Asianet Suvarna News Asianet Suvarna News

ಕೊನೆಗೂ ಮಗ ತಾಂಡವ್‌ನ ವೆಡ್ಡಿಂಗ್‌ ಕಾರ್ಡ್ ಸಿಕ್ಕೇ ಬಿಡ್ತು! ಕೋಮಾಕ್ಕೆ ಹೋಗ್ತಾಳಾ ಕುಸುಮಾ?

ಶ್ರೇಷ್ಠಾ ಮದುವೆಯಾಗ್ತಿರೋದು ತನ್ನ ಮಗ ತಾಂಡವ್‌ನನ್ನೇ ಎನ್ನುವ ಸತ್ಯ ಕೊನೆಗೂ ಕುಸುಮಾಗೆ ತಿಳಿದಿದೆ. ಮದುವೆ ಪತ್ರಿಕೆ ಕೈಸೇರಿದೆ. ಮುಂದೇನು?
 

Kusuma finally knows the truth that Shrestha is marrying her son Tandav in Bhagyalakshmi suc
Author
First Published Sep 1, 2024, 2:33 PM IST | Last Updated Sep 1, 2024, 2:33 PM IST

ಶ್ರೇಷ್ಠಾ ಮತ್ತು ತಾಂಡವ್‌ ಅತ್ಯಂತ ನಿಕಟವಾಗಿದ್ದರೂ, ತನ್ನ ಮಗನ ಬಗ್ಗೆ ಅರಿಯದೇ ವೀಕ್ಷಕರಿಂದ ಛೇ ಇದೆಂಥ ಅಮ್ಮಾ ಎನಿಸಿಕೊಂಡಿದ್ದ ಕುಸುಮಾಗೆ ಕೊನೆಗೂ ಮಗನ ಬಂಡವಾಳ ತಿಳಿದಿದೆ. ಶ್ರೇಷ್ಠಾ ಮದುವೆಯಾಗ್ತಿರೋದು ತನ್ನ ಮಗ ತಾಂಡವ್‌ನನ್ನೇ ಎನ್ನುವ ಅರಿವು ಕೊನೆಗೂ ಆಗಿದೆ. ಅತ್ತ ಶ್ರೇಷ್ಠಾ ಜಿದ್ದಿಗೆ ಬಿದ್ದವಳಂತೆ ಮದುವೆಗೆ ರೆಡಿಯಾಗಿದ್ದರೆ, ಇತ್ತ ಕುಸುಮಾಗೆ ಸತ್ಯದ ಅರಿವು ಆಗಿದೆ. ಕಪಾಟಿನಲ್ಲಿದ್ದ ಆಮಂತ್ರಣ ಪತ್ರಿಕೆಯನ್ನು ಈಗ ನೋಡಿದ್ದಾಳೆ ಕುಸುಮಾ. ಅದರಲ್ಲಿ ಶ್ರೇಷ್ಠಾ ಮತ್ತು ತಾಂಡವ್‌ ಫೋಟೋ ಇದೆ, ಜೊತೆಗೆ ಇವರಿಬ್ಬರ ಹೆಸರು ಕೂಡ ಆಮಂತ್ರಣ ಪತ್ರಿಕೆಯಲ್ಲಿ ಇರುವುದನ್ನು ನೋಡಿ ಆಕಾಶವೇ ತಲೆಯ ಮೇಲೆ ಬಿದ್ದ ಹಾಗೆ ಆಗಿದೆ ಕುಸುಮಾಳಿಗೆ. ತಲೆ ತಿರುಗಿ ಬಿದ್ದಿದ್ದಾಳೆ.

