ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಮುಗಿಯುತ್ತಿದೆ, ಹೀಗಿರುವಾಗ ಕಾವೇರಿಗೆ ಏನು ಶಿಕ್ಷೆ ಆಗತ್ತೆ ಎನ್ನುವ ಪ್ರಶ್ನೆ ಬಂದಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. 

‘ಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ವೈಷ್ಣವ್‌ಗೆ ತಾಯಿ ಕಾವೇರಿ ಸತ್ಯ ಗೊತ್ತಾಗತ್ತಾ? ಕಾವೇರಿಗೆ ಏನು ಶಿಕ್ಷೆ ಆಗತ್ತೆ ಅನ್ನೋದು ದೊಡ್ಡ ಪ್ರಶ್ನೆ ಆಗಿತ್ತು. ಈಗ ಕಾವೇರಿ ಅಂತ್ಯ ಆಗಿದೆ. ವೈಷ್ಣವ್‌ಗೆ ಬುದ್ಧಿ ಬಂದಿರೋದು ವೀಕ್ಷಕರಿಗೆ ತುಂಬ ಖುಷಿ ಆಗಿದೆ. 

ವೈಷ್ಣವ್‌ ಹೇಳಿದ್ದೇನು? 
“ನಾನು ನಿಶ್ಚಿತಾರ್ಥ ಮಾಡಿಕೊಳ್ತೀನಿ ಅಂತ ನಾಟಕ ಮಾಡಿದೆ. ಇಷ್ಟುದಿನ ಏನೇನು ಮಾಡಿದೆ ಅಂತ ಸುಬ್ಬಿ ಮುಂದೆ ಹೇಳಿಕೊಂಡ್ಯಲ್ವಾ? ಅದನ್ನೂ ನಾನೇ ಖುದ್ದಾಗಿ ಕೇಳಿಸಿಕೊಂಡೆ. ಲಕ್ಷ್ಮೀ ಯಾವ ವಿಡಿಯೋವನ್ನು ನನಗೆ ತೋರಿಸಿಲ್ಲ. ಎಲ್ಲರನ್ನೂ ನೀನು ಮೂಲೆಗುಂಪು ಮಾಡಿದೆ” ಎಂದು ವೈಷ್ಣವ್‌ ಎಲ್ಲರ ಮುಂದೆ ಗೋಳು ಹೇಳಿಕೊಂಡಿದ್ದಾನೆ. 

ಕಾವೇರಿಗೆ ಬೈದ ವೈಷ್ಣವ್!‌ 
“ಪ್ರೀತಿಸಿ ಮದುವೆಯಾದ ಗಂಡನಿಗೆ ಮೋಸ ಮಾಡಿದೆ. ನನ್ನ ಅಜ್ಜಿ ಪ್ರಾಣ ತೆಗೆದೆ. ನಿನಗೆ ಜನ್ಮ ಕೊಟ್ಟ ತಾಯಿಗೂ ನೀನು ಮೋಸ ಮಾಡಿದೆ. ಮನೆ ಮುರಿಯೋ ಕೆಲಸ ಮಾಡಿದೆ. ಲಕ್ಷ್ಮೀ ಒಳ್ಳೆಯತನ ಸುಪ್ರೀತಾ ಅತ್ತೆಗೆ ಅರ್ಥ ಆಗಿ, ಮಗಳ ಥರ ನೋಡಿಕೊಳ್ತಿದ್ದಾರೆ. ತುಂಬ ಸಲ ಅತ್ತೆ, ನನ್ನ ಬಳಿ ಬಂದು ಲಕ್ಷ್ಮೀಗೆ ಮೋಸ ಮಾಡಬೇಡ ಅಂತ ಎಚ್ಚರಿಕೆ ನೀಡಿದ್ದರು. ಆಗ ನಾನು ಕೇಳಲೇ ಇಲ್ಲ” ಎಂದು ವೈಷ್ಣವ್‌ ಹೇಳಿದ್ದಾನೆ. 

