ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಲಕ್ಷ್ಮೀ ಮನೆ ಬಿಟ್ಟು ಹೋಗಿದ್ದಾಳೆ. ಮುಂದೆ ಏನಾಗುವುದು?
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಲಕ್ಷ್ಮೀ ಮನೆ ಬಿಟ್ಟು ಹೋಗಿದ್ದಾಳೆ. ವೈಷ್ಣವ್ ಮನೆಯಿಂದ ಹೊರಗಡೆ ಬಂದಿರೋ ಲಕ್ಷ್ಮೀ, ಕೀರ್ತಿ ಮನೆ ಸೇರಿಕೊಂಡಿದ್ದಾಳೆ. ಒಂದು ಟೈಮ್‌ನಲ್ಲಿ ಲಕ್ಷ್ಮೀಗೂ, ಕೀರ್ತಿಗೂ ಆಗಿ ಬರುತ್ತಿರಲಿಲ್ಲ. ಈಗ ಇವರಿಬ್ಬರು ಕುಚಿಕು ದೋಸ್ತ್‌ಗಳು. ಈಗ ಲಕ್ಷ್ಮೀ ಮನೆ ಬಿಟ್ಟು ಹೋಗಿದ್ದಾಳೆ.
ಅಂದು ಲಕ್ಷ್ಮೀ, ಕೀರ್ತಿ ಶತ್ರುಗಳ ಥರ ಇದ್ದರು!
ವೈಷ್ಣವ್ ಹಾಗೂ ಕೀರ್ತಿ ಪ್ರೀತಿಸಿದ್ದರು. ಇವರಿಬ್ಬರನ್ನು ವೈಷ್ಣವ್ ತಾಯಿಯೇ ದೂರ ಮಾಡಿದಳು. ಈ ವಿಚಾರ ವೈಷ್ಣವ್‌ಗಾಗಲೀ, ಲಕ್ಷ್ಮೀಗಾಗಲಿ ಗೊತ್ತೇ ಇರಲಿಲ್ಲ. ವೈಷ್ಣವ್ ಹಾಗೂ ಲಕ್ಷ್ಮೀ ಮದುವೆ ಆಯ್ತು, ಇವರಿಬ್ಬರು ಒಂದಾದ ಬಳಿಕ ಕೀರ್ತಿಯೇ ವೈಷ್ಣವ್ ಬೇಕು ಅಂತ ಹಠ ಹಿಡಿದು ಕೂತಳು. ನನ್ನನ್ನು ನನ್ನ ವೈಷ್ಣವ್‌ನಿಂದ ದೂರ ಮಾಡಿದ್ದಾಳೆ ಅಂತ ಲಕ್ಷ್ಮೀ, ಕೀರ್ತಿ ಮೇಲೆ ಸಿಟ್ಟುಮಾಡಿಕೊಂಡಿದ್ದಳು. ನನ್ನ ಗಂಡನಿಂದ ನನ್ನನ್ನು ದೂರ ಮಾಡುತ್ತಿದ್ದಾಳೆ ಅಂತ ಕೀರ್ತಿ ಮೇಲೆ ಲಕ್ಷ್ಮೀ ಸಿಟ್ಟು ಮಾಡಿಕೊಂಡಿದ್ದಳು. ಈಗ ಇವರಿಬ್ಬರು ದೋಸ್ತ್‌ರಾಗಿದ್ದಾರೆ.
ʼಮಗು ನೀ ನಗುʼ; ಕವಿತಾ ಗೌಡ, ಚಂದನ್ ಕುಮಾರ್ ಕ್ಯೂಟ್ ಫ್ಯಾಮಿಲಿಗೆ ಯಾರೂ ದೃಷ್ಟಿ ಹಾಕ್ಬೇಡ್ರಪ್ಪಾ..!
ಕೀರ್ತಿ ಸಹಿಸೋದಿಲ್ಲ!
