ಧಾರಾವಾಹಿಯಲ್ಲಿ ತಾಯಿ-ಮಗ ಪಾತ್ರ ಮಾಡಿದ ಕಲಾವಿದರು ರಿಯಲ್ ಲೈಫ್‌ನಲ್ಲಿ ಪ್ರೀತಿಸುತ್ತಿದ್ದಾರೆ. ಅವರು ಯಾರು?
ಧಾರಾವಾಹಿಯಲ್ಲಿ ಮಾಡುವ ಪಾತ್ರಗಳಿಗೂ, ನಿಜಜೀವನದ ಸಂಬಂಧಗಳಿಗೂ ಸಂಬಂಧವೇ ಇರೋದಿಲ್ಲ. ಅಂದಹಾಗೆ ghum hai kisikey pyaar meiin ಧಾರಾವಾಹಿಯಲ್ಲಿ ಅತ್ತಿಗೆ-ಮೈದುನ ಪಾತ್ರ ಮಾಡಿದವರು. ನಿಜ ಜೀವನದಲ್ಲಿ ಸತಿ-ಪತಿಗಳಾಗಿದ್ದಾರೆ. ಈಗ ʼಕುಂಕುಮ ಭಾಗ್ಯʼ ಧಾರಾವಾಹಿಯಲ್ಲಿ ನಟಿಸಿದ ಸೆಲೆಬ್ರಿಟಿಗಳು ಪ್ರೀತಿಯಲ್ಲಿ ಬಿದ್ದಿದ್ದಾರೆ.
ʼಕುಂಕುಮ ಭಾಗ್ಯʼ ಧಾರಾವಾಹಿ!
ಹಿಂದಿಯ ʼಕುಂಕುಮ ಭಾಗ್ಯʼ ಧಾರಾವಾಹಿಯಲ್ಲಿ ತಾಯಿ ಆಲಿಯಾ ಪಾತ್ರದಲ್ಲಿ ರೆಹಾನಾ ಪಂಡಿತ್ ಅವರು ನಟಿಸಿದ್ದಾರೆ. ಪುತ್ರನ ಪಾತ್ರದಲ್ಲಿ ಜೀಶನ್ ಖಾನ್ ಅವರು ನಟಿಸಿದ್ದಾರೆ. ತೆರೆ ಮೇಲೆ ಇವರಿಬ್ಬರು ಅಮ್ಮ-ಮಗ. ಆದರೆ ನಿಜ ಜೀವನದಲ್ಲಿ ಲವ್ವರ್ಸ್.
ಅಮೃತಧಾರೆ ಧಾರಾವಾಹಿಯಿಂದ ಮತ್ತೋರ್ವ ಪಾತ್ರಧಾರಿ ಹೊರಗಡೆ ಬಂದ್ರಾ? ಯಾಕೆ ಅವ್ರು ಕಾಣಿಸ್ತಿಲ್ಲ?
Move On ಎಂದ ಜೋಡಿ!
ಹೌದು, ಲಿಪ್ ಕಿಸ್ ಮಾಡಿಕೊಳ್ಳುವ ಫೋಟೋವನ್ನು ಶೇರ್ ಮಾಡಿಕೊಂಡು ಜೀಶನ್ ಖಾನ್ ಅವರು ತಾವು ರೆಹಾನಾರನ್ನು ಪ್ರೀತಿಸುವ ವಿಷಯವನ್ನು ಶೇರ್ ಮಾಡಿಕೊಂಡಿದ್ದರು. ಆ ನಂತರ ಇವರಿಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಮಾತು ಬಂತು. ಅದಾದ ನಂತರದಲ್ಲಿ ಮತ್ತೆ ಈ ಜೋಡಿ ಒಂದಾಗಿದೆಯಂತೆ. ರೆಹಾನಾ ಜೊತೆಗೆ ಜಿಮ್‌ನಲ್ಲಿ ಅಪ್ಪಿಕೊಂಡಿರುವ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗ ಈ ಜೋಡಿ ಹೊಸ ಆಲ್ಬಮ್ ಸಾಂಗ್‌ನಲ್ಲಿ ಕಾಣಿಸಿಕೊಂಡು, ʼMove Onʼ ಎಂದಿದ್ದಾರೆ.
ಜೀಶನ್ ಖಾನ್ ಏನಂದ್ರು?
ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದ ಜೀಶನ್ ಖಾನ್ ಅವರು, “ನಾವು ಜೊತೆಗಿದ್ದೇವೆ. ನಮ್ಮ ಬದುಕಿನ ಬಗ್ಗೆ ಖಾಸಗಿತನ ಕಾಪಾಡಿಕೊಳ್ಳಲು ಬಯಸ್ತೀವಿ. ನಾವು ಸಾಕಷ್ಟು ವಿಚಾರಗಳ ಬಗ್ಗೆ ಗಮನಹರಿಸುತ್ತಿದ್ದೇವೆ. ಹೀಗಿದ್ದಾಗ್ಯೂ ನಮ್ಮ ಸಂಬಂಧದ ಬಗ್ಗೆ ಅಧಿಕೃತ ಘೋಷಣೆ ಮಾಡೋಕೆ ಆಗ್ತಿಲ್ಲ. ಆದರೆ ನಾವು ಒಟ್ಟಾಗಿ ಬಾಳಬೇಕು. ಪ್ರೀತಿ ಇಲ್ಲ ಅಂದಿದ್ರೆ ನಾನು ಈ ರೀತಿ ಫೋಟೋಗಳನ್ನು ಶೇರ್ ಮಾಡಿಕೊಳ್ತಿರಲಿಲ್ಲ” ಎಂದು ಹೇಳಿದ್ದರು.
ಕನ್ನಡ ಕಲಿಯಿರಿ, ಇಂಗ್ಲಿಷ್ ಬಿಡಬೇಡಿ: ಆಂಗ್ಲ ಭಾಷಾ ಅಗತ್ಯತೆ ಬಗ್ಗೆ ಒತ್ತಿ ಹೇಳ್ತಿದೆಯಾ ʼಬ್ರಹ್ಮಗಂಟುʼ ಧಾರಾವಾಹಿ?
ಮದುವೆ ಯಾವಾಗ?
“ನಮ್ಮ ಪ್ರೀತಿ ಮದುವೆ ಹಂತಕ್ಕೆ ಹೋದರೆ ನಾನು ಮದುವೆ ಬಗ್ಗೆ ಘೋಷಣೆ ಮಾಡ್ತೀನಿ. ಈಗ ನಾವು ಬೇರೆ ಬೇರೆ ಕೆಲಸದಲ್ಲಿ ಬ್ಯುಸಿ ಇರೋದರಿಂದ ಈ ವಿಷಯವನ್ನು ಖಾಸಗಿಯಾಗಿ ಇಡಲು ಪ್ರಯತ್ನಪಡ್ತೀವಿ” ಎಂದು ಜೀಶನ್ ಖಾನ್ ಅವರು ಹೇಳಿದ್ದಾರೆ.
ಜ್ಯೋತಿಷಿಗೇ ಸುಳ್ಳು ಹೇಳಿ ಸಿಕ್ಕಾಕ್ಕೊಂಡು ಬಿದ್ದೆ: ಅಂದು ನಡೆದ ರೋಚಕ ಪ್ರಸಂಗ ವಿವರಿಸಿದ ಮಾಸ್ಟರ್ ಆನಂದ್
ಬ್ರೇಕಪ್ ಬಗ್ಗೆ ಏನಂದ್ರು?
ಬ್ರೇಕಪ್ ಬಗ್ಗೆ ಮಾತನಾಡಿದ್ದ ಜೀಶನ್ ಖಾನ್ ಅವರು “ನಾವು ಒಟ್ಟಾಗಿ ಕೂತು ಮಾತಾಡಿಕೊಂಡು ಮನಸ್ತಾಪ ಬಗೆಹರಿಸಿಕೊಳ್ಳಬೇಕು ಎಂದುಕೊಂಡೆವು. ಎಷ್ಟೇ ಕಷ್ಟಪಟ್ಟರೂ ಕೂಡ ನಾವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗಲಿಲ್ಲ. ಎಲ್ಲವೂ ಸರಿಹೋದರೆ ನಾವು ಒಂದಾಗುತ್ತೇವೆ. ಒಂದುವೇಳೆ ಸಮಸ್ಯೆ ಬಗೆಹರಿದಿಲ್ಲ ಅಂದ್ರೆ ಅವಳ ಜೀವನ ಬೇರೆಯವರ ಜೊತೆ ಬರೆದುಕೊಂಡಿದೆ ಎಂದು ಭಾವಿಸ್ತೀನಿ” ಎಂದು ಹೇಳಿದ್ದಾರೆ.
ಬ್ರೇಕಪ್ ಆದ ಬಳಿಕ ಮತ್ತೆ ಈ ಜೋಡಿ ಒಂದಾಗಿದೆ. ಹೀಗಾಗಿಯೇ ಈ ಜೋಡಿ ಆಲ್ಬಮ್ ಸಾಂಗ್ ಮಾಡಿದೆ. ಈ ಹಾಡಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಸಿಗಲಿದೆ ಎಂದು ಕಾದು ನೋಡಬೇಕಿದೆ.
