ತುಕಾಲಿ ಸಂತು ಮೀಟರ್ ಆಫ್ ಓಕೆ, ಡ್ರೋನ್ ಪ್ರತಾಪ್ ವಿಷಯಕ್ಕೆ ಮೈಕ್ ಆಫ್ ಆಗಿದ್ದೇಕೆ?
'ಸೂಪರ್ ಸಂಡೇ ವಿತ್ ಸುದೀಪ' ಸಂಚಿಕೆಯಲ್ಲಿ ಸುದೀಪ್ ತುಕಾಲಿ ಸಂತು ಅವರನ್ನು ವೇದಿಕೆಗೆ ಕರೆದು 'ನಾನು ಕೆಲವೊಬ್ಬರ ಹೆಸರುಗಳನ್ನು ಹೇಳುತ್ತೇನೆ, ನೀವು ಅವರ ಬಗ್ಗೆ ನಿಮ್ಮ ತಕ್ಷಣದ ಒಪಿನೀಯನ್ ಹಾಗೂ ಸತ್ಯವಾದ ಮಾತನ್ನು ಹೇಳಬೇಕು' ಎಂದಿದ್ದಾರೆ. ಅದಕ್ಕೊಪ್ಪಿದ ಸಂತು ಬಂದು ನಿಂತು 'ಕಾರ್ತಿಕ್ ಒಳ್ಳೇ ಸ್ಫೋಟ್ಸ್‌ಮ್ಯಾನ್'ಎಂದಿದ್ದಾರೆ.
ಬಿಗ್ ಬಾಸ್ ಕನ್ನಡ, ಸೀಸನ್ 10 ಸೂಪರ್ ಸಂಡೇ ವಿತ್ ಸುದೀಪ ಸಂಚಿಕೆ ಇಂದು (29 ಅಕ್ಟೋಬರ್ 2023) ಪ್ರಸಾರವಾಗಲಿದೆ. ಈ ಸಂಚಿಕೆ ಪ್ರೋಮೋ ಕಲರ್ಸ್ ಕನ್ನಡದ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹರಿದಾಡುತ್ತಿದ್ದು ತೀವ್ರ ಕುತೂಹಲ ಕೆರಳಿಸುವಂತಿದೆ. ಕಾರಣ, ತುಕಾಲಿ ಸಂತು ಕೆಲವೊಂದು ಸ್ಪರ್ಧಿಗಳ ಬಗ್ಗೆ ಸತ್ಯ ಹಾಗೂ ಸುಳ್ಳು ಹೇಳಿಕೆ ಹೇಳಿದ್ದು, ಅದು ತುಂಬಾ ಫನ್ನಿಯಾಗಿದೆ. ಟಿವಿ ವೀಕ್ಷಕರಲ್ಲಿ ಈ ಸಂಚಿಕೆ ನೋಡಲೇಬೇಕೆಂಬ ತೀವ್ರ ನಿರೀಕ್ಷೆ ಮನೆಮಾಡಿದೆ.
'ಸೂಪರ್ ಸಂಡೇ ವಿತ್ ಸುದೀಪ' ಸಂಚಿಕೆಯಲ್ಲಿ ಸುದೀಪ್ ತುಕಾಲಿ ಸಂತು ಅವರನ್ನು ವೇದಿಕೆಗೆ ಕರೆದು 'ನಾನು ಕೆಲವೊಬ್ಬರ ಹೆಸರುಗಳನ್ನು ಹೇಳುತ್ತೇನೆ, ನೀವು ಅವರ ಬಗ್ಗೆ ನಿಮ್ಮ ತಕ್ಷಣದ ಒಪಿನೀಯನ್ ಹಾಗೂ ಸತ್ಯವಾದ ಮಾತನ್ನು ಹೇಳಬೇಕು' ಎಂದಿದ್ದಾರೆ. ಅದಕ್ಕೊಪ್ಪಿದ ಸಂತು ಬಂದು ನಿಂತು 'ಕಾರ್ತಿಕ್ ಒಳ್ಳೇ ಸ್ಫೋಟ್ಸ್‌ಮ್ಯಾನ್'ಎಂದಿದ್ದು ತಕ್ಷಣ ಸತ್ಯವಾದ ಮಾತು ಎಂದಾಗ 'ಥೂ, ಅವಂದು ಒಂದು ಜನ್ಮಾನಾ ಸರ್' ಎನ್ನುತ್ತಾರೆ. ತುಕಾಲಿ ಸಂತು ಮಾತಿಗೆ ಸ್ವತಃ ಕಾರ್ತಿಕ್ ಬಿದ್ದುಬಿದ್ದು ನಕ್ಕಿದ್ದಾರೆ, ಸುದೀಪ್ ಕೂಡ ನಗುವಿನ ಅಲೆಯಲ್ಲಿ ತೇಲಿದ್ದಾರೆ.