ಕಾವೇರಿಯ ನಿಜವಾದ ಮುಖವಾಡ ದೂರ ಮಾಡುವ ನಿಟ್ಟಿನಲ್ಲಿ ಲಕ್ಷ್ಮೀ, ಕೀರ್ತಿ ಈಗ ಇನ್ನಷ್ಟು ಹತ್ತಿರ ಆಗಿದ್ದಾರೆ. ಈಗ ಹಳೆ ನೆನಪು ಇಲ್ಲದ ಕೀರ್ತಿಗೆ ಈಗ ಲಕ್ಷ್ಮೀಯೇ ಫೇವರಿಟ್. ಯಾರೇ ಲಕ್ಷ್ಮೀಗೆ ಏನೇ ಹೇಳಲಿ? ಏನೇ ನಿಂದಿಸಲಿ? ತೊಂದರೆ ಮಾಡಲಿ ಕೀರ್ತಿ ಸಹಿಸೋದಿಲ್ಲ.
ಮನೆ ಬಿಟ್ಟು ಹೋಗಿದ್ದು ಯಾಕೆ?
ನಾನು ಕೀರ್ತಿ ಮನೆಯಲ್ಲಿದ್ದರೆ ಅವಳಿಗೆ ತೊಂದರೆ ಆಗತ್ತೆ ಅಂತ ಲಕ್ಷ್ಮೀ ಮನೆ ಬಿಟ್ಟು ಹೋಗಿದ್ದಾಳೆ. ಕೀರ್ತಿ ಮಲಗಿದ್ದ ಸಮಯದಲ್ಲಿ ಲಕ್ಷ್ಮೀ ಆ ಮನೆಯಿಂದ ಸೈಲೆಂಟ್ ಆಗಿ ಹೊರಗಡೆ ಬಂದಿದ್ದಾಳೆ. ಕೀರ್ತಿಗೆ ಎಚ್ಚರ ಆದಾಗ ಲಕ್ಷ್ಮೀ ಮನೆಯಲ್ಲಿಲ್ಲ ಅಂದರೆ ಏನಾಗಬಹುದೋ ಏನೋ!
'ಲಕ್ಷ್ಮೀ ಬಾರಮ್ಮ' ನಟಿ ಭೂಮಿಕಾ ರಮೇಶ್ ನನಗೆ ಸ್ನೇಹಿತೆಗಿಂತ ಜಾಸ್ತಿ: ಲವ್ ಗಾಸಿಪ್ ಬಗ್ಗೆ ಅಭಿನವ್ Open Talk!
ಕಥೆ ಏನು?
ವೈಷ್ಣವ್ ಒಂದು ಹುಡುಗಿಯನ್ನು ಮದುವೆಯಾಗಿ ಅವಳ ಜೊತೆ ಖುಷಿಯಿಂದ ಸಂಸಾರ ಮಾಡೋದು ತಾಯಿ ಕಾವೇರಿಗೆ ಇಷ್ಟವೇ ಇಲ್ಲ. ಇದಕ್ಕಾಗಿ ಅವಳು ಏನು ಬೇಕಿದ್ರೂ ಮಾಡ್ತಾಳೆ. ಹೀಗೆ ಅವಳು ಕಾವೇರಿ, ಲಕ್ಷ್ಮೀಯನ್ನು ಕೂಡ ವೈಷ್ಣವ್‌ನಿಂದ ದೂರ ಮಾಡಿದ್ದಾಳೆ. ಅವಳೇನು ಅಂತ ವೈಷ್ಣವ್‌ಗೆ ಅರ್ಥ ಆದ ನಂತರದಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಪಾತ್ರಧಾರಿಗಳು
ವೈಷ್ಣವ್- ಶಮಂತ್ ಬ್ರೊ ಗೌಡ
ಕಾವೇರಿ- ಸುಷ್ಮಾ ನಾಣಯ್ಯ
ಲಕ್ಷ್ಮೀ- ಭೂಮಿಕಾ ರಮೇಶ್
