Asianet Suvarna News Asianet Suvarna News

BBK9 ಸಾನ್ಯಾ ಮಾಡಿದ ಅವಾಂತರಕ್ಕೆ, ಸ್ವತಃ ರೂಪೇಶ್ ಶೆಟ್ಟಿಯಿಂದ ಕ್ಲಾರಿಟಿ ಪಡೆದ ಕಿಚ್ಚ ಸುದೀಪ್

ಸಾನ್ಯಾ ಮಾಡಿದ ಆರೋಪಕ್ಕೆ ಬ್ರೇಕ್ ಹಾಕಿದ ಕಿಚ್ಚ ಸುದೀಪ್.  ಉತ್ತರ ಸಿಕ್ಕಮೇಲೆ ಸಾನ್ಯಾ ಮತ್ತೊಂದು ಪೋಸ್ಟ್‌ ವೈಲರ್...

Kiccha sudeep clarifies about the Sanya iyer social media post about Roopesh shetty dress vcs
Author
First Published Dec 12, 2022, 10:56 AM IST

ಬಿಗ್ ಬಾಸ್ ಸೀಸನ್ 9ರ ಫಿನಾಲೆ ದಿನಕ್ಕೆ ಕೇವಲ 3 ವಾರಗಳಿದೆ. ಈ ವಾರದ ಕ್ಯಾಪ್ಟನ್ ಆಗಿ ಸಂಭ್ರಮಿಸುತ್ತಿರುವ ರೂಪೇಶ್ ಶೆಟ್ಟಿಗೆ ವಾರದ ಕಥೆ ವಿತ್ ಕಿಚ್ಚ ಸುದೀಪನ ಜೊತೆ ಎಪಿಸೋಡ್‌ನಲ್ಲಿ ಶಾಕಿಂಗ್ ವಿಚಾರ ಕಾದಿತ್ತು. ರೂಪಿಗೆ ಕೆಂಪು ಬಣ್ಣ ಟೀ-ಶರ್ಟ್‌ ತಲುಪಿಸುತ್ತಿಲ್ಲ ಎಂದು ಸಾನ್ಯಾ ಮಾಡಿದ್ದ ಸೋಷಿಯಲ್ ಮೀಡಿಯಾ ಪೋಸ್ಟ್‌ ಬಗ್ಗೆ ಕ್ಲಾರಿಟಿ ಪಡೆದುಕೊಂಡಿದ್ದಾರೆ. 

ಸುದೀಪ್: ರೂಪೇಶ್ ಸರ್ ಬಿಗ್ ಬಾಸ್ ಮನೆಯೊಳಗೆ ಹೋಗಬೇಕಿದ್ದರೆ ನೀವು ನಮಗೆ ಒನ್ ಪಾಯಿಂಟ್ ಕಾಂಟ್ಯಾಕ್ಟ್‌ ಕೊಟ್ಟಿರುತ್ತೀರಿ ಅದು ನಿಮ್ಮ ಕುಟುಂಬಸ್ತರು ಆಗಿರಬಹುದು ಅಥವಾ ಸ್ನೇಹಿತರಾಗಿರಬಹುದು ಅದು ನಿಮ್ಮ ಇಷ್ಟ ಒಟ್ಟಿನಲ್ಲಿ ಪ್ರತಿಯೊಬ್ಬರೂ ಸಂಪರ್ಕಕ್ಕೆಂದು ಒಬ್ಬರ ನಂಬರ್ ನೀಡಿರುತ್ತೀರಿ. ಬಿಗ್ ಬಾಸ್ ಏನು ಮಾಡುತ್ತಾರೆ ನಿಮಗೆ ಸಂಬಂಧ ಪಟ್ಟ ಯಾವುದೇ ವಿಚಾರ ಇರಲಿ ಅವರಿಗೆ ತಿಳಿಸುತ್ತೀವಿ ಅಲ್ಲಿನ ವಿಚಾರ ನಿಮಗೆ ಮುಟ್ಟಿಸಬೇಕು ಅಂದ್ರು ಅವರಿಂದ ಮಾಡುತ್ತೀವಿ ಒಟ್ಟಿನಲ್ಲಿ ನಮಗೆ ಇರುವುದು ಒಂದೇ ಸಂಪರ್ಕ. ಈಗ ಏನಾಗಿದೆ ಅಂದ್ರೆ ನಿಮಗೆ ಎರಡು ಕಡೆಗಳಿಂದ ಬಟ್ಟೆ ಬರುತ್ತಿದೆ. ಒಂದು ನಿಮ್ಮ ಮನೆಯಿಂದ ಮತ್ತೊಂದು ನಿಮ್ಮ ಆಪ್ತರು ಸಾನ್ಯಾ ಅಯ್ಯರ್ ಅವರಿಂದ. ಸಾನ್ಯಾ ಅವರು ಏನ್ ಹೇಳ್ತಾರೆ ಈ ಒಟ್ಟೆಯನ್ನು ಅವರಿಗೆ ಕಳುಹಿಸಿ ಅಂತ ಅದು ಕೂಡ ನಿಮಗೆ ಬಂದಿದೆ ಅಲ್ವಾ? ಆದರೆ ನಿಮ್ಮ ಮನೆಯವರಿಗೆ ಇದರ ಬಗ್ಗೆ ಸಮಸ್ಯೆ ಇದೆ ಆದರೆ ನಿಮ್ಮ ಸ್ನೇಹಿತರು ಎನು ಮಾಡುತ್ತಾರೆ ನಾನು ಕಳುಹಿಸಿದ ಬಟ್ಟೆ ಹೋಗುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಈಗ ಸಾನ್ಯಾ ಅವರೆ ಬಿಗ್ ಬಾಸ್‌ ಮನೆಯಲ್ಲಿದ್ದವರು ನೀವು, ಬಿಗ್ ಬಾಸ್‌ನ ಅರ್ಥ ಮಾಡಿಕೊಂಡಿದ್ರಿ ನೀವು ಅಂತ ಅರ್ಥ ಮಾಡಿಕೊಂಡಿದ್ವಿ ನಾವು ಆದರೂ ಕೂಡ ಬಿಗ್ ಬಾಸ್ ನಿಮ್ಮ ಸ್ನೇಹವನ್ನು ತಲೆಯಲ್ಲಿ ಇಟ್ಟುಕೊಂಡು ಎರಡು ವಾರ ಕಳುಹಿಸಿಕೊಟ್ಟಿದ್ದಾರೆ. ಈಗ ರೂಪೇಶ್ ನೀವು ಹೇಳಿ ನಿಮ್ಮ ಮನೆಯವರ ಎಮೋಷನ್‌ಗೆ ಗೌರವ ಕೊಟ್ಟು ಆ ಓನ್ ಪಾಯಿಂಟ್ ಕಾಂಟ್ಯಾಕ್ಟ್‌ನ ಫಾಲೋ ಮಾಡುವುದು ಕರೆಕ್ಟ್‌ ಅಲ್ವಾ ರೂಪೇಶ್? ನೀವು ನನಗೆ ಕ್ಲಾರಿಟಿ ಕೊಡಿ ಸಾನ್ಯಾ ಕಳುಹಿಸಿರುವ ಬಟ್ಟೆ ಕಳುಹಿಸಬೇಕಾ? ಕಳುಹಿಸಿ ಅಂದ್ರೆ ಈಗ ಕಳುಹಿಸಿ ಕೊಡುತ್ತೀನಿ...

BBK9 ನಾನು CONTESTANT ಅಲ್ಲ ಅಮೂಲ್ಯ..ಅಮೂಲ್ಯ; ಅವಾಜ್‌ಗೆ ತಕ್ಕ ಬುದ್ಧಿ ಹೇಳಿದ ಕಿಚ್ಚ ಸುದೀಪ್

ರೂಪೇಶ್ ಶೆಟ್ಟಿ: ಮನೆಯವರು ಏನೋ ಹೇಳುತ್ತಿದ್ದಾರೆ ಅಂದ್ರೆ ಅದರಲ್ಲಿ ಒಂದು ಅರ್ಥ ಇರಬಹುದು ಅಂದುಕೊಳ್ಳುತ್ತೀನಿ. ಸದ್ಯಕ್ಕೆ ಮೂರು ವಾರ ಬೇಡ ಸರ್ ಮನೆಯವರು ಏನು ಹೇಳುತ್ತಿದ್ದಾರೆ ಎಂದು ಮನೆಗೆ ಹೋದ ಮೇಲೆ ಅರ್ಥ ಮಾಡಿಕೊಳ್ಳುತ್ತೀನಿ. ಸದ್ಯಕ್ಕೆ ಬೇಡ ಸರ್. ಸಾನ್ಯಾ ನಾನು ಕ್ಷಮೆ ಕೇಳುತ್ತೀನಿ, ನಾನು ಬಂದ ಮೇಲೆ ನಿನ್ನ ಜೊತೆ ಮಾತನಾಡುತ್ತೀನಿ ನಿನ್ನ ಪ್ರೀತಿ ನನಗೆ ಅರ್ಥ ಆಗುತ್ತೆ ಸ್ನೇಹ ಅರ್ಥ ಆಗುತ್ತೆ ಆದರೆ ಮನೆಯವರು ಏನೋ ಹೇಳಿದ್ದಾರೆ ಅಂದ್ರೆ ಕೇಳಬೇಕು. ನಾನು ಇಲ್ಲಿಗೆ ಬರಬೇಕಿದ್ದರೆ ಮನೆಯವರ ಪ್ರೀತಿಯಿಂದ ಬಂದಿರುವುದು..ಇಲ್ಲಿ ಬಂದ ಮೇಲೆ ಸಾನ್ಯಾ ಸ್ನೇಹ ಸಿಕ್ಕಿರುವುದು . ಎರಡೂ ನನಗೆ ತುಂಬಾನೇ ಮುಖ್ಯ ಆದರೆ ಸದ್ಯಕ್ಕೆ ಮನೆಯವರು ಏನು ಹೇಳುತ್ತಾರೆ ಅದನ್ನು ಫಾಲೋ ಮಾಡುತ್ತೀನಿ. ಬಿಗ್ ಬಾಸ್‌ಗೆ ಬೇಜಾರ್ ಅಗಿರುವುದು ನನಗೆ ಅತೀವ ಬೇಸರ ಮಾಡಿದೆ. 

ಸುದೀಪ್: ಒಂದು ಕ್ಲಾರಿಟಿ ಕೊಡುತ್ತೀನಿ. ಬಿಗ್ ಬಾಸ್‌ಗೆ ಬೇಜಾರ್ ಆಗಿಲ್ಲ ನನಗೆ ಬೇಜಾರ್ ಇಲ್ಲ. ಒಂದು ಗೊಂದಲವಿತ್ತು ನಿಮ್ಮ ಮುಂದಿಟ್ಟು ಕ್ಲಾರಿಟಿ ಪಡೆದಿದ್ದು. 

ಈ ಘಟನೆ ನಡೆದ ನಂತರ ಸಾನ್ಯಾ ಮತ್ತೊತ್ತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಾಕಿ ತಮ್ಮ ಕಡೆಯಿಂದ ನೀಡಿಬೇಕಿದ್ದ ಸ್ವಷ್ಟನೆ ಕೊಡುತ್ತಾರೆ.

 

Follow Us:
Download App:
  • android
  • ios