ಮನೆಯೊಳಗಿನ ಸದಸ್ಯರ ಮುಖವಾಡಗಳನ್ನು ಕಳಚಿ ಅವರ ನಿಜವಾದ ಮುಖವಾಡಗಳನ್ನು ತೋರಿಸುವುದೇ ಬಿಗ್ ಬಾಸ್. ಕೆಲವೊಮ್ಮೆ ಇದು ಸಾಧ್ಯವಾಗುತ್ತದೆ. ಇನ್ನು ಕೆಲವು ಬಾರಿ ಇದು ಸಾಧ್ಯವಾಗುವುದಿಲ್ಲ. 

ಬಿಗ್ ಬಾಸ್ 7 ಮನೆಯಲ್ಲಿ ಒಬ್ಬರಿಗಿಂತ ಒಬ್ಬರು ಡಿಪ್ಲೋಮ್ಯಾಟಿಕ್ ಆಗಿರುವವರು. ಎಲ್ಲರೂ ತುಂಬಾ ಚೆನ್ನಾಗಿ ಗೇಮ್ ಆಡುತ್ತಿದ್ದಾರೆ. 'ವಾರದ ಜೊತೆ ಕಿಚ್ಚನ ಜೊತೆ' ಯಲ್ಲಿ ಕಿಚ್ಚ ಸುದೀಪ್ ಎಲ್ಲರ ಜೊತೆ ಮಾತನಾಡುವಾಗ ಶೈನ್ ಶೆಟ್ಟಿ ಚಂದನ್ ಆಚಾರ್ ಬಗ್ಗೆ ಒಂದು ಮಾತು ಹೇಳುತ್ತಾರೆ. 

ಜೈ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಅತ್ತೆ ರೀತಿ ಆಡ್ತಾರಾ?

'ನನಗೆ ಚಂದನ್ ಬಹಳ ವರ್ಷಗಳಿಂದ ಪರಿಚಯ. ನಾನು ನೋಡಿದ ಹಾಗೆ ಚಂದನ್ ಹೀಗಿಲ್ಲ. ತುಂಬಾ ಮುಕ್ತವಾಗಿ ಇರುವವರು. ಇದ್ದಿದ್ದನ್ನು ಇದ್ದ ಹಾಗೆ ಹೇಳುವವರು.  ಆದರೆ ಬಿಗ್ ಬಾಸ್ ಮನೆಯಲ್ಲಿ ಅವರು  ಓಪನ್ ಅಪ್ ಆದ ಹಾಗೆ ಕಾಣಿಸುವುದಿಲ್ಲ. ತಮ್ಮನ್ನು ತಾವು ಸಪ್ರೆಸ್ ಮಾಡಿಕೊಂಡು ತಮ್ಮದಲ್ಲದ ವ್ಯಕ್ತಿತ್ವವನ್ನು ಇಲ್ಲಿ ತೋರಿಸುತ್ತಿದ್ದಾರೆ ಎನ್ನುತ್ತಾರೆ. ಶೈನ್ ಶೆಟ್ಟಿ ಈ ಮಾತು ಬಾರೀ ಗಮನ ಸೆಳೆದಿದೆ. 

ಚೈತ್ರಾ ಕೊಟ್ಟೂರು- ಚಂದನ್ ಆಚಾರ್ ನಡುವೆ ನಡುವೆ ನಡೆದ ಸೇಬು ಜಗಳದಲ್ಲಿ ಚಂದನ್ ತೀರಾ ಅತೀ ಎನ್ನುವ ಹಾಗೆ ನಡೆದುಕೊಂಡಿದ್ದಾರೆ. ಪದೇ ಪದೇ ಒಂದೇ ವಿಚಾರವನ್ನು ಇಟ್ಟುಕೊಂಡು ಚೈತ್ರಾ ಬಳಿ ಕಿರಿಕ್ ಮಾಡಿರುವುದು ನೋಡಗರಿಗೂ ಕಿರಿಕಿರಿ ಅನಿಸುದ್ದು ಸುಳ್ಳಲ್ಲ.