ಬಾಲಿವುಡ್ ಹಿರಿಯ ನಟಿ ಜೀನತ್ ಅಮನ್ ಅವರ ದಾಂಪತ್ಯ ಜೀವನ ನೋವುಗಳಿಂದ ಕೂಡಿತ್ತು. ಗರ್ಭಾವಸ್ಥೆಯಲ್ಲಿ ಪತಿ ಮಜಹರ್ ಖಾನ್ ಮೋಸ ಮಾಡಿದ್ದರೂ, ಮಕ್ಕಳಿಗಾಗಿ ಸಂಬಂಧ ಉಳಿಸಿಕೊಂಡರು. 12 ವರ್ಷ ಕಷ್ಟದ ದಾಂಪತ್ಯ ಅನುಭವಿಸಿದ ಜೀನತ್, ಅನಾರೋಗ್ಯ ಪೀಡಿತ ಪತಿಯನ್ನೂ ನಿಸ್ವಾರ್ಥವಾಗಿ ಆರೈಕೆ ಮಾಡಿದರು. ಒಂಟಿ ಹೋರಾಟದಲ್ಲಿ ಮಾನಸಿಕವಾಗಿ ಕುಗ್ಗಿದ್ದರು.
ಪತ್ನಿ ಗರ್ಭಧರಿಸಿದಾಗ ಪತಿ ದಾರಿ ತಪ್ಪಿದ ಅನೇಕ ಉದಾಹರಣೆ ಇದೆ. ಪತಿಯ ಮೋಸಕ್ಕೆ ಸಾಮಾನ್ಯರು ಮಾತ್ರವಲ್ಲ ಆಕ್ಟರ್ಸ್ ಕೂಡ ಬಲಿಯಾಗಿದ್ದಾರೆ. ಇದಕ್ಕೆ ಜೀನತ್ ಅಮನ್ ಕೂಡ ಸೇರಿದ್ದಾರೆ. ಬಾಲಿವುಡ್ (Bollywood) ನ ಹಿರಿಯ ನಟಿ ಜೀನತ್ ಅಮನ್ (actress Zeenat Aman) ನಟನೆ ಜೊತೆ ತಮ್ಮ ಸ್ಟೈಲ್ ನಿಂದ ಈಗ್ಲೂ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ತೆರೆ ಮೇಲೆ ಅದ್ಭುತವಾಗಿ ಕಾಣಿಸಿಕೊಳ್ಳುವ ಜೀನತ್ ಅಮನ್ ವೈಯಕ್ತಿಕ ಜೀವನ ಚೆನ್ನಾಗಿರಲಿಲ್ಲ. ಅವರು ಸಾಕಷ್ಟು ನೋವು ತಿಂದಿದ್ದಾರೆ. ಈಗ ಜೀವನದಲ್ಲಿ ಖುಷಿಯಾಗಿದ್ರೂ ಅವರ ಹಿಂದಿನ ದಿನಗಳು ಸಾಕಷ್ಟು ಏರುಪೇರುಗಳಿಂದ ಕೂಡಿದ್ದವು. ಅವರು ಒಂಟಿಯಾಗಿ ಹೋರಾಟ ನಡೆಸಿದ್ರು. ಆ ದಿನಗಳನ್ನು ಜೀನತ್ ಅಮನ್ ನೆನಪಿಸಿಕೊಂಡಿದ್ದಾರೆ. ದಾಂಪತ್ಯ ಜೀವನದಲ್ಲಿ ಏನೆಲ್ಲ ಸವಾಲುಗಳನ್ನು ಎದುರಿಸಬೇಕಾಯ್ತು ಎಂಬುದನ್ನು ಅವರು ಹೇಳಿದ್ದಾರೆ.
ಜೀನತ್ ಅಮನ್, ಮಜನ್ ಖಾನ್ (mazhar khan) ಅವರನ್ನು ಮದುವೆಯಾಗಿದ್ದರು. ಮದುವೆ ಆದ್ಮೇಲೆ ಅವರ ಜೀವನ ನರಕವಾಗಿತ್ತು. ಪತಿಯನ್ನು ಸುಧಾರಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು ಜೀನತ್. ಆದ್ರೆ ಅದು ಸಾಧ್ಯವಾಗ್ಲಿಲ್ಲ. ಇಬ್ಬರು ಮಕ್ಕಳ ತಾಯಿಯಾಗಿರುವ ಜೀನತ್, ತಮ್ಮ ಮಕ್ಕಳಿಗಾಗಿ ಮಜಹರ್ ಖಾನ್ ಜೊತೆ ಇರುವ ನಿರ್ಧಾರ ತೆಗೆದುಕೊಂಡಿದ್ದರು. 12 ವರ್ಷಗಳ ಕಾಲ ಉಸಿರು ಬಿಗಿ ಹಿಡಿದು ಜೀವನ ನಡೆಸಿದ್ದರು ಜೀನತ್.
ಆಟೋ ಚಾಲಕನಿಗೆ ಸೈಫ್ ನೀಡಿದ ಹಣ ಸಾಲಲ್ಲ, 11 ಲಕ್ಷ ಡಿಮ್ಯಾಂಡ್ ಮಾಡಿದ ಮಿಕಾ ಸಿಂಗ್
ಮಜಹರ್ ಖಾನ್ ಅವರನ್ನು ಮದುವೆಯಾಗುವ ನಿರ್ಧಾರ ಜೀನತ್ ಅವರದ್ದೇ ಆಗಿತ್ತು. ಹಾಗಾಗಿ ಕೊನೆ ಉಸಿರಿರುವರೆಗೂ ಸಂಬಂಧ ಉಳಿಸಿಕೊಳ್ಳುವ ತೀರ್ಮಾನವನ್ನು ಅವರು ಕೈಗೊಂಡಿದ್ದರು. ಜೀನತ್ ಗರ್ಭಿಣಿಯಾಗಿದ್ದಾಗ ಅವರ ಪತಿ ಮಜಹರ್ ಖಾನ್ ಜೊತೆಗಿರಲಿಲ್ಲ. ಪತ್ರಿಕೆಯೊಂದರಲ್ಲಿ ಮಜಹರ್ ಖಾನ್ ಬೇರೆ ಮಹಿಳೆ ಜೊತೆ ವಾಸಮಾಡ್ತಿದ್ದಾರೆ ಎಂಬ ಸುದ್ದಿ ಬಂದಿತ್ತು. ಅದು ಸತ್ಯ ಕೂಡ ಆಗಿತ್ತು. ಗರ್ಭಿಣಿ ಪತ್ನಿ ಜೊತೆಗಿರುವ ಬದಲು ಬೇರೆ ಮಹಿಳೆ ಜೊತೆ ಪತಿ ಇದ್ದ ಎಂಬುದನ್ನು ತಿಳಿದಿದ್ದರೂ ಜೀನತ್ ಯಾವುದೇ ಮಾತನಾಡಿರಲಿಲ್ಲ. ಎಲ್ಲ ನೋವುಗಳನ್ನು ನುಂಗಿ ಜೀವನ ಮುಂದುವರೆಸಿದ್ದರು.
ಮಗುವಾದ್ಮೇಲೆ ಮದುವೆ ಮುರಿದುಕೊಳ್ಳುವ ಆಲೋಚನೆಯನ್ನೂ ಜೀನತ್ ಒಮ್ಮೆ ಮಾಡಿದ್ದರು. ಆದ್ರೆ ಮಕ್ಕಳ ಮುಖ ನೋಡಿ ತಮ್ಮ ತೀರ್ಮಾನದಿಂದ ಹಿಂದೆ ಸರಿದಿದ್ದರು. ಎರಡನೇ ಮಗುವಿಗೆ ಐದು ವರ್ಷವಾಗ್ತಿದ್ದಂತೆ ಕೆಲಸವೊಂದನ್ನು ಜೀನತ್ ಹುಡುಕಿಕೊಂಡಿದ್ದರು. ಆದ್ರೆ ಈ ಕೆಲಸವನ್ನೂ ಜೀನತ್ ಗೆ ಸರಿಯಾಗಿ ಮಾಡಲು ಸಾಧ್ಯವಾಗ್ಲಿಲ್ಲ. ಅದಕ್ಕೆ ಕಾರಣ ಅವರ ಪತಿ ಮಜಹರ್ ಖಾನ್ ಅನಾರೋಗ್ಯ. ಮೋಸ ಮಾಡಿದ್ದ ಪತಿಯನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಆರೈಕೆ ಮಾಡಿದ್ದರು ಜೀನತ್. ಇಡೀ ದಿನ ಪತಿಯನ್ನು ನೋಡಿಕೊಳ್ಳೋದ್ರಲ್ಲಿಯೇ ಜೀನತ್ ಜೀವನ ಕಳೆದಿದ್ದರು. ಮಜಹರ್ ಖಾನ್ ಗೆ ಇಂಜೆಕ್ಷನ್ ನೀಡೋದ್ರಿಂದ ಹಿಡಿದು ಡ್ರೆಸ್ಸಿಂಗ್ ಮಾಡುವವರೆಗೆ ಎಲ್ಲವನ್ನೂ ಕಲಿತಿದ್ದರು ನಟಿ. ಮಜಹರ್ ಖಾನ್ ಪ್ರತಿಯೊಂದು ಕೆಲಸವನ್ನು ಮಾಡ್ತಿದ್ದ ಜೀನತ್ ಅವರ ಜೊತೆ 18 ತಿಂಗಳು ಇದ್ರು. ಆ ಸಮಯದಲ್ಲಿ ನಾನು ಸಂಪೂರ್ಣ ಕುಸಿದುಹೋಗಿದ್ದೆ. ಆಗ ನನ್ನ ಜೊತೆ ಯಾರೂ ಇರಲಿಲ್ಲ. ಮಜಹರ್ ಖಾನ್ ಜೊತೆ ಓಡಾಡ್ತಿದ್ದ ಒಬ್ಬರೂ ಆ ಸಮಯದಲ್ಲಿ ಬರಲಿಲ್ಲ. ವರ್ಷಗಳ ಕಾಲ, ನೀನು ಹೇಗಿದ್ದೀಯಾ ಎಂದು ನನ್ನನ್ನು ಯಾರೂ ಕೇಳಿರಲಿಲ್ಲ ಎಂದು ಜೀನತ್ ಹೇಳಿದ್ದಾರೆ.
ಮೇಕಪ್ ಇಲ್ಲದೆ ಅಕ್ಷಯ್ ಕುಮಾರ್ ಜೊತೆ ನಟಿಸಿರುವ ಈ 8 ನಟಿಯರ ಗುರುತೇ ಸಿಗಲ್ಲ!
1970 ರಿಂದ 80ರವರೆಗೆ ಸಿನಿಮಾದಲ್ಲಿ ನಟಿಸಿದ್ದ ಜೀನತ್ ಸಿಜ್ಲಿಂಗ್ ನಟಿ ಎಂದೇ ಪ್ರಸಿದ್ಧಿ ಪಡೆದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು ಆಗಾಗ ತಮ್ಮ ಹಳೆ ದಿನಗಳನ್ನು ನೆನಪಿಸಿಕೊಂಡು ವಿಡಿಯೋ ಹಂಚಿಕೊಳ್ತಿರುತ್ತಾರೆ.
