ಮಗಳು, ಪತ್ನಿಯೊಂದಿಗೆ ಮನೆಯಿಂದ ಹೊರಟಾಗ ಎಮೋಶನಲ್ ಆದ ಶಿವರಾಜ್‌ಕುಮಾರ್
'ನಾನು ಧೈರ್ಯವಾಗಿದ್ದೇನೆ. ಎಲ್ಲರ ಹಾರೈಕೆ ಇದೆ. ಮನೆಯಿಂದ ಹೋಗುವಾಗ ಸ್ವಲ್ಪ ಎಮೋಷನಲ್ ಆಗುತ್ತಿದ್ದೇನೆ. ಮಾಧ್ಯಮದ ಪತ್ರಕರ್ತರು ಎಲ್ಲರು ಧೈರ್ಯ ತುಂಬಿದ್ದಾರೆ. ನನಗೆ ಸ್ನೆಹಿತರು ಹಾಗೂ ಅಭಿಮಾನಿಗಳ ಆಶೀರ್ವಾದ ಇದೆ. ಎಲ್ಲರನ್ನು ಮಿಸ್...
ಕರುನಾಡ ಚಕ್ರವರ್ತಿ ಖ್ಯಾತಿಯ ನಟ ಶಿವರಾಜ್‌ಕುಮಾರ್ (Shivarajkumar) ಅವರು ಇಂದು (20 December 2024) ಅಮೆರಿಕಕ್ಕೆ ಹೊರಟಿದ್ದಾರೆ. ಶಿವಣ್ಣ ಕುಟುಂಬ, ಅವರ ಆಪ್ತರು, ಸುದೀಪ್, ವಿನೋದ್ ರಾಜ್ ಸೇರಿದಂತೆ ಚಿತ್ರರಂಗದ ಹಲವು ಹಿತೈಷಿಗಳು ಅವರನ್ನು ಭೇಟಿಯಾಗಿ ಶುಭ ಹಾರೈಸಿದ್ದಾರೆ. ಬೆಳಿಗ್ಗೆ ಶಿವಣ್ಣ ಮನೆಯಲ್ಲಿ ಕಾಡುಮಲ್ಲೇಶ್ವರ ದೇವಸ್ಥಾನದ ಅರ್ಚಕರಿಂದ ಪೂಜೆ ನಡೆದಿದೆ. ಹಾಗೇ, ನಟ ಶಿವಣ್ಣರ ನಾಗಾವರದ ಮನೆಗೆ ತೆರಳಿ, ಅವರು ಕ್ಷೇಮವಾಗಿ ಬರಲೆಂದು ಪೂಜೆ ಮಾಡಿದ್ದಾರೆ ಅರ್ಚಕರು.
ಕನ್ನಡನಾಡು ಹಾಗೂ ಹೊರಗಡೆಯ ಅಸಂಖ್ಯಾತ ಅಭಿಮಾನಿಗಳು ನಟ ಶಿವರಾಜ್‌ಕುಮಾರ್ ಅವರು ಅನಾರೋಗ್ಯದಿಂದ ಚೇತರಿಸಿಕೊಂಡು ಅಮೆರಿಕಾದಿಂದ ಬರಲಿ ಎಂದು ಅಶಿಸಿದ್ದಾರೆ. ಹೊರಡುವ ವೇಳೆ ನಟ ಶಿವಣ್ಣ ಅವರು ಎಮೋಶನಲ್ ಆಗಿದ್ದರು ಎನ್ನಲಾಗಿದೆ. ಈ ವೇಳೆ ಶಿವರಾಜ್‌ಕುಮಾರ್ ಅವರು ಹೇಳಿಕೆ ಕೂಡ ನೀಡಿದ್ದಾರೆ.