ಲಕ್ಷ್ಮೀ ಮದುವೆಯಾಗಿದ್ದು ಮಾತ್ರ ಮರೆಯೋದಿಲ್ಲ! 
“ಕೀರ್ತಿ ಪ್ರೀತಿ ಮಾಡಿರೋದು ತಪ್ಪಾಗೋಯ್ತು? ಯಾಕೆ ಅವಳು ಅಷ್ಟು ಅನುಭವಿಸಬೇಕು? ನಿನ್ನ ಸ್ವಾರ್ಥಕ್ಕೆ ಅವಳನ್ನು ಯಾಕೆ ಬಲಿ ಕೊಡಬೇಕಿತ್ತು? ಕೀರ್ತಿ ಜೀವನವನ್ನೇ ನರಕ ಮಾಡಿದೆ? ಲಕ್ಷ್ಮೀ ಜೊತೆ ನನ್ನ ಮದುವೆ ಮಾಡಿದ್ದಕ್ಕೆ ಜೀವನಪೂರ್ತಿ ನಾನು ನಿನ್ನ ನೆನಪು ಇಟ್ಟುಕೊಳ್ತೀನಿ. ಲಕ್ಷ್ಮೀಯಿಂದಲೇ ನಿನ್ನ ಬಣ್ಣ ಬಯಲಾಯ್ತು, ಇಲ್ಲ ಅಂದ್ರೆ ನೀನೇ ದೇವರು ಅಂತ ನಂಬಿಕೊಂಡು ಕೂರುತ್ತಿದ್ದೆ. ಜೀವನದಲ್ಲಿ ಏನೇ ಆದರೂ ಲಕ್ಷ್ಮೀಯೇ ಹೆಂಡ್ತಿ” ಎಂದು ವೈಷ್ಣವ್‌ ಹೇಳಿದ್ದಾನೆ. 

ಲಕ್ಷ್ಮೀಬಾರಮ್ಮ ಸೀರಿಯಲ್​ ಮುಗೀತಿದ್ದಂತೆಯೇ ವೇದಿಕೆಗೆ ಕಿಚ್ಚು ಹೊತ್ತಿಸಿದ ಲಕ್ಷ್ಮಿ- ಕೀರ್ತಿ ಜೋಡಿ: ಫ್ಯಾನ್ಸ್​ ಭಾವುಕ

ಭ್ರಮೆಯಲ್ಲಿ ಮಾತನಾಡುತ್ತಿದ್ದ ಕಾವೇರಿ! 
ಈ ಮಾತುಗಳನ್ನು ಕೇಳಿ ಕಾವೇರಿ ಸಿಟ್ಟು ಹೆಚ್ಚಾಗಿದೆ. ಕಾವೇರಿಗೆ ಅತ್ತೆ ಬಂದು ಎಚ್ಚರಿಕೆ ಕೊಡುವ ಥರ ಭ್ರಮೆ ಹುಟ್ಟಿಕೊಂಡಿದೆ. ಅವಳು ಒಬ್ಬೊಬ್ಬಳೇ ಮಾತನಾಡುತ್ತಿದ್ದಾಳೆ, ಇದೆಲ್ಲ ನಾಟಕ ಅಂತ ಮನೆಯವರು ಅಂದುಕೊಂಡಿದ್ದರು. ಆದರೆ ಕಾವೇರಿಯ ಪಾಪದ ಪ್ರಜ್ಞೆಯೇ ಈ ರೀತಿ ಮಾಡುತ್ತಿದೆ.

