Asianet Suvarna News Asianet Suvarna News

ಕಿಟ್ಟಿ ಒಂದೇ ದಿನದಲ್ಲಿ ರಾಮಾಚಾರಿ ಆಗಿ ಬದ್ಲಾಗಿದಾನೆ; ಶ್ಲೋಕ, ಮಂತ್ರ ಎಲ್ಲವನ್ನೂ ಕಲಿತ್ಕೊಂಡ್ಬಿಟ್ಟಿದಾನೆ ಅನ್ಸುತ್ತೆ

ದೇವಸ್ಥಾನದ ಪೂಜಾರಿ ರಾಮಾಚಾರಿಗೆ ತನ್ನಂತೆ ಇನ್ನೊಬ್ಬ ಇದ್ದಾನೆ ಎಂಬ ಅರಿವಿಲ್ಲ. ಆದರೆ, ರಾಮಾಚಾರಿ ತದ್ರೂಪು ಕಿಟ್ಟಿಗೆ ರಾಮಾಚಾರಿ ಎಂಬ ಪುರೋಹಿತನೊಬ್ಬ ತನ್ನಂತೆ ಇದ್ದಾನೆ ಎಂಬ ಅರಿವಿದೆ. 

Lady rowdy puts gun on ramachari in Colors Kannada serial Ramachari srb
Author
First Published Dec 11, 2023, 6:11 PM IST

'ನಿನ್ನನ್ನು ಆ ಜಾಗದಿಂದ ಕಿಡ್ನಾಪ್ ಮಾಡಿ ನಿನ್ನ ತರ ವೇಷ ಹಾಕ್ಕೊಂಡಿರೋ ವ್ಯಕ್ತಿನ ಬಿಡೋಣ ಅಂದ್ಕೊಂಡೆ' ರಾಮಾಚಾರಿ ಪ್ರೋಮೋದಲ್ಲಿ ಈ ಡೈಲಾಗ್ ಕೇಳಿಸುತ್ತಿದೆ. ಹಾಗಿದ್ದರೆ ರಾಮಾಚಾರಿ ಕತೆ ಮುಂದೇನು ಎಂಬ ಪ್ರಶ್ನೆ ರಾಮಾಚಾರಿ ಸೀರಿಯಲ್ ವೀಕ್ಷಕರ ಮನದಲ್ಲಿ ಮೂಡಿ ಬರುತ್ತಿದೆ ಎನ್ನಬಹುದು. ಈಗ ರಾಮಾಚಾರಿ ಒಬ್ಬನಲ್ಲ, ಇಬ್ಬರಾಗಿದ್ದಾರೆ. ಅಂದರೆ, ದೇವಸ್ಥಾನದ ಪುರೋಹಿತ ರಾಮಾಚಾರಿ ಒಬ್ಬ, ಕಿಟ್ಟಿ ಹೆಸರಿನ ಪೊರ್ಕಿಯಂಥ ರೌಡಿ ಇನ್ನೊಬ್ಬ. 

ಈಗ ದೇವಸ್ಥಾನದ ಪೂಜಾರಿ ರಾಮಾಚಾರಿ ಬಳಿ ಬಂದಿರುವ ಮಹಿಳೆ, 'ನಿನ್ನನ್ನು ಆ ಜಾಗದಿಂದ ಕಿಡ್ನಾಪ್ ಮಾಡಿ ನಿನ್ನ ತರ ವೇಷ ಹಾಕ್ಕೊಂಡಿರೋ ವ್ಯಕ್ತಿನ ಬಿಡೋಣ ಅಂದ್ಕೊಂಡೆ' ಎಂದು ಹೇಳಿ 'ಸಾಯೋದಕ್ಕೆ ರೆಡಿಯಾಗು, ಗುಡ್ ಬೈ' ಎಂದು ಗನ್ ಎತ್ತಿ ಗುರಿ ಇಟ್ಟಿದ್ದಾನೆ. ಹಾಗಿದ್ದರೆ ಮಂದೇನಾಗುತ್ತದೆ? ರಾಮಾಚಾರಿ ಕೊಲೆ ಆಗುತ್ತದೆಯೇ ಅಥವಾ ಕಿಟ್ಟಿಯದೋ? ಅಂದರೆ ನಿಜವಾಗಿಯೂ ಟಾರ್ಗೆಟ್ ಯಾರು? ಸಂಚಿಕೆ ನೋಡುತ್ತಿದ್ದರೆ ಮಾತ್ರ ಸ್ಟೋರಿ ಅರ್ಥವಾಗುತ್ತದೆ ಎನ್ನಬಹುದು. 

ಬಹಿರಂಗವಾಯ್ತು ಬಿಗ್ ಬಾಸ್ ಮನೆ ಸದಸ್ಯರ ಅಂತರಂಗ; ಗೆಲ್ಲೋರು ಯಾರು ಎಂದು ಹೇಳೋರು ಯಾರು?

ದೇವಸ್ಥಾನದ ಪೂಜಾರಿ ರಾಮಾಚಾರಿಗೆ ತನ್ನಂತೆ ಇನ್ನೊಬ್ಬ ಇದ್ದಾನೆ ಎಂಬ ಅರಿವಿಲ್ಲ. ಆದರೆ, ರಾಮಾಚಾರಿ ತದ್ರೂಪು ಕಿಟ್ಟಿಗೆ ರಾಮಾಚಾರಿ ಎಂಬ ಪುರೋಹಿತನೊಬ್ಬ ತನ್ನಂತೆ ಇದ್ದಾನೆ ಎಂಬ ಅರಿವಿದೆ. ಏಕೆಂದರೆ, ದೇವಸ್ಥಾನಕ್ಕೆ ಬಂದಿದ್ದ ಕಿಟ್ಟಿಯೇ ಸ್ವತಃ ರಾಮಾಚಾರಿಯನ್ನು ನೋಡಿದ್ದಾನೆ, ಮಾತಾಡಿದ್ದಾನೆ. ಆ ಮೊದಲು ಕೂಡ ಕಿಟ್ಟಿಯ ಮುಂದೆ ಹಲವರು ನಿನ್ನಂತೆ ಒಬ್ಬನಿದ್ದಾನೆ ಎಂಬ ಮಾತನ್ನು ಹೇಳಿದ್ದರು, ಆದರೆ ಆತ ನಂಬಿರಲಿಲ್ಲ. ಸ್ವತಃ ನೋಡಿದ ಮೇಲೆ ನಂಬುವ ಮಾತೇ ಇಲ್ಲ, ಸತ್ಯವೇ ಕಿಟ್ಟಿಗೆ ಗೊತ್ತಾಗಿದೆ. 

ನನ್ನ ತಂದೆ ಸಾಯುತ್ತಿದ್ದಂತೆ ನಾನು ಥಿಯೇಟರ್‌ನಿಂದ ಹೊರಗೆ ಓಡಿ ಬಂದೆ; ನಟ ಬಾಬ್ಬಿ ಡಿಯೋಲ್

ಒಟ್ಟಿನಲ್ಲಿ ಈಗ ರಾಮಾಚಾರಿ ಕೊಲೆಯಾಗುತ್ತಾನಾ? ಕಿಟ್ಟಿಯಾ? ಇಬ್ಬರೂ ಆಗದೇ ಆ ಲೇಡಿ ರೌಡಿಯನ್ನೇ ಆಟ ಆಡಿಸುತ್ತಾರಾ? ಎಲ್ಲವೂ ಸದ್ಯಕ್ಕೆ ಸಸ್ಪೆನ್ಸ್. ಸದ್ಯ ಚಾರು-ರಾಮಾಚಾರಿ ಬದಲು ಕಿಟ್ಟಿ-ರಾಮಾಚಾರಿ ಕತೆ ಮುಂದುವರಿಯುತ್ತಿದೆ. ಹಾಗಿದ್ದರೆ, ಚಾರು ಗತಿ ಏನು? ಸಂಚಿಕೆಗಳು ಮುಂದುವರಿದಂತೆ ಸೀರಿಯಲ್ ವೀಕ್ಷಕರ ಹಲವು ಪ್ರಾಶ್ನೆಗಳಿಗೆ ಒಂದೊಂದಾಗಿ ಉತ್ತರಗಳು ದೊರಕುತ್ತವೆ. ಸದ್ಯಕ್ಕೆ ರಾಮಾಚಾರಿ ಅಥವಾ ಕಿಟ್ಟಿ ಕೊಲೆಗೆ ಸಂಚು ನಡೆಯುತ್ತಿದೆ. ಮುಂದೇನು ಎಂಬುದನ್ನು ಕಾದು ನೋಡಬೇಕಷ್ಟೇ. 

 

 

Follow Us:
Download App:
  • android
  • ios