ಲಕ್ಷ್ಮೀ ನಿವಾಸ ಧಾರಾವಾಹಿಯ ಹರೀಶ್ ಪಾತ್ರಧಾರಿ ಅಜಯ್ ರಾಜ್ ಶೀಘ್ರದಲ್ಲೇ ತಂದೆಯಾಗಲಿದ್ದಾರೆ. ಪತ್ನಿ ಪದ್ಮಿನಿ ದೇವನಹಳ್ಳಿ ಏಳು ತಿಂಗಳ ಗರ್ಭಿಣಿ. ಏಪ್ರಿಲ್‌ನಲ್ಲಿ ಮಗುವಿನ ನಿರೀಕ್ಷೆಯಿದೆ. ದಂಪತಿ ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದು, ಶುಭಾಶಯಗಳು ಹರಿದುಬರುತ್ತಿವೆ.
ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡ ನಟ ಅಂದ್ರೆ ಅದು ಅಜಯ್ ರಾಜ್ (Ajay Raj). ಇವರು ಬಾಲ ನಟರಾಗಿ ಸಿನಿಮಾದಲ್ಲಿ ಎಂಟ್ರಿ ಕೊಟ್ಟು, ಬಳಿಕ ಸಿನಿಮಾ, ಸೀರಿಯಲ್ ಎಂದು ಹಲವು ವರ್ಷಗಳಿಂದ ನಟರಾಗಿ ಜನಪ್ರಿಯತೆ ಪಡೆದಿದ್ದಾರೆ. ಸದ್ಯ ಅಜಯ್ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದಲ್ಲಿ (Lakshmi Nivasa) ಲಕ್ಷ್ಮೀ ಮತ್ತು ಶ್ರೀನಿವಾಸರ ಕಿರಿಯ ಪುತ್ರ ಹರೀಶನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸಣ್ಣವರಾಗಿದ್ದಾಗಲೇ ಹಳ್ಳಿಮೇಷ್ಟ್ರು ಚಿತ್ರದಲ್ಲಿ ಸಿಲ್ಕ್ ಸ್ಮಿತಾ ಜೊತೆ ನಟಿಸಿದ್ರು ಲಕ್ಷ್ಮೀ ನಿವಾಸದ ಈ ನಟ
ಹರೀಶ್ ಪಾತ್ರ ನಿಮಗೆ ಗೊತ್ತಿರಬಹುದು ಅಲ್ವಾ? ಖಂಡಿತಾ ಗೊತ್ತಿರುತ್ತೆ. ಶ್ರೀಮಂತ ಮನೆತನದ ಹುಡುಗಿಯನ್ನು ಮದುವೆಯಾಗಿ, ಕೈಯಲ್ಲಿ ಕೆಲಸ ಇಲ್ಲದೇ, ಸದಾ ಹೆಂಡತಿಯ ಸೆರಗು ಹಿಡಿದು, ಹಿಂದೆ ಮುಂದೆ ಓಡಾಡುವ ಪಾತ್ರ ಇವರದ್ದು, ಕೈಯಲ್ಲಿ ಹಣ ಇಲ್ಲದಿದ್ದರೂ, ಸಾಲ ಮಾಡಿ ಬ್ಯುಸಿನೆಸ್ ಮಾಡಿ ಒಂದು ಸಲ ಕೈ ಸುಟ್ಟುಕೊಂಡು, ಇದೀಗ ಚೀಟಿ ಮಾಡಿ, ಹೆಂಡತಿಯ ಒಡವೆಗಳನ್ನೇ ಮಾರಿ, ಡುಪ್ಲಿಕೇಟ್ ಒಡವೆ ಇಟ್ಟು ಮೋಸ ಮಾಡುತ್ತಿರುವ ಸೋಂಬೇರಿ ಹರೀಶ್. ಸೀರಿಯಲ್ ನಲ್ಲಿ ಬೇಬಿ ಬೇಬಿ ಎಂದು ಹೆಂಡತಿಯ ಹಿಂದೆ ಓಡುತ್ತಿರುವ ಹರೀಶ್ ಆಲಿಯಾಸ್ ಅಜಯ್ ರಾಜ್ ಅವರು ನಿಜ ಜೀವನದಲ್ಲಿ ಬೇಬಿಯ (expecting baby) ಬರುವಿಕೆ ಕಾಯುತ್ತಿದ್ದಾರೆ.
ತರಾತುರಿಯಲ್ಲಿ ಮುಕ್ತಾಯಗೊಂಡ ‘ಹಿಟ್ಲರ್ ಕಲ್ಯಾಣ’: ಕ್ಲೈಮಾಕ್ಸ್‌ಗೆ ಕಿಡಿ ಕಾರಿದ ಪ್ರೇಕ್ಷಕರು
ಹೌದು, ನಟ ಅಜಯ್ ರಾಜ್ ತಂದೆಯಾಗುವ ಸಂಭ್ರಮದಲ್ಲಿದ್ದಾರೆ. ಅಜಯ್ ರಾಜ್ ಪತ್ನಿಯ ಸೀಮಂತರ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರ ಜೊತೆಗೆ Adventures in parenting.... Coming Soon! ಎಂದು ಬರೆದುಕೊಂಡಿದ್ದಾರೆ. ಅಜಯ್ ರಾಜ್ ಪತ್ನಿ ಪದ್ಮಿನಿ ದೇವನಹಳ್ಳಿ ಕೂಡ ನಟಿಯಾಗಿದ್ದು, ಕನ್ನಡ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಇವರು ಕೊನೆಯದಾಗಿ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿಯಲ್ಲಿ ಸರಸ್ವತಿಯ ಪಾತ್ರದಲ್ಲಿ ನಟಿಸಿದ್ದರು. ಸದ್ಯ ಈ ಸೆಲೆಬ್ರಿಟಿ ಜೋಡಿ ಪೋಷಕರಾಗಿ ಭಡ್ತಿ ಪಡೆಯುವ ಸಂಭ್ರಮದಲ್ಲಿದ್ದಾರೆ. ಇವರ ಸೀಮಂತದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪದ್ಮಿನಿಯವರಿಗೆ (Padmini Devanahalli) ಇದೀಗ 7 ತಿಂಗಳು ನಡೆಯುತ್ತಿದ್ದು, ಎಪ್ರಿಲ್ ತಿಂಗಳಲ್ಲಿ ಡೆಲಿವರಿ ಡೇಟ್ ನೀಡಲಾಗಿದ್ದು, ಈ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಪೋಷಕರಾಗಲಿರುವ ಈ ಜೋಡಿಗೆ ಕನ್ನಡ ಕಿರುತೆರೆ, ಹಿರಿತೆರೆಯ ನಟರು, ಅಭಿಮಾನಿಗಳು ಹಾಗೂ ಸ್ನೇಹಿತರು ಶುಭಾಶಯ ಕೋರಿದ್ದಾರೆ.
