ಫೈನಲಿಸ್ಟ್ ಹೆಸರು ಹೇಳಿಬಿಟ್ರಾ ಕಿಚ್ಚ ಸುದೀಪ್, ಸ್ಪರ್ಧಿಗಳಲ್ಲಿ ಆತಂಕ; ಮನೆಮನೆಯಲ್ಲಿ ಅದೇ ಸುದ್ದಿ!
ಎಲ್ಲಕ್ಕಿಂತ ಮುಖ್ಯವಾಗಿ ಸುದೀಪ್ ನಿನ್ನೆ ಎಲ್ಲ ಸ್ಪರ್ಧಿಗಳ ಮುಂದೆ ವಿನಯ್ ಗೌಡ ಕುರಿತು ಒಂದು ಮಾತು ಹೇಳಿದ್ದಾರೆ. 'ನೀವೆಲ್ಲರೂ ಸೇರಿ ಒಬ್ಬ ಫೈನಲಿಸ್ಟ್ ರೆಡಿ ಮಾಡಿದ್ದೀರ". ಈ ಮಾತು ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ಮನೆ ಹೊರಗೆ ಕೂಡ ಸಖತ್ ಸಂಚಲನ ಸೃಷ್ಟಿಸಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10 ಮೂರನೆಯ ವಾರದ ಕೊನೆಗೆ ಕಾಲಿಟ್ಟಿದೆ. ನಿನ್ನೆ ಕಿಚ್ಚನ ಪಂಚಾಯಿತಿ ಸಂಚಿಕೆ ಪ್ರಸಾರವಾಗಿ ಭಾರೀ ಸುದ್ದಿಯಾಯಿತು. ಕಾರಣ, ನಿನ್ನೆ ನಡೆದ ಮಾತುಕತೆಗಳು. ಎರಡು ವಾರಗಳಿಗೆ ಹೋಲಿಸಿದರೆ ನಿನ್ನೆ ನಡೆದ ವೀಕೆಂಡ್ ಕಿಚ್ಚನ ಪಂಚಾಯಿತಿ ಹೊಸ ವಿಭಿನ್ನ ಅನುಭವ ನೀಡಿದೆ ಎನ್ನಬೇಕು. ಕಾರಣ, ಒಂದು ಮತ್ತು ಎರಡನೇ ಪಂಚಾಯಿತಿಯಲ್ಲಿ ಕಿಚ್ಚ ಮತ್ತು ಸ್ಪರ್ಧಿಗಳ ನಡುವೆ ಹರಟೆ, ಮಾತುಕತೆ, ನಗು, ಅಳು, ಕಾಲೆಳೆಯುವುದು ಎಲ್ಲವೂ ಇತ್ತು.
ಆದರೆ, ನಿನ್ನೆ ನಡೆದ ಕಿಚ್ಚನ ಪಂಚಾಯಿತಿಯಲ್ಲಿ ಅದೆಲ್ಲವೂ ಮಾಯವಾಗಿ ಆತಂಕ, ಭಯ ಮನೆಮಾಡಿತ್ತು. ಇದಕ್ಕೆ ಕಾರಣವಾಗಿದ್ದು ವೀಕ್ಷಕರು ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಕಳುಹಿಸಿದ್ದ ಲೆಟರ್ ಹಾಗೂ ಗಿಫ್ಟ್‌ಗಳು. ಸಮಾಜದಲ್ಲಿ ಅಂದರೆ, ಬಿಗ್ ಬಾಸ್ ಮನೆಯ ಹೊರಗೆ ಮನೆಯೊಳಗಿರುವ ಸ್ಪರ್ಧಿಗಳ ಬಗ್ಗೆ ಯಾವ ಅಭಿಪ್ರಾಯವಿದೆಯೋ ಅದನ್ನೇ ಪ್ರತಿನಿಧಿಸುವ ಗಿಫ್ಟ್ ಆಯಾ ಸ್ಪರ್ಧಿಗಳಿಗೆ ಕಳಿಸಲಾಗಿತ್ತು. ಜತೆಗೆ, ಲೆಟರ್ ಕೂಡ ಸ್ಪರ್ಧಿಗಳಿಗೆ ನೀಡುವ ಎಚ್ಚರಿಕೆ ಕರೆಗಂಟೆ ಎಂಬಂತಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ ಸುದೀಪ್ ನಿನ್ನೆ ಎಲ್ಲ ಸ್ಪರ್ಧಿಗಳ ಮುಂದೆ ವಿನಯ್ ಗೌಡ ಕುರಿತು ಒಂದು ಮಾತು ಹೇಳಿದ್ದಾರೆ. 