"ಲಕ್ಷ್ಮೀ ನಿವಾಸ" ಧಾರಾವಾಹಿಯ ಜಯಂತ್ ಪಾತ್ರಧಾರಿ ದೀಪಕ್ ಸುಬ್ರಹ್ಮಣ್ಯ, ಚಿನ್ನುಮರಿಯ ನಿಜ ಜೀವನದ ವಿವಾಹದ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಜನರು ಧಾರಾವಾಹಿ ಪಾತ್ರಗಳನ್ನು ನಿಜವೆಂದು ಭಾವಿಸಿ ಪ್ರತಿಕ್ರಿಯಿಸುವುದರಿಂದ ತಮಗೆ ಎದುರಾಗುವ ತೊಂದರೆಗಳನ್ನು ವಿವರಿಸಿದ್ದಾರೆ. ಚಿನ್ನುಮರಿಯ ನಿಶ್ಚಿತಾರ್ಥಕ್ಕೆ ಹೋದಾಗ ಜನರು ತಮಾಷೆ ಮಾಡಿದ್ದು, ಬುದ್ಧಿಮಾತು ಹೇಳಿದ್ದು, ಕೆಲವರು ನಿಶ್ಚಿತಾರ್ಥ ನಿಲ್ಲಿಸಲು ಹೇಳಿದ್ದನ್ನು ಹಾಸ್ಯಮಯವಾಗಿ ನೆನಪಿಸಿಕೊಂಡಿದ್ದಾರೆ. ಕುಟುಂಬದವರ ಬೆಂಬಲವೇ ಮುಖ್ಯ ಎಂದಿದ್ದಾರೆ.

ಸೀರಿಯಲ್​ಗಳು ಅಂದ್ರೆ ಹಾಗೇನೇ. ಅಲ್ಲಿರುವ ಪಾತ್ರಧಾರಿಗಳನ್ನೇ ನಿಜವಾದ ಜೋಡಿ ಅಂದುಕೊಳ್ಳುವ ಹಲವಾರು ಮಂದಿ ಇದ್ದಾರೆ. ಅದೇ ಕಾರಣಕ್ಕೆ ವಿಲನ್​ ರೋಲ್​ ಮಾಡಿದವರಿಗೆ ಹೊರಗಡೆ ಓಡಾಡುವುದೂ ಕಷ್ಟ ಎನ್ನಿಸುವುದು ಉಂಟು. ಕಂಡ ಕಂಡಲ್ಲಿ ಅವರಿಗೆ ಹಿಡಿಶಾಪ ಹಾಕುವವರೇ ಹೆಚ್ಚು. ಇನ್ನು ಒಂದು ಸೀರಿಯಲ್ ಹಿಟ್​ ಆಯಿತು ಎಂದ ತಕ್ಷಣ ಅದರಲ್ಲಿ ನಾಯಕ-ನಾಯಕಿನೇ ನಿಜ ಜೀವನದ ಜೋಡಿ ಎಂದುಕೊಂಡು ಬಿಡುತ್ತಾರೆ. ಅವರಿಗೆ ಮದುವೆಯಾಗಲಿಲ್ಲ ಎಂದರಂತೂ ಮುಗಿದೇ ಹೋಯ್ತು. ಇಬ್ಬರನ್ನು ಮದುವೆ ಮಾಡಿಸಿಯೇ ಬಿಡುತ್ತಾರೆ. ಇನ್ನು ಲಕ್ಷ್ಮೀ ನಿವಾಸ ಚಿನ್ನುಮರಿ ಅಂದ್ರೆ ನಟಿ ಚಂದನಾ ಅನಂತಕೃಷ್ಣ ಅವರ ಮದುವೆ ಈಚೆಗಷ್ಟೇ ಆಗಿದ್ದು, ಅದರ ಕುತೂಹಲದ ಸ್ಟೋರಿಯನ್ನು ತೆರೆದಿಟ್ಟಿದ್ದಾರೆ ಜಯಂತ್​ ಪಾತ್ರಧಾರಿ ದೀಪಕ್​ ಸುಬ್ರಹ್ಮಣ್ಯ. ಯೂಟ್ಯೂಬ್​ಗೆ ನೀಡಿರುವ ಸಂದರ್ಶನದಲ್ಲಿ ಅವರು ಕುತೂಹಲದ ಅಂಶವನ್ನು ಹೇಳಿದ್ದಾರೆ. ಅಷ್ಟಕ್ಕೂ ಚಂದನಾ ಅಥವಾ ದೀಪಕ್​ ಎಂದರೆ ಸೀರಿಯಲ್​ ಪ್ರಿಯರಿಗೆ ಅರ್ಥವಾಗಲ್ಲ, ಚಿನ್ನುಮರಿ ಮತ್ತು ಜಯಂತ್​ ಎಂದಾಕ್ಷಣ ಯಾರು ಎನ್ನುವುದು ಅರ್ಥವಾಗುತ್ತದೆ. ಅಷ್ಟು ಫೇಮಸ್​ ಆಗಿದೆ ಈ ಸೀರಿಯಲ್​.

 ಸೀರಿಯಲ್​ ವೀಕ್ಷಕರಿಗೆ ತಿಳಿದಿರುವಂತೆ, ಜಯಂತ್​ ಸೈಕೋ. ತಮ್ಮನ್ನು ಹುಚ್ಚನಂತೆ ಪ್ರೀತಿಸೋ ಗಂಡ ಬೇಕು ಎಂದು ಬಯಸುವ ಹೆಣ್ಣುಮಕ್ಕಳು ಈ ಜಯಂತ್​ನನ್ನು ಒಮ್ಮೆ ನೋಡಿಬಿಟ್ಟರೆ ಲೈಫ್​ನಲ್ಲಿ ಮದ್ವೆನೇ ಬೇಡಪ್ಪಾ ಎನ್ನುತ್ತಾರೆ. ಅಂಥ ಕ್ಯಾರೆಕ್ಟರ್​ ಈತನದ್ದು. ಏಕೆಂದರೆ ಈ ಸೀರಿಯಲ್​ ನಾಯಕ ಜಯಂತ್​ ಸೈಕೋಪಾತ್​ ಎನ್ನುವುದು ಈ ಸೀರಿಯಲ್​ ವೀಕ್ಷಕರಿಗೆ ಗೊತ್ತು. ಈತನಿಗೆ ಪತ್ನಿಯ ಮೇಲೆ ಅದೆಷ್ಟು ಪ್ರೀತಿ ಎಂದರೆ ಅದೇ ಮುಳ್ಳಾಗುತ್ತಿದೆ. ಏಕೆಂದರೆ, ಈತನಿಗೆ ಪತ್ನಿಯ ಮೇಲೆ ಇರುವುದು ಕೇವಲ ಪ್ರೀತಿ ಅಲ್ಲ, ಇದು Obsessive Love Disorder. ಇದೇ ಕಾರಣಕ್ಕೆ ಪ್ರತಿ ಕ್ಷಣವೂ ಆತನಿಗೆ ಪತ್ನಿಯ ಮೇಲೆ ಸಂಶಯ. ಹಾಗೆಂದು ಸಂಶಯದ ಪಿಶಾಚಿ ಎಂದಲ್ಲ. ಕೆಲವು ಗಂಡಸರಿಗೆ ಮತ್ತು ಹೆಂಗಸರಿಗೆ ಕೂಡ ಸಂಶಯ ಎನ್ನುವುದು ಇರುತ್ತದೆ. ಪತಿ-ಪತ್ನಿ ಯಾರ ಜೊತೆಯಾದ್ರೂ ನಗುತ್ತಾ ಮಾಡಿದರೆ ಅದನ್ನು ಸಹಿಸುವುದಿಲ್ಲ. ಆದರೆ ಇಲ್ಲಿ ಜಯಂತ್​ ಕ್ಯಾರೆಕ್ಟರ್​ ಹಾಗಲ್ಲ. ಈತನಿಗೆ ಇರುವುದು ಪ್ರೇಮದ ಗೀಳು. ಪತ್ನಿಗೆ ಏನು ಬೇಕೋ ಎಲ್ಲವನ್ನೂ ಮಾಡುತ್ತಾನೆ. ಆದರೆ ಆಕೆ ಮಾತ್ರ ತನ್ನವಳಾಗಿಯೇ ಇರಬೇಕು ಎನ್ನುವ ಸ್ಥಿತಿ.

ಈಕೆ ಫೋಟೋ ನೋಡಿದಾಗ ಮದ್ವೆಯಾಗಲ್ಲ ಅಂದೆ: ಗುಟ್ಟೊಂದು ರಟ್ಟು ಮಾಡಿದ 'ಚಿನ್ನುಮರಿ' ರಿಯಲ್​ ಪತಿ!

