ತೆರಳಿ, ಏನಾದ್ರೂ ಕ್ಯಾಮೆರಾ ಇದೆಯಾ ಎಂದು ಹುಡುಕಾಡಿದ್ದಾಳೆ. ಫ್ಲವರ್ ಪಾಟ್‌ನಲ್ಲಿ ಜಯಂತ್ ಇರಿಸಿದ್ದ ಜಯಂತ್ ರಹಸ್ಯ ಕ್ಯಾಮೆರಾ ಜಾಹ್ನವಿಗೆ ಸಿಕ್ಕಿದೆ. ಈ ಪ್ರೋಮೋ ನೋಡಿರುವ ಧಾರಾವಾಹಿ ವೀಕ್ಷಕರು, ಅಯ್ಯೋ ದೇವರೇ ಜಾನು ತುಂಬಾ ಬುದ್ದಿವಂತೆ ಅಗೋದ್ಲು, ಹೊಡಿರಿ ಚಪ್ಪಾಳೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸುಮ್ಮನಿರಿ ಜಯಂತ್ ಗೆ ಹೀಗೇ ಆಗುತ್ತೆ ಅಂತ ಮೊದಲೇ ಗೊತ್ತಿದೆ. ಅದಕ್ಕೆ ಅಣ್ಣಾ ಇನ್ನೂ ಒಂದು ಒರಿಜಿನಲ್ ಕ್ಯಾಮರಾ ಬೇರೆ ಕಡೆ ಇಟ್ಟಿರ್ತಾನೆ ನೋಡಿ ಬೇಕಿದ್ರೆ ಎಂದು ಮುಂದಿನ ದೃಶ್ಯ ಹೀಗೆ ಇರುತ್ತೆ ಎಂದು ಊಹಿಸಿದ್ದಾರೆ.
ಇದನ್ನೂ ಓದಿ: ಹುಚ್ಚಿಯಾಗಿ ಜಯಂತ್‌ನ ಬಂಗಾರದ ಪಂಜರದಿಂದ ಹೊರ ಬಂದ ಜಾನು; ವಿಶ್ವನ ಬಳಿ ಹೋಗ್ತಾಳಾ ಚಿನ್ನುಮರಿ?
ಸೈಕೋ ಜಯಂತ್‌ನ ಕೆಟ್ಟ ಸಮಯ ಶುರುವಾಯ್ತು. ಇನ್ಮೇಲೆ ಚಿನ್ನುಮರೀನ ಯಾಮಾರಿಸೋಕೆ ಆಗಲ್ಲ. ಸಿಕ್ ಬಿದ್ದ ಸೈಕೋ, ಜಾನು ಸೂಪರ್, ನಮ್ಮ ಚಿನ್ನಮರಿ ಈಗ ಬುದ್ದಿಮರಿ ಆಗ್ತಿದೆ ಅನ್ನೋದೇ ನಮಗೆ ಸಂತೋಷ ಎಂದು ಧಾರಾವಾಹಿ ವೀಕ್ಷಕರು ತಮಾಷೆಯಾಗಿ ಪ್ರೋಮೋ ವಿಡಿಯೋಗೆ ಕಮೆಂಟ್ ಮಾಡುತ್ತಿದ್ದಾರೆ.
ಒಂಟಿಯಾದ ಜಯಂತ್
ಮತ್ತೊಂದೆಡೆ ಮನೆಗೆ ಬಂದ ಜಯಂತ್‌ಗೆ ಶಾಕ್ ಕಾದಿತ್ತು. ಮತ್ತೆ ಜಾನು ಕಾಣದೇ ಇರೋದನ್ನು ಕಂಡು ಆತಂಕಕ್ಕೊಳಗಾಗಿರುವ ಜಯಂತ್ ಒಬ್ಬನೇ ಮಾತನಾಡಿಕೊಳ್ಳುತ್ತಿದ್ದಾನೆ. ಜಾನು ಮನೆಗೆ ಬಂದಿರುವ ವಿಷಯವನ್ನು ಶ್ರೀನಿವಾಸ್ ಅಳಿಯ ಜಯಂತ್‌ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಇದರಿಂದ ಒಂಟಿಯಾಗಿರುವ ಜಯಂತ್ ಒಬ್ಬನೇ ಕುಳಿತು ದುಃಖದಲ್ಲಿಊಟ ಮಾಡುತ್ತಿದ್ದಾನೆ.
ಇದನ್ನೂ ಓದಿ: ಜಾನು ತವರಿನಲ್ಲಿಯೂ ಜಯಂತ್‌ನ ಕಿತಾಪತಿ; ಚಿನ್ನುಮರಿಗೆ ವಿಷ್ಯ ಗೊತ್ತಾದ್ರೆ ಉಳಿಗಾಲವೇ ಇಲ್ಲ!
