ತರಾತುರಿಯಲ್ಲಿ ಮುಕ್ತಾಯಗೊಂಡ ‘ಹಿಟ್ಲರ್ ಕಲ್ಯಾಣ’: ಕ್ಲೈಮಾಕ್ಸ್‌ಗೆ ಕಿಡಿ ಕಾರಿದ ಪ್ರೇಕ್ಷಕರು
ಕಳೆದ ಎರಡೂವರೆ ವರ್ಷಗಳಿಂದ ಸುಮಾರು 694 ಎಪಿಸೋಡ್ ಗಳಲ್ಲಿ ಪ್ರಸಾರವಾಗಿ, ಅಪಾರ ಜನಮನ್ನಣೆ ಪಡೆದ ಹಿಟ್ಲರ್ ಕಲ್ಯಾಣ ಧಾರಾವಾಹಿ ಮುಕ್ತಾಯಗೊಂಡಿದ್ದು, ಪ್ರೇಕ್ಷಕರು ಮಾತ್ರ ಇದೆಂಥಾ ಕ್ಲೈಮಾಕ್ಸ್, ಬರಿ ಮೋಸ ಅಂತ ಶಾಪ ಹಾಕ್ತಿದ್ದಾರೆ.
ಎಡವಟ್ಟು ರಾಣಿ ಲೀಲಾ ಮತ್ತು ಹಿಟ್ಲರ್ ನಂತಹ ಬ್ಯುಸಿನೆಸ್ ಮೆನ್ ಎಜೆ ಇಬ್ಬರ ಮದುವೆಯ ಕಥೆಯಿಂದ ಆರಂಭವಾದ ಧಾರಾವಾಹಿ ಹಿಟ್ಲರ್ ಕಲ್ಯಾಣ (Hitler Kalyana). ತನ್ನ ಕಥೆ ಮತ್ತು ಪಾತ್ರಧಾರಿಗಳ ಅದ್ಭುತ ಅಭಿನಯದಿಂದ ಭಾರಿ ಜನಮನ್ನಣೆ ಪಡೆದಿತ್ತು.
ಸರಿಸುಮಾರು ಎರಡೂವರೆ ವರ್ಷಗಳಿಂದ 694 ಎಪಿಸೋಡ್ ಗಳಲ್ಲಿ ಪ್ರಸಾರಾವಾಗಿದ್ದ ಹಿಟ್ಲರ್ ಕಲ್ಯಾಣ ಧಾರಾವಾಹಿ ಇದೀಗ ಮುಕ್ತಾಯಗೊಂಡಿದ್ದು, ಸರಿಯಾದ ಮಾಹಿತಿಯೇ ಇಲ್ಲದೇ ಅಂತರಾ ಹೆಸರಿನಲ್ಲಿ ಬಂದಿದ್ದು, ಪ್ರಾರ್ಥನಾ ಅನ್ನೋ ಸತ್ಯ ಎಜೆಗೂ ಗೊತ್ತಾಗಿರೋ ಸತ್ಯ ತಿಳಿದು, ಅಕೆಯನ್ನು ಪೊಲೀಸ್ ಗೆ ಒಪ್ಪಿಸುವ ಮೂಲಕ ಅಂತ್ಯಗೊಂಡಿದೆ.
ಧಾರಾವಾಹಿಯನ್ನು ಎರಡೂವರೆ ವರ್ಷಗಳಿಂದ ಇಷ್ಟಪಟ್ಟಿದ್ದ ಅಭಿಮಾನಿಗಳು, ಈ ರೀತಿಯಾಗಿ ಯಾವ ಮಾಹಿತಿ, ಗುಟ್ಟನ್ನು ಬಿಟ್ಟುಕೊಡದೇ, ಆತುರಾತುರವಾಗಿ ಸೀರಿಯಲ್ ಮುಗಿಸಿರುವ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದು, ಇದೆಂಥಾ ಕ್ಲೈಮ್ಯಾಕ್ಸ್ (climax), ಈ ರೀತಿಗೂ ಯಾರಾದ್ರೂ ಸೀರಿಯಲ್ ಮುಗಿಸ್ತಾರ ಅಂತ ಕೇಳ್ತಿದ್ದಾರೆ.
ಒಬ್ಬರು ಕಾಮೆಂಟ್ ಮಾಡಿ ಧಾರಾವಾಹಿಯಲ್ಲಿ ಅಭಿರಾಮ್ ಸಹೋದರ ಆಸ್ಪತ್ರೆಯಲ್ಲಿ ಇದ್ದವರ ಬಗ್ಗೆ ಏನು ಮಾಹಿತಿ ನೀಡಲಿಲ್ಲ, ದೇವ್ ಮತ್ತು ಪವಿತ್ರ ಕತೆ ಏನಾಯಿತು ಗೊತ್ತಿಲ್ಲ, ಲಕ್ಷ್ಮಿ, AJ ಇನ್ನಿಬ್ಬರು ಮಕ್ಕಳು ಎಲ್ಲಿ, ವಿಶ್ವರೂಪ ಸಾಕ್ಷಿ ತರಲು ಹೋದವರು ಏನಾದರು, ಲೀಲಾ ಅಮ್ಮ, ತಂಗಿ ಎಲ್ಲಿ , ಅಂತರ ಹೇಗೆ ಸತ್ತರು ಯಾವುದು ತಿಳಿಸದೆ, ರಾಮ್ ಲೀಲಾ ಜೋಡಿಯ ಮದುವೆ ಮಾಡದೆ ಆತುರಾತುರವಾಗಿ ಮುಕ್ತಾಯ ಮಾಡಿದ್ದು ಯಾಕೆ? ಎಂದು ಕೇಳಿದ್ದಾರೆ.
