ತ್ರಿಯಂಬಕ ಚಿತ್ರದ ಅನುಪಮ ಗೌಡರಿಗೆ 2019ರ ಉತ್ತಮ ನಟಿ ರಾಜ್ಯ ಪ್ರಶಸ್ತಿ ಲಭಿಸಿದೆ. ಸ್ನೇಹಿತೆ ಕೃಷಿ ತಾಪಂಡ ಅವರನ್ನು ಅಭಿನಂದಿಸಿ ಸಂಭ್ರಮಿಸಿದ್ದಾರೆ. ಅನುಪಮ ಅವರ ಸಮರ್ಪಣೆ ಮತ್ತು ಸಾಧನೆಯನ್ನು ಶ್ಲಾಘಿಸಿದ್ದಾರೆ. ಅಭಿಮಾನಿಗಳು ಕೂಡ ಅನುಪಮ ಮತ್ತು ಕೃಷಿ ತಾಪಂಡರ ಸ್ನೇಹವನ್ನು ಮೆಚ್ಚಿಕೊಂಡಿದ್ದಾರೆ.
ಕಿರುತೆರೆ (Television)ಗೆ ಅಕ್ಕ ಎಂದೇ ಪ್ರಸಿದ್ಧಿಯಾಗಿದ್ದ ನಿರೂಪಕಿ, ನಟಿ ಅನುಪಮ ಗೌಡ (Anchor, actress Anupama Gowda) ಮುಡಿಗೆ ಕಿರೀಟವೊಂದು ಸೇರಿದೆ. ನಟನೆಗೆ ತಕ್ಕ ಪ್ರಶಸ್ತಿಯೊಂದು ಸಿಕ್ಕಾಗಿದೆ. ತ್ರಿಯಂಬಕ ಚಿತ್ರಕ್ಕೆ ಅನುಪಮ ಗೌಡ, ಉತ್ತಮ ನಟಿ ರಾಜ್ಯ ಪ್ರಶಸ್ತಿ (Best Actress State Award) ಬಾಚಿಕೊಂಡಿದ್ದಾರೆ. ಇದು ಅನುಪಮ ಗೌಡಗೆ ಮಾತ್ರವಲ್ಲ ಅವರ ಕುಟುಂಬಸ್ಥರು, ಸ್ನೇಹಿತರಿಗೆ ಖುಷಿ ನೀಡಿದೆ. ಅಭಿನಂದನೆಯ ಮಹಾಪೂರವೇ ಹರಿದು ಬರ್ತಿದ್ದು, ಫ್ಯಾನ್ಸ್ ಈ ಸಂತೋಷವನ್ನು ಸಂಭ್ರಮಿಸುತ್ತಿದ್ದಾರೆ.
ಅನುಪಮ ಗೌಡ ಆಪ್ತ ಸ್ನೇಹಿತೆ ನಟಿ ಕೃಷಿ ತಾಪಂಡ (Actress Krishi Ta Panda) ಕೂಡ ಖುಷಿಯಾಗಿದ್ದಾರೆ. ಸ್ನೇಹಿತೆ ಯಶಸ್ಸನ್ನು ಅವರು ಸಂಭ್ರಮಿಸಿದ್ದಾರೆ. ಅನುಪಮ ಗೌಡ ಮನೆಗೆ ಹೋಗಿ ಬೊಕೆ ನೀಡಿ, ಕೇಕ್ ಕತ್ತರಿಸಿ ಸ್ನೇಹಿತೆಗೆ ಶುಭ ಕೋರಿದ್ದಾರೆ ಕೃತಿ ತಾಪಂಡ. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಕೃಷಿ ತಾಪಂಡ, ಅನುಪಮ ಗೌಡಗೆ ಅಭಿನಂದನೆ ಸಲ್ಲಿಸಿದ್ದಾರೆ. ಇವತ್ತು ನಿನ್ನ ಬಗ್ಗೆ ತುಂಬಾ ಸಂತೋಷವಾಗುತ್ತಿದೆ ಅನು, ಈ ಸಾಧನೆಯ ಹಾದಿಯಲ್ಲಿ ನೀನು ತೋರಿದ ಸಮರ್ಪಣೆಯನ್ನು ಆಚರಿಸುತ್ತಿದ್ದೇನೆ. ಈ ಯಶಸ್ಸಿನ ಪ್ರತಿ ತುಣುಕನ್ನು ನೀನು ಗಳಿಸಿದ್ದೀಯ, ನಾನು ಎಷ್ಟು ಹೆಮ್ಮೆಪಡುತ್ತೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅಭಿನಂದನೆಗಳು ಸ್ನೇಹಿತೆ ರಾಜ್ಯ ಪ್ರಶಸ್ತಿ ಗೆದ್ದಿದ್ದಕ್ಕೆ ಎಂದು ಶೀರ್ಷಿಕೆ ಹಾಕಿದ್ದಾರೆ.
ಅನುಪಮಾಗೆ ಚಾನ್ಸ್ ಯಾಕಿಲ್ಲ? ದಾರಿನ ಅವ್ರೇ ಕಂಡ್ಕೊಂಡಿದಾರೆ, ಜಾಗ ಬಿಡಿ ಅಷ್ಟೇ!
ವಿಡಿಯೋ ನೋಡಿದ ಫ್ಯಾನ್ಸ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಈ ಪ್ರಶಸ್ತಿಗೆ ಅನುಪಮ ಯೋಗ್ಯರು ಎಂದು ಅಭಿಮಾನಿಗಳು ಹೇಳಿದ್ದಾರೆ. ಅಲ್ಲದೆ ಅನುಪಮ ಗೌಡ ಹಾಗೂ ಕೃಷಿ ತಾಪಂಡ ಸ್ನೇಹವನ್ನು ಮೆಚ್ಚಿಕೊಂಡಿದ್ದಾರೆ. ಸ್ನೇಹಿತೆ ಯಶಸ್ಸನ್ನು ಹೀಗೆ ಸಂಭ್ರಮಿಸುವವರ ಸಂಖ್ಯೆ ಬಹಳ ಕಡಿಮೆ. ನಿಮ್ಮಿಬ್ಬರ ಬಾಂಡ್ ಹೀಗೆ ಇರಲಿ, ಬಿಗ್ ಬಾಸ್ ನಿಮ್ಮನ್ನು ಮತ್ತಷ್ಟು ಹತ್ತಿರಕ್ಕೆ ತಂದಿದೆ. ಸದಾ ಖುಷಿಯಾಗಿರಿ. ನಿಮಗೆ ದೃಷ್ಟಿ ಬೀಳದಿರಲಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ನಟಿ ಪ್ರೆಗ್ನೆಂಟ್ ಇದ್ದಾಗ ಇನ್ನೊಬ್ಬಳ ಹಿಂದೆ ಹೋಗಿದ್ದ ಈಕೆ ಗಂಡ!
ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ಅನುಪಮ, ಒಂದೊಂದೇ ಮೆಟ್ಟಿಲು ಹತ್ತುತ್ತಿದ್ದಾರೆ. ಅಕ್ಕ ಸೀರಿಯಲ್ ಮೂಲಕ ಕಿರುತೆರೆಗೆ ಬಂದ ಅವರು, ದ್ವಿಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ನಂತ್ರ ನಿರೂಪಣೆಯಲ್ಲಿ ತಮ್ಮ ಛಾಪು ಮೂಡಿಸಿದ್ರು. ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಅನುಪಮ ಗೌಡ, ಲಕ್ಷಾಂತರ ಫ್ಯಾನ್ಸ್ ಗಳಿಸೋದ್ರಲ್ಲಿ ಯಶಸ್ವಿಯಾಗಿದ್ದರು. ಮಜಾ ಭಾರತ, ರಾಜಾ – ರಾಣಿ, ನಮ್ಮಮ್ಮ ಸೂಪರ್ ಸ್ಟಾರ್ ನಂತಹ ರಿಯಾಲಿಟಿ ಶೋ ನಿರೂಪಣೆ ಮಾಡಿರುವ ಅನುಪಮ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಯುಟ್ಯೂಬ್ ನಡೆಸುತ್ತಿರುವ ಅವರು ಟ್ರಿಪ್, ಬ್ಯೂಟಿ ಟಿಪ್ಸ್ ನೀಡ್ತ, ಜನರ ಮನಸ್ಸಿನಲ್ಲಿ ಜಾಗ ಪಡೆದಿದ್ದಾರೆ. ನಿರೂಪಣೆ, ಸೋಶಿಯಲ್ ಮೀಡಿಯಾ ಜೊತೆ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ ಅನುಮಪ. ಆ ಕರಾಳ ರಾತ್ರಿ ಚಿತ್ರದ ಮೂಲಕ ನಾಯಕ ನಟಿಯಾದ ನಿರೂಪಮ ಗೌಡ, ತ್ರಿಯಂಬಕಂ ಚಿತ್ರದಲ್ಲಿ ನಟಿಸಿದ್ದರು. 2019ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಹಾಗೂ ಆರ್ ಜೆ ರೋಹಿತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ಚಿತ್ರಕ್ಕೆ 2019ರ ರಾಜ್ಯ ಚಲನಚಿತ್ರ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿ ಅನುಪಮ ಪಾಲಾಗಿದೆ. ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ನಿರೂಪಣೆ ಹೊಣೆ ಅನುಪಮ ಗೌಡ ಮೇಲಿದೆ. ಕೃಷಿ ತಾ ಪಂಡ ಹಾಗೂ ಅನುಪಮ ಅತ್ಯತ್ತಮ ಸ್ನೇಹಿತೆಯರು. ಅನುಪಮಗೆ ಬಲವಾಗಿ ನಿಂತವರು ಕೃಷಿ ತಾಪಂಡ. ಇದನ್ನು ಅನುಪಮ ಅನೇಕ ಬಾರಿ ಹೇಳಿಕೊಂಡಿದ್ದಾರೆ.