ಅತ್ತ ಈ ಸತ್ಯ ಗೊತ್ತಿದ್ದ ಪೂಜಾ ಸುಮ್ಮನಿದ್ದರೆ, ಇತ್ತ ಕುಸುಮಾ ಕೋಮಾಕ್ಕೆ ಜಾರುವ ಎಲ್ಲಾ ಸಾಧ್ಯತೆ ಇದೆ ಎಂದೇ ನೆಟ್ಟಿಗರು ಹೇಳುತ್ತಿದ್ದಾರೆ. ಅದೇ ಇನ್ನೊಂದೆಡೆ, ಭಾಗ್ಯಳಿಗೆ ಇದ್ಯಾವುದರ ಅರಿವೇ ಇಲ್ಲ. ಶ್ರೇಷ್ಠಾ ಇಬ್ಬರು ಮಕ್ಕಳ ಅಪ್ಪನನ್ನು ಮದುವೆಯಾಗುತ್ತಿರುವುದು ತಿಳಿದ ಕಾರಣ, ಆ ಮದುವೆಯನ್ನು ನಿಲ್ಲಿಸಲು ಹೋಗಿದ್ದಾಳೆ ಅಷ್ಟೇ.  ಶ್ರೇಷ್ಠಾ ಅತ್ತ ಎಲ್ಲರನ್ನೂ ವಿರೋಧ ಹಾಕಿಕೊಂಡು ಮದ್ವೆಗೆ ರೆಡಿಮಾಡಿಕೊಳ್ತಿದ್ರೆ, ಇತ್ತ ಮದುಮಗ ತಾಂಡವ್​ ರೂಂ ಒಳಗೆ ಲಾಕ್​ ಆಗಿದ್ದಾನೆ! ಭಾಗ್ಯಳ ಮೇಲೆ ಸೇಡು ತೀರಿಸಿಕೊಳ್ಳಲು ಕುದಿಯುತ್ತಿರೋ ಶ್ರೇಷ್ಠಾ, ಅವಳ ಗಂಡ ತಾಂಡವ್​ ಜೊತೆ  ಮದ್ವೆ ಫಿಕ್ಸ್​ ಮಾಡಿದ್ದಾಳೆ. ಅದನ್ನು ಭಾಗ್ಯಳಿಗೂ ಫೋನ್​ ಮಾಡಿ ತಿಳಿಸಿದ್ದಾಳೆ. ಅಷ್ಟಕ್ಕೂ ಶ್ರೇಷ್ಠಾ ಅಕ್ಷರಶಃ ನಾಗವಲ್ಲಿಯಾಗಿದ್ದಾಳೆ. ಏನಾದರೂ ಮಾಡಿ ಭಾಗ್ಯಳಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ. 

ವೆಡ್ಡಿಂಗ್​ ಡೆಸ್ಟಿನೇಷನ್​ ಬಿಟ್ಟು ಪುರಾತನ ದೇಗುಲದಲ್ಲಿ ಅದಿತಿ ಮದ್ವೆ: ರಾಜವಂಶಸ್ಥೆ ನಟಿಯ ಹಿನ್ನೆಲೆ ಕೆದಕಿದಷ್ಟೂ ರೋಚಕ!

 ಎಷ್ಟು ಹೊತ್ತಾದರೂ ತಾಂಡವ್​ ಬಾರದ್ದನ್ನು ನೋಡಿ ಶ್ರೇಷ್ಠಾ ತಾಂಡವ್​ಗೆ ವಿಡಿಯೋ ಕಾಲ್​ ಮಾಡಿದ್ದಾಳೆ. ಇಬ್ಬರ ಕಿತ್ತಾಟ ನಡೆದಿದೆ. ಅಪ್ಪ-ಅಮ್ಮನ ವಿರುದ್ಧ ಹೋದ ಶ್ರೇಷ್ಠಾಳಿಗೆ ಸಿಕ್ಕಾಪಟ್ಟೆ ಬೈದಿದ್ದಾನೆ ತಾಂಡವ್​. ಇದನ್ನು ಕೇಳಿ ಮೊದಲದೇ ಉರಿದು ಹೋಗಿರೋ ಶ್ರೇಷ್ಠಾಳಿಗೆ ಇನ್ನಷ್ಟು ಕೋಪ ಬಂದಿದೆ. ನಂತರ ಅದೇ ಕಾರಣಕ್ಕೆ ತನ್ನನ್ನು ಮನೆಯಲ್ಲಿ ಲಾಕ್​ ಮಾಡಿಟ್ಟಿರುವುದಾಗಿ ಹಾಗೂ ಮಕ್ಕಳನ್ನು ಕಾವಲು ನೇಮಿಸಿರುವುದಾಗಿ ತಾಂಡವ್​ ಶ್ರೇಷ್ಠಾಳಿಗೆ ಹೇಳಿದ್ದಾನೆ. ಇದನ್ನು ಕೇಳಿ ಮತ್ತಷ್ಟು ಬೆಂಕಿ ಹೊತ್ತಿಕೊಂಡಿದೆ ಶ್ರೇಷ್ಠಾಳಿಗೆ. ಅದೇನು ಮಾಡುತ್ತೀಯೋ ಗೊತ್ತಿಲ್ಲ. ಎಲ್ಲಾ ನಿನ್ನ ಕೈಯಲ್ಲಿದೆ ಎನ್ನುತ್ತಲೇ ಧಮ್ಕಿ ಹಾಕಿದ್ದಾಳೆ. 

