Asianet Suvarna News Asianet Suvarna News

ಆ ನಾಲ್ಕು ವ್ಯಕ್ತಿಗಳಿಗೆ ನಾನು ಹೇಳುತ್ತಿರುವುದು ಅರ್ಥವಾಗುತ್ತದೆ: ವದಂತಿಗಳಿಗೆ ಬ್ರೇಕ್ ಹಾಕಿದ ಕಿರಿಕ್ ಕೀರ್ತಿ

ಕೊನೆಗೂ ಜೀವನದಲ್ಲಿ ಏನಾಗುತ್ತಿದೆ ಎಂದು ಮೌನ ಮುರಿದ ಕಿರಿಕ್ ಕೀರ್ತಿ. ನಮ್ಮದು ಗಾಜಿನ ಮನೆ ಯಾರೇ ಕಲ್ಲು ಹೊಡೆದರೂ ಪುಡಿಯಾಗುತ್ತದೆ.....

Kirik Keerthi clarifies about viral post mental health and negative comment about family vcs
Author
First Published Mar 16, 2023, 4:49 PM IST

ಕೆಲವು ದಿನಗಳಿಂದ ಬಿಗ್ ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್ ಕಿರಿಕ್ ಕೀರ್ತಿ ವೈಯಕ್ತಿಕ ಜೀವನ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಶಿವಮೊಗ್ಗದಲ್ಲಿರುವ ತೋಟದ ಮನೆಯಲ್ಲಿ ಕೀರ್ತಿ ಯಾಕೆ ಪತ್ನಿ ಜೊತೆ ಪೋಸ್ಟ್‌ ಡಿಲೀಟ್ ಮಾಡಿದ್ದಾರೆ, ಯಾಕೆ  ಬೇಸರ ಪೋಸ್ಟ್  ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

'ಜೀವನ ಅನ್ನೋದು ಒಂದು ಗ್ರಾಫ್‌ ರೀತಿ ಹಾರ್ಟ್‌ ಬೀಟ್‌ ತರ ಮೇಲೆ ಕೆಳಗೆ ಇರಬೇಕು ಒಂದೇ ರೀತಿ ಇದ್ದರೆ ಆತ ಸತ್ತ ಎಂದು ಲೆಕ್ಕ. ಸದ್ಯಕ್ಕೆ ಸ್ವಲ್ಪ ಕೆಳಗಿದ್ದೆ ಈಗ ಮೇಲೆ ಬಂದಿರುವೆ ಹಾಗಂತ ಉಸಿರು ಬಿಟ್ಟಿಲ್ಲ. ಜೀವನ ಅಂದ್ಮೇಲೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಬದುಕು ಇರುತ್ತದೆ ಕೆಲವರು ತೆರೆ ಮೇಲೆ ಏನು ನೋಡುತ್ತಾರೆ ಅದೇ ನಿಜ ಅಂದುಕೊಳ್ಳುತ್ತಾರೆ ಆದರೆ ಸ್ಕ್ರೀನ್ ಮೇಲೆ ಇರುವ ವ್ಯಕ್ತಿಗಳಿಗೂ ವೈಯಕ್ತಿಕ ಬದುಕು ಇರುತ್ತೆ ಅನ್ನೋದು ಮರೆತಿರುತ್ತಾರೆ. ಕೆಲವೊಂದು ಸಲ ಭಾವನೆಗಳನ್ನು ಹೊರ ಹಾಕಬೇಕು ಅದನ್ನು ಹೊರ ಹಾಕಿದ್ದೀವಿ. ನನಗೆ ಸಿಗದಷ್ಟು ಕ್ಲಾರಿಟಿ ಕೆಲವರಿಗೆ ತುಂಬಾ ಸಿಕ್ಕಿದೆ' ಎಂದು ಕೀರ್ತಿ ಖಾಸಗಿ ಯೂಟ್ಯೂಬ್ ವೆಬ್‌ಸೈಟ್‌ನಲ್ಲಿ ಮಾತನಾಡಿದ್ದಾರೆ.

ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಇದೆ ನನ್ನ ತಟ್ಟೆಯಲ್ಲಿ ನೊಣ ಹುಡುಕಬೇಡಿ; ಕಿರಿಕ್ ಕೀರ್ತಿ ಮತ್ತೊಂದು ವಿಡಿಯೋ ವೈರಲ್

'ವೈಯಕ್ತಿಕ ಜೀವನ ಅಂದ್ಮೇಲೆ ಬೇರೆ ಬೇರೆ ಕ್ಯಾರೆಕ್ಟರ್‌ಗಳು ಎಂಟ್ರಿ ಆಗುತ್ತಾ ಹೋಗುತ್ತಾರೆ. ಬಿಗ್ ಬಾಸ್ ಮನೆಯಲ್ಲಿ 18 ಕ್ಯಾರೆಕ್ಟರ್‌ಗಳನ್ನು ನೋಡಿರುತ್ತೀವಿ ಅದೇ ರೀತಿ ರಿಯಲ್ ಲೈಫ್‌ನಲ್ಲೂ ಆಗುತ್ತದೆ. ಅದರಲ್ಲಿ ದ್ರೂಹ ಮಾಡುವವರು ಇರುತ್ತಾರೆ, ಅನ್ಯಾಯ ಮಾಡುವವರು ಇರುತ್ತಾರೆ, ಕೆಟ್ಟದನ್ನು ಮಾಡಬೇಕು ಅನ್ನೋರು ಇರುತ್ತಾರೆ ಹಾಗೇ ಒಳ್ಳೆಯದನ್ನು ಬಯಸುವವರು ಇರುತ್ತಾರೆ. ಕೆಲವು ಕ್ಯಾರೆಕ್ಟರ್‌ಗಳ ಜೊತೆ ಹೊಂದಿಕೊಂಡಿರುತ್ತೀವಿ ಅವರೇ ನೋವು ಮಾಡಿದಾಗ ತುಂಬಾ ಡಿಸ್ಟರ್ಬ್‌ ಆಗುತ್ತೆ. ಗೊತ್ತಿಲ್ಲದವರು ಕಾಮೆಂಟ್ ಮಾಡಿದಾಗ ಬೇಸರ ಆಗಲ್ಲ ಆದರೆ ಎಲ್ಲಾ ಗೊತ್ತಿದ್ದವರು ಮಾತನಾಡಿದರೆ ನೋವಾಗುತ್ತದೆ. ಯಾರದ್ದೋ ತಪ್ಪುಗಳನ್ನು ಮುಚ್ಚಿಕೊಳ್ಳಲು ಹೋದಾಗ ಇನ್ನೊಬ್ಬರದ್ದು ತಪ್ಪು ಎಂದು ಬಿಂಬಿಸುವುದು ಸರಿ ಅಲ್ಲ. ಸಾಕಷ್ಟು ಸಲ ಒಳ್ಳೆತನ ಮನುಷ್ಯನಿಗೆ ಶಾಪವಾಗುತ್ತದೆ ಅದಕ್ಕೆ ಉದಾಹರಣೆ ನಾನೇ.' ಎಂದು ಕೀರ್ತಿ ಹೇಳಿದ್ದಾರೆ.

ಡೆತ್ ನೋಟ್ ಬರೆದಿಟ್ಟು ಜಗತ್ತಿಗೆ ವಿದಾಯ ಹೇಳಲು ನಿರ್ಧರಿಸಿದ್ದೆ; ಕಿರಿಕ್ ಕೀರ್ತಿ ಶಾಕಿಂಗ್ ಪೋಸ್ಟ್ ವೈರಲ್

'ಚೆನ್ನಾಗಿ ಬದುಕ ಬೇಕು ಜಗತ್ತಿನಲ್ಲಿ ಒಳ್ಳೆ ಜೀವನ ಕಟ್ಟಿಕೊಳ್ಳಬೇಕು ಎಂದು ನಿರ್ಧಾರ ಮಾಡಿದಾಗ ಏನೋ ಮಿಸ್ ಆಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಅಯ್ಯಯ್ಯೋ ಆನಿಸುತ್ತದೆ. ಸೂಕ್ಷ್ಮವಾಗಿ ಒಬ್ಬರಿಗೆ ಬೆರಳು ಮಾಡಿ ಹೇಳುವ ಅಗತ್ಯವಿಲ್ಲ ಇದೆಲ್ಲಾ ಅವರವರ ಆಯ್ಕೆ, ವಿಡಿಯೋ ನೋಡಿದಾಗ ಆ ನಾಲ್ಕು ಜನರಿಗೆ ಗೊತ್ತಾಗುತ್ತದೆ. ಜನರಿಗೆ ಹೇಳುವುದು ಇಷ್ಟೆ...ನನ್ನ ಯಾವುದೋ ಸುದ್ದಿಯನ್ನು ಅಥವಾ ಪೋಸ್ಟ್‌ನ ನೋಡಿಕೊಂಡು ನನ್ನ ಜೀವನ ಹೀಗಿದೆ ಎಂದು conclusionಗೆ ಬರಬೇಡಿ. ನಿಮಗೆ ಐಡಿಯಾನೇ ಇಲ್ಲ ನನ್ನ ಲೈಫ್‌ನಲ್ಲಿ ಏನಾಗುತ್ತಿದೆ ಎಂದು. ನನ್ನ ಜೀವನದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳು ಮತ್ತೊಬ್ಬರ ಜೀವನದಲ್ಲಿ ನಡೆದಿದ್ದರೆ ಇಷ್ಟು ಹೊತ್ತಿಗೆ ಸ್ಮಶಾನದಲ್ಲಿ ಇರುತ್ತಿದ್ದ ಅಥವಾ ಜೈಲಿನಲ್ಲಿ ಇರುತ್ತಿದ್ದ.ನನ್ನ ಲೈಫ್‌ನಲ್ಲಿ ಎರಡೂ ಆಗಿಲ್ಲ ಅಂದ್ರೆ ನಾನು ಸರಿಯಾದ ನಿರ್ಧಾರ ತೆಗೆದುಕೊಂಡಿರುವೆ ಎಂದು ಅರ್ಥ. ಕಾಮೆಂಟ್ಸ್‌ನ ಆಫ್ ಮಾಡಲು ಕಾರಣ  ಏನೂ ಇಲ್ಲ...ಇದು ರಾಜಕೀಯದವರ ಶಾಪ ಇನ್ನೊಂದು ಮತ್ತೊಂದು ಎಂದು ಕಾಮೆಂಟ್ ಮಾಡಿ ಸಾವಿರ ಅಂದುಕೊಳ್ಳಿ ನಾನು ಏನು ಎದುರಿಸುತ್ತಿರುವೆ ಎಂದು ನನಗೆ ಮಾತ್ರ ಗೊತ್ತು. ನನ್ನ ಪಕ್ಕದಲ್ಲಿರುವ ವ್ಯಕ್ತಿಗೂ ನನಗೆ ಆಗುತ್ತಿರುವ ನೋವು ಏನೆಂದು ಗೊತ್ತಿಲ್ಲ ಅವರಿಗೆ ಗೊತ್ತಾಗಲ್ಲು ನಾನು ಬಿಡುವುದಿಲ್ಲ' ಎಂದಿದ್ದಾರೆ ಕೀರ್ತಿ.

'ಅರ್ಪಿತಾ ಮಾತ್ರ ನನ್ನ ಫೋಟೋ ಡಿಲೀಟ್ ಮಾಡಿಲ್ಲ ನಾನು ಕೂಡ ಅವಳ ಫೋಟೋ ಡಿಲೀಟ್ ಮಾಡಿದ್ದೀನಿ. ಏನಾಗಿದೆ ಎಂದು ಜಗತ್ತಿಗೆ ಗೊತ್ತಿಲ್ಲ. ಅದು ಆಕೆಗೂ ಗೊತ್ತು ನನಗೆ ಗೊತ್ತು ಅಷ್ಟೇ ಸಾಕು. ನಮ್ಮದು ಕಲ್ಲಿನ ಕೋಟೆ ಅಲ್ಲ ಗಾಜಿನ ಮನೆ..ನಾವು ಕಲ್ಲು ಹೊಡೆದರೂ ಪುಡಿಯಾಗುತ್ತದೆ ಹೊರಗಿನಿಂದ ಮತ್ತೊಬ್ಬರು ಕಲ್ಲು ಹೊಡೆದರೂ ಪುಡಿಯಾಗುತ್ತದೆ. ಒಂದು ನಾವು ದೊಡ್ಡ ಸೆಲೆಬ್ರಿಟಿ ಆಗಬೇಕು ಇಲ್ಲ ಕಾಮನ್ ವ್ಯಕ್ತಿ ಆಗಿರಬೇಕು..ಈ ನಡುವೆ ಪಾಫ್ಯೂಲಾರಿಟಿ ಇರವವರು ಆಗಬಾರದು' ಎಂದು ಕೀರ್ತಿ ಹೇಳಿದ್ದಾರೆ. 

Follow Us:
Download App:
  • android
  • ios