ಮನೆಯನ್ನು ಎರಡು ಪಾಲು ಮಾಡೇ ಬಿಟ್ಲು ಕುಸುಮಾ: ಅತ್ತೆ ರಾಕ್​, ಮಗ ತಾಂಡವ್​ ಶಾಕ್​!

ಮಗನಿಗೆ ಬುದ್ಧಿ ಕಲಿಸಲು ಕುಸುಮಾ ಮನೆಯನ್ನು ಎರಡು ಭಾಗ ಮಾಡಿದ್ದಾಳೆ. ಇದನ್ನು ನೋಡಿ ಶಾಕ್​ ಆಗಿದ್ದಾನೆ ತಾಂಡವ್​. ಮುಂದೇನು?
 

Kusuma has divided the house into two parts to teach lesson to her son in Bhagyalakshmi suc

ಸೊಸೆಯ ಭಾಗ್ಯಳ ಪರವಾಗಿ ಅತ್ತೆ ಕುಸುಮಾ ನಿಂತಿದ್ದಾಳೆ.  ಯಾವುದೇ ಕಾರಣಕ್ಕೂ ಕುಸುಮಾಳನ್ನು ಹೊರಗೆ ಹಾಕುವ ಪಣ ತೊಟ್ಟ ಮಗ ತಾಂಡವ್​ಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ.  ತಾಂಡವ್​ಗೆ ಬುದ್ಧಿ ಕಲಿಸಲು, ತಮ್ಮ ಸೊಸೆ ಭಾಗ್ಯಳನ್ನು ಉಳಿಸಿಕೊಳ್ಳಲು ಇದಲ್ಲದೇ ಬೇರೆ ಮಾರ್ಗವಿಲ್ಲ ಎಂದು ಈ ಮಾರ್ಗವನ್ನು ತನ್ನದಾಗಿಸಿಕೊಂಡಿದ್ದಾಳೆ.  ಅಷ್ಟಕ್ಕೂ ಈಗ ಭಾಗ್ಯಳೂ ಬದಲಾಗಿದ್ದಾಳೆ. ಭಾಗ್ಯಲಕ್ಷ್ಮಿ ಕೊನೆಗೂ ಗಂಡ ತಾಂಡವ್​ ಎದುರು ನಿಂತು ಮಾತನಾಡುವಷ್ಟು ಗಟ್ಟಿಗಿತ್ತಿಯಾಗಿದ್ದಾಳೆ. ಗಂಡನೇ ಸರ್ವಸ್ವ,  ಆತ ಏನು ಮಾಡಿದರೂ ತಾಳ್ಮೆಯಿಂದ ಇರಬೇಕು, ಪತಿಯೇ ಪರದೈವ ಎಂದೆಲ್ಲಾ ಎಂದುಕೊಂಡು ಇಲ್ಲಿಯವರೆಗೆ ಸಹನಾಮೂರ್ತಿಯಂತಿದ್ದ ಭಾಗ್ಯ ಪತಿಗೇ ದುರುಗುಟ್ಟು ನೋಡಿ ನೋಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾಳೆ. ಮನೆ ನನ್ನದು, ಮನೆಬಿಟ್ಟು ಹೋಗು, ಡಿವೋರ್ಸ್​ ಕೊಡುವೆ ಎಂದೆಲ್ಲಾ ಹೇಳಿ ಪೌರುಷ ಮೆರೆಯುತ್ತಿದ್ದ ತಾಂಡವ್​, ಪತ್ನಿಯ ಈ ರೂಪಕ್ಕೆ ಸುಸ್ತು ಹೊಡೆದಿದ್ದಾನೆ.

ನಾನು ಮನೆ ಬಿಟ್ಟು ಹೋಗುವುದಿಲ್ಲ. ಇಲ್ಲಿಯೇ ಇರುತ್ತೇನೆ ಎಂದಾಗ, ಕುಸುಮಾ ನಾವೂ ನಿನ್ನನ್ನು ಹೋಗಲು ಬಿಡುವುದಿಲ್ಲಮ್ಮಾ ಎಂದಿದ್ದಾಳೆ. ಆದರೆ ಭಾಗ್ಯಳನ್ನು ಈ ಸಲ ಮನೆಯಲ್ಲಿ ಇರಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾನೆ. ಅಮ್ಮ ಕುಸುಮಾ ಅವನಿಗೆ ಕಪಾಳಮೋಕ್ಷ ಮಾಡಿದ್ದಾಳೆ.  ಇಷ್ಟಕ್ಕೆ ಸುಮ್ಮನಾಗದ ಕುಸುಮಾ ಮನೆಯನ್ನು ಎರಡು ಪಾಲು ಮಾಡಿದ್ದಾಳೆ. ಅಷ್ಟಕ್ಕೂ ಪಾಲು ಎಂದರೆ ಒಂದು ಗೆರೆ ಎಳೆದಿದ್ದಾಳೆ. ಮಗ ತಾಂಡವ್​ ಬಳಿಯಲ್ಲಿ ನಿಂತಿದ್ದ ಭಾಗ್ಯ ಮತ್ತು ಮಕ್ಕಳನ್ನು ಗೆರೆ ದಾಟಿಸಿ ತನ್ನ ಬಳಿ ಕರೆದುಕೊಂಡು ಬಂದಿದ್ದಾಳೆ.

ಧಾರಾವಾಹಿ ಅಂದ್ರೆ ಸುಮ್ನೇನಾ? ಭಾಗ್ಯಳ ನೋಡಿ 10ನೇ ಕ್ಲಾಸ್​ ಪರೀಕ್ಷೆ ಬರೆದ್ರು ಈ ಅಮ್ಮಾ...

ಪದೇ ಪದೇ ತಾಂಡವ್​, ನನ್ನ ಮನೆಯಲ್ಲಿ ನೀನು ಇರಲು ಸಾಧ್ಯವಿಲ್ಲ ಎಂದು ಪತ್ನಿಗೆ ಹೇಳುತ್ತಿದ್ದ. ಇದೇ ಮಾತನ್ನು ಈಗ ಕುಸುಮಾ ಹೇಳಿದ್ದಾಳೆ.  ನಿನ್ನ ಮನೆ ಗೆರೆಯ ಆ ಭಾಗ, ನಮ್ಮ ಮನೆ ಗೆರೆಯ ಭಾಗ, ನೀನು ಹೇಳಿದ ಹಾಗೆ ನಿನ್ನ ಮನೆಯಿಂದ ಕುಸುಮಾಳನ್ನು ನನ್ನ ಮನೆಗೆ ಕರೆದುಕೊಂಡು ಬಂದಿದ್ದೇನೆ. ಅವಳ ಜೊತೆ ಮಕ್ಕಳನ್ನೂ ಕರೆದುಕೊಂಡು ಬಂದಿದ್ದೇನೆ. ನಿನ್ನ ಮನೆ ನಿನಗೆ, ನಮ್ಮ ಮನೆ ನಮಗೆ. ಏನು ಬೇಕಾದರೂ ಮಾಡಿಕೋ ಎಂದಿದ್ದಾಳೆ. ಇದನ್ನು ಕೇಳಿ ತಾಂಡವ್​ ಜೊತೆ ಭಾಗ್ಯಳೂ ಶಾಕ್​ ಆಗಿದ್ದಾಳೆ. ಹಾವು ಸಾಯ್ಬೇಕು, ಆದ್ರೆ ಕೋಲು ಮುರಿಯಬಾರ್ದು ಎಂಬ ತಂತ್ರ ಮಾಡಿದ್ದಾಳೆ ಕುಸುಮಾ.

ಅತ್ತೆ ಕುಸುಮಾ ಸೊಸೆ ಪರವಾಗಿ ನಿಂತು ಮಗನನ್ನೇ ಹೊರಕ್ಕೆ ಹಾಕಿರುವುದಕ್ಕೆ ಸೀರಿಯಲ್​ನ ಅಭಿಮಾನಿಗಳಂತೂ ಫುಲ್​ ಖುಷ್​ ಆಗಿದ್ದಾರೆ. ಅತ್ತೆ ಎಂದರೆ ಹೀಗಿರಬೇಕು. ಮಗ ದಾರಿ ತಪ್ಪಿದಾಗ, ಇದೇ ರೀತಿ ಬುದ್ಧಿ ಕಲಿಸಬೇಕು. ಆದರೆ ಇಂದು ಎಷ್ಟೋ ಮನೆಗಳಲ್ಲಿ ಮಗ ಏನೇ ಮಾಡಿದರೂ ಆತನ ಪರ ವಹಿಸಿಕೊಂಡು ಬರುವ ಅತ್ತೆಯಂದಿರೇ ಹೆಚ್ಚಾಗಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಮಗ ತಾಂಡವ್​ ಅಡ್ಡ ದಾರಿ ಹಿಡಿಯುತ್ತಿರುವ ಹೊತ್ತಿನಲ್ಲಿಯೇ ಆತನಿಗೆ ಬುದ್ಧಿ ಹೇಳಿದ್ದರೆ ಇಷ್ಟು ದೂರ ಆತ ಬರುತ್ತಲೇ ಇರಲಿಲ್ಲ. 16 ವರ್ಷ ಸಂಸಾರದಿಂದ ಎರಡು ಮಕ್ಕಳು ಬೆಳೆದು ನಿಂತ ಮೇಲೆ ಈಗ ಬುದ್ಧಿ ಹೇಳಿದ್ರೆ ಅವನು ಕೇಳ್ತಾನಾ ಎನ್ನುತ್ತಿದ್ದಾರೆ. 

ನಿನ್ನ ಕರಿಮಣಿ ಮಾಲಿಕನೂ ಅವ್ನೇ ಆದ್ರೆ ಚಂದನ್​ ಕಥೆಯೇನಮ್ಮಾ? ನಿವೇದಿತಾಗೆ ಕಾಲೆಳೀತಿರೋ ಫ್ಯಾನ್ಸ್​!

Latest Videos
Follow Us:
Download App:
  • android
  • ios