- Home
- Entertainment
- TV Talk
- ಸಣ್ಣವರಾಗಿದ್ದಾಗಲೇ ಹಳ್ಳಿಮೇಷ್ಟ್ರು ಚಿತ್ರದಲ್ಲಿ ಸಿಲ್ಕ್ ಸ್ಮಿತಾ ಜೊತೆ ನಟಿಸಿದ್ರು ಲಕ್ಷ್ಮೀ ನಿವಾಸದ ಈ ನಟ
ಸಣ್ಣವರಾಗಿದ್ದಾಗಲೇ ಹಳ್ಳಿಮೇಷ್ಟ್ರು ಚಿತ್ರದಲ್ಲಿ ಸಿಲ್ಕ್ ಸ್ಮಿತಾ ಜೊತೆ ನಟಿಸಿದ್ರು ಲಕ್ಷ್ಮೀ ನಿವಾಸದ ಈ ನಟ
ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಕೆಲಸ ಮಾಡದೇ ಮನೆಯಲ್ಲೇ ಕುಳಿತುಕೊಂಡು, ಹೆಂಡ್ತಿ ಹೇಳಿದ್ದನ್ನೆಲ್ಲಾ ಮಾಡ್ಕೊಂಡು ಬರೋ ಹರೀಶನ ಪಾತ್ರ ಗೊತ್ತಿದೆ ಅಲ್ವಾ? ಅವರು ಒಂದು ಕಾಲದಲ್ಲಿ ರವಿಚಂದ್ರನ್, ಸಿಲ್ಕ್ ಸ್ಮಿತಾ ಜೊತೆ ನಟಿಸಿದ್ರು ಗೊತ್ತಾ?

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸದ (Lakshmi Nivasa) ಪ್ರತಿಯೊಂದು ಪಾತ್ರಗಳು ಸಹ ಜನಪ್ರಿಯವಾಗಿದೆ. ಒಂದೊಂದು ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಅದರಲ್ಲಿ ಒಂದು ಪಾತ್ರ ಹರೀಶನದ್ದು. ಲಕ್ಷ್ಮೀ ಶ್ರೀನಿವಾಸರ ಕಿರಿಯ ಪುತ್ರ ಹರೀಶ್. ಈ ಪಾತ್ರದಲ್ಲಿ ನಟಿಸ್ತಿರೋದು ನಟ ಅಜಯ್ ರಾಜ್.
ಸೋಮಾರಿ ಪಾತ್ರ ಇವರದ್ದು. ಕೆಲಸ ಮಾಡೋದಿಲ್ಲ, ಪ್ರೀತಿಸಿ ಮದುವೆಯಾದ ಹೆಂಡ್ತಿ ಹಿಂದೆ ಸದಾ ಅಲೆಯುತ್ತಾ, ಆಕೆಗೆ ಬೇಕಾದ ಊಟ ಕೊಡೋ ಪಾತ್ರ ಇವರದ್ದು, ಸದ್ಯ ತಮ್ಮದೇ ಆದ ಬ್ಯುಸಿನೆಸ್ ಮಾಡಿದ್ದಾರೆ, ಆದರೆ ಅದರಲ್ಲೂ ಮೋಸ ಹೋಗಿ, ಅಣ್ಣನ ದುಡ್ಡನ್ನೆ ಕದಿಯೋ ಹರೀಶನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಅಜಯ್ ರಾಜ್ (Ajay Raj) ಅದ್ಭುತವಾದ ನಟ, ರಂಗಭೂಮಿ ಕಲಾವಿದರಾಗಿರೋ ಇವರು, ಅದೆಷ್ಟೋ ಸೀರಿಯಲ್‌ಗಳಲ್ಲಿ, ಸಿನಿಮಾಗಳಲ್ಲೂ ನಟಿಸಿದ್ದಾರೆ. ಈ ಹಿಂದೆ ಟಿ ಎನ್ ಸೀತಾರಾಮ್ ಅವರ ಮುಕ್ತ ಸೀರಿಯಲ್‌ನಲ್ಲೂ ನಟಿಸಿ ಜನಪ್ರಿಯತೆ ಪಡೆದಿದ್ದರು.