 ಕಳೆದ ತಿಂಗಳು ಚಿನ್ನುಮರಿ ಪಾತ್ರಧಾರಿ ಚಂದನಾ ಅವರ ಮದುವೆಯಾಯಿತು. ಅವರ ನಿಶ್ಚಿತಾರ್ಥಕ್ಕೆ ದೀಪಕ್​ ಸುಬ್ರಹ್ಮಣ್ಯ ಅವರೂ ಹೋಗಿದ್ದರು. ಅಂದಹಾಗೆ ದೀಪಕ್​ ಅವರಿಗೂ ಇದಾಗಲೇ ಮದುವೆಯಾಗಿದೆ. ದಂಪತಿ ಸಹಿತ ಎಂಗೇಜ್​ಮೆಂಟ್​ಗೆ ಹೋಗಿದ್ದರು. ಆ ಸಮಯದಲ್ಲಿ, ಚಿನ್ನುಮರಿಯನ್ನು ಜಯಂತ್​ ಏನ್​ ಮಾಡ್ತಾನೆ ಎಂಬೆಲ್ಲಾ ಮೀಮ್ಸ್​ ಹರಿದಾಡುತ್ತಿತ್ತು. ಈ ಬಗ್ಗೆ ಈಗ ಮಾತನಾಡಿರುವ ದೀಪಕ್​ ಅವರು, ನಾನು ಎಂಗೇಜ್​ಮೆಂಟ್​ಗೆ ಹೋದಾಗ, ಎಂಗೇಜ್​ಮೆಂಟ್​ ನಿಲ್ಸೋಕೆ ಬಂದ್ಯಪ್ಪಾ ಎಂದು ಕೇಳಿದವರೂ ಇದ್ದಾರೆ. ಇನ್ನು ಕೆಲವರು ನನಗೆ ಬುದ್ಧಿಮಾತು ಹೇಳಿರೋದು ಉಂಟು. ಯಾಕೆ ಹೀಗೆ ಇದ್ಯಾ, ಅಜ್ಜಿಯನ್ನು ಸಾಯಿಸೋಕೆ ಯಾಕೆ ಹೋಗ್ತಿಯಾ ಎಂದೆಲ್ಲಾ ಕೇಳ್ತಾರೆ. ಅದು ರಿಯಲ್​ ಅಲ್ಲಿ ನಾನಲ್ಲ, ನನ್ನ ಕ್ಯಾರೆಕ್ಟರ್​ ಅಂದ್ರೂ ಕೆಲವರಿಗೆ ಅದು ಅರ್ಥವಾಗಲ್ಲ ಎಂದಿದ್ದಾರೆ. 

ಚಂದನಾ ಅವರ ಪತಿ ಕೂಡ ತುಂಬಾ ಸ್ಪೋರ್ಟೀವ್​ ಆಗಿದ್ದಾರೆ. ನನ್ನ ಪತ್ನಿಗೂ ಇದೆಲ್ಲಾ ಅರ್ಥವಾಗತ್ತೆ. ಅದಕ್ಕಾಗಿ ಎಲ್ಲಾ ತಮಾಷೆಯಾಗಿ ತೆಗೆದುಕೊಳ್ಳುತ್ತಾರೆ. ನನ್ನ ಅತ್ತೆ- ಮಾವನಿಗೂ ನನ್ನ ನಟನೆ ಬಗ್ಗೆ ಗೊತ್ತಿರುವುದರಿಂದ ಎಲ್ಲಾ ಸಪೋರ್ಟ್​ ಮಾಡ್ತಾರೆ. ಸಮಸ್ಯೆ ಆಗಲ್ಲ. ಇಂಥ ಸಮಯದಲ್ಲಿ ಫ್ಯಾಮಿಲಿ ಸಪೋರ್ಟ್​ ಇರಬೇಕು ಅಷ್ಟೇ. ಸೀರಿಯಲ್​ಗಳನ್ನೇ ರಿಯಲ್​ ಅಂದುಕೊಂಡು ವೀಕ್ಷಕರು ಏನೇನೋ ಹೇಳುವುದು ಇದೆ. ಅವೆಲ್ಲಾ ಫ್ಯಾಮಿಲಿ ಅರ್ಥ ಮಾಡಿಕೊಳ್ಳುವುದು ಮುಖ್ಯ ಆಗುತ್ತದೆ. ಆದ್ದರಿಂದ ನನಗೇನೂ ಸಮಸ್ಯೆ ಇಲ್ಲ. ಆದರೆ ಈ ಕ್ಯಾರೆಕ್ಟರ್​ ಬಗ್ಗೆ ಹೋದಲ್ಲಿ, ಬಂದಲ್ಲಿ ಕ್ಲಾಸ್​ ತೆಗೆದುಕೊಳ್ಳುವವರು ಮಾತ್ರ ಹೆಚ್ಚು ಇದ್ದಾರೆ ಎಂದಿದ್ದಾರೆ.

ಪತಿ ಎದುರು ಲಕ್ಷ್ಮೀನಿವಾಸ ಚಿನ್ನುಮರಿ ನವರಸ ಪ್ರದರ್ಶನ! ಪತ್ನಿಯ ಅಭಿನಯಕ್ಕೆ ಮನಸೋತ ಪ್ರತ್ಯಕ್ಷ್