ಪ್ರಪಾತದಿಂದ ಬಿದ್ದ ಕಾವೇರಿ!
“ನೀನು ನನ್ನ ಮಗನಾಗಿ ಉಳಿಯಲಿ ಅಂತ ನಾನು ಇಷ್ಟೆಲ್ಲ ಮಾಡಿದೆ. ಆದರೆ ನೀನು ನಾನೇ ತಪ್ಪು ಮಾಡಿದೆ ಅಂತ ಅಂದುಕೊಂಡೆ ಅಲ್ವಾ? ನಾನು ಮಾಡಿದ್ದೇ ಸರಿ. ಕಾವೇರಿ ಕ್ಷಮೆ ಕೇಳೋದಿಲ್ಲ. ಸತ್ತರೂ ನಾನು ನನ್ನ ಸ್ವಾಭಿಮಾನಿ ಬಿಡೋದಿಲ್ಲ. ನಾನು ನನ್ನ ಮಗನ ಕಣ್ಣಲ್ಲಿ ಯಾವಾಗ ಬಿದ್ದುಹೋದ್ನೋ ಆಗಲೇ ನಾನು ಬಿದ್ದು ಹೋದೆ” ಎಂದು ಹೇಳಿ ಕಾವೇರಿ ಪ್ರಪಾತದಿಂದ ಕೆಳಗಡೆ ಬಿದ್ದಿದ್ದಾಳೆ. 

ಕಿಚ್ಚ ಸುದೀಪ್ ಈ ಮಾತು ಕೇಳಿ ಒಮ್ಮೆ, ನೋಡಿ ಆಮೇಲೆ ..!

ಕಣ್ಣೀರು ಹಾಕ್ತಿರೋ ಕುಟುಂಬ! 
ಕಾವೇರಿ ಏನೇ ಮಾಡಿದ್ರೂ ಅವಳು ಕಶ್ಯಪ್‌ ಕುಟುಂಬದ ಸದಸ್ಯೆ. ಕಾವೇರಿಯನ್ನು ಕಳೆದುಕೊಂಡು ಎಲ್ಲರೂ ಕಣ್ಣೀರು ಹಾಕಿದ್ದಾರೆ. “ಕಾವೇರಿ ಒಬ್ಬಳು ಮನಸ್ಸು ಮಾಡಿದ್ದರೆ ನಾವೆಲ್ಲ ಹೇಗೆಲ್ಲ ಇರಬಹುದಿತ್ತು? ಒಂದು ಹೆಂಗಸು ಹೇಗೆಲ್ಲ ಇರಬಾರದು ಎನ್ನೋದಿಕ್ಕೆ ಕಾವೇರಿ ಉದಾಹರಣೆ ಆದಳು. ಒಳ್ಳೆಯ ಗಂಡ, ಮುದ್ದಾದ ಮಕ್ಕಳು, ಸಂಸಾರ ಇದ್ದರೂ ಕೂಡ ಕಾವೇರಿ ಹಾಳು ಮಾಡಿಕೊಂಡಳು” ಎಂದು ತಾಯಿ ಕಣ್ಣೀರು ಹಾಕಿದ್ದಾಳೆ. 

ನಾಲ್ಕು ದಿನಗಳಲ್ಲಿ ಈ ಧಾರಾವಾಹಿ ಮುಗಿಯಲಿದೆ. ಹೀಗಾಗಿ ಇಷ್ಟು ಬೇಗ ಕಾವೇರಿ ಪಾತ್ರವನ್ನು ಅಂತ್ಯ ಮಾಡಲಿದೆ. ಈಗ ಈ ಸಾವು ಕನಸೋ? ನನಸೋ ಎಂದು ತಿಳಿದುಕೊಳ್ಳಬೇಕಾಗಿಲ್ಲ.

ಪಾತ್ರಧಾರಿಗಳು
ವೈಷ್ಣವ್-‌ ಶಮಂತ್‌ ಬ್ರೋ ಗೌಡ
ಲಕ್ಷ್ಮೀ- ಭೂಮಿಕಾ ರಮೇಶ್‌
ಕಾವೇರಿ- ಸುಷ್ಮಾ ನಾಣಯ್ಯ