ಮಧು ಗೌಡ ಮದುವೆಯಲ್ಲಿ ಅಳಿಯನ ಮೇಲೆ ಅತ್ತೆ ರಂಪಾಟ; ಇಡೀ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಹೋದರ ಮದನ್
ಮದುವೆ ದಿನ ವೈರಲ್ ಅಯ್ತು ತಾಯಿಯ ವಿಡಿಯೋ. ತಿಂಗಳು ಕಳೆದ ಮೇಲೆ ಸ್ಪಷ್ಟನೆ ಕೊಟ್ಟ ಸಹೋದರ ಮದನ್.
ಕನ್ನಡ ಯೂಟ್ಯೂಬರ್/ವ್ಲಾಗರ್ ಮಧು ಗೌಡ ಮತ್ತು ನಿಖಿಲ್ ರವೀಂದ್ರ ಹಲವು ವರ್ಷಗಳಿಂದ ಪ್ರೀತಿಸಿ ಗುರು ಹಿರಿಯ ಒಪ್ಪಿಗೆ ಪಡೆದು ನವೆಂಬರ್ ತಿಂಗಳಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ. ಮದುವೆ ಮುಹೂರ್ತದ ದಿನ ತಾಳಿ ಕಟ್ಟುವ ಸಮಯದಲ್ಲಿ 'ಹೇ ನಿಖಿಲ್ .....' ಎಂದು ಮಧು ಗೌಡ ತಾಯಿ ಜೋರಾಗಿ ಕೂಗಾಡುವು ಸಣ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅದನ್ನು ನೆಟ್ಟಿಗರು ಹಲವು ರೀತಿಯಲ್ಲಿ ಅಪಾರ್ಥ ಮಾಡಿಕೊಂಡು ಇಷ್ಟವಿಲ್ಲದೆ ಮದುವೆ ಮಾಡುತ್ತಿದ್ದಾರೆ, ತಾಯಿಯ ಒಪ್ಪಿಗೆ ಪಡೆದಿಲ್ಲ, ಮೈ ಮೇಲೆ ದೇವರು ಬಂದಿದೆ ಎಂದು ಗಾಸಿಪ್ ಹಬ್ಬಿಸಿದ್ದರು. ಹೀಗಾಗಿ ಮಧು ಗೌಡ ಅಣ್ಣನಾದ ಮದನ್ ಗೌಡ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
'80% ಜನ ನನಗೆ ಪ್ರಶ್ನೆ ಮಾಡಿರುವುದು ಏನೆಂದರೆ ಮದುವೆ ದಿನ ನಿಮ್ಮ ಅಮ್ಮ ಯಾಕೆ ಹಾಗೆ ಮಾಡಿದ್ರು ಅಂತ. ಸಂಗೀತ್ ಮತ್ತು ಮೆಹೆಂದಿ ಕಾರ್ಯಕ್ರಮವನ್ನು ನಾವು ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದ್ವಿ ಅದನ್ನು ಸಖತ್ ಎಂಜಾಯ್ ಮಾಡಿಕೊಂಡು ಆರಾಮ್ ಆಗಿದ್ದರು, ಇನ್ನು ಊರಿನ ಮನೆಯಲ್ಲಿ ಹೆಣ್ಣಿನ ಬಳೆ ಶಾಸ್ತ್ರ ಮತ್ತು ಅರಿಶಿಣ ನೀರು ಹಾಕುವ ಶಾಸ್ತ್ರ ಹಮ್ಮಿಕೊಂಡಿದ್ವಿ ಅಲ್ಲೂ ಕೂಡ ಆರಾಮ್ ಆಗಿ ಖುಷಿ ಖುಷಿಯಾಗಿದ್ದರು. ಮದುವೆ ದಿನ ಬೆಳಗ್ಗೆ ಸ್ವಲ್ಪ ಸುಸ್ತು ಕಾಣಿಸುವಂತೆ ಆಯ್ತು. ನಾನು ನನ್ನ ತಾಯಿಯನ್ನು ನೋಡಿಕೊಂಡು ಬಂದಿರುವ ಹಾಗೆ ಅದರಲ್ಲೂ 15 ವರ್ಷಗಳಿಂದ ದೇವರ ಪೂಜೆ ಮಾಡುವಾಗ ಅಥವಾ ನಮ್ಮ ಮನೆ ಹತ್ತಿರ ಗಣೇಶ ಕೂರಿಸಿರುವಾಗ ಅಮ್ಮ ತುಂಬಾ ಸುಸ್ತು ಪಡುತ್ತಿದ್ದರು ಅವರಿಗೆ ತಿಳಿಯದ ಹಾಗೆ ದೇಹ ಸ್ವೆಟ್ ಆಗುತ್ತಿತ್ತು' ಎಂದು ತಾಯಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಮದನ್ ಗೌಡ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮದನ್ ಗೌಡ ಮಾತನಾಡಿದ್ದಾರೆ.
'ಮದುವೆ ದಿನ ಕೂಡ ಸುಸ್ತಾಗಿದ್ದ ಕಾರಣ ರೆಸ್ಟ್ ಮಾಡಲಿ ಎಂದು ಕೂರಿಸಿದ್ವಿ..ದಾರೆ ಮಾಡಿ ತಾಳಿ ಕಟ್ಟುವ ಸಮಯದಲ್ಲಿ ನಾವೇ ಕರ್ಕೊಂಡು ಬಂದು ಮಂಟಪದ ಬಳಿ ಕೂರಿಸಿದ್ದು ಆ ಸಮಯದಲ್ಲಿ ಏನು ಆಯ್ತು ಎಂದು ಅವರಿಗೆ ಗೊತ್ತಿಲ್ಲ. ಎದುರಿಗೆ ಫೋನ್ ಬಿಟ್ಟರೆ ಯಾರೂ ಇರುವುದಿಲ್ಲ ಅವಾಗ ಮಾತನಾಡಲು ಹಿಂಜರಿಯುತ್ತಾರೆ ಅಷ್ಟು ಮುಜುಗರ ಪಡುತ್ತಾರೆ ಹೀಗಿರುವಾಗ ಅಷ್ಟು ಸಾವಿರಾರು ಜನರು ಮುಂದೆ ಆ ರೀತಿ ಮಾಡಬೇಕು ಅನ್ನೋ ಇದ್ದೇಶ ಅವರಿಗೆ ಇರಲಿಲ್ಲ. ನಾವು ನಮ್ಮ ತಾಯಿಯನ್ನು ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದಿದ್ದೀನಿ ಹೀಗಿರುವಾಗ ಮದುವೆ ದಿನ ಆ ರೀತಿ ಮಾತನಾಡಿದ್ದರು ಅನ್ನೋದು ನನಗೆ ದೊಡ್ಡ ಶಾಕ್ ಆಯ್ತು. ಮದುವೆ ದಿನ ಹೆಣ್ಣಿನ ತಾಯಂದಿರಿಗೆ ಈ ರೀತಿ ಆಗುವುದು ಸಹಜ ಏನೂ ಆಗಲ್ಲ ಆರಾಮ್ ಆಗಿ ಹ್ಯಾಂಡಲ್ ಮಾಡಿ ಎಂದು ಪುರೋಹಿತರು ಹೇಳಿದ್ದರು. ಈ ಘಟನೆ ನಡೆದು ಅರ್ಧ ಗಂಟೆ ಆದ್ಮೇಲೆ ಏನ್ ಆಯ್ತು ಅಮ್ಮ ಅಂತ ನಾನು ಹೋಗಿ ಕೇಳಿದಾಗ ಏನ್ ಆಯ್ತು ಅನ್ನೋದು ನನಗೆ ನೆನಪಿಲ್ಲ ನನಗೆ ಗೊತ್ತಿಲ್ಲ ಎಂದರು' ಎಂದು ಮದನ್ ಗೌಡ ಹೇಳಿದ್ದಾರೆ.