ಒಂದು ಕಡೆ ತಾಳಿ, ಇನ್ನೊಂದು ಕಡೆ ವಿಷದ ಬಾಟಲಿ ಇಟ್ಟುಕೊಂಡಿರುವುದನ್ನು  ತೋರಿಸಿರೋ ಶ್ರೇಷ್ಠಾ ಎಲ್ಲವೂ ನಿನ್ನ ಕೈಯಲ್ಲಿಯೇ ಇದೆ ಎಂದಿದ್ದಾರೆ. ಇದನ್ನು ನೋಡಿ ತಾಂಡವ್​ ಅಕ್ಷರಶಃ ಬೆವರಿ ಹೋಗಿದ್ದಾನೆ. ಏನು ಮಾಡಬೇಕು ಎನ್ನುವುದು ತಿಳಿಯದೇ ಕಂಗಾಲಾಗಿ ಹೋಗಿದ್ದಾನೆ. ಇನ್ನೊಂದೆಡೆ ತಾಂಡವ್​ ಬದಲು ಭಾಗ್ಯ ಮತ್ತು ಕುಸುಮಾ ಮದುವೆಯ ಸ್ಪಾಟ್​ ತಲುಪಿದ್ದಾರೆ. ಅಲ್ಲಿ ಶ್ರೇಷ್ಠಾಳಿಗೆ ಮತ್ತಷ್ಟು ಅವಮಾನ ಮಾಡಿದ್ದಾಳೆ ಭಾಗ್ಯ. ತಾಂಡವ್​ನನ್ನು ಕೂಡಿ ಹಾಕಿರುವ ವಿಚಾರ ಆಗ ಶ್ರೇಷ್ಠಾಳಿಗೆ ಗೊತ್ತಿಲ್ಲದಿದ್ದ ಕಾರಣ, ನಿನ್ನ ಗಂಡನನ್ನೇ ಮದುವೆಯಾಗಿ ಹೇಗೆ ಶಾಕ್​ ಕೊಡ್ತೇನೆ ನೋಡು ಎಂದು ಮನಸ್ಸಿನಲ್ಲಿಯೇ ಅಂದುಕೊಂಡಿದ್ದಾಳೆ. ಯಾವ ಕಾರಣಕ್ಕೂ ಈ ಮದುವೆಯನ್ನು ಆಗಲು ನಾನು ಕೊಡಲ್ಲ ಎಂದು ಭಾಗ್ಯ ಹೇಳಿದ್ದಾಳೆ. ಆದರೆ ಇದೀಗ ತಾಂಡವ್​ ಲಾಕ್​ ಆಗಿರೋ ಕಾರಣ, ಅತ್ತ ಶ್ರೇಷ್ಠಾ, ಇತ್ತ ತಾಂಡವ್​ ಇಬ್ಬರ ಸ್ಥಿತಿಯೂ ಅಯೋಮಯವಾಗಿದೆ. 

ದೀಪಿಕಾ ಡೆಲಿವರಿ ಡೇಟ್‌ ರಿವೀಲ್‌! ಮಗುವಿಗೂ- ನಟಿಯ ಎಕ್ಸ್‌ ರಣಬೀರ್‌ ಕಪೂರ್‌ಗೂ ಇದೆಂಥ ನಂಟು!
 

Latest Videos
Follow Us:
Download App:
  • android
  • ios