ಮುಂದುವರೆದ ಸುದೀಪ್ ತುಕಾಲಿ ಸಂತೋಷ್ ಬಳಿ ಡ್ರೋನ್ ಪ್ರತಾಪ್ ಬಗ್ಗೆ ಒಪಿನಿಯನ್ ಕೇಳಿದ್ದಾರೆ. ಆದರೆ, ಮೈಕ್ ಬಾಯಿ ಬಳಿ ಇದ್ದರೂ ತುಕಾಲಿ ಸಂತೋಷ್ ಡ್ರೋನ್ ಪ್ರತಾಪ್ ಬಗ್ಗೆ ಏನೂ ಹೇಳದೇ ಸುಮ್ಮನೇ ನಕ್ಕಿದ್ದಾರೆ. ತುಕಾಲಿ ಸಂತು ನಗಲು, ಸುದೀಪ್ ಸಂತು ಸೇರಿದಂತೆ ಎಲ್ಲರೂ ಜೋರಾಗಿಯೇ ನಕ್ಕಿದ್ದಾರೆ. ಕಾರಣ, ಮೊದಲ ವೀಕೆಂಡ್‌ನಲ್ಲಿ ತುಕಾಲಿ ಸಂತು ಡ್ರೋನ್ ಪ್ರತಾಪ್ ಬಗ್ಗೆ ಎಲ್ಲರ ಬಳಿ ಏನೇನೋ ಹೇಳಿ ಅವಮಾನ ಮಾಡಿದ್ದಾರೆ, ಅದು ತಪ್ಪು' ಎಂದಿದ್ದರು ಸುದೀಪ್. ಅದು ನೆನಪಾಗಿ ತುಕಾಲಿ ಸಂತು ಪ್ರತಾಪ್ ಬಗ್ಗೆ ಎನೂ ಹೇಳಲೇ ಇಲ್ಲ.
ತುಕಾಲಿ ಸಂತು ಡ್ರೋನ್ ಪ್ರತಾಪ್ ಬಗ್ಗೆ ಮಾತನಾಡದಿರುವುದು ಇದೀಗ ಕಲರ್ಸ್ ಕನ್ನಡದ ಪ್ರೊಮೋ ರೂಪದಲ್ಲಿ ಹೊರಬಂದಿದೆ. "ಮೀಟರ್ ಆಫ್ ಕೇಳಿದ್ವಿ, ಇದು ಹೊಸದು ಮೈಕ್ ಆಫ್!' ಎಂದು ಕ್ಯಾಪ್ಶನ್ ಕೂಡ ಕೊಡಲಾಗಿದೆ. ಈ ಪ್ರೊಮೋ ಈಗ ಇಂದಿನ ಸಂಚಿಕೆ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ. ಇಂದಿನ ಪೂರ್ತಿ ಸಂಚಿಕೆ ನೋಡಿದರೆ ತುಕಾಲಿ ಸಂತು ಮಾತುಗಳು ಹಾಗೂ ಹಿಂದೆ ಮುಂದೆ ಎಲ್ಲವೂ ಗೊತ್ತಾಗಲಿದೆ.
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನೆಲ್ಲ ನಡೆಯುತ್ತಿದೆ ಎಂಬುದೆಲ್ಲವನ್ನೂ ತಿಳಿಯಲು 'JioCinema'ದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.