ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾ ಪಾತ್ರಧಾರಿ ದಿಶಾ ಮದನ್ ರಿಯಲ್ ಲೈಫ್‌ನಲ್ಲಿ ಇಬ್ಬರು ಮಕ್ಕಳ ತಾಯಿ. ಅವರು ಡಾನ್ಸ್ ಇಂಡಿಯಾ ಡಾನ್ಸ್‌ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಸಿದ್ದೇಗೌಡ್ರ ಪಾತ್ರದಲ್ಲಿ ಧನಂಜಯ್ ನಟಿಸಿದ್ದಾರೆ. ರಂಗಭೂಮಿ ಕಲಾವಿದರಾಗಿರುವ ಇವರು ಕನಕ ಪುಷ್ಪ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ದಿಶಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಕರ್ನಾಟಕ ವಿಮೆನ್ ಅಚೀವರ್ಸ್ ಅವಾರ್ಡ್ ಪಡೆದಿದ್ದಾರೆ.
ಲಕ್ಷ್ಮೀ ನಿವಾಸದ ಭಾವನಾ ರೋಲ್ ಹಲವರಿಗೆ ಇಷ್ಟವಾಗುತ್ತಿದೆ. ಸದಾ ಸೀರೆಯನ್ನುಟ್ಟು ಸಿಂಪಲ್ ಆಗಿ ಡ್ರೆಸ್ ಮಾಡಿಕೊಂಡಿರುವ ಭಾವನಾ ಮದುವೆಯಾದರೂ ದಾಂಪತ್ಯ ಜೀವನ ನಡೆಸದಾಕೆ. ಗಟ್ಟಿಗಿತ್ತಿಯಾದರೂ, ಈಗಷ್ಟೇ ಪತಿಯ ಮೇಲೆ ಲವ್ ಶುರುವಾಗಿದೆ. ಆದರೂ ಈಕೆಯ ಕ್ಯಾರೆಕ್ಟರ್ ಅಂದ್ರೆ ಅಭಿಮಾನಿಗಳಿಗೆ ಅದೇನೊ ಒಂಥರಾ ಇಷ್ಟ. ಭಾವನಾಳ ರಿಯಲ್ ಹೆಸರು ದಿಶಾ ಮದನ್. ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಗಂಡ-ಹೆಂಡತಿ ಒಂದಾಗಿಲ್ಲ ನಿಜ. ಆದರೆ ಅಸಲಿ ಜೀವನದಲ್ಲಿ ದಿಶಾ ಅವರಿಗೆ ಇಬ್ಬರು ಮಕ್ಕಳು. ಕನ್ನಡ ಕಿರುತೆರೆಯಲ್ಲಿ ಕಳೆದ ಒಂದು ದಶಕದಿಂದಲೂ ನಟಿ ದಿಶಾ ಮದನ್ ಕಾಣಿಸಿಕೊಳ್ಳುತ್ತಿದ್ದಾರೆ. ಡಾನ್ಸ್ ಇಂಡಿಯಾ ಡಾನ್ಸ್, ಇಸ್ಮಾರ್ಟ್ ಸೂಪರ್ ಜೋಡಿ ಸೇರಿದಂತೆ ಕೆಲವು ರಿಯಾಲಿಟಿ ಷೋಗಳಲ್ಲಿಯೂ ಕಾಣಿಸಿಕೊಂಡಿದ್ದರು. ಶಶಾಂಕ್ ವಾಸುಕಿ ಅವರನ್ನು ಮದುವೆಯಾದ ಬಳಿಕ ಚಿಕ್ಕ ಗ್ಯಾಪ್ ತೆಗೆದುಕೊಂಡಿದ್ದ ನಟಿ ಮತ್ತೆ ಲಕ್ಷ್ಮೀ ನಿವಾಸದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು, ಭಾವನಾಳ ಗಂಡ ಸಿದ್ಧೇಗೌಡ್ರ ಪಾತ್ರದಲ್ಲಿ ಎಲ್ಲರ ಮನಸ್ಸನ್ನು ಕದ್ದವರು ಧನಂಜಯ್. ಪತ್ನಿಯನ್ನು ಮೇಡಮ್ ಅವ್ರೇ ಎಂದು ಸಂಬೋಧಿಸುತ್ತಲೇ ಸೀರಿಯಲ್ನಲ್ಲಿ ಪತ್ನಿಯ ಮನಸ್ಸನ್ನೂ ಕದಿಯುತ್ತಿದ್ದಾರೆ. ಇದೀಗ ಭಾವನಾ ಮತ್ತು ಸಿದ್ಧೇಗೌಡ್ರು ಸೇರಿ ರೀಲ್ಸ್ ಮಾಡಿದ್ದಾರೆ. ಇದನ್ನು ನೋಡಿದವರು ಸೋ ಕ್ಯೂಟ್ ಎನ್ನುತ್ತಿದ್ದಾರೆ.
ಮಗಳ ಜೊತೆ ಸಕತ್ ರೀಲ್ಸ್ ಮಾಡಿದ ಲಕ್ಷ್ಮೀ ನಿವಾಸ ಗರತಿ ಭಾವನಾ: ಹೇಗಿದೆ ನೋಡಿ ಈ ಸ್ಟೈಲ್?
ನಾಟಕಗಳಲ್ಲಿ ಗುರುತಿಸಿಕೊಂಡಿದ್ದ ಧನಂಜಯ ಅವರು, ಡ್ಯಾನ್ಸರ್ ಕೂಡ ಹೌದು, ಸಿನಿಮಾದಲ್ಲೂ ನಟಿಸಿದ್ದಾರೆ. ಆದರೆ ಇವರಿಗೆ ಹೆಸರು ತಂದು ಕೊಟ್ಟದ್ದು ಮಾತ್ರ ಲಕ್ಷ್ಮೀ ನಿವಾಸದ ಸಿದ್ದೇಗೌಡರ ಪಾತ್ರ. ರಂಗಭೂಮಿ ಕಲಾವಿದರಾಗಿರುವ ಧನಂಜಯ ಅವರಿಗೆ ಬಾಲ್ಯದಲ್ಲೇ ನಟನೆ ಮೇಲೆ ಸಿಕ್ಕಾಪಟ್ಟೆ ಒಲವು. ಹಾಗಾಗಿ ಕಳೆದ 12 ವರ್ಷಗಳಿಂದ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಾತ್ರಗಳ ಅವಕಾಶಕ್ಕಾಗಿ ತುಂಬಾನೆ ಆಡಿಶನ್ ಕೊಟ್ಟಿದ್ದರಂತೆ, ರಿಜೆಕ್ಟ್ ಆಗಿದ್ದೇ ಹೆಚ್ಚಂತೆ ಡಿಜೆ. ಕೊನೆಗೆ ಲಕ್ಷ್ಮೀ ನಿವಾಸದ ಸಿದ್ದೇ ಗೌಡರ ಪಾತ್ರ ಸಿಕ್ಕಿದ್ದು, 12 ವರ್ಷದ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಂತೆ ಎನ್ನುತ್ತಾರೆ ಧನಂಜಯ್. ಧನಂಜಯ್ ಈಗಾಗಲೇ ವಾಸಂತಿ ನಲಿದಾಗ, ಜಿಲ್ ಜಿಲ್ ಸೇರಿ ಒಂದಿಷ್ಟು ಸ್ಯಾಂಡಲ್ ವುಡ್ (sandalwood) ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದು, ಇದೀಗ ಮೊದಲ ಬಾರಿಗೆ ಕನಕ ಪುಷ್ಫ ಹೀರೋ ಆಗಿ ಎಂಟ್ರಿ ಕೊಡ್ತಿದ್ದಾರಂತೆ ಡಿಜೆ. ಚಿತ್ರದ ಶೂಟಿಂಗ್ ಮುಗಿದಿದ್ದು, ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಅಂದಹಾಗೆ, ಈ ಸೀರಿಯಲ್ನಲ್ಲಿ ಗರತಿ ಗೌರಮ್ಮನ ರೀತಿ ಇರೋ ಭಾವನಾ ಅರ್ಥಾತ್ ದಿಶಾ ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಇದ್ದು, ಹಾಟ್ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಇವರನ್ನು ಮೊದಲಿಗೆ ನೋಡದವರು ನಿಜಕ್ಕೂ ಈಕೆ ಭಾವವನಾ ಎಂದು ಅಚ್ಚರಿಪಟ್ಟುಕೊಳ್ಳುವುದು ಉಂಟು. ಹಾಗಿರುತ್ತೆ ಇವರ ಗೆಟಪ್. ಇನ್ನು ದಿಶಾ ಕುರಿತು ಹೇಳುವುದಾದರೆ ಇವರು ಬೆಳ್ಳಿ ಪರದೆಯ ಮೇಲೂ ಮಿಂಚಿದ್ದಾರೆ. ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲಿ ನಟಿಸಿದ್ದಾರೆ. 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ವೆಬ್ ಸೀರೀಸ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇನ್ನೂ ಒಂದು ವಿಶೇಷ ಎಂದರೆ ಈಚೆಗಷ್ಟೇ ದಿಶಾ ಅವರಿಗೆ ಕರ್ನಾಟಕ ವಿಮೆನ್ ಅಚೀವರ್ಸ್ ಅವಾರ್ಡ್ ಲಭಿಸಿತ್ತು. 2024ನೇ ಸಾಲಿನ ಪ್ರಶಸ್ತಿ ಇವರ ಪಾಲಿಗೆ ಬಂದಿದೆ. ನಟಿಯ ನಟನಾ ಪಯಣವನ್ನು ಗಮನಿಸಿ, ಈ ಪ್ರಶಸ್ತಿ ನೀಡಲಾಗಿದೆ.
ನವವಧು ಚಂದನಾಗೆ ಪ್ರಾಂಕ್ ಕಾಲ್ ಮಾಡಿ ಸುಸ್ತು ಮಾಡಿದ ಲಕ್ಷ್ಮೀ ನಿವಾಸ ಸೈಕೋ ಜಯಂತ್! ಹೀಗಿತ್ತು ನೋಡಿ ಮಜಾ

