ಮೋಸ್ಟ್ ಡಿಸರ್ವಿಂಗ್ ಕಂಟೆಸ್ಟಂಟ್ , ಸ್ಟೈಲ್ ಐಕಾನ್ ಚೈತ್ರಾ ವಾಸುದೇವನ್ ಬಿಗ್ ಬಾಸ್ ಮನೆಯಿಂದ 14 ದಿನಗಳಿಗೆ ಹೊರ ಬಂದಿದ್ದಾರೆ. 

ಮನೆಯಲ್ಲಿ ತುಂಬಾ ರಿಸರ್ವ್ ಆಗಿರುತ್ತಾರೆ.  ಹೆಚ್ಚು ಬೆರೆಯುವುದಿಲ್ಲ ಎಂಬ ಮಾತು ಸದಸ್ಯರಿಂದ ಕೇಳಿ ಬಂದಿತ್ತು. ಅದೇ ಕಾರಣಕ್ಕೆ ನಾಮಿನೇಟ್ ಮಾಡಿದ್ದರು. 

BB7: ನಲ್ಲಿ ಚಂದನ್ ಆಚಾರ್ ಶೋ ಆಫ್ ಮಾಡ್ತಾ ಇದ್ದಾರಾ?

ಮನೆಯಿಂದ ಆಚೆ ಬಂದ ಬಳಿಕ ಚೈತ್ರಾ ಜೊತೆ ಸುದೀಪ್ ಮಾತನಾಡುತ್ತಾರೆ. ಮಾತನಾಡುವ ವೇಳೆ ಚೈತ್ರಾಗೆ ಇಷ್ಟು ದಿನ ಮನೆಯಲ್ಲಿದ್ದ ಕೆಲವು ಮೂಮೆಂಟ್ ಗಳ ವಿಡಿಯನ್ನು ತೋರಿಸುತ್ತಾರೆ. ಅದನ್ನು ನೋಡಿ ಚೈತ್ರಾ ಚೆನ್ನಾಗಿದೆ. ನಾನು ಯಾವಾಗಲೂ ಮೇಕಪ್ ಮಾಡಿಕೊಂಡು ಚೆನ್ನಾಗಿ ರೆಡಿಯಾಗುತ್ತಿದ್ದೆ. ಮೇಕಪ್ ಇಲ್ಲದ ದೃಶ್ಯಗಳನ್ನೇ ಹೆಚ್ಚಾಗಿ ತೋರಿಸಲಾಗಿದೆ ಎಂದು ಹೇಳುತ್ತಾರೆ. ಚೈತ್ರಾ ಮಾತಿನಿಂದ ಸುದೀಪ್ ಗರಂ ಆಗುತ್ತಾರೆ. 

BB7: ಕಣ್ಣಲ್ಲೇ ಬುಸುಗುಡುವ ನಾಗಿಣಿ ಬಗ್ಗೆ ವಾಸುಕಿ ಹೇಳಿದ್ದೇನು?

ಬಿಗ್ ಬಾಸ್ 7 ಸೀಸನ್ ಕಂಡಿದೆ. ಮನೆಯಿಂದ ಹೊರ ಬರುವ ಪ್ರತಿಯೊಬ್ಬರೂ ವಿಡಿ ನೋಡಿ ಕಣ್ಣೀರಿಡುತ್ತಾರೆ. ಭಾವುಕರಾಗುತ್ತಾರೆ. ಮೇಕಪ್ ಬಗ್ಗೆ ಮಾತನಾಡಿರುವ ಮೊದಲ ಸ್ಪರ್ಧಿ ನೀವು.  ಎಲ್ಲಾ ಸ್ಪರ್ಧಿಗಳಿಗೂ ನಾವು ಹೀಗೆ ತೋರಿಸಿದ್ದೇವೆ. ಯಾರೂ ಮೇಕಪ್ ಬಗ್ಗೆ ಕ್ಯಾತೆ ತೆಗೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. 

ಚೈತ್ರಾ ಸಾರಿ ಕೇಳುತ್ತಾರೆ. ಆದರೂ ಕಿಚ್ಚ ಸಮಾಧಾನ ಆಗಲಿಲ್ಲ. ಚೈತ್ರಾ ಅವರೇ ಸುಮ್ಮನೆ ಮಾತನಾಡಬೇಡಿ. ನಾನು ಸುಮ್ಮನೆ 24 ವರ್ಷ ಇಂಡಸ್ಟ್ರಿಯಲ್ಲಿದ್ದು ಇಲ್ಲಿ ಬಂದು ನಿಂತಿಲ್ಲ. ಬಹಳ ನೊಂದುಕೊಂಡು ಹೇಳುತ್ತಿದ್ದೇನೆ' ಎಂದು ಮಾತಿನಲ್ಲೇ ಚಾಟಿ ಬೀಸುತ್ತಾರೆ.  

ಅಕ್ಟೋಬರ್ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: