ರೊಮಾನ್ಸ್ ಸೀನ್ ಮಾಡುವಾಗ ಕೆಲವು ನಟಿಯರು ಕೊಡೋ ಕಾಟದ ಬಗ್ಗೆ ಕಿಚ್ಚ ಸುದೀಪ್ ಓಪನ್ ಮಾತು!
ನಟ ಸುದೀಪ್ ಅವರು ಆ್ಯಂಕರ್ ಅನುಶ್ರೀ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ರೊಮಾನ್ಸ್ ಬಗ್ಗೆ ಮಾತನಾಡಿದ್ದಾರೆ. ಅವರು ಏನಂದಿದ್ದಾರೆ ಕೇಳಿ.
ಬರುವ ಸೀಸನ್ಗಳ ಬಿಗ್ಬಾಸ್ಗೆ ಗುಡ್ಬೈ ಹೇಳಿರೋ ಕಿಚ್ಚ ಸುದೀಪ್ ಅವರು ಸದ್ಯ ಮ್ಯಾಕ್ಸ್ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದೇ 25ರಂದು ಚಿತ್ರ ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ಅವರು ಹಲವರು ಮಾಧ್ಯಮಗಳಿಗೆ ಇದಾಗಲೇ ತಮ್ಮ ಬದುಕು, ಬಿಗ್ಬಾಸ್ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ನಟ, ಆ್ಯಂಕರ್ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದು, ಅದರಲ್ಲಿಯೂ ವಿಭಿನ್ನ ರೀತಿಯ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅನುಶ್ರೀ ಅವರ ಅಭಿಮಾನಿಗಳು ಕಾಯುತ್ತಿದ್ದ ಆ ದಿನ ಕೊನೆಗೂ ಬಂದು ಬಿಟ್ಟಿದೆ. ಸುದೀಪ್ ಸರ್ರನ್ನು ಯಾವಾಗ ಕರೆಸ್ತೀರಾ ಎಂದು ಕೇಳುವ ಪ್ರೊಮೋ ಒಂದನ್ನು ಅನುಶ್ರೀ ಅವರು ಮೊನ್ನೆ ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ಬೇರೆ ಬೇರೆ ಗಲ್ಲಿಗಳಲ್ಲಿ, ವಿಭಿನ್ನ ರೀತಿಯ ಅಭಿಮಾನಿಗಳು ಈ ಪ್ರಶ್ನೆಯನ್ನು ಅನುಶ್ರೀ ಅವರ ಮುಂದಿಟ್ಟಿದ್ದರು. ಇದೀಗ ಆ ಸಂದರ್ಶನವನ್ನು ಅನುಶ್ರೀ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದರಲ್ಲಿ ಹಲವಾರು ವಿಷಯಗಳ ಬಗ್ಗೆ ಆ್ಯಂಕರ್ ಅನುಶ್ರೀ ಮಾತನಾಡಿದ್ದಾರೆ. ಅದರಲ್ಲಿ ಅವರು ಸರ್ ನಿಮಗೆ ತುಂಬಾ ಕಷ್ಟ ಎನ್ನಿಸುವುದು ಯಾವುದು? ಆ್ಯಕ್ಷನ್ನಾ, ರೊಮಾನ್ಸಾ ಅಥ್ವಾ ಡಾನ್ಸಾ ಎಂದು ಪ್ರಶ್ನಿಸಿದ್ದಾರೆ. ಆಗ ಜೋರಾಗಿ ನಕ್ಕಿರೋ ಸುದೀಪ್ ಅವರು ರೊಮಾನ್ಸ್ ಬಗ್ಗೆ ಕ್ಲಾರಿಫಿಕೇಷ್ ಕೊಟ್ಟು ಅದನ್ನು ಮಾಡುವುದು ಎಷ್ಟು ಕಷ್ಟ ಎನ್ನುವುದನ್ನು ತಿಳಿಸಿದ್ದಾರೆ. ನಟಿಯರ ಜೊತೆ ರೊಮಾನ್ಸ್ ಮಾಡುವಾಗ ತಮಗೆ ಏನಾಲ್ಲಾ ಕಷ್ಟ ಆಗುತ್ತದೆ ಎನ್ನುವುದನ್ನು ಅವರು ಇದರಲ್ಲಿ ಹೇಳಿದ್ದಾರೆ. ರೊಮಾನ್ಸ್ ಅನ್ನೋದು ಎದುರಿಗಿರುವ ಕಾಸ್ಟಿಂಗ್ ಅಂದರೆ ನಟಿಯರ ಮೇಲೆ ಹೋಗತ್ತೆ. ಕೆಲವೊಮ್ಮೆ ನಟಿಯರು ಫ್ರೆಂಡ್ಸ್ ಆಗಿರ್ತಾರೆ, ಈಸಿಯಾಗಿ ನಡೆದು ಹೋಗುತ್ತೆ. ಆದರೆ ಕೆಲವರು ಮೇಕಪ್ ಮೇಲೆ ಸಿಕ್ಕಾಪಟ್ಟೆ ಕಾನ್ಶಿಯಸ್ ಆಗ್ತಿರ್ತಾರೆ. ಅದೇನೂ ತಪ್ಪು ಅನ್ನೋಕೆ ಆಗಲ್ಲ. ಆದರೆ ಆಗ ಸ್ವಲ್ಪ ಕಷ್ಟ ಆಗುತ್ತೆ ಎನ್ನುತ್ತಲೇ ಅವರು ರೊಮಾನ್ಸ್ ಮಾಡಲು ಹೋಗುವಾಗ ಮೇಕಪ್ ಹಾಳಾಗತ್ತೆ, ಕೂದಲು ಹಾಳಾಗತ್ತೆ ಎಂದು ಇಲ್ಲಿ ಮುಟ್ಟಿ, ಅಲ್ಲಿ ಮುಟ್ಟಬೇಡಿ ಎಂದೆಲ್ಲಾ ಹೇಳ್ತಾರೆ, ಆಗ ತುಂಬಾ ಕಷ್ಟವಾಗಿ ಬಿಡುತ್ತೆ ಎಂದು ತಮಾಷೆ ಮಾಡಿದ್ದಾರೆ.
ಬಿಗ್ಬಾಸ್ನಿಂದ ಹೊರಬರಲು ಕೊನೆಗೂ ಕಾರಣ ನೀಡಿದ ಸುದೀಪ್: ಅಭಿಮಾನಿಗಳ ಪ್ರಶ್ನೆಗೆ ಸಿಕ್ಕಿತು ಉತ್ತರ...
ಇದೇ ಸಂದರ್ಶನದಲ್ಲಿ ತಾವು ಡಾನ್ಸ್ ಮಾಡೋದು ನನಗೆ ಆಗಿ ಬರಲ್ಲ ಎನ್ನುತ್ತಲೇ ಅದಕ್ಕೂ ಉದಾಹರಣ ಕೊಟ್ಟಿದ್ದಾರೆ. ನನ್ನಿಂದ ಡಾನ್ಸ್ ಮಾಡಿಸಲೇ ಬೇಕು ಅಂದಾಗ ನಿರ್ದೇಶಕರು ಡಾನ್ಸ್ ಬರದ ನಟರ ವಿಡಿಯೋ ತೋರಿಸಿ, ಇವರು ಹೀಗೆ ಮಾಡ್ತಾರೆ, ನೀವು ಚೆನ್ನಾಗಿ ಮಾಡಬಹುದು ಅಂತ ಹುರಿದುಂಬಿಸ್ತಾರೆ. ಅದರೆ ಅಪ್ಪು ಅವರಂಥವರ ಡಾನ್ಸ್ ನೋಡಿದಾಗ ನಾನು ಡಾನ್ಸ್ ಮಾಡುವ ಗೋಜಿಗೆ ಹೋಗಲ್ಲ. ಆದ್ದರಿಂದ ಡಾನ್ಸ್ ಸೀನ್ ಬಂದಾಗಲೆಲ್ಲಾ ಮೂಡ್ ಡಿಫರೆಂಟ್ ಆಗಿರುತ್ತೆ. ಒಂದು ವೇಳೆ ಯಾವುದಾದರೂ ಸಿನಿಮಾದಲ್ಲಿ ಒಳ್ಳೆಯ ಡಾನ್ಸ್ ಮಾಡಿದ್ದೆ ಅಂದ್ರೆ, ಆಗ ಯಾರೋ ಒಬ್ಬ ಡಾನ್ಸ್ ಬರದ ನಟನ ವಿಡಿಯೋ ತೋರಿಸಿ ಡಾನ್ಸ್ ಮಾಡಿಸಿದ್ದಾರೆ ಎಂದೇ ಅರ್ಥ ಎಂದಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಸುದೀಪ್ ಅವರು ತಾವು ಬಿಗ್ಬಾಸ್ ಬಿಟ್ಟ ಕಾರಣವನ್ನು ನೀಡಿದ್ದರು. 'ಎಲ್ಲರನ್ನೂ ರಿಪೇರಿ ಮಾಡ್ತಾ ಕುಳಿತುಕೊಳ್ಳಲು ನಾನು ಬಂದಿಲ್ಲ, ಎಷ್ಟು ಅಂತ ಮಾಡೋದು, ಸಾಕಾಗಿದೆ ಇಷ್ಟು ವರ್ಷ ಮಾಡಿದ್ದು ಸಾಕು. ಬಿಗ್ಬಾಸ್ ಎಂದರೆ ಸುಮ್ಮನೇ ಅಲ್ಲ, ಸಿಕ್ಕಾಪಟ್ಟೆ ಎಫರ್ಟ್ ಹಾಕಬೇಕು. ಈ ಎಫರ್ಟ್ ಯಾರಿಗೂ ಅರ್ಥ ಆಗಲ್ಲ ಎಂದು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಸಲದ ಉದಾಹರಣೆಯನ್ನೇ ಕೊಡುತ್ತೇನೆ ನೋಡಿ. ಚೆನ್ನೈನಿಂದ ಒಂದೂವರೆ ಗಂಟೆ ದೂರ ಇರುವ ಮಹಾಬಲಿಪುರಂನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಬೆಂಗಳೂರಿನಿಂದ ನಾನು ಹೋಗುವ ವಿಷಯ ಹೇಳುವುದಾದರೆ, ಮನೆಯಿಂದ ಏರ್ಪೋರ್ಟ್ಗೆ ಒಂದೂವರೆ ಗಂಟೆ. ಬಳಿಕ ಒಂದು ಗಂಟೆ ವಿಮಾನಕ್ಕಾಗಿ ವೇಟಿಂಗ್. ಅಲ್ಲಿಂದ ಚೆನ್ನೈಗೆ ಹೋಗಲು ನಲವತ್ತು ನಿಮಿಷ. ಅಲ್ಲಿಂದ ಒಂದೂವರೆ ಗಂಟೆ ಮತ್ತೆ ಪ್ರಯಾಣ. ಅಲ್ಲಿ ಶೂಟಿಂಗ್ ನಡೆಯುತ್ತಿತ್ತು. ಇಷ್ಟು ಕಷ್ಟ ಪಡಬೇಕಾಗಿತ್ತು' ಎನ್ನುವ ಮೂಲಕ ಬಿಗ್ಬಾಸ್ ಪಯಣಕ್ಕೆ ಸುದೀಪ್ ಅವರು ವಿದಾಯ ಹೇಳಿದ್ದಾರೆ. ಮುಂದೆ ಯಾರ ನೇತೃತ್ವದಲ್ಲಿ ಬಿಗ್ಬಾಸ್ ಬರುತ್ತೆ ಎಂದು ವೀಕ್ಷಕರು ಕಾಯುತ್ತಿದ್ದಾರೆ.
ಉಪೇಂದ್ರ ಇರೋ ಕಡೆ ಬಿಗ್ಬಾಸ್ ಯಾಕೆ? ಅವ್ರೊಂದು ಹೇಳಿದ್ರೆ, ಇವ್ರೊಂದು ಹೇಳ್ತಾರೆ- ಸುದೀಪ್ ಮಾತು ಕೇಳಿ...