'ನೀವೆಲ್ಲರೂ ಸೇರಿ ಒಬ್ಬ ಫೈನಲಿಸ್ಟ್ ರೆಡಿ ಮಾಡಿದ್ದೀರ". ಈ ಮಾತು ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ಮನೆ ಹೊರಗೆ ಕೂಡ ಸಖತ್ ಸಂಚಲನ ಸೃಷ್ಟಿಸಿದೆ. ಕಾರಣ, ಯಾವುದೇ ಸೀಜನ್‌ನಲ್ಲಿ ಯಾವುದೇ ಸ್ಪರ್ಧಿಗಳ ಬಗ್ಗೆ ಸುದೀಪ್ ಯಾವತ್ತೂ ಈ ತರ ಮಾತಾಡಿದ್ದೇ ಇಲ್ಲ. ಆದರೆ 'ವಿನಯ್ ಗೌಡ ಅವರನ್ನು ಕಂಡರೆ ಮನೆಯ ಉಳಿದ ಎಲ್ಲರಿಗೂ ಭಯವಿದೆ. ಈ ಭಯವೇ ವಿನಯ್ ಪಾಲಿಗೆ ವರದಾನವಾಗಿದ್ದು, ಅದೇ ಅವರನ್ನು ಮನೆಯ ಮಿಕ್ಕವರಿಗಿಂತ ಸ್ಟ್ರಾಂಗ್ ಎಂಬಂತೆ ಮಾಡಿದೆ' ಎಂದ ಸುದೀಪ್ ಮಾತು ಭಾರೀ ಗಮನಸೆಳೆದಿದೆ.
ವಿಜಯ್ ಜೊತೆಗಿದ್ದ ರಶ್ಮಿಕಾಗೆ ಗೇಟ್ ಪಾಸ್, ದೇವರಕೊಂಡಗೆ ಸಾಕ್ಷಿ ವೈದ್ಯ ಹೊಸ ಜೋಡಿ?
ಆದರೆ, ಸುದೀಪ್ ಮಾತನ್ನು ಅಷ್ಟು ಸರಳವಾಗಿ ವಿನಯ್ ಆಗಲೀ, ಮನೆಯ ಮಿಕ್ಕವರಾಗಲೀ ತೆಗೆದುಕೊಳ್ಳಬೇಕಾಗಿಲ್ಲ. ಮನೆಯ ಹೊರಗಡೆ ಬಿಗ್ ಬಾಸ್ ವೀಕ್ಷಕರು ಕೂಡ ಕಿಚ್ಚ ಸುದೀಪ್ ಮಾತನ್ನು ಹಾಗೇ ತೆಗೆದುಕೊಂಡು ಹಿಗ್ಗಬೇಕಿಲ್ಲ ಅಥವಾ ಕುಗ್ಗಬೇಕಿಲ್ಲ. ಕಾರಣ, ಸುದೀಪ್ ಬಿಗ್ ಬಾಸ್ ಮನೆಯಲ್ಲಿ ಆಡುವ ಮಾತುಗಳಿಗೆ ಹಲವು ಆಯಾಮಗಳಿರುತ್ತವೆ. ಮುಂದಿನ ಸಂಚಿಕೆಯಲ್ಲಿ ಸುದೀಪ್ ಬೇರೆಯೇ ಮಾತನಾಡುತ್ತಾರೆ. ಕಾರಣ ಅದು ಬಿಗ್ ಬಾಸ್ ಮನೆ, ಅಲ್ಲಿ ಆಟ ಆಡಲೆಂದೇ ಬಂದ ಹಲವು ಮನಸ್ಸುಗಳಿವೆ ಎಂಬುದನ್ನು ಯಾರೂ ಯಾವತ್ತೂ ಮರೆಯಬಾರದು.
ಬಿಗ್ ಬಾಸ್ ಮನೆಯಲ್ಲೊಬ್ಬರು ಕರ್ನಾಟಕ ಕ್ರಶ್, ಕಿಚ್ಚ ಸುದೀಪ್ ಸಂಗೀತಾಗೆ ಮಾಡಿದ್ರು ಅಡ್ವೈಸ್!
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನೆಲ್ಲ ನಡೆಯುತ್ತಿದೆ ಎಂಬುದೆಲ್ಲವನ್ನೂ ತಿಳಿಯಲು 'JioCinema'ದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.