ಮತ್ತೊಬ್ಬರು ಲೀಲಾ ಗೆ ತುಂಬಾ ಮೋಸ ಆಗಿದೆ. ಈ ಸೀರಿಯಲ್ (serial) ಅಲ್ಲಿ ಲೀಲಾ ಬರಿ ನೋವು ತಿಂದಿದ್ದು, ಮನೆ ಕಾಪಾಡಿದ್ಧೇ ಆಯಿತು . ಸ್ವಲ್ಪಾನೂ ಸುಖ ಶಾಂತಿ ಎಂಥದ್ದು ಅಲ್ಲ ಅವಳಿಗೆ. ಸೀರಿಯಲ್ ಮುಗಿತಾ ಇದೆ, ಇದು ಒಂದು ಕಥೆ ನಾ? ಸ್ವಲ್ಪ ಆದ್ರೂ ಲೀಲಾ ಸಂಸಾರ ಮಾಡೋ, ಚೆನ್ನಾಗಿರೋ ಕಥೆ ಬೇಡ್ವ ಎಂದು ಕೇಳಿದ್ದಾರೆ.
ಮತ್ತೊಬ್ಬರು ಡೈರೆಕ್ಟರ್ ಗೂ, ಸ್ಕ್ರಿಪ್ಟ್ ರೈಟರ್ ಗೂ ಕಬ್ಬಿಣದ ಬಳೆ ಹಾಕಬೇಕು ಜೊತೆಗೆ ಆಸ್ಕರ್ ಅವಾರ್ಡ್ ಕೊಡಬೇಕು. ಊಹೆ ಗೂ ಮೀರಿದ ಅಂತಿಮ ಸಂಚಿಕೆ. ಕರ್ಮ. ಒಂದು ಹಂತದವರೆಗೆ ಸೀರಿಯಲ್ ಚೆನ್ನಾಗಿತ್ತು, ಆದರೆ ಬಳಿಕ ಸೀರಿಯಲ್ ಸ್ಕ್ರಿಪ್ಟ್ (script) ಹಾದಿ ತಪ್ಪುತ್ತಾ ಹೋಯ್ತು. ಇದೀಗ ಈ ರೀತಿ ಮುಕ್ತಾಯವಾಗಿರೋದು ಬೇಸರವಾಗಿದೆ ಎಂದಿದ್ದಾರೆ.
ಇನ್ನೂ ಕೆಲವರು ವಿಶ್ವರೂಪ್ ಮತ್ತು ಲಕ್ಷ್ಮೀ ಇಲ್ದೆ ಸೀರಿಯಲ್ ಮುಗಿಸಿದ್ದು ತುಂಬಾ ಬೇಜಾರು ಆಯ್ತು ಅಂದಿದ್ದಾರೆ. ಮುಕ್ತಾಯ ಅನ್ನೋ ಪದದ ಅರ್ಥ ಗೊತ್ತಾ ನಿಮಗೆ, ಕೊನೆಗೂ ಎಜೆ ನ ದೊಡ್ಡಣ್ಣ ಮಾಡಿ, ಎಜೆ ಲೈಫಲ್ಲಿ ಲೀಲಾ ಒಂದು ಆಯ್ಕೆ ಮಾತ್ರ ಅನ್ನೋದನ್ನ ತೋರಿಸಿದ್ರಿ ಎಂದಿದ್ದಾರೆ.
ಇನ್ನೂ ಒಬ್ಬರು ಕಾಮೆಂಟ್ ಮಾಡಿ ಪ್ಲೀಸ್ ಹಿಟ್ಲರ್ ಕಲ್ಯಾಣ ಪಾರ್ಟ್ 2 ಜೊತೆ ಮತ್ತೆ ಬನ್ನಿ, ಇದೇ ಕಥೆ ಮುಂದುವರೆದ ಭಾಗ ಇರಲಿ. ಇದೇ ನಟರು ಅಭಿನಯಿಸಲಿ. ಮುಂದುವರೆದ ಭಾಗದಲ್ಲಿ ಅಂತರಾ ಆಗಿ ನಟಿಸಿದ್ದು ಪ್ರಾರ್ಥನಾ ಅನ್ನೋದು ಹೇಗೆ ತಿಳಿಯಿತು ಅನ್ನೋದನ್ನು ತೋರಿಸಲಿ, ಅಂತರಾ ಹೇಗೆ ಸತ್ತತ್ತು ಅನ್ನೋದನ್ನು ರಿವೀಲ್ ಮಾಡಲಿ, ರಾಮ್ ಮತ್ತು ಲೀಲಾ ಮತ್ತೊಮ್ಮೆ ಮದುವೆಯಾಗಿ, ಹೊಸ ಜೀವನ ನಡೆಸುವ ಮತ್ತೊಂದು ಕಥೆ ಬರಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.