ಬಾಲ್ಯದಿಂದಲೇ ನಟನೆಯಲ್ಲಿ ಗುರುತಿಸಿಕೊಂಡಿರೋ ಅಜಯ್ ರಾಜ್ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ತೆರೆ ಹಂಚಿಕೊಂಡಿದ್ದಾರೆ ಗೊತ್ತಾ? ಹೌದು, ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಇವರು ಕ್ರೇಜಿಸ್ಟಾರ್ ಜೊತೆ ನಟಿಸಿದ್ದರು, ಅಷ್ಟೇ ಅಲ್ಲ ಸಿಲ್ಕ್ ಸ್ಮಿತಾ ಜೊತೆಯೂ ತೆರೆ ಹಂಚಿಕೊಂಡಿದ್ದರು.
ಹಳ್ಳಿಮೇಷ್ಟ್ರು (Hallimestru) ಸಿನಿಮಾದಲ್ಲಿ ನಾಯಕಿ ಪರಿಮಳ ಗೊತ್ತಿರಬೇಕಲ್ವಾ? ಆಕೆ ಜೊತೆ ಸದಾ ಸುತ್ತೋ ಮೂವರು ಹುಡುಗರಲ್ಲಿ, ಅಜಯ್ ರಾಜ್ ಕೂಡ ಒಬ್ಬರು. ಈ ಸಿನಿಮಾದಲ್ಲಿ ಟೀಚರ್ ಆಗಿ, ಅಂದಿನ ಕಾಲದ ಮಾದಕ ನಟಿ ಸಿಲ್ಕ್ ಸ್ಮಿತಾ ನಟಿಸಿದ್ರು, ಮೀಸೆ ಚಿಗುರದೇ ಇರೋ ಸಮಯದಲ್ಲಿ ಅಜಯ್ ರಾಜ್ ಸಿಲ್ಕ್ ಸ್ಮಿತಾ ಜೊತೆ ನಟಿಸೋ ಅವಕಾಶ ಪಡೆದಿದ್ದರು.
ಈ ಸಿನಿಮಾದಲ್ಲಿ ಇವರು ಹೇಳಿದ ಹೋಗಿ ಹೋಗಿ ಸೆಕೆಂಡ್ ಹ್ಯಾಂಡ್ ಗಂಡಾನೆ ಸಿಕ್ಕಿರೋದ ಅನ್ನೋ ಡೈಲಾಗ್ ಇವತ್ತಿಗೂ ಫೇಮಸ್, ಆ ಸಿನಿಮಾ ಟೈಮಲ್ಲಿ ಕಬ್ಬಿನ ಗದ್ದೇಲಿ ಕಬ್ಬು ತಿನ್ನೋಕೆ ಹೋಗಿ ಹಲ್ಲು ಕೂಡ ಮುರ್ಕೊಂಡಿದ್ರಂತೆ. ಅಷ್ಟೇ ಅಲ್ಲ ಅಜಯ್, ನೆನಪಿರಲಿ ಪ್ರೇಮ್ ಮತ್ತು ಸುನೀಲ್ ರಾವ್ ಜೊತೆ ಜೊತೆಯಾಗಿಯೇ ಸೀರಿಯಲ್ ಗೆ ಎಂಟ್ರಿ ಕೊಟ್ಟೋರು. ಇವರು ನಟ ಯಶ್ ಅವರ ಉತ್ತಮ ಸ್ನೇಹಿತರೂ ಹೌದು.
ಇನ್ನು ಪರ್ಸನಲ್ ಲೈಫ್ ಬಗ್ಗೆ ಹೇಳೋದಾದ್ರೆ, ಅಜಯ್ ರಾಜ್ ಗೆ ಈಗಾಗಲೇ ಮದ್ವೆ ಆಗಿದೆ. ಇವರ ಪತ್ನಿ ಕೂಡ ನಟಿ. ಅವರು ಬೇರಾರು ಅಲ್ಲ, ಹಿಟ್ಲರ್ ಕಲ್ಯಾಣದಲ್ಲಿ ಸರಸ್ವತಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಪದ್ಮಿನಿ (Padmini)ಇವರ ಪತ್ನಿ. ಗಂಡ- ಹೆಂಡತಿ ಇಬ್ಬರೂ ಸಹ ಬೇರೆ ಬೇರೆ ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದಾರೆ.