ಭಾಗ್ಯ ಮತ್ತು ತಾಂಡವ್ ನಡುವೆ ಗಾಳಿಪಟ ಪೈಪೋಟಿ ನಡೆಯುತ್ತಿದೆ. ಸೊಸೆ ಪರ ನಿಂತಿದ್ದಾಳೆ ಕುಸುಮಾ. ಅಮ್ಮ-ಮಗನ ನಡುವೆ ಚಾಲೆಂಜ್ ಆಗಿದೆ. ಗೆಲುವು ಯಾರಿಗೆ? ಮುಂದೇನು?
ಇತ್ತ ಅತ್ತೆ ನೀನು ಮೇಲಾ? ನನ್ನ ಮುದ್ದಿನ ಸೊಸೆಯೇ ಮೇಲಾ ಎಂದು ಚಾಲೆಂಜ್ ಹಾಕಿದ್ದಾಳೆ. ಆಟವೇ ಆಗಿರಲಿ, ಲೈಫೇ ಆಗಿರಲಿ ಗೆಲ್ಲುವುದು ನಾನೇ ಎಂದು ಮಗ, ಅಮ್ಮನಿಗೇ ಚಾಲೆಂಜ್ ಮಾಡಿದ್ದಾನೆ. ನಾನು ಸೋಲುವ ಚಾನ್ಸೇ ಇಲ್ಲ ಎಂದಿದ್ದಾನೆ. ಒಂದು ವೇಳೆ ಸೋತರೆ ಎಂದು ಅಮ್ಮ ಕೇಳಿದಾಗ, ಹಾಗೊಂದು ವೇಳೆ ಸೋತರೆ ನೀನು ಆಯ್ಕೆ ಮಾಡಿರುವ ಈ ಸೊಸೆಯೇ ಸರ್ವಶ್ರೇಷ್ಠ ಎಂದು ಒಪ್ಪಿಕೊಂಡು ಕಾಲು ಹಿಡಿದುಕೊಳ್ತೇನೆ ಎಂದಿದ್ದಾನೆ. ಹಾಗಿದ್ದರೆ ಮುಂದೇನು? ಗೆಲುವು ಯಾರಿಗೆ? ಅಮ್ಮನಿಗೋ, ಮಗನಿಗೋ? ಪತ್ನಿಯೇ ಸರ್ವಶ್ರೇಷ್ಠ ಎಂದು ಅಮ್ಮನ ಕಾಲು ಹಿಡಿದುಕೊಳ್ಳುವ ಕಾಲ ಈ ಮಗನಿಗೆ ಬಂದು ಬಿಡ್ತಾ, ಅಥ್ವಾ ಇನ್ನೇನಾದ್ರೂ ಟ್ವಿಸ್ಟ್ ಇದೆಯಾ?
ಇದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿಯ ಕಥೆ. ಇದರ ಪ್ರೊಮೋ ರಿಲೀಸ್ ಆಗಿದ್ದು, ಗೆಲುವು ಯಾರಿಗೆ ಎನ್ನುವ ಕುತೂಹಲ ಮನೆ ಮಾಡಿದೆ. ಅಷ್ಟಕ್ಕೂ ಅಮ್ಮ ಆಯ್ಕೆ ಮಾಡಿರುವ ಹೆಣ್ಣನ್ನು ಮದುವೆಯಾಗಿರುವ ತಾಂಡವ್ಗೆ ಮೊದಲಿನಿಂದಲೂ ಪತ್ನಿ ಭಾಗ್ಯಳ ಮೇಲೆ ತಾತ್ಸಾರವೇ. ಇಬ್ಬರು ಮಕ್ಕಳಾದ ಮೇಲೂ ಪತ್ನಿ ಎಂದರೆ ಅಷ್ಟಕ್ಕಷ್ಟೇ. ಅದೇ ಇನ್ನೊಂದೆಡೆ ಶ್ರೇಷ್ಠಾ ಎಂಬಾಕೆ ತಾಂಡವ್ನನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಅವಳಿಗಾಗಿ ತಾಂಡವ್ ಅಮ್ಮ ಕುಸುಮಾ, ಪತ್ನಿ ಭಾಗ್ಯ ಸೇರಿದಂತೆ ಇಬ್ಬರು ಮಕ್ಕಳನ್ನು ಬಿಟ್ಟು ಶ್ರೇಷ್ಠಾಳ ಜೊತೆ ನೆಲೆಸಿದ್ದಾನೆ.