ಶಿವಣ್ಣ ಮನೆಗೆ ವಿನೋದ್ ರಾಜ್ ಭೇಟಿ, ಧೈರ್ಯ ತುಂಬಿ ಹಾರೈಸಿದ ಲೀಲಾವತಿ ಪುತ್ರ
'ನಾನು ಧೈರ್ಯವಾಗಿದ್ದೇನೆ. ಎಲ್ಲರ ಹಾರೈಕೆ ಇದೆ. ಮನೆಯಿಂದ ಹೋಗುವಾಗ ಸ್ವಲ್ಪ ಎಮೋಷನಲ್ ಆಗುತ್ತಿದ್ದೇನೆ. ಮಾಧ್ಯಮದ ಪತ್ರಕರ್ತರು ಎಲ್ಲರು ಧೈರ್ಯ ತುಂಬಿದ್ದಾರೆ. ನನಗೆ ಸ್ನೆಹಿತರು ಹಾಗೂ ಅಭಿಮಾನಿಗಳ ಆಶೀರ್ವಾದ ಇದೆ. ಎಲ್ಲರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎಲ್ರಿಗೂ ಒಳ್ಳೆಯದಾಗಲಿ, ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು..' ಎಂದಿದ್ದಾರೆ ನಟ ಶಿವರಾಜ್‌ಕುಮಾರ್.
'ನಾನು, ಗೀತಾ ಮತ್ತು ಮಗಳು ನಿವೇದಿತಾ ಹೋಗುತ್ತಿದ್ದೇವೆ. ಅಲ್ಲಿ ನನ್ನನ್ನು ಡಾ. ಮುರುಗೇಶ್ ಟ್ರೀಟ್ ಮಾಡುತ್ತಿದ್ದಾರೆ. ಇಂದು ಸುದೀಪ್ ಬಂದು ಪ್ರೀತಿ ತೋರಿಸಿದ್ರು. ನಾನು ಸೇಫ್ ಜೋನ್ ನಲ್ಲೇ ಇದ್ದೇನೆ. ಎಲ್ಲ 'ಟೆಸ್ಟ್'ನಲ್ಲಿ ಪಾಸಿಟೀವ್ ಆಗಿದೆ. ಯಾವತ್ತೂ ನಾನು ಒಂದು ತಿಂಗಳು ಪೂರ್ತಿಯಾಗಿ ವಿದೇಶಕ್ಕೆ ಹೋಗಿಲ್ಲ. ಇದೇ ಮೊದಲ ಬಾರಿಗೆ ಇಷ್ಡು ದಿನ ವಿದೇಶದಲ್ಲಿ ಇರುತ್ತೇನೆ.. ಜನವರಿ 26 ಕ್ಕೆ ವಾಪಸ್ ಬರುತ್ತೇನೆ.' ಎಂದಿದ್ದಾರೆ ಶಿವಣ್ಣ.
ನನ್ನ ಮಗಳಿಗೆ ನೇಚರ್ ಪ್ಲಾನ್ ಮಾಡಿರುತ್ತೆ, ನಾನು ಜಸ್ಟ್ ಸಪೋರ್ಟ್ ಮಾಡ್ತೀನಿ: ಕಿಚ್ಚ ಸುದೀಪ್
ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಮಗಳು ನಿವೇದಿತಾ ಜೊತೆ ವಿದೇಶಕ್ಕೆ ಪ್ರಯಾಣ ಮಾಡಿದ್ದಾರೆ ನಟ ಶಿವಣ್ಣ. ಮನೆಯಿಂದ ಹೋಗುವಾಗ ಶಿವಣ್ಣ ಬಹಳಷ್ಟು ಎಮೋಷನಲ್ ಆಗಿದ್ದರು. ಕಣ್ಣೀರು ತುಂಬಿಕೊಂಡೇ ಹೊರಟಿದ್ದಾರೆ ಶಿವರಾಜ್ ಕುಮಾರ್. ಸಹಜವಾಗಿಯೇ ಮನೆ, ತಾಯ್ನಾಡು ಬಿಟ್ಟು ಬಹಳಷ್ಟು ದಿನಗಳು ವಿದೇಶದಲ್ಲಿ ಕಳೆಯಬೇಕು ಎಂದಾಗ ಆಗುತ್ತಲ್ಲಾ, ಹಾಗೆ ಎಮೋಶನಲ್ ಆಗಿ ಕಣ್ಣೀರಿಟ್ಟಿದ್ದಾರೆ ಶಿವರಾಜ್‌ಕುಮಾರ್.