ಸಿಹಿಗಿಂದು ಹುಟ್ಟುಹಬ್ಬದ ಸಂಭ್ರಮ: ರಿಯಲ್ ಲೈಫ್ನಲ್ಲೂ ನೋವುಂಡ ಪುಟಾಣಿಯ ವಿಶೇಷ ವಿಡಿಯೋ ರಿಲೀಸ್
ಮಗನ ಈ ಕೃತ್ಯ ತಿಳಿಯುತ್ತಲೇ ಅಮ್ಮ, ಸೊಸೆಯ ಬೆನ್ನೆಲುಬಾಗಿ ನಿಂತಿದ್ದಾಳೆ. ಇದ್ದರೆ ಇಂಥ ಅತ್ತೆ ಇರಬೇಕು ಎಂದು ವೀಕ್ಷಕರು ಅಂದುಕೊಳ್ಳುವ ರೀತಿಯಲ್ಲಿದೆ ಕುಸುಮಾ ಪಾರ್ಟ್. ಮೊದಲಿನಿಂದಲೂ ಸೊಸೆಯ ಪರವಾಗಿಯೇ ಇರುವ ಕುಸುಮಾ ಕಂಡು ಅದೆಷ್ಟು ಮಂದಿ ಹೊಗಳಿದ್ದಾರೋ. ಈ ಸೀರಿಯಲ್ ಹಲವರಿಗೆ ಇಷ್ಟವಾಗುವುದು ಇದೇ ಕಾರಣಕ್ಕೆ. ಸದಾ ಅತ್ತೆ-ಸೊಸೆಯನ್ನು ಹಾವು-ಮುಂಗುಸಿಯಂತೆ ತೋರಿಸುವ ಹೊತ್ತಿನಲ್ಲಿ ಇಂಥದ್ದೊಂದು ಪಾತ್ರ ಲಕ್ಷಾಂತರ ಮಂದಿ ಸೀರಿಯಲ್ ಪ್ರೇಮಿಗಳಿಗೆ ಹಿಡಿಸಿದೆ. ಅದೆಷ್ಟೋ ಬಾರಿ ಸೊಸೆಗಾಗಿ ಮಗನನ್ನೇ ಎದುರು ಹಾಕಿಕೊಂಡಿದ್ದಾಳೆ ಕುಸುಮಾ. ತನ್ನ ಮಗನಿಗೆ ಇಂಥವಳೇ ಬೇಕು ಎಂದು ಭಾಗ್ಯಳನ್ನು ಹುಡುಕಿ ಮದುವೆಯನ್ನೇನೋ ಮಾಡಿಸಿದ್ದಾಳೆ. ಆದರೆ ಭಾಗ್ಯಳ ಬಾಳು ಮಾತ್ರ ನರಕವೇ. ಅತ್ತೆಯ ಸಪೋರ್ಟ್ ಇದೆ ಎನ್ನುವುದು ಬಿಟ್ಟರೆ ಪತಿಯ ಪ್ರೀತಿಯಿಂದ ಆಕೆ ವಂಚಿತಳೇ.
ಇದೀಗ ಮನೆ ಬಿಟ್ಟು ಹೋಗಿರುವ ತಾಂಡವ್ ಮತ್ತು ಭಾಗ್ಯಳ ನಡುವೆ ಗಾಳಿಪಟದ ಆಟ ಶುರುವಾಗಿದೆ. ಶತಾಯುಗತಾಯವಾಗಿಯಾದರೂ ಸೊಸೆಯನ್ನು ಗೆಲ್ಲಿಸುವ ಪಣ ತೊಟ್ಟಿದ್ದಾಳೆ ಅತ್ತೆ ಕುಸುಮಾ. ಆದರೆ ರಿಯಲ್ ಲೈಫ್ನಲ್ಲಿ ತಾನೇ ಗೆದ್ದಿರುವುದಾಗಿ ಬೀಗುತ್ತಿರುವ, ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತಿರುವ ತಾಂಡವ್ ಮಾತ್ರ ಆಟದಲ್ಲಿಯೂ ತಾನೇ ಗೆಲ್ಲುವುದು ಎಂದಿದ್ದಾನೆ. ಆದರೆ ಕುಸುಮಾಗೆ ಸೊಸೆಯೇ ಗೆಲ್ಲುತ್ತಾಳೆ ಎನ್ನುವ ನಂಬಿಕೆ. ಒಂದು ವೇಳೆ ಸೋತರೆ ಏನು ಮಾಡುತ್ತಿ ಎಂದು ತಾಂಡವ್ಗೆ ಪ್ರಶ್ನಿಸಿದ್ದಾಳೆ. ಒಂದು ವೇಳೆ ಸೋತರೆ ನೀನೇ ಆಯ್ಕೆ ಮಾಡಿರುವ ಈ ಭಾಗ್ಯಳೇ ಸರ್ವಶ್ರೇಷ್ಠ ಎಂದು ಬಂದು ನಿನ್ನ ಕಾಲು ಹಿಡಿಯುತ್ತೇನೆ ಎಂದಿದ್ದಾನೆ. ಇದೆಲ್ಲವೂ ಮನಸ್ಸಿನಲ್ಲಿಯೇ ಆಡಿರುವ ಮಾತುಗಳು. ಹಾಗಿದ್ದರೆ ಮುಂದೇನು? ಗೆಲುವು ಯಾರದ್ದು ಎನ್ನುವುದೇ ಈಗಿರುವ ಕುತೂಹಲ.
ರಿಯಲ್ ಗಂಡನ ಜೊತೆ ಲಾಕ್ ಅಮೃತಧಾರೆ ಭೂಮಿಕಾ: ಗೌತಮ್ ಜೊತೆ ಯಾವಾಗ ಲಾಕಾಗೋದು ಕೇಳ್ತಿದ್ದಾರೆ ಫ್ಯಾನ್